ಚಪ್ಪಲಿ ಬಿಟ್ಟು ಫ್ಯಾನ್ಸ್​ ಮೀಟ್ ಆದ ಬಿಗ್ ಬಿ ಕಾರಣವೂ ಹೇಳಿದ್ದಾರೆ!

Published : Jun 07, 2023, 03:42 PM IST
 ಚಪ್ಪಲಿ ಬಿಟ್ಟು ಫ್ಯಾನ್ಸ್​ ಮೀಟ್ ಆದ ಬಿಗ್ ಬಿ ಕಾರಣವೂ ಹೇಳಿದ್ದಾರೆ!

ಸಾರಾಂಶ

ಅಮಿತಾಭ್ ಬಚ್ಚನ್ ಚಪ್ಪಲಿ ಧರಿಸದೆ ಅಭಿಮಾನಿಗಳನ್ನು ಭೇಟಿ ಮಾಡುವ ಹಿಂದಿನ ರಹಸ್ಯವನ್ನು ಬಿಚ್ಚಿಟ್ಟಿದ್ದಾರೆ.ಅವು ಹೀಗೆ ಮಾಡುವುದೇಕೆ?    

ಅಮಿತಾಭ್ ಬಚ್ಚನ್ (Amitabh Bacchan) ಪ್ರತಿ ಭಾನುವಾರ ಯಾವುದೇ ಪಾದರಕ್ಷೆಗಳಿಲ್ಲದೆ ತಮ್ಮ ಮುಂಬೈ ಬಂಗಲೆಯ ಹೊರಗೆ ತಮ್ಮ ಅಭಿಮಾನಿಗಳನ್ನು ಭೇಟಿ ಮಾಡುತ್ತಾರೆ. ಇದು ಕೆಲ ವರ್ಷಗಳಿಂದ ನಡೆದುಕೊಂಡು ಬಂದಿದೆ. ಯಾರಿಗಾದರೂ  ಸಮಸ್ಯೆಗಳಿದ್ದರೆ ಅದನ್ನು ಅವರು ಬಗೆಹರಿಸುತ್ತಾರೆ. ತಮ್ಮನ್ನು ನೋಡಲು ಬಂದವರ ಸಮಸ್ಯೆಗಳನ್ನು ಸಮಾಧಾನಚಿತ್ತವಾಗಿ ಆಲಿಸುತ್ತಾರೆ. ಮೊನ್ನೆಯಷ್ಟೇ ಪತ್ನಿ ಜಯಾ ಬಚ್ಚನ್​ ಅವರ ಜೊತೆಗೆ 50ನೇ ವಿವಾಹ ವಾರ್ಷಿಕೋತ್ಸವವನ್ನು ಆಚರಿಸಿಕೊಂಡಿದ್ದಾರೆ ಬಿಗ್​-ಬಿ. ಈ ಸಂದರ್ಭದಲ್ಲಿ ಅವರಿಗೆ ವಿಷ್​ ಮಾಡಲು ಅಭಿಮಾನಿಗಳು ಅವರ ಬಂಗಲೆಯ ಸುತ್ತಲೂ ಜಮಾಯಿಸಿದ್ದಾರೆ. ಈ ಸಂದರ್ಭದಲ್ಲಿಯೂ ನಟ ಚಪ್ಪಲಿ ಅಥವಾ ಬೂಟುಗಳನ್ನು ಧರಿಸದೆ ಗುಂಪನ್ನು ಸ್ವಾಗತಿಸುತ್ತಿರುವುದು ಕಂಡುಬಂದಿದ್ದು, ಇದರ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ಇದಷ್ಟೇ ಅಲ್ಲದೇ,  ಅಮಿತಾಭ್ ಬಚ್ಚನ್ ಅವರು ಪ್ರತಿ ಭಾನುವಾರ ತಮ್ಮ ಅಭಿಮಾನಿಗಳನ್ನು ಭೇಟಿ ಮಾಡಿ ವಿಶ್ ಮಾಡುತ್ತಾರೆ. ಪ್ರತಿ ಸಲವೂ ಹೀಗೆ ಬರಿಗಾಲಿನಲ್ಲಿ ಅವರು ತಮ್ಮ ಅಭಿಮಾನಿಗಳನ್ನು ಭೇಟಿಯಾಗುತ್ತಾರೆ. ತಮ್ಮ ಬಂಗಲೆ ಜಲ್ಸಾ ಎದುರು ನೆರೆದಿರುವ ಅಭಿಮಾನಿಗಳಿಗೆ ಕೈ ಬೀಸಿ ವಿಶ್ ಮಾಡುತ್ತಾರೆ. ಈ ಬಗ್ಗೆ ಪದೇ ಪದೇ ಹಲವರು ಪ್ರಶ್ನೆ ಕೇಳುತ್ತಾರೆ ಎಂದಿರುವ ನಟ ಅಮಿತಾಭ್​ ಈ ಕುರಿತು ಮಾತನಾಡಿದ್ದಾರೆ. ತಾವು ಏಕೆ ಬರಿಗಾಲಿನಲ್ಲಿ ಬರುತ್ತೇವೆ ಎಂಬ ಸೀಕ್ರೇಟ್​ ರಿವೀಲ್​  ಮಾಡಿದ್ದಾರೆ. 

ಸಂಸದೆಯೇ ದಿ ಕೇರಳ ಸ್ಟೋರಿ ತೋರಿಸಿದ್ರೂ ಬಾರದ ಬುದ್ಧಿ! ಮುಸ್ಲಿಂ ಜೊತೆ ಪರಾರಿಯಾದವಳ ಪಾಡಿದು

ಅವರು ಸಾಮಾಜಿಕ ಜಾಲತಾಣದಲ್ಲಿ (Social Media) ಈ ವಿಷಯವನ್ನು ತಿಳಿಸಿದ್ದಾರೆ. ತಾವು ಬರಿಗಾಲಿನಲ್ಲಿ ಅಭಿಮಾನಿಗಳನ್ನು ಭೇಟಿ ಮಾಡುವುದರಿಂದ ತೊಡಗಿ ಅಭಿಮಾನಿಗಳ ಜೊತೆ ಸೆಲ್ಫಿ ತೆಗೆದು ಪೋಸ್ಟ್ ಮಾಡುವ ತನಕ ನಟ ಮಾತನಾಡಿದ್ದಾರೆ. ಅಮಿತಾಭ್ ಅವರು ಶೇರ್​ ಮಾಡಿರುವ ಫೋಟೋದಲ್ಲಿ ಅವರು ಅಭಿಮಾನಿಗಳನ್ನು ಭೇಟಿಯಾಗಿ ಅವರ ಬಳಿ ಕೈ ಬೀಸುವುದನ್ನು ನೋಡಬಹುದು. ಈ ಸಂದರ್ಭದಲ್ಲಿ ಅವರು,  ಬಿಳಿ ಕುರ್ತಾ ಮೇಲೆ ಕೆಂಪು ಹಾಗೂ ನೀಲಿ ಬಣ್ಣದ ಜಾಕೆಟ್ ಧರಿಸಿದ್ದಾರೆ.  ಅಭಿಮಾನಿಗಳತ್ತ ಕೈ ಬೀಸಿ ವಿಶ್ ಮಾಡುತ್ತಾ ನಗುಮೊಗದಲ್ಲಿ ಇರುವ   ಫೋಟೋಗಳು ವೈರಲ್ ಆಗಿವೆ.

ಕೆಲವರು ನನ್ನ ಬಗ್ಗೆ ಕಮೆಂಟ್ ಮಾಡಿ, ಯಾರು ಬರಿಗಾಲಲ್ಲಿ ಅಥವಾ ಸಾಕ್ಸ್ ಧರಿಸಿ ಹೊರಗೆ ಹೋಗುತ್ತೀರಿ ಎಂದು ಪ್ರಶ್ನಿಸುತ್ತಾರೆ. ಅದರಕ್ಕೆ ಇವತ್ತು ಉತ್ತರಿಸುತ್ತೇನೆ. ಹೌದು. ನಾನು ಅಭಿಮಾನಿಗಳನ್ನು ಭೇಟಿ ಮಾಡುವಾಗ   ಚಪ್ಪಲಿಯಾಗಲೀ, ಸಾಕ್ಸ್​ಆಗಲೀ ಧರಿಸುವುದಿಲ್ಲ. ಇದರಲ್ಲಿ ಟ್ರೋಲ್​  ಮಾಡುವುದು ಏನಿದೆ? ಸುಮ್ಮನೇ ಪ್ರಶ್ನೆ ಕೇಳಿದರೆ ಉತ್ತರಿಸುವೆ. ಅದನ್ನು ಬಿಟ್ಟು ಈ ರೀತಿ ಅಸಭ್ಯ ಕಮೆಂಟ್​ ಮಾಡುವುದನ್ನು ನಾನು ಸಹಿಸುವುದಿಲ್ಲ. ನಾನು ಬರಿಗಾಲಿನಲ್ಲಿ ಹೋದರೆ ನಿಮಗೆ ಸಮಸ್ಯೆ ಇದ್ಯಾ?  ನೀವು ದೇವಸ್ಥಾನಕ್ಕೆ ಬರಿಗಾಲಲ್ಲಿ ಹೋಗುವುದಿಲ್ಲವೇ? ನನ್ನ ಹಿತೈಶಿಗಳು ನನ್ನ ದೇವರು ಎಂದಿದ್ದಾರೆ ಬಿಗ್​ ಬಿ. ಈ ಮೂಲಕ ತಾವು ಬರಿಗಾಲಿನಲ್ಲಿ ಹೋಗುವ ಬಗ್ಗೆ ಟ್ರೋಲ್​ ಕೂಡ ಮಾಡುತ್ತಿರುವ ವಿಷಯವನ್ನು ಹೊರ ಹಾಕಿದ್ದಾರೆ.

ಅವರ ಜೊತೆ ಮಲಗಿದ್ರಷ್ಟೇ ಸಿನಿಮಾದಲ್ಲಿ ಫೇಮಸ್​ ಆಗೋದಂತೆ! ನಟಿ ನೋವಿನ ನುಡಿ

ಈಗ ಇಡೀ ಜಗತ್ತೇ ಜೀನ್ಸ್ ಹಾಗೂ ಸ್ನೀಕರ್ಸ್​ನಲ್ಲಿ ಕಂಫರ್ಟಬಲ್ ಆಗಿದೆ. ಯುವತಿಯರೂ ಅದೇ ರೀತಿಯ ಉಡುಗೆ ಧರಿಸುತ್ತಿದ್ದಾರೆ. ಇದು ಪ್ರೀತಿಯ ಜಗತ್ತು ಎಂದಿದ್ದಾರೆ ನಟ. ಅಮಿತಾಭ್ ಅವರು ಪ್ರಾಜೆಕ್ಟ್​ ಕೆಯಲ್ಲಿ ದೀಪಿಕಾ ಪಡುಕೋಣೆ ಹಾಗೂ ಪ್ರಭಾಸ್ ಜೊತೆ ಕಾಣಿಸಿಕೊಳ್ಳಲಿದ್ದಾರೆ. ಹಾಗೆಯೇ ಸೆಕ್ಷನ್ 84 ಸಿನಿಮಾದಲ್ಲಿಯೂ ಬಿಗ್ ಬಿ ನಟಿಸಲಿದ್ದಾರೆ. ಅಮಿತಾಭ್ ಬಚ್ಚನ್ ಕೊನೆಯಬಾರಿಗೆ ಊಂಚಾಯಿ ಸಿನಿಮಾದಲ್ಲಿ ಅನುಪಮ್ ಖೇರ್​ ಜೊತೆ ನಟಿಸಿದ್ದರು. ಪರಿಣಿತಿ ಚೋಪ್ರಾ (Parineeti Chopra) ಹಾಗೂ ಬೋಮನ್ ಇರಾನಿ ಅವರು ನಟಿಸಿದ್ದರು. ಈ ಸಿನಿಮಾಗೆ ಪ್ರೇಕ್ಷಕರಿಂದ ಪಾಸಿಟಿವ್ ರೆಸ್ಪಾನ್ಸ್ ಬಂದಿದೆ.

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ವೈದ್ಯರ ವರದಿ ಬಳಿಕ ಜೈಲಿನಲ್ಲಿ ನಟ ದರ್ಶನ್‌ಗೆ ಫಿಸಿಯೋಥೆರಪಿ ಚಿಕಿತ್ಸೆ ಸ್ಥಗಿತ
ನಾನೇನು ಸಾಧುವಲ್ಲ.. ಹೀಗೆ ಮಾತಾಡೋಕೆ ನನಗೂ ಬರುತ್ತೆ: ಪುಷ್ಪ ನಟಿ ಹೇಳಿದ್ದೇನು?