ನಟಿಯಾಗೋಕೆ ಮನೆಬಿಟ್ಟು ಮುಂಬೈಗೆ ಬಂದವಳನ್ನು 500 ರೂಪಾಯಿಗೆ ಮಾರಿದ

Suvarna News   | Asianet News
Published : Mar 02, 2021, 09:56 AM ISTUpdated : Mar 02, 2021, 12:10 PM IST
ನಟಿಯಾಗೋಕೆ ಮನೆಬಿಟ್ಟು ಮುಂಬೈಗೆ ಬಂದವಳನ್ನು 500 ರೂಪಾಯಿಗೆ ಮಾರಿದ

ಸಾರಾಂಶ

ಇದು ಪವರ್‌ಫುಲ್ ಮತ್ತು ವಿವಾದಾತ್ಮಕ ಮಹಿಳೆಯ ನಿಜಕಥೆ | ನಟಿಯಾಗೋ ಕನಸಿನಲ್ಲಿ ಅಪ್ಪನ ಮಾತಿಗೆ ವಿರುದ್ಧವಾಗಿ ಮನೆಬಿಟ್ಟು ಮಾಯಾನಗರಿಗೆ ಬಂದಿದ್ದಳು ಸುಂದರ ತರುಣಿ | ನಂತರ ನಡೆದದ್ದು ಯಾವ ಥ್ರಿಲ್ಲರ್ ಸಿನಿಮಾಗೂ ಕಮ್ಮಿ ಇಲ್ಲ

ಬಾಲಿವುಡ್ ನಟಿ ಈ ಹಿಂದೆ ಎಂದೂ ಮಾಡದಂತಹ ಪವರ್ಫುಲ್ ಪಾತ್ರದ ಮೂಲಕ ತೆರೆಯ ಮೇಲೆ ಬರುತ್ತಿದ್ದಾರೆ. ಗಂಗೂಬಾಯಿ ಕಥಿಯಾವಾಡಿ ಸಿನಿಮಾದ 1.5 ನಿಮಿಷದ ಟೀಸರ್ ವೈರಲ್ ಆಗಿದೆ.

ನಿಜ ಘಟನೆಯಾಧಾರಿತ ಸಿನಿಮಾ ಬಗ್ಗೆ ಎಲ್ಲೆಡೆ ಚರ್ಚೆಯಾಗುತ್ತಿದೆ. ಬಹಳಷ್ಟು ಸೆಲೆಬ್ರಟಿಗಳು ಸಂಜಯ್ ಲೀಲಾ ಬನ್ಸಾಲಿ ಅವರ ಸಿನಿಮಾ ಟೀಸರ್ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಷ್ಟಕ್ಕೂ ಈ ಸಿನಿಮಾ ಯಾರ ಬಗ್ಗೆ..? ಯಾರೀಕೆ ಗಂಗೂಬಾಯಿ ಕಥಿಯಾವಾಡಿ..?

ಅಲಿಯಾ ಭಟ್ ಗಂಗೂಬಾಯಿ ಅವತಾರಕ್ಕೆ ಬಿಟೌನ್ ಶಾಕ್!

1940ರಲ್ಲಿ ಗುಜರಾತ್ನ ಕಥಿಯಾವಾಡ್ನಲ್ಲಿ ಹುಟ್ಟಿದಾಗ ಈಕೆ ಮಾಫಿಯಾ ಡಾನ್ ಆಗ್ತಾಳೆ ಅಂತ ಯಾರೂ ಅಂದುಕೊಂಡಿರಲಿಲ್ಲ, ಸ್ವತಃ ಆಕೆಯೂ..

ಅಂದಿನ ಉತ್ಸಾಹಿ ಯುವತಿಯರಂತೆ ನಟಿಯಾಗೋ ಕನಸುಗಳನ್ನು ಹೊತ್ತು ಕಾಯುತ್ತಿದ್ದವಳು ಅವಳು. ಕಥಿಯಾವಾಡ್ನ ಹಳ್ಳಿಯಿಂದ ಅಪ್ಪನ ಮಾತಿಗೆ ವಿರುದ್ಧವಾಗಿ ಮನೆಬಿಟ್ಟು ಮುಂಬೈ ದಾರಿ ಹಿಡಿದಿದ್ದಳು.

ಗಂಗುಬಾಯಿ ಕಥಿಯಾವಾಡಿ - ಸೆಲಬ್ರೆಟಿಗಳಿಂದ ಆಲಿಯಾಗೆ ಮೆಚ್ಚುಗೆ ಸುರಿಮಳೆ!

ಮಾಯಾನಗರಿಯತ್ತ ಆಕೆ ಹೆಜ್ಜೆ ಇಟ್ಟಾಗ ಆಕೆಯಲ್ಲಿದ್ದದ್ದು ತುಂಬು ಯವ್ವನ ಮತ್ತು ಮುಗಿಯದ ಕನಸುಗಳು ಮಾತ್ರ. ಆದರೆ ಅದೃಷ್ಟ ಆಕೆಯ ಜೊತೆಗಿರಲಿಲ್ಲ.

ರಮ್ನಿಕ್ ಎಂಬ ವ್ಯಕ್ತಿ ಕಥಿಯಾಡ್ನ ಆ ಬಾಲೆಯನ್ನು ಬರೀ 500 ರೂಪಾಯಿಗೆ ಕಾಮಾಟಿಪುರದ ರೆಡ್ಲೈಟ್ ಏರಿಯಾದಲ್ಲಿ ಮಾರಿಬಿಟ್ಟ. ಇದೇ ಸಂದರ್ಭದಲ್ಲಿ ಈ ಬಾಲೆ ತನ್ನ ಹೆಸರನ್ನು ಬದಲಾಯಿಸಿ ಗಂಗೂ ಎಂದು ಬದಲಾಯಿಸಿಕೊಂಡಿದ್ದಳು. 5 ಫೀಟ್ ಎತ್ತರದ ಈಕೆ ಅಷ್ಟು ನೀಳ ಸುಂದರಿ ಏನಲ್ಲ. ಕುಳ್ಳಗಿದ್ದರೂ ಮುದ್ದಾಗಿದ್ದ ಕಾಮಾಟಿಪುರದ ಸುಂದರಿ ಕಮಾಂಡ್ ಮಾಡುವಷ್ಟು ಎತ್ತರಕ್ಕೆ ಬೆಳೆದಳು.

ಮುಂಬೈ ಮಾಫಿಯಾ ಕ್ವೀನ್ ಆಗಿ ಆಲಿಯಾ: ಟೀಸರ್‌ಗೆ ಭರ್ಜರಿ ರೆಸ್ಪಾನ್ಸ್

ಈ ಸಿನಿಮಾ ಹುಸೈನ್ ಝೈದಿಯ ಮಾಫಿಯಾ ಕ್ವೀನ್ಸ್ ಆಫ್ ಮುಂಬೈ ಪುಸ್ತಕದಲ್ಲಿ ಬರೆದಿರುವ ಕಥೆ. ಸಿನಿಮಾ ಜುಲೈ 30ರಂದು ರಿಲೀಸ್ ಆಗಲಿದೆ. ಆಲಿಯಾ ಭಟ್ ಈ ಪವರ್‌ಫುಲ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

Abhishek Bachchan: ಮಗಳು ಆರಾಧ್ಯಾ ಗೂಗಲ್‌ನಲ್ಲಿ ಈ ಡಿವೋರ್ಸ್ ಸುದ್ದಿ ಓದಿದರೇ ಏನಾಗುವುದೋ ಏನೋ..!?
ಪ್ರೀತಿಸಿದ ಹುಡುಗಿ ಮೋಸ ಮಾಡಿದ್ರೆ ತಿರುಗಿ ನೋಡದ ಹುಡುಗರು; ದ್ರೋಹ ಮಾಡಿದೋಳ ಹಿಂದೆ ಹೋದ Bigg Boss ಸ್ಪರ್ಧಿ