Aishwarya Rai vs Sushmita Sen: ಐಶ್ವರ್ಯಾ ರೈಗೆ ಸುಶ್ಮಿತಾ ಸೇನ್ ಕಂಡರೆ ಆಗ್ತಾ ಇರಲಿಲ್ವಾ?

Published : Apr 25, 2025, 07:31 PM ISTUpdated : Apr 26, 2025, 07:07 AM IST
Aishwarya Rai vs Sushmita Sen: ಐಶ್ವರ್ಯಾ ರೈಗೆ ಸುಶ್ಮಿತಾ ಸೇನ್ ಕಂಡರೆ ಆಗ್ತಾ ಇರಲಿಲ್ವಾ?

ಸಾರಾಂಶ

ಐಶ್ವರ್ಯಾ ರೈ ಮತ್ತು ಸುಶ್ಮಿತಾ ಸೇನ್ ನಡುವಿನ ಹಳೆಯ ಪೈಪೋಟಿಯ ವದಂತಿಗಳು ಮತ್ತೆ ಮುನ್ನೆಲೆಗೆ ಬಂದಿವೆ. 1997ರ ಐಶ್ವರ್ಯಾ ಅವರ ಹೇಳಿಕೆಯನ್ನು ನೆಟಿಜನ್‌ಗಳು ವೈರಲ್ ಮಾಡಿದ್ದಾರೆ. ಸುಶ್ಮಿತಾ ಸೇನ್‌ ಬಗ್ಗೆ ಐಶ್ವರ್ಯಾ ಏನ್‌ ಹೇಳಿದ್ಳು?

ಐಶ್ವರ್ಯಾ ರೈ ಮತ್ತು ಸುಶ್ಮಿತಾ ಸೇನ್ ಇಬ್ಬರೂ ಜಗದೇಕ ಸುಂದರಿಯರು. ಒಬ್ಬಳು ಮಿಸ್‌ ವರ್ಲ್ಡ್‌ ಆದರೆ ಮತ್ತೊಬ್ಬಳು ಮಿಸ್‌ ಯುನಿವರ್ಸ್.‌ ಇಬ್ಬರೂ ಸ್ಪರ್ಧೆಯ ಜಗತ್ತಿನಲ್ಲಿ ಒಟ್ಟಿಗೆ ತಮ್ಮ ಪ್ರಯಾಣವನ್ನು ಪ್ರಾರಂಭಿಸಿದರು. 1994ರ ಮಿಸ್ ಇಂಡಿಯಾ ಸ್ಪರ್ಧೆಯಲ್ಲಿ ಇಬ್ಬರೂ ಸ್ಪರ್ಧಿಗಳಾಗಿದ್ದರು. ಸುಶ್ಮಿತಾ ಸೇನ್ ಪ್ರಶಸ್ತಿಯನ್ನು ಗೆದ್ದಳು. ಐಶ್ವರ್ಯಾ ರೈ ಮೊದಲ ರನ್ನರ್ ಅಪ್ ಆಗಿದ್ದಳು. ಸುಶ್ಮಿತಾ ಸೇನ್ 1996ರ ದಸ್ತಕ್ ಚಿತ್ರದಲ್ಲಿ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದಳು. 1997ರ ಔರ್ ಪ್ಯಾರ್ ಹೋ ಗಯಾ ಚಿತ್ರದಲ್ಲಿ ಐಶ್ವರ್ಯಾ ಬಾಲಿವುಡ್‌ಗೆ ಅಡಿಯಿಟ್ಟಳು. ಆಗ ಇಬ್ಬರೂ ಪರಸ್ಪರ ವಿರುದ್ಧವಾಗಿ ಸ್ಪರ್ಧಿಸುತ್ತಿದ್ದರು. ಇದಕ್ಕೆ ತಕ್ಕಂತೆ ವದಂತಿಗಳ ಪೈಪೋಟಿಯೂ ಇತ್ತು. ಒಂದು ಮೂವಿ ಮ್ಯಾಗಜೀನ್‌ಗೆ ನೀಡಿದ ಸಂದರ್ಶನದಲ್ಲಿ ಐಶ್ವರ್ಯಾ, ಸುಶ್ಮಿತಾ ಬಗ್ಗೆ ಮಾಡಿದ ಕಾಮೆಂಟ್ ನಂತರ ಇಂಥ ಊಹಾಪೋಹಗಳು ಭುಗಿಲೆದ್ದವು.

1997ರಲ್ಲಿ ನೀಡಿದ ಸಂದರ್ಶನದಲ್ಲಿ, ಸುಶ್ಮಿತಾ ಸೇನ್‌ಳ ಮಿಸ್ ಇಂಡಿಯಾ ಗೆಲುವಿನ ಬಗ್ಗೆ ಐಶ್ವರ್ಯಾ ಪ್ರತಿಕ್ರಿಯಿಸಿದಳು. ಅವಳು ಹೇಳಿದಳು- "ಬಹುಶಃ ಸುಶ್ಮಿತಾ ಸೇನ್‌  ಯಾವಾಗಲೂ ಖ್ಯಾತಿ, ಗ್ಲಾಮರ್ ಮತ್ತು ಹಣವನ್ನು ಹುಡುಕುತ್ತಿದ್ದಳು. ಅವಳಿಗೆ ಪ್ರಸಿದ್ಧಳಾಗುವುದು ಸಾರ್ವಕಾಲಿಕ ಕನಸಾಗಿತ್ತು. ಆದರೆ ನಾನು ಮೊದಲೇ ಅವುಗಳನ್ನೆಲ್ಲ ಹೊಂದಿದ್ದೆ. ಹೀಗಾಗಿ ಅದು ಯಾವುದೇ ವ್ಯತ್ಯಾಸವನ್ನುಂಟು ಮಾಡಲಿಲ್ಲ." ಇತ್ತೀಚೆಗೆ ಐಶ್ವರ್ಯಾ ಅವರ ಈ ಹೇಳಿಕೆಯನ್ನು ಮತ್ತೆ ನೆಟಿಜನ್‌ಗಳು ರೆಡ್ಡಿಟ್‌ನಲ್ಲಿ ವೈರಲ್ ಮಾಡಿದ್ದಾರೆ. ಸುಶ್ಮಿತಾ ಕಂಡರೆ ಐಶ್ವರ್ಯಾಗೆ ಹೊಟ್ಟೆಕಿಚ್ಚು ಇತ್ತು ಎಂಬುದು ಇದರರ್ಥ ಅಂತಲೂ ಕೆಲವರು ಇದಕ್ಕೆ ಅರ್ಥ ಮಾಡಿದ್ದಾರೆ.

ಆದಾಗ್ಯೂ, 1994ರ ಮಿಸ್ ಇಂಡಿಯಾ ಸ್ಪರ್ಧೆಯಲ್ಲಿ ಟಾಪ್ 10 ಫೈನಲಿಸ್ಟ್ ಆಗಿದ್ದ ನಟಿ ಮಾನಿನೀ ಡೇ, ಈ ಪೈಪೋಟಿಯ ವದಂತಿಗಳನ್ನು ತಳ್ಳಿಹಾಕಿದ್ದಾಳೆ. ಸಿದ್ಧಾರ್ಥ್ ಕಾನನ್ ಅವರೊಂದಿಗಿನ ಸಂದರ್ಶನವೊಂದರಲ್ಲಿ, ಆ ಇಬ್ಬರು ನಟಿಯರ ನಡುವೆ ಯಾವುದೇ ನಿಜವಾದ ದ್ವೇಷವಿರಲಿಲ್ಲ ಮತ್ತು ಅವರು ಗೌರವದಿಂದ ವರ್ತಿಸುತ್ತಿದ್ದರು. ಜೊತೆಗೆ ಆ ಸಮಯದಲ್ಲಿ ಅವರ ಚಿಕ್ಕ ವಯಸ್ಸನ್ನು ಪರಿಗಣಿಸಬೇಕು ಎಂದು ಅವಳು ಒತ್ತಿ ಹೇಳಿದಳು.

"ನನಗೆ ತಿಳಿದ ಮಟ್ಟಿಗೆ ಇವರಲ್ಲಿ ಯಾವುದೇ ಪೈಪೋಟಿ ಇರಲಿಲ್ಲ. ಪೈಪೋಟಿಯಲ್ಲಿ ಸುಶ್ಮಿತಾ ಸ್ವಲ್ಪ ಹಿಂದುಳಿದಿದ್ದರಿಂದ ಇದನ್ನು ಮಾಧ್ಯಮಗಳು ಸೃಷ್ಟಿಸಿದವು. ನಾವು ದೆಹಲಿಗೆ ಹೋದಾಗ, ಐಶ್ವರ್ಯಾ ಜನಪ್ರಿಯ ಸೋಪ್ ಬ್ರಾಂಡ್‌ಗೆ ಮಾಡೆಲ್ ಎಂದು ನಮಗೆ ತಿಳಿದುಬಂತು. ಹಾಗಾದರೆ ನಾವು ಅಲ್ಲಿ ಏನು ಮಾಡಬೇಕಿತ್ತು? ನಾವು ಸ್ಪರ್ಧಿಸಿದೆವು, ಆದರೆ ವೈರದಂತಹದ್ದೇನೂ ಇರಲಿಲ್ಲ, ನಾನು ಕಂಡಂತೆ."

50+ ವಯಸ್ಸಿನ ಮಾಧುರಿ ದೀಕ್ಷಿತ್ ಸೇರಿದಂತೆ ಈ ಟಾಪ್ ನಟಿಯರು ಮೇಕಪ್ ಇಲ್ಲದೇ ಹೇಗೆ ಕಾಣ್ತಾರೆ ನೋಡಿ!

ಸುಶ್ಮಿತಾ ಸೇನ್ ಸ್ಪರ್ಧೆಯಲ್ಲಿ ಸಾಧಿಸಿದ ಗೆಲುವು ಟೈ-ಬ್ರೇಕರ್ ಸುತ್ತಿನ ಫಲಿತಾಂಶ ಎಂದು ಹಲವರಿಗೆ ತಿಳಿದಿಲ್ಲ. ಐಶ್ವರ್ಯಾ ರೈಗೆ ಪ್ರೇಕ್ಷಕರು ಮತ್ತು ನ್ಯಾಯಾಧೀಶರು ವಿಶಿಷ್ಟ ಪ್ರಶ್ನೆಗಳನ್ನು ಕೇಳಿದರು. ಎರಡು ಪ್ರಸಿದ್ಧ ದೂರದರ್ಶನ ಪಾತ್ರಗಳಾದ 'ದಿ ಬೋಲ್ಡ್ & ಬ್ಯೂಟಿಫುಲ್' ನ ರಿಡ್ಜ್ ಫಾರೆಸ್ಟರ್ ಮತ್ತು 'ಸಾಂತಾ ಬಾರ್ಬರಾ' ನ ಮೇಸನ್ ಕ್ಯಾಪ್ವೆಲ್ ನಡುವೆ ಉತ್ತಮ ಪತಿಯನ್ನು ಆಯ್ಕೆ ಮಾಡಲು ಅವಳನ್ನು ಕೇಳಲಾಯಿತು. ಮೇಸನ್ ಅವರನ್ನು ಐಶ್ವರ್ಯಾ ಆಯ್ಕೆ ಮಾಡಿದಾಗ, ಅವಳ ಆಯ್ಕೆ ಅನೇಕರಿಗೆ ಆಶ್ಚರ್ಯವನ್ನುಂಟು ಮಾಡಿತು. "ಅವನು ಕಾಳಜಿಯುಕ್ತ ಗುಣ ಮತ್ತು ಉತ್ತಮ ಹಾಸ್ಯಪ್ರಜ್ಞೆಯನ್ನು ಹೊಂದಿದ್ದಾನೆ. ಅವನ ವ್ಯಕ್ತಿತ್ವಕ್ಕೆ ಹೊಂದಿಕೆಯಾಗುವ ಗುಣಗಳು" ಎಂದು ಐಶ್‌ ಹೇಳಿದರು.

ಮತ್ತೊಂದೆಡೆ, ಸುಶ್ಮಿತಾ ಸೇನ್ ಅವರನ್ನು ದೇಶದ ಜವಳಿ ಪರಂಪರೆ ಮತ್ತು ಬಟ್ಟೆಯಲ್ಲಿ ಅವರ ವೈಯಕ್ತಿಕ ಆದ್ಯತೆಗಳ ಬಗ್ಗೆ ಕೇಳಲಾಯಿತು. ತಮ್ಮ ಉತ್ತರದಲ್ಲಿ ಆಕೆ  ಮಹಾತ್ಮಾ ಗಾಂಧಿಯವರ ಖಾದಿಯ ಪ್ರಚಾರವನ್ನು ಭಾರತದ ಜವಳಿ ಪರಂಪರೆಯ ಆರಂಭವೆಂದು ಅವಳು ಶ್ಲಾಘಿಸಿದಳು.

ಈ ಸ್ಟಾರ್ ನಟಿ ಜೊತೆ ವಿಲನ್ ಆಗಿ ನಟನೆ.. ನಂತರ ಹೀರೋ ಆಗಿ ಹಿಟ್ ಕೊಟ್ರು ಮೆಗಾಸ್ಟಾರ್ ಚಿರಂಜೀವಿ
 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಅತ್ತ ಪಂಚೆ ಉದುರಿ ಹೋಗುತ್ತಿದೆ.. ಇತ್ತ ಕುಣಿದು ಕುಪ್ಪಳಿಸಿ ಇಳಯರಾಜಾ ಕಂಪೋಸ್ ಮಾಡಿದ ಮಜವಾದ ಹಾಡು ಯಾವುದು?
ಅಖಂಡ 2 ರಿಲೀಸ್ ನಿಲ್ಲೋಕೆ ಅಸಲಿ ಕಾರಣ ಇದೇನಾ? ಅಷ್ಟಕ್ಕೂ ಬಾಲಯ್ಯ ಮುಂದೆ ಏನ್ಮಾಡ್ತಾರೆ?