ಅಮಿತಾಭ್ ಬಚ್ಚನ್‌ ಮೊದಲ ಪ್ರೇಯಸಿ ಯಾರು ಗೊತ್ತಾ?

Published : Apr 25, 2025, 08:26 PM ISTUpdated : Apr 26, 2025, 07:14 AM IST
ಅಮಿತಾಭ್ ಬಚ್ಚನ್‌ ಮೊದಲ ಪ್ರೇಯಸಿ ಯಾರು ಗೊತ್ತಾ?

ಸಾರಾಂಶ

ಬಾಲಿವುಡ್ ದಂತಕಥೆ ಅಮಿತಾಭ್ ಬಚ್ಚನ್ ಅವರ ಮೊದಲ ಪ್ರೇಯಸಿ ಬಾಲಿವುಡ್‌ಗೆ ಸಂಬಂಧಪಟ್ಟವಳೇ ಅಲ್ಲ. ಅವಳಿಗೂ ಬ್ರಿಟಿಷ್‌ ಏರ್‌ವೇಸ್‌ಗೂ ಒಂದು ಕನೆಕ್ಷನ್‌ ಇತ್ತು. ಬಚ್ಚನ್ ಕೋಲ್ಕತ್ತಾದಲ್ಲಿದ್ದಾಗ ಇವರಿಬ್ಬರ ನಡುವೆ ಪ್ರಣಯವಿತ್ತು. ಯಾರವಳು, ಎಲ್ಲಿ ಹೋದಳು? 

ಅಮಿತಾಭ್ ಬಚ್ಚನ್ ಅವರೊಂದು ಜೀವಂತ ದಂತಕಥೆ. ಅವರ ದೀರ್ಘ ಚಲನಚಿತ್ರಗಳ ಪಟ್ಟಿ, ಕೌನ್‌ ಬನೇಗಾ ಕರೋಡ್‌ಪತಿಯ ಜನಪ್ರಿಯತೆ ಇವೆಲ್ಲವನ್ನು ಗಮನಿಸಬಹುದು. ಅವರ ಸುಪ್ರಸಿದ್ಧ ಚಲನಚಿತ್ರಗಳು ಹಿಂದಿ ಚಿತ್ರರಂಗದ ಸಾರ್ವಕಾಲಿಕ ಸಿನಿಮಾಗಳ ಪಟ್ಟಿಯಲ್ಲಿ ಹಲವಾರು ಇವೆ. ಈಗಲೂ ಮುಂಬಯಿಯ ಅವರ ಮನೆ ಮನ್ನತ್‌ನ ಮುಂದೆ ಜನ ಅವರನ್ನು ನೋಡಲು ಸಾಲುಗಟ್ಟುತ್ತಾರೆ. ಒಂದು ಕ್ಷಣವಾದರೂ ಅವರ ದರ್ಶನ ಸಿಗಲಿ ಅಂತ ಹಾರೈಸುತ್ತಾರೆ. ಅವರ ವೈಯಕ್ತಿಕ ಜೀವನದ ಬಗ್ಗೆಯೂ ಇನ್ನೂ ಜನರಿಗೆ ಕುತೂಹಲ ಉಳಿದುಕೊಂಡಿದೆ. ರೇಖಾ ಜೊತೆ ಅಮಿತಾಭ್‌ ಹೇಗಿದ್ದರು, ರೇಖಾ ಮತ್ತು ಅಮಿತಾಭ್‌ ಪ್ರಣಯವನ್ನು ಜಯಾ ಬಾಧುರಿ ತುಂಡರಿಸಿದ್ದು ಹೇಗೆ- ಇವೆಲ್ಲ ರಸವತ್ತಾದ ಸಂಗತಿಗಳೇ. ಆದರೆ ಈಗ ಬಿಗ್ ಬಿ ಸುಮಾರು ಐದು ದಶಕಗಳಿಂದ ಜಯಾ ಬಚ್ಚನ್‌ಗೆ ನಿಷ್ಠಾವಂತ ಗಂಡ. ಆದರೆ ಬಚ್ಚನ್‌ ತಮ್ಮ ಯೌವನದಲ್ಲೇನೂ ಕಡಿಮೆ ಆಟವಾಡಿದ ಗಿರಾಕಿ ಏನಲ್ಲ. ಅವರ ಅನೇಕ ಲಿಂಕ್-ಅಪ್ ವದಂತಿಗಳು ಬಾಲಿವುಡ್‌ನಲ್ಲಿವೆ. ಅಂದ ಹಾಗೆ, ಬಚ್ಚನ್‌ ಅವರ ಮೊದಲ ಪ್ರೇಯಸಿ ಬ್ರಿಟಿಷ್ ಏರ್‌ವೇಸ್‌ನಲ್ಲಿ ಕೆಲಸ ಮಾಡುತ್ತಿದ್ದರು ಎಂದು ನಿಮಗೆ ತಿಳಿದಿದೆಯೇ?

ಖ್ಯಾತ ಲೇಖಕ ಮತ್ತು ಚಲನಚಿತ್ರ ಇತಿಹಾಸಕಾರ ಹನೀಫ್ ಜವೇರಿ 'ಮೇರಿ ಸಹೇಲಿ' ಪಾಡ್‌ಕ್ಯಾಸ್ಟ್‌ನಲ್ಲಿ ಈ ವಿಷಯ ಬಿಚ್ಚಿಟ್ಟಿದ್ದಾರೆ. ಬ್ರಿಟಿಷ್ ಏರ್‌ವೇಸ್‌ನಲ್ಲಿ ಗಗನಸಖಿಯಾಗಿ ಕೆಲಸ ಮಾಡುತ್ತಿದ್ದ ಮಾಯಾ ಎಂಬ ಮಹಿಳೆಯೊಂದಿಗೆ ಅಮಿತಾಭ್‌ಗೆ ಮೊದಲ ಪ್ರಣಯ ಸಂಬಂಧ ಉಂಟಾಯಿತಂತೆ. ಬಚ್ಚನ್ ಆಗ ಕೋಲ್ಕತ್ತಾದಲ್ಲಿ ಒಂದು ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಆಗ ಮಾಯಾ ಭೇಟಿಯಾದಳು. ಇಬ್ಬರ ಪರಚಯ ಪ್ರಣಯಕ್ಕೆ ತಿರುಗಿತು. ಬಚ್ಚನ್‌ ಅವರು ಮಾಯಾ ಅವರನ್ನು ತೀವ್ರವಾಗಿ ಪ್ರೀತಿಸುತ್ತಿದ್ದರು. ಅದೇ ಸಮಯದಲ್ಲಿ ಬಿಗ್ ಬಿ ತಮ್ಮ ನಟನಾ ವೃತ್ತಿಜೀವನ ಮುಂದುವರಿಸಲು ಮುಂಬೈಗೆ ಹೋಗಬೇಕಾಗಿ ಬಂತು. ಆಗ ಅಮಿತಾಭ್‌ ಚಿಕ್ಕಪ್ಪನೊಂದಿಗೆ ಬಂಗಲೆಯಲ್ಲಿ ಉಳಿಯಬೇಕಾಗಿ ಬಂತು. ಅಲ್ಲಿಗೆ ಮಾಯಾ ನಿಯಮಿತವಾಗಿ ಭೇಟಿ ನೀಡುತ್ತಿದ್ದಳು. ಅಮಿತಾಭ್‌ ಜೊತೆ ಬೆರೆಯುತ್ತಿದ್ದಳು. ಆದರೆ ಇವರ ಭೇಟಿಗಳು ಅಮಿತಾಭ್‌ ಚಿಕ್ಕಪ್ಪನಿಗೆ ಇಷ್ಟವಾಗಲಿಲ್ಲ. ಜೊತೆಗೆ ತಾಯಿ ತೇಜಿ ಬಚ್ಚನ್‌ಗೆ ಮಾಯಾ ಬಗ್ಗೆ ಗೊತ್ತಾದರೆ ಏನು ಗತಿ ಎಂಬ ಭಯ ಅಮಿತಾಭ್‌ಗೆ ಇತ್ತು.

ಐಶ್ವರ್ಯಾ ರೈಗೆ ಸುಶ್ಮಿತಾ ಸೇನ್ ಕಂಡರೆ ಆಗ್ತಾ ಇರಲಿಲ್ವಾ?

ಮಾಯಾ ತುಂಬಾ ಧೈರ್ಯಶಾಲಿ ಮತ್ತು ಮುಕ್ತ ಸ್ವಭಾವದವಳಾಗಿದ್ದಳು. ಲಿಬರಲ್‌ ಆಗಿದ್ದಳು. ಅಮಿತಾಬ್ ಜೊತೆ ಬಹಿರಂಗವಾಗಿಯೇ ಆಕೆ ಚೆಲ್ಲಾಟವಾಡುತ್ತಿದ್ದಳು. ಇದೇ ಅವರ ಪ್ರಣಯ ಪ್ರಸಂಗಕ್ಕೆ ಮುಳುವು ತಂದಿತು. ಅಮಿತಾಬ್ ಈ ಕುರಿತು ತಮ್ಮ ಕಳವಳವನ್ನು ನಟ ಮೆಹಮೂದ್ ಅವರ ಸಹೋದರ ಅನ್ವರ್ ಅಲಿ ಅವರೊಂದಿಗೆ ಹಂಚಿಕೊಂಡರು. ಆಗ ಅವರು ತಮ್ಮ ಮೊದಲ ಚಿತ್ರ 'ಸಾತ್ ಹಿಂದೂಸ್ತಾನಿ'ಯಲ್ಲಿ ಅವರೊಂದಿಗೆ ಕೆಲಸ ಮಾಡುತ್ತಿದ್ದರು. ಆಗ ಅನ್ವರ್‌ ಅಲಿ ಬಚ್ಚನ್ ಅವರಿಗೆ, "ನೀನು ಮಾಯಾ ಜೊತೆ ನಿನ್ನ ಜೀವನವನ್ನು ಕಳೆಯಲು ಸಾಧ್ಯವಿಲ್ಲ. ಅವಳು ಬಚ್ಚನ್ ಕುಟುಂಬಕ್ಕೆ ಹೊಂದಿಕೊಳ್ಳುವುದು ಕಷ್ಟ. ನೀನು ಇದರಲ್ಲಿ ಮುಂದುವರಿದರೆ ಹೆಚ್ಚಿನ ಸಮಸ್ಯೆಗಳು ಉದ್ಭವಿಸುತ್ತವೆ" ಎಂದು ಬುದ್ಧಿ ಹೇಳಿದರು.

ಹೀಗಾಗಿ ಬಿಗ್ ಬಿ, ಮಾಯಾ ಜೊತೆಗಿನ ನಂಟು ಕಡಿದುಕೊಂಡರು. ಮಾಯಾ ಮುಂದೆ ಎಲ್ಲಿ ಹೋದಳೋ ಗೊತ್ತಾಗಲಿಲ್ಲ. ಅವಳು ನಟನೆಗೆ ಬರಲಿಲ್ಲ. ಏತನ್ಮಧ್ಯೆ ಬಿಗ್‌ ಬಿ, 1970 ರಲ್ಲಿ ಪುಣೆ ಫಿಲ್ಮ್ ಇನ್ಸ್ಟಿಟ್ಯೂಟ್‌ನಲ್ಲಿ ಜಯಾ ಬಚ್ಚನ್ ಅವರನ್ನು ಭೇಟಿಯಾದರು. 'ಏಕ್ ನಜರ್' ಸಿನಿಮಾದಲ್ಲಿ ಒಟ್ಟಿಗೆ ಕೆಲಸ ಮಾಡಿದರು. ಆಗ ಅವರು ಪರಸ್ಪರ ಪ್ರೀತಿಯ ಭಾವನೆಗಳನ್ನು ಬೆಳೆಸಿಕೊಳ್ಳಲು ಪ್ರಾರಂಭಿಸಿದರು. 'ಜಂಜೀರ್' ಬಿಡುಗಡೆಯಾದ ನಂತರ 1973 ರಲ್ಲಿ ಅವರು ವಿವಾಹವಾದರು.

50+ ವಯಸ್ಸಿನ ಮಾಧುರಿ ದೀಕ್ಷಿತ್ ಸೇರಿದಂತೆ ಈ ಟಾಪ್ ನಟಿಯರು ಮೇಕಪ್ ಇಲ್ಲದೇ ಹೇಗೆ ಕಾಣ್ತಾರೆ ನೋಡಿ!
 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಅಖಂಡ 2 ರಿಲೀಸ್ ನಿಲ್ಲೋಕೆ ಅಸಲಿ ಕಾರಣ ಇದೇನಾ? ಅಷ್ಟಕ್ಕೂ ಬಾಲಯ್ಯ ಮುಂದೆ ಏನ್ಮಾಡ್ತಾರೆ?
ಹೀರೋ ಆಗುವ ಮುನ್ನ ಶಾಕ್ ಕೊಟ್ಟ ಅಕೀರಾ ನಂದನ್: ರೇಣು ದೇಸಾಯಿ ಫೋನ್ ಮಾಡಿದಾಗ ಪವನ್ ನಕ್ಕಿದ್ದೇಕೆ?