Kangana to Janhvni: ಈ ಬಾಲಿವುಡ್​ ಮಂದಿ ಹೊಟ್ಟೆಗೇನು ತಿಂತಾರೆ?

By Suvarna News  |  First Published Apr 22, 2023, 3:59 PM IST

ಕೆಲವು ಬಾಲಿವುಡ್​ ನಟ ನಟಿಯರು ಯಾರೂ ಊಹಿಸಲಾಗದ ಖಾದ್ಯಗಳನ್ನು ಸವಿದಿದ್ದಾರೆ. ಅದೇನೆಂದು ನೋಡಿ 
 


ಸಸ್ಯಾಹಾರ, ಮಾಂಸಾಹಾರ... ಆಹಾರ ಕ್ರಮ ಅವರವರ ವೈಯಕ್ತಿಯ ಆಯ್ಕೆ.  ಆಹಾರ ಕ್ರಮಗಳು ಹೆಚ್ಚಾಗಿ   ಸಂಸ್ಕೃತಿ ಮತ್ತು ನಿರ್ದಿಷ್ಟ ಪ್ರದೇಶದೊಂದಿಗೆ ಆಳವಾದ ಸಂಪರ್ಕವನ್ನು ಹೊಂದಿದೆ. ಉದಾಹರಣೆಗೆ,  ಸಮುದ್ರದ ಬಳಿ ವಾಸಿಸುತ್ತಿದ್ದರೆ,  ಮೀನುಗಳು ಮತ್ತು ಸೀಗಡಿಗಳನ್ನು ಸೇವಿಸುವ ಹೆಚ್ಚಿನ ಅವಕಾಶಗಳಿವೆ. ಚೀನಿಯರು ಮನುಷ್ಯರನ್ನು ಬಿಟ್ಟು ಹರಿದಾಡುವ ಎಲ್ಲಾ ವಸ್ತುಗಳನ್ನೂ ತಿನ್ನುತ್ತಾರೆ ಎನ್ನುವ ಮಾತಿದೆ. ಅದೇ ರೀತಿ ಕೆಲವು ಪ್ರದೇಶಗಳಲ್ಲಿ ಕೆಲವೊಂದು ರೀತಿಯ ಆಹಾರಗಳನ್ನು ತಿನ್ನಲಾಗುತ್ತದೆ, ಒಬ್ಬರು ತಿನ್ನುವ ಆಹಾರ ಇನ್ನೊಬ್ಬರಿಗೆ ಅಸಹ್ಯ ಹುಟ್ಟಿಸುವುದೂ ಇದೆ. ಅದೇನಿದ್ದರೂ ಅದು ಅವರವರ ಆಯ್ಕೆ. ಆದರೆ ಇಲ್ಲಿ ಹೇಳಹೊರಟಿರುವುದು ಬಾಲಿವುಡ್​ ತಾರೆಯರು ಕೆಲವರು ತಿಂದಿರುವ ಆಹಾರಗಳ ಕುರಿತು. ಇವರು ತಿಂದಿರುವ ಆಹಾರಗಳ ಬಗ್ಗೆ ಕೇಳಿದರೆ ಹಲವು ಮಾಂಸಹಾರಿಗಳೂ ವ್ಯಾಕ್​ ಎನ್ನಬಹುದು. ಅಂಥ ವಿಚಿತ್ರ ಆಹಾರಗಳನ್ನು ಇವರು ತಿಂದಿದ್ದಾರೆ.

ತಾಪ್ಸಿ ಪನ್ನು, ಕಂಗನಾ ರಣಾವತ್​ (Kangana Ranaut)
ಮೊದಲಿಗೆ 'ತಪ್ಪಡ್' ನಟಿ ತಾಪ್ಸಿ ಪನ್ನು ಅವರ ಬಗ್ಗೆ ಹೇಳೋಣ. ತಾಪ್ಸಿ ಪನ್ನು (Taapsee Pannu) ತಮ್ಮ ಚಿತ್ರಗಳಿಗಿಂತಲೂ ಹೆಚ್ಚು ವಿವಾದಗಳಿಂದ ಮುಖ್ಯಾಂಶಗಳಲ್ಲಿ ಇರುತ್ತಾರೆ. ಈಗ ಇವರು ತಿಂದಿರುವ ಆಹಾರದ ಬಗ್ಗೆಯೂ ಬಹಳ ಸುದ್ದಿಯಾಗುತ್ತಿದೆ. ಅದೇನೆಂದರೆ ಇವರು ಸಂದರ್ಶನವೊಂದರಲ್ಲಿ ಮಿಡತೆ ತಿನ್ನುವುದನ್ನು ಒಪ್ಪಿಕೊಂಡಿದ್ದರು. ಇದನ್ನು ಅವರು ಹೇಳಿದ್ದ ವಿಡಿಯೋ ವೈರಲ್​ ಆಗಿತ್ತು. ಇದನ್ನು ಕೇಳಿ ಅವರ  ಅಭಿಮಾನಿಗಳು ಆಘಾತಕ್ಕೊಳಗಾಗಿದ್ದಂತೂ ನಿಜ. ಇನ್ನು ಕಾಂಟ್ರವರ್ಸಿಗಳಿಂದಲೇ ಹೆಚ್ಚು ಖ್ಯಾತಿ ಪಡೆದಿರುವ ಕಾಂಟ್ರವರ್ಸಿ ಕ್ವೀನ್​ ಎಂದೇ ಹೆಸರಾಗಿರುವ ನಟಿ  ಕಂಗನಾ ರಣಾವತ್ ಕೂಡ ಒಮ್ಮೆ ವಿಚಿತ್ರ ಆಹಾರ ತಿಂದಿದ್ದಾರೆ. ಅದು ಕಪ್ಪೆ ಫ್ರೈ ಅಂತೆ!  ನಟಿ ಒಮ್ಮೆ ಕಪ್ಪೆ ಫ್ರೈ ರುಚಿ ನೋಡಿದ್ದುದಾಗಿ ಹೇಳಿಕೊಂಡಿದ್ದಾರೆ.

Tap to resize

Latest Videos

Anushka Shetty: ಗುಟ್ಟಾಗಿ ಮದ್ವೆಯಾದ್ರಾ ಅನುಷ್ಕಾ ಶೆಟ್ಟಿ? ಮೌನ ಮುರಿದ ನಟಿ ಹೇಳಿದ್ದೇನು?
 
ಸೈಫ್​ ಅಲಿ ಖಾನ್​ (Saif Ali Khan), ಅಜಯ್​ ದೇವಗನ್​, ಕಾಜೋಲ್
ಸೈಫ್ ಅಲಿ ಖಾನ್ ನವಾಬಿ ಶೈಲಿಯನ್ನು ಹೊಂದಿದ್ದು ಅದು ಅವರ ಆಹಾರದಲ್ಲಿಯೂ ಪ್ರತಿಫಲಿಸುತ್ತದೆ. ವರದಿಗಳನ್ನು ನಂಬುವುದಾದರೆ, ಇವರು ಮೊಸಳೆ  ಮತ್ತು ಹಾವಿನ ಮಾಂಸದಿಂದ ಮಾಡಿದ ಖಾದ್ಯವನ್ನು ಸವಿಯುವುದಾಗಿ ನಟ ಒಮ್ಮೆ ಬಹಿರಂಗಪಡಿಸಿದ್ದರು. ಇನ್ನು ಅಜಯ್ ದೇವಗನ್ (Ajay Devagan). ನಟಿ ಕಾಜೋಲ್​ (Kajol) ಪತಿ ವಿವಿಧ ಬಗೆಯ ಆಹಾರ ಮತ್ತು ಪಾನೀಯವನ್ನು ಇಷ್ಟಪಡುತ್ತಾರೆ. ವರದಿಗಳನ್ನು ನಂಬುವುದಾದರೆ, ಚಿತ್ರದ ಚಿತ್ರೀಕರಣದ ಸಮಯದಲ್ಲಿ ನಟ ಕುದುರೆ ಹಾಲನ್ನು ಸೇವಿಸಿದ್ದಾರೆ. ಕಾಜೋಲ್ ಪ್ರಸಿದ್ಧ ಬಂಗಾಳಿ ಕುಟುಂಬಕ್ಕೆ ಸೇರಿದವರು. ಆಕೆಗೆ ನಾನ್ ವೆಜ್ ಫುಡ್ ಎಂದರೆ ತುಂಬಾ ಇಷ್ಟವಂತೆ.ಆದರೆ ಆಕೆ ಬಸವನಹುಳು ಮತ್ತು ಕಪ್ಪೆ ಮಾಂಸದಿಂದ ಮಾಡಿದ ಖಾದ್ಯವನ್ನು ತಿಂದಿರುವುದಾಗಿ ಹೇಳಿದ್ದಾರೆ.

ಜಾಹ್ನವಿ ಕಪೂರ್ (Jahnavi Kapur), ಆಯುಷ್ಮಾನ್ ಖುರಾನಾ
'ಧಡಕ್' ಚಿತ್ರದ ಮೂಲಕ ಪದಾರ್ಪಣೆ ಮಾಡಿದ ನಟಿ, ಶ್ರೀದೇವಿ ಪುತ್ರಿ ಜಾಹ್ನವಿ ಕಪೂರ್, ದೇಶ ಮತ್ತು ಪ್ರಪಂಚವನ್ನು ಸುತ್ತುತ್ತಲೇ ಇರುತ್ತಾರೆ. ಮಾಧ್ಯಮ ವರದಿಗಳ ಪ್ರಕಾರ, ಅವರು ಒಮ್ಮೆ ಬಸವನ ಹುಳುವಿನ ಖಾದ್ಯವನ್ನು ಇಷ್ಟಪಡುತ್ತಾರೆ ಎಂದು ಒಪ್ಪಿಕೊಂಡಿದ್ದಾರೆ.  ಆಯುಷ್ಮಾನ್ ಖುರಾನಾ (Ayushman Khurana) ಅವರು ಚಲನಚಿತ್ರಗಳಲ್ಲಿ ಹಲವಾರು ರೀತಿಯ ಪ್ರಯೋಗಗಳನ್ನು ಮಾಡುತ್ತಿದ್ದಾರೆ.  ಅಂತಹ ಪ್ರಯೋಗಗಳು ಅವರ ಆಹಾರ ಪದ್ಧತಿಯಲ್ಲೂ ಕಂಡುಬರುತ್ತವೆ. ವರದಿಗಳನ್ನು ನಂಬುವುದಾದರೆ, ನಟ ಆಯುಷ್ಮಾನ್ ಖುರಾನಾ ಅವರು ಮೊಲದ ಮಾಂಸದಿಂದ ಮಾಡಿದ ಉಪ್ಪಿನಕಾಯಿ ಮತ್ತು ಕುದುರೆ ಮಾಂಸವನ್ನು ರುಚಿ ನೋಡಿದ್ದಾರೆ.   

ದೂರವಾದ್ರೂ ಹೊಟ್ಟೆ ಬಳಿ ನಾಗಚೈತನ್ಯ ಕುರುಹು: ಯಾಕಪ್ಪಾ ಇದು ಅಂತಿದ್ದಾರೆ ಫ್ಯಾನ್ಸ್!

click me!