ತಿರುಪತಿ ದೇವಸ್ಥಾನದಲ್ಲೇ ಕೃತಿನ ತಬ್ಬಿ ಮುತ್ತಿಟ್ಟ ಓಂ ರಾವುತ್: ಭಕ್ತರ ಕೆಂಗಣ್ಣಿಗೆ ಗುರಿಯಾದ ಇಬ್ಬರ ವರ್ತನೆ

Published : Jun 07, 2023, 02:39 PM ISTUpdated : Jun 07, 2023, 02:40 PM IST
ತಿರುಪತಿ ದೇವಸ್ಥಾನದಲ್ಲೇ ಕೃತಿನ ತಬ್ಬಿ ಮುತ್ತಿಟ್ಟ ಓಂ ರಾವುತ್: ಭಕ್ತರ ಕೆಂಗಣ್ಣಿಗೆ ಗುರಿಯಾದ ಇಬ್ಬರ ವರ್ತನೆ

ಸಾರಾಂಶ

ತಿರುಪತಿ ದೇವಸ್ಥಾನದಲ್ಲೇ ಕೃತಿನ ತಬ್ಬಿ ಮುತ್ತಿಟ್ಟ ಓಂ ರಾವುತ್.  ಇಬ್ಬರ ವರ್ತನೆ ಭಕ್ತರ ಕೆಂಗಣ್ಣಿಗೆ ಗುರಿಯಾಗಿದೆ. 

ಟಾಲಿವುಡ್ ಸ್ಟಾರ್ ಪ್ರಭಾಸ್ ನಟನೆಯ ಆದಿಪುರುಷ್ ಸಿನಿಮಾ  ರಿಲೀಸ್‌ಗೆ ಸಿದ್ಧವಾಗಿದ್ದು ಸದ್ಯ ಪ್ರಮೋಷನ್ ಕಾರ್ಯದಲ್ಲಿಸಿನಿಮಾತಂಡ ಬ್ಯುಸಿಯಾಗಿದೆ. ಇತ್ತೀಚೆಗಷ್ಟೆ ತಿರುಪತಿಯಲ್ಲಿ ಅದ್ದೂರಿಯಾಗಿ ಪ್ರಿ ರಿಲೀಸ್ ಈವೆಂಟ್ ಮಾಡಲಾಯಿತು. ಸೈಫ್ ಅಲಿ ಖಾನ್ ಬಿಟ್ಟು ಇಡೀ ಸಿನಿಮಾತಂಡ ಈವೆಂಟ್‌ನಲ್ಲಿ ಭಾಗಿಯಾಗಿತ್ತು. ಈವೆಂಟ್‌ನಲ್ಲಿ ಆದಿಪುರುಷ್ ಸಿನಿಮಾದ ಟ್ರೈಲರ್ ಅನ್ನು ಬಿಡುಗಡೆ ಮಾಡಲಾಯಿತು. ಈ ಸಿನಿಮಾದಲ್ಲಿ ಪ್ರಭಾಸ್ ರಾಮನಾಗಿ ಅಭಿಮಾನಿಗಳ ಮುಂದೆ ಬರ್ತಿದ್ದಾರೆ. ಸೀತೆಯಾಗಿ ಕೃತಿ ಸನೋನ್, ರಾವಣನಾಗಿ ಸೈಫ್ ಅಲಿ ಖಾನ್ ಕಾಣಿಸಿಕೊಳ್ಳುತ್ತಿದ್ದಾರೆ. ಪೌರಾಣಿಕ ಸಿನಿಮಾ ಪ್ರೇಕ್ಷಕರು ಕೂಡ ಕಾತುರದಿಂದ ಕಾಯುತ್ತಿದ್ದಾರೆ.

ಪ್ರಿ ರಿಲೀಸ್ ಈವೆಂಟ್ ಬಳಿಕ ಇಂದು(ಜೂನ್ 7) ಚಿತ್ರತಂಡ ತಿಮ್ಮಪ್ಪನ ದರ್ಶನಕ್ಕೆ ತೆರಳಿತ್ತು. ಈ ವೇಳೆ ಕೃತಿ ಸನೋನ್ ಹಾಗೂ ನಿರ್ದೇಶಕ ಓಂ ರಾವುತ್ ವರ್ತನೆ ನೋಡಿ ಭಕ್ತರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಕಾರ್ಯಕ್ರಮ ಮುಗಿಸಿದ ಬಳಿಕ ನಟಿ ಕೃತಿ ಸನೋನ್ ಹಾಗೂ ನಿರ್ದೇಶಕ ಓಂ ರಾವುತ್ ತಿಮ್ಮಪ್ಪನ ದರ್ಶನಕ್ಕೆ ತೆರಳಿದ್ದರು. ತಿಮ್ಮಪ್ಪನ ದರ್ಶನ ಮುಗಿಸಿ ಹೊರಬರುತ್ತಿದ್ದಂತೆ ನಿರ್ದೇಶಕ ಓಂ ರಾವುತ್ ಕೃತಿ ಸನೊನ್ ತಬ್ಬಿ ಹಗ್ ಮಾಡಿ ಕೆನ್ನೆಗ ಮುತ್ತಿಟ್ಟರು. ಬಳಿಕ ಫ್ಲೈಯಿಂಗ್ ಕಿಸ್ ಕೊಟ್ಟು ಶುಭ ಹಾರೈಸಿದರು. ಇದು ಭಕ್ತರ ಆಕ್ರೋಶಕ್ಕೆ ಕಾರಣವಾಗಿದೆ. ಈ ವಿಡಿಯೋ ವೈರಲ್ ಆಗಿದ್ದು ನೆಟ್ಟಿಗರು ತರಾಟೆ ತೆಗೆದುಕೊಂಡಿದ್ದಾರೆ.

 ಪ್ರಭಾಸ್‌ಗೆ ಸ್ವೀಟ್‌ಹಾರ್ಟ್ ಎಂದ ಕೃತಿ: ಇಬ್ಬರೂ ಹಗ್ ಮಾಡಿರುವ ಕ್ಯೂಟ್ ಫೋಟೋ ವೈರಲ್

ಅಂದಹಾಗೆ ಆತ್ಮೀಯರಾಗಿ ಹಗ್ ಮಾಡಿ, ಕಿಸ್ ಮಾಡುವುದ ಸಹಜ. ಅದರಲ್ಲೂ ಸಿನಿಮಾರಂಗದಲ್ಲಿ ಇದೆಲ್ಲ ಕಾಮನ್.  ಆದರೆ ದೇವಸ್ಥಾನದಲ್ಲಿ ಹೀಗೆ ಮಾಡಿದ್ದು ಅಭಿಮಾನಿಗಳ ಅಸಮಾಧಾನಕ್ಕೆ ಕಾರಣವಾಗಿದೆ. ಆದರೆ ಇನ್ನೂ ಕೆಲವರು ಕೃತಿ ಮತ್ತು ಓಂ ರಾವುತ್ ಪರವಾಗಿ ಮಾತನಾಡುತ್ತಿದ್ದಾರೆ. ಇದು ಸಾಮಾನ್ಯ, ಉದ್ದೇಶಕ ಪೂರ್ವಕವಾಗಿ ನಡೆದಿಲ್ಲ. ಇಬ್ಬರೂ ಶುಭಹಾರೈಸಿಕೊಂಡು ಬೀಳ್ಕೊಟ್ಟಿದ್ದು ಎಂದು ಹೇಳಿದ್ದಾರೆ.

ಪ್ರಭಾಸ್ ಪ್ರಭು ರಾಮನ ಹಾಗೆ; 'ಆದಿಪುರುಷ್' ಸ್ಟಾರ್‌ನನ್ನು ಹಾಡಿಹೊಗಳಿದ ಕೃತಿ ಸನೊನ್

ಆದಿಪುರುಷ್ ಬಗ್ಗೆ

ಆದಿಪುರುಷ್ ವಿಶ್ವದಾದ್ಯಂತ 3ಡಿಯಲ್ಲಿ ರಿಲೀಸ್ ಆಗುತ್ತಿದೆ. ಪ್ರಭಾಸ್ ರಾಮನಾಗಿ ಕಾಣಿಸಿಕೊಂಡಿದ್ದಾರೆ. ಕೃತಿ ಸನೊನ್ ಸೀತೆಯ ಪಾತ್ರದಲ್ಲಿ ಮಿಂಚಿದ್ದಾರೆ. ದೊಡ್ಡ ಬಜೆಟ್ ನಲ್ಲಿ ಈ ಸಿನಿಮಾ ಮೂಡಿ ಬಂದಿದ್ದು ಇದೇ ತಿಂಗಳು ಜೂನ್ 16ರಂದು ರಿಲೀಸ್‌ಗೆ ಸಿದ್ಧವಾಗಿದೆ. ಸೈಫ್ ಅಲಿ ಖಾನ್ ರಾವಣನಾಗಿ ಮಿಂಚಿದ್ದಾರೆ. ಈಗಾಗಲೇ ಟ್ರೈಲರ್ ಮತ್ತು ಟೀಸರ್ ಮೂಲಕ ಗಮನ ಸೆಳೆದಿರುವ ಆದಿಪುರುಷ್ ಸಿನಿಮಾಗಾಗಿ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

26ಕ್ಕೆ ರಶ್ಮಿಕಾ-ವಿಜಯ್‌ ವಿವಾಹ : ಉದಯಪುರಕ್ಕೆ ಆಗಮನ
ಆಪ್ತರಿಗೆ ವಿರೋಶ್ ಜೋಡಿಯ ಪಾರ್ಟಿ; ಮಹೆಂದಿ, ಹಳದಿ , ಸಂಗೀತ್ ಸೆರೆಮನಿ ದಿನಾಂಕ ಬಹಿರಂಗ