
ಬಹುಭಾಷಾ ನಟಿ ಜೆನಿಲಿಯಾ ವೈವಾಹಿಕ ಬದುಕಿಗೆ ಕಾಲಿಟ್ಟ ನಂತರ ಸಿನಿಮಾಗಳಲ್ಲಿ ಅಭಿನಯಿಸುವುದನ್ನು ಕಡಿಮೆ ಮಾಡಿದ್ದಾರೆ. ಆದರೆ ಪತಿಯೊಟ್ಟಿಗೆ ಎಲ್ಲಾ ಸಿನಿಮಾ ಕಾರ್ಯಕ್ರಮಗಳಲ್ಲೂ ಭಾಗಿಯಾಗುತ್ತಾರೆ. ಬಾಲಿವುಡ್ ಚಿತ್ರರಂಗವನ್ನು ಬಿಡದೇ ಕಾಡುತ್ತಿರುವ ಕೊರೋನಾ ವೈರಸ್ ಸೋಂಕು ನಟಿ ಜೆನಿಲಿಯಾಗೂ ತಗುಲಿತ್ತಂತೆ! ಈ ವಿಚಾರದ ಬಗ್ಗೆ ಮೂರು ವಾರವಾದ ನಂತರ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.
ಜೆನಿ ಮಾತು:
'ಎಲ್ಲರಿಗೂ ಹಾಯ್. ಮೂರು ವಾರಗಳ ಹಿಂದೆ ನನಗೆ ಕೋವಿಡ್ ಪಾಸಿಟಿವ್ ಎಂದು ತಿಳಿದು ಬಂದಿತ್ತು. 21 ದಿನಗಳ ಕಾಲವೂ ನನಗೆ ಯಾವುದೇ ಲಕ್ಷಣಗಳು ಕಾಣಿಸಿಕೊಂಡಿರಲಿಲ್ಲ. ದೇವರ ದಯೆ ಹಾಗೂ ನಮ್ಮ ಕುಟುಂಬದವರ ಆರೈಕೆಯಿಂದ ಯಾವುದೇ ತೊಂದರೆ ಇಲ್ಲದೇ ಗುಣಮುಖಳಾಗಿದ್ದೀನಿ. ಆದರೆ 21 ದಿನಗಳ ಕಾಲ ಐಸೋಲೇಷನ್ ಜೀವನ ನರಕವನ್ನು ತೋರಿಸಿತ್ತು. ಸೋಷಿಯಲ್ ಮೀಡಿಯಾ ಅಥವಾ ಬೇರೆ ರೀತಿ ಟೈಮ್ ಪಾಸ್ ಮಾಡಿದರೂ ಒಂಟಿತನ ಸಹಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ನನ್ನ ಫ್ಯಾಮಿಲಿ ಜೊತೆ ಈಗ ಸಮಯ ಕಳೆಯಲು ತುಂಬಾ ಸಂತೋಷವಾಗುತ್ತಿದೆ. ಈ ಸಮಯದಲ್ಲಿ ಎಲ್ಲರಿಗೂ ಬೇಕಾಗಿರುವುದು ಪ್ರೀತಿ ಮಾತ್ರ. ಲಕ್ಷಣ ಕಂಡರೆ ಅಥವಾ ಅನುಮಾನಗಳು ಬಂದರೆ ತಕ್ಷಣವೇ ಪರೀಕ್ಷೆ ಮಾಡಿಸಿಕೊಳ್ಳಿ. ಸಮಯಕ್ಕೆ ಸರಿಯಾಗಿ ಆರೋಗ್ಯಕರ ಆಹಾರ ಸೇವಿಸಿ' ಎಂದು ಇನ್‌ಸ್ಟಾಗ್ರಾಂನಲ್ಲಿ ಬರೆದಿದ್ದಾರೆ.
ಕೊರೋನಾ ಸೋಂಕು ಇದ್ದ ವಿಚಾರವನ್ನು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುತ್ತಿದ್ದಂತೆ, ಅನೇಕ ಸೆಲೆಬ್ರಿಟಿಗಳು ಜೆನಿಲಿಯಾ ಆರೋಗ್ಯದ ಬಗ್ಗೆ ವಿಚಾರಿಸಿದ್ದಾರೆ. ಅಭಿಮಾನಿಗಳು ಹಾಗೂ ನೆಟ್ಟಿಗರು ಕೊಂಚ ಗೊಂದಲ್ಲಿದ್ದಾರೆ ಎನ್ನುವಂತೆ ಕಾಣುತ್ತದೆ. ಸಾಮಾನ್ಯವಾಗಿ ಯಾರೇ ಗಣ್ಯ ವ್ಯಕ್ತಿಗಳಿಗೆ ಕೊರೋನಾ ಬಂದಲ್ಲಿ ಪೋಸ್ಟ್ ಮಾಡಿ, ಎಲ್ಲರಿಗೂ ತಿಳಿಸುತ್ತಾರೆ. ಆದರೆ ಜೆನಿಲಿಯಾ ಹಾಗೇಕೆ ಮಾಡಲಿಲ್ಲ ಎಂದು ಅವರವರೇ ಪ್ರಶ್ನಸಿಕೊಂಡಿದ್ದಾರೆ. ಇನ್ನು ಕೆಲವರು ಮಾಧ್ಯಮಗಳಲ್ಲಿ ಮತ್ತೊಂದು ರೀತಿಯ ಅರ್ಥ ನೀಡುತ್ತಾರೆ ಎಂಬ ಕಾರಣಕ್ಕೆ ನಮ್ಮ ಬೋಮರಿಲು ನಟಿ ಎಲ್ಲಿಯೂ ಹೇಳಿಕೊಂಡಿಲ್ಲ ಎಂದು ಜೆನಿಲಿಯಾ ಪರ ನಿಂತಿದ್ದಾರೆ.
ಒಟ್ಟಿನಲ್ಲಿ ಅನೇಕ ಗಣ್ಯರಿಗೆ ಈ ಸೋಂಕು ಬಂದು ಹೋಗುತ್ತಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.