Suhana Khan: ಶಾರುಖ್​ ಪುತ್ರಿ ಜೊತೆ ಯಾರೀ ಹೊಸ ಹ್ಯಾಂಡ್​ಸಮ್​ ಯುವಕ?

By Suvarna News  |  First Published Apr 22, 2023, 5:25 PM IST

ಕತ್ರೀನಾ ಕೈಫ್ ಜೊತೆ ಕಾಣಿಸಿಕೊಳ್ಳುತ್ತಿದ್ದ ಹ್ಯಾಂಡ್​ಸಮ್​ ಯುವಕ ಈಗ ಸುಹಾನಾ ಖಾನ್​ ಜೊತೆ ಕಾಣಿಸಿಕೊಳ್ಳುತ್ತಿದ್ದಾರೆ. ಯಾರಿವರು?
 


ನಟ ಶಾರುಖ್ ಖಾನ್ (Shah Rukh Khan) ಮಗಳು ಸುಹಾನಾ ಖಾನ್​ಗೆ ಈಗ 22 ವರ್ಷ ವಯಸ್ಸು. ಇದಾಗಲೇ ಬಿಕಿನಿ ಡ್ರೆಸ್​ ತೊಟ್ಟು ಭಾರಿ ಸುದ್ದಿಯಾಗಿರೋ ಸುಹಾನಾ ಖಾನ್​ ಅಮಿತಾಭ್ ಬಚ್ಚನ್ ಮೊಮ್ಮಗ ಅಗಸ್ತ್ಯ ನಂದಾ (Agastya Nanda) ಡೇಟಿಂಗ್ ಮಾಡುತ್ತಿದ್ದಾರೆಯೇ ಎಂಬ ಪ್ರಶ್ನೆ ಬಿ ಟೌನ್​ನಲ್ಲಿ ಹರಿದಾಡುತ್ತಿದೆ. ಇದೀಗ ಈ ಜೋಡಿ ಡೇಟಿಂಗ್​ನಲ್ಲಿ ಇದೆ ಎನ್ನುವ ಸುದ್ದಿಗೆ ಇನ್ನಷ್ಟು ಪುಷ್ಟಿ ನೀಡಿದೆ ಇವರ ಕಿಸ್​ ವಿಡಿಯೋ. ಇದರಿಂದಾಗಿ ಬಚ್ಚನ್​ ಮತ್ತು ಖಾನ್​ ಇಬ್ಬರೂ ಸಂಬಂಧಿಕರಾಗಲಿದ್ದಾರೆಯೇ ಎಂಬ ಸುದ್ದಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಇದರ ನಡುವೆಯೇ, ಸುಹಾನಾ ಖಾನ್ ಮಗಳು ಹಟ್ಟಾ -ಕಟ್ಟಾ ಯುವಕನ ಜೊತೆ ಕಾಣಿಸಿಕೊಂಡು ಮತ್ತೆ ಚರ್ಚೆಗೆ ಬಂದಿದ್ದಾರೆ. ಇತ್ತೀಚೆಗೆ ಸುಹಾನಾ ಖಾನ್ ಮುಂಬೈ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡಿದ್ದರು. ಈ ಸಮಯದಲ್ಲಿ, ಎತ್ತರದ ವ್ಯಕ್ತಿಯೊಬ್ಬರು ಅವರೊಂದಿಗೆ ಕಾಣಿಸಿಕೊಂಡರು, ಇದನ್ನು ನೋಡಿ ಪ್ರೇಕ್ಷಕರು ಬೆರಗಾದರು. ನಂತರ ಈ ವ್ಯಕ್ತಿ ಯಾರು ಎಂದು ತನಿಖೆ ಆರಂಭಿಸಿದ್ದರು. ಹಾಗಾದರೆ ಸುಹಾನಾ ಖಾನ್ ಜೊತೆ ಕಾಣಿಸಿಕೊಂಡಿರುವ ಈ ಸುಂದರ ಯುವಕ ಬೇರಾರೂ ಅಲ್ಲ, ಆಕೆಯ ಭದ್ರತೆಯನ್ನು ನೋಡಿಕೊಳ್ಳುವ ಆಕೆಯ ಅಂಗರಕ್ಷಕ! ಸುಹಾನಾ ಖಾನ್ ಅವರ ಅಂಗರಕ್ಷಕನ ಹೆಸರು ದೀಪಕ್ ಸಿಂಗ್, ಅವರು ಈ ಹಿಂದೆ ಅನೇಕ ದೊಡ್ಡ ಬಾಲಿವುಡ್ ತಾರೆಯರ ಜವಾಬ್ದಾರಿಯನ್ನು ನಿಭಾಯಿಸಿದ್ದಾರೆ. 

ಹಾಗಿದ್ದರೆ ಸುಹಾನಾ ಖಾನ್ (Suhana Khan) ಅವರ ಈ ಹೊಸ ಅಂಗರಕ್ಷಕ ಯಾರು ಗೊತ್ತಾ? ದೀಪಕ್ ಸಿಂಗ್ ಅವರ ಅನೇಕ ಫೋಟೋಗಳು ವಿಮಾನ ನಿಲ್ದಾಣದಿಂದ ವೈರಲ್​ ಆಗಿದ್ದು, ಇಂಟರ್​ನೆಟ್​ನಲ್ಲಿ ಬಿರುಗಾಳಿ ಎಬ್ಬಿಸಿದೆ. ಈ ಫೋಟೋಗಳಲ್ಲಿ ಅವರು 'ಬಾಡಿಗಾರ್ಡ್' (BodyGuard) ಚಿತ್ರದ ಸಲ್ಮಾನ್ ಖಾನ್‌ಗಿಂತ ಕಡಿಮೆಯಿಲ್ಲ ಎನ್ನುವುದನ್ನು ನೋಡಬಹುದು. ಅವರ ಸ್ಟೈಲ್ ಕೂಡ ತುಂಬಾ ಕೂಲ್ ಆಗಿದ್ದು ಸೋಷಿಯಲ್ ಮೀಡಿಯಾದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಕಾರಿನಿಂದ ಇಳಿಯುವುದರಿಂದ ಹಿಡಿದು ಏರ್‌ಪೋರ್ಟ್‌ಗೆ ಹೋಗುವವರೆಗೂ ಸುಹಾನಾ ಖಾನ್‌ಗೆ ನೆರಳಿನಂತಿದ್ದರು.

Tap to resize

Latest Videos

ಶಾರುಖ್​- ಅಮಿತಾಭ್​ ಆಗಲಿದ್ದಾರಾ ಹತ್ತಿರದ ಸಂಬಂಧಿ? ಏನಿದು ಹೊಸ ವಿಷ್ಯ?

ಸುಹಾನಾ ಖಾನ್ ಅವರ ಅಂಗರಕ್ಷಕ ದೀಪಕ್ ಸಿಂಗ್ ಆಗ್ರಾ ನಿವಾಸಿ. ಅವರ ತಂದೆ ವಾಯುಪಡೆಯಲ್ಲಿ ಅಧಿಕಾರಿಯಾಗಿದ್ದಾರೆ. ಮಾಧ್ಯಮ ವರದಿಗಳ ಪ್ರಕಾರ, ವಿಶೇಷವೆಂದರೆ ಅವರು ನಟ ರೋನಿತ್ ರಾಯ್ ಅವರ ಸೋದರ ಮಾವ. ಅವರು 1999 ರಲ್ಲಿ ಆಗ್ರಾದಿಂದ ಮುಂಬೈಗೆ (Mumbai) ತೆರಳಿದರು. ಮಾಯಾನಗರಿಗೆ ಬಂದಾಗ ಕ್ರಿಕೆಟಿಗನಾಗಬೇಕೆಂಬುದು ಅವರ ಕನಸಾಗಿತ್ತು. ಭಾರತ ಕ್ರಿಕೆಟ್ ತಂಡದ ವಿಕೆಟ್ ಕೀಪರ್ ಆಗಿದ್ದ ಚಂದ್ರಕಾಂತ್ ಪಂಡಿತ್ ಅವರಿಂದ ತರಬೇತಿಯನ್ನೂ ಪಡೆದಿದ್ದಾರೆ. ಸುಹಾನಾ ಖಾನ್ ಅವರ ಸೆಕ್ಯುರಿಟಿ ಗಾರ್ಡ್ ದೀಪಕ್ ಸಿಂಗ್ ಕ್ರಿಕೆಟರ್ ಆಗುವ ಕನಸು ಕಾಣುತ್ತಿದ್ದರು. ಅವರು ಟ್ರೆಂಡ್ ಕ್ರಿಕೆಟಿಗರೂ ಆಗಿದ್ದಾರೆ. ಆದರೆ ಅವರ ಅದೃಷ್ಟ ಅವರನ್ನು ಕ್ರೀಡೆಯಿಂದ ಮನರಂಜನಾ ಜಗತ್ತಿಗೆ ಕರೆದೊಯ್ದಿತು. ಅವರು ಸೆಕ್ಯುರಿಟಿ ಸಂಸ್ಥೆಯನ್ನು ಸೇರಿಕೊಂಡರು ಮತ್ತು ಅನೇಕ ಪ್ರಸಿದ್ಧ ತಾರೆಯರ ಭದ್ರತೆಯನ್ನು ನೋಡಿಕೊಂಡರು.


'ಮುಂಬೈ ಕ್ರಿಕೆಟ್ ಸಮ್ಮರ್ ಕ್ಯಾಂಪ್ ಗೆ (Summer Camp) ಸೇರಲು ಬಂದಿರುವುದಾಗಿ ದೀಪಕ್ ಸಿಂಗ್ ತಮ್ಮ ವೃತ್ತಿಜೀವನದ ಬಗ್ಗೆ ಹೇಳಿದ್ದರು. ಅಲ್ಲಿ ಅವರು ಚಂದ್ರಕಾಂತ್ ಪಂಡಿತ್ ಅವರಿಂದ ತರಬೇತಿ ಪಡೆದರು. ಆದರೆ ಅವರು ಕಾಲೇಜು ಹಂತದವರೆಗೆ ಮಾತ್ರ ಆಡಿದರು. ದೊಡ್ಡ ಲೀಗ್‌ನಲ್ಲಿ ಅವರಿಗೆ ಅವಕಾಶ ಸಿಗಲಿಲ್ಲ. ಶಾಲಾ ಕಾಲದಿಂದಲೂ ಮಕ್ಕಳು ಕ್ರಿಕೆಟ್ ತರಬೇತಿ ಪಡೆಯುತ್ತಿದ್ದಾರೆ. ಸುಹಾನಾ ಖಾನ್‌ಗಿಂತ ಮೊದಲು, ದೀಪಕ್ ಸಿಂಗ್ ಅವರು ದೀಪಿಕಾ ಪಡುಕೋಣೆ, ರಣಬೀರ್ ಕಪೂರ್‌, ಕತ್ರಿನಾ ಕೈಫ್‌ಗೆ ಭದ್ರತಾ ಸಿಬ್ಬಂದಿಯಾಗಿದ್ದಾರೆ. ನೀವು ಅನೇಕ ಚಿತ್ರಗಳಲ್ಲಿ ಕತ್ರಿನಾ ಕೈಫ್ ಜೊತೆ ದೀಪಕ್ ಸಿಂಗ್ (Deepak Singh) ಅವರನ್ನು ನೋಡಿರಬೇಕು. ನಂತರ ಶಾರುಖ್ ಖಾನ್ ಜೊತೆ ಸೇರಿಕೊಂಡು ಈಗ ಮಗಳನ್ನು ಕಾವಲು ಕಾಯುತ್ತಿದ್ದಾರೆ.

Twinkle Khanna: ಹೊಟ್ಟೆಯೊಳಗೆ ಫುಲ್​ ಗ್ಯಾಸ್​ ಇದ್ದಾಗ್ಲೇ ಶಾರುಖ್​ ಎತ್ತಿಕೊಂಡು ಬಿಟ್ರಪ್ಪೋ...

 
 
 
 
 
 
 
 
 
 
 
 
 
 
 

A post shared by @varindertchawla

click me!