ಏರ್​ಪೋರ್ಟ್​ನಲ್ಲಿ ಶೆರ್ಲಿನ್ ಹಾಟ್​ ಅವತಾರ​: ವಿಮಾನ ಹಾರಾಟ ರದ್ದಾಗೋಯ್ತಾ? ವಿಡಿಯೋ ವೈರಲ್​

By Suchethana D  |  First Published Jun 19, 2024, 9:44 PM IST

ನಟಿ ಶೆರ್ಲಿನ್​ ಚೋಪ್ರಾ  ಮತ್ತೆ ಹಾಟ್​ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ವಿಮಾನ ನಿಲ್ದಾಣದಲ್ಲಿರುವ ಇವರ ವಿಡಿಯೋ ವೈರಲ್​  ಆಗ್ತಿದ್ದಂತೆಯೇ ಟ್ರೋಲ್​ಗಳ ಸುರಿಮಳೆಯಾಗಿದೆ.
 


ಇತ್ತೀಚಿನ ಹೆಚ್ಚಿನ ನಟಿಯರಿಗೆ ಅದೊಂದು ರೀತಿ ಹುಚ್ಚೋ ಅಥವಾ ಟ್ರೆಂಡೋ ಗೊತ್ತಿಲ್ಲ.   ಖಾಸಗಿ ಭಾಗಗಳನ್ನು ಚೂರುಪಾರು ಮುಚ್ಚಿಕೊಂಡು ಸಂಪೂರ್ಣ ದೇಹ ಪ್ರದರ್ಶನ ಮಾಡುತ್ತಾ ಬಂದರೂ ಬಟ್ಟೆಯನ್ನು ಎಳೆದುಕೊಳ್ಳುತ್ತಾ ವೇದಿಕೆಗೆ ಹೋಗುತ್ತಾರೆ. ಎಲ್ಲವೂ ಕಾಣಿಸುತ್ತಿದ್ದರೂ ಇನ್ನೇನೂ ಕಾಣಬಾರದು ಎಂದೋ ಅಥವಾ ಜನರ ಗಮನವನ್ನು ತಮ್ಮೆಡೆ ಹರಿಸಿಕೊಳ್ಳುವುದಕ್ಕೋ ಏನೋ ಒಟ್ಟಿನಲ್ಲಿ ಬಹುತೇಕ ನಟಿಯರು ಇಂಥದ್ದೊಂದು ಹವ್ಯಾಸ ರೂಢಿಸಿಕೊಂಡಿದ್ದಾರೆ.  ಇನ್ನು ಬಾಲಿವುಡ್​ ಹಾಟ್​ ಬ್ಯೂಟಿ ಶೆರ್ಲಿನ್​ ಚೋಪ್ರಾ ವಿಷಯಕ್ಕೆ ಬಂದರಂತೂ ಮುಗಿದೇ ಹೋಯ್ತು. ಇದೀಗ ಧಾರಾಳವಾಗಿ ದೇಹ ಪ್ರದರ್ಶನ ಮಾಡುತ್ತಾ ಬಂದಿರುವ ಶೆರ್ಲಿನ್​ ಎದೆಯ ಮೇಲೆಯೂ ಬಟ್ಟೆ ನಿಲ್ಲುವುದಿಲ್ಲ. ನಿಂತರೂ ಪ್ರಯೋಜನ ಇಲ್ಲ ಎನ್ನುವಂತಿರುತ್ತದೆ.  

 ನಾನು ಈ ಹಿಂದೆ ಹಣಕ್ಕಾಗಿ ಹಲವರ ಜೊತೆ ಮಲಗಿದ್ದೆ, ನಿಮ್ಮನ್ನು ನಿರಾಶೆಗೊಳಿಸಿದ್ದಕ್ಕಾಗಿ ಕ್ಷಮಿಸಿ, ಆದರೆ ನಾನು ಇನ್ನು ಮುಂದೆ ಹಣಕ್ಕಾಗಿ ಇಂತಹ ಚಟುವಟಿಕೆಗಳಲ್ಲಿ ತೊಡಗುವುದಿಲ್ಲ' ಎಂದು ಹೇಳುತ್ತಲೇ ಸೆನ್​ಸೇಷನ್​ ಕ್ರಿಯೇಟ್​ ಮಾಡಿದವರು ಬಾಲಿವುಡ್​ ಹಾಟ್​ ಬ್ಯೂಟಿ ಶೆರ್ಲಿನ್​ ಚೋಪ್ರಾ. ಅಷ್ಟಕ್ಕೂ, ನಟಿ ಶೆರ್ಲಿನ್​ ಚೋಪ್ರಾ ತಮ್ಮ ಅಂಗಾಂಗ ಪ್ರದರ್ಶನಗಳಿಂದಲೇ ಖ್ಯಾತಿ ಗಳಿಸಿದ ತಾರೆ.  ಈಕೆ (Sherlyn Chopra) ಆಗಾಗ ಶಾಕಿಂಗ್‌ ಹೇಳಿಕೆ ಮೂಲಕ ಸುದ್ದಿಯಲ್ಲಿರುತ್ತಾರೆ. ಇತ್ತೀಚಿನ ದಿನಗಳಲ್ಲಿ ಈ ರೀತಿಯ ದೇಹ ಪ್ರದರ್ಶನ ಮಾಮೂಲಾಗಿಬಿಟ್ಟಿದೆ. ಎದೆಯ ಪ್ರದರ್ಶನ ಮಾಡಿದರಷ್ಟೇ  ಸಿನಿಮಾದಲ್ಲಿ ತಮಗೆ ಉಳಿಗಾಲ ಎಂದು ಹೆಚ್ಚಿನ ನಟಿಯರು ಅಂದುಕೊಂಡಂತಿದೆ. ಇದಕ್ಕಾಗಿಯೇ ತೆಳ್ಳಗೆ, ಬೆಳ್ಳಗೆ ಇರಲು ಸಾಕಷ್ಟು ಡಯಟ್​ ಪಾಲನೆ, ಯೋಗ, ಜಿಮ್​, ವ್ಯಾಯಾಮಗಳ ಮೊರೆ ಹೋಗುವ ನಟಿಯರು ಎದೆ ಭಾಗವನ್ನು ದೊಡ್ಡದಾಗಿ ತೋರಿಸಿಕೊಳ್ಳಲು ಪ್ಲಾಸ್ಟಿಕ್​ ಸರ್ಜರಿ ಮಾಡಿಸಿಕೊಳ್ಳುವುದು ಮಾಮೂಲಾಗಿದೆ. ಇವರ ಪೈಕಿ ನಟಿ ಶೆರ್ಲಿನ್ ಚೋಪ್ರಾ (Sherlyn Chopra) ಕೂಡ ಒಬ್ಬರು.  ದೇಹ ಪ್ರದರ್ಶನದಿಂದಲೇ ಫೇಮಸ್​ ಆಗಿರುವ ನಟಿಯರ ಪೈಕಿ ಇವರು ಕೂಡ ಒಬ್ಬರು.  ಆಗಾಗ ಅರೆಬರೆ ದೇಹದ ಪ್ರದರ್ಶನ ಮಾಡುವುದರ ಜೊತೆಗೆ ಶಾಕಿಂಗ್‌ ಹೇಳಿಕೆ ಕೊಡುವ ಮೂಲಕವೂ ಈಕೆ ಸುದ್ದಿಯಲ್ಲಿ ಇರುತ್ತಾರೆ.  ಇತ್ತೀಚಿಗೆ ಡ್ರಾಮಾ ಕ್ವೀನ್​ ರಾಖಿ ಸಾವಂತ್​ ಅವರಿಂದ ಮತ್ತಷ್ಟು ಪ್ರಚಾರಕ್ಕೆ ಬಂದಿದ್ದರು. 

Tap to resize

Latest Videos

ಶೆರ್ಲಿನ್​ ನಾಗಿನ್​ ಡ್ಯಾನ್ಸ್! ವಿಡಿಯೋ ನೋಡಿ ಹಾವು ಆತ್ಮಹತ್ಯೆ ಮಾಡ್ಕೊಳೋದು ಗ್ಯಾರೆಂಟಿ ಎಂದ ಟ್ರೋಲರ್ಸ್​

ವಿಮಾನ ನಿಲ್ದಾಣದಲ್ಲಿ ನಟಿ ಮತ್ತದೇ ವೇಷದಲ್ಲಿ ಕಾಣಿಸಿಕೊಂಡಿದ್ದಾರೆ. ಇದೀಗ ಒಂದು ಹೆಜ್ಜೆ ಮುಂದಕ್ಕೆ ಹೋಗಿರುವ ನಟಿ, ಇನ್ನರ್​ ವೇರ್​ ಕೂಡ ಕಾಣುವ ರೀತಿಯ ಸ್ಲಿಟ್​ ಡ್ರೆಸ್​ ಧರಿಸಿದ್ದಾರೆ.  ಅವರು ಹೀಗೆ ಕಾಣಿಸಿಕೊಂಡಿರುವುದು ವಿಮಾನ ನಿಲ್ದಾಣದಲ್ಲಿ! ಇದನ್ನು ನೋಡಿ ಸಕತ್​ ಟ್ರೋಲ್​ಗೆ ನಟಿ ಒಳಗಾಗುತ್ತಿದ್ದಾರೆ. ವಿಮಾನ ಹಾರಾಟ ಸ್ಥಗಿತ ಎನ್ನುತ್ತಿದ್ದಾರೆ ನೆಟ್ಟಿಗರು. ಈಕೆಯನ್ನು ಪೈಲೆಟ್​ ನೋಡಿದ್ರೆ ವಿಮಾನ ಹಾರಿಸೋದನ್ನೇ ಮರೆತುಬಿಡ್ತಾನೆ ಅಂತಿದ್ದಾರೆ ಮತ್ತೆ ಕೆಲವರು. ದೇವರೇ ಈಕೆಯನ್ನು ನೋಡಲು ನಮಗೆ ಎರಡೇ ಕಣ್ಣು ಏಕೆ ಕೊಟ್ಟೆ ಎಂದು ನೆಟ್ಟಿಗರು ಪ್ರಶ್ನಿಸುತ್ತಿದ್ದಾರೆ. ಇವಳ ವೇಷ ನೋಡಿ ಬದುಕು ಪಾವನವಾಯಿತು ಎಂದು ಕೆಲವರು ಹೇಳಿದ್ರೆ, ನಮ್ಮ ಇನ್​ಸ್ಟಾಗ್ರಾಮ್​  ಖಾತೆಯನ್ನು ತುಳಸಿ ನೀರು ಬಿಟ್ಟು ಶುಚಿ ಮಾಡಿದೆ ಎಂದು ಇನ್ನೋರ್ವ ಬರೆದಿದ್ದಾರೆ. ಒಟ್ಟಿನಲ್ಲಿ ಟ್ರೋಲ್​ ಆಗುತ್ತಲೇ ಖುಷಿ ಪಡುತ್ತಿದ್ದಾರೆ ಶೆರ್ಲಿನ್​ ಚೋಪ್ರಾ. 

  ಉದ್ಯಮಿಯೊಬ್ಬರ ವಿರುದ್ಧ  ಲೈಂಗಿಕ ಕಿರುಕುಳ ಪ್ರಕರಣ ದಾಖಲಿಸಿ ಸುದ್ದಿಯಾಗಿದ್ದರು, ಪತ್ರಿಕಾಗೋಷ್ಠಿ ಕರೆದಿದ್ದ ನಟಿ, ತಮ್ಮ ಮೇಲೆ ಆಗಿರುವ ಲೈಂಗಿಕ ದೌರ್ಜನ್ಯದ ಕುರಿತು ಸವಿಸ್ತಾರವಾಗಿ ಹೇಳಿಕೆ ನೀಡಿದ್ದರು. ಮುಂಬೈ ಮೂಲದ ಉದ್ಯಮಿ ಸುನಿಲ್ ಪರಸ್ಮಾನಿ ಲೋಧಾ (Sunil Lodha) ತಮ್ಮ ವಿರುದ್ಧ ತೀರಾ ಕೆಟ್ಟದ್ದಾಗಿ ನಡೆಸಿಕೊಂಡಿರುವ ಬಗ್ಗೆ ಅವರು ಹೇಳಿದ್ದರು. ವಿಡಿಯೋ ಚಿತ್ರೀಕರಣಕ್ಕೆ ಹಣ ನೀಡುವ ನೆಪದಲ್ಲಿ ಆರೋಪಿ ಲೈಂಗಿಕ ಕಿರುಕುಳ ನೀಡಿದ್ದು, ಅದನ್ನು ವಿರೋಧಿಸಿದಾಗ  ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಕೊಲೆ ಬೆದರಿಕೆ ಹಾಕಿರುವುದಾಗಿ  ನಟಿ ದೂರಿನಲ್ಲಿ ತಿಳಿಸಿದ್ದರು.  

ಮಳೆಗಾಲದಲ್ಲಿ ಡೆಲಿವರಿ ಬಾಯ್​ನ ನೆನೆದ ನಟಿ ಪರಿಣಿತಿ ಚೋಪ್ರಾ! ನಾಚಿಕೆಯಾಗ್ಬೇಕು ಅಂದ ನೆಟ್ಟಿಗರು

click me!