'ದಿ ಕೇರಳ ಸ್ಟೋರಿ' ಸಿನಿಮಾದಲ್ಲಿ ಮತಾಂತರದ ವಿರುದ್ಧ ರೋಲ್ ಮಾಡಿದ್ದ ನಟಿ ಅದಾ ಶರ್ಮಾ ಮತಾಂತರವಾದ್ರಾ? ಫೋಟೋ ಹೇಳ್ತಿರೋದೇನು?
'ದಿ ಕೇರಳ ಸ್ಟೋರಿ' (The Kerala Story) ಚಿತ್ರ ಬಿಡುಗಡೆಯಾದಾಗಿನಿಂದಲೂ ಸುದ್ದಿಯಲ್ಲಿದೆ. ಈ ಚಿತ್ರದ ಬಗ್ಗೆ ಸುದೀರ್ಘ ಚರ್ಚೆ ಇನ್ನೂ ನಡೆಯುತ್ತಿದೆ. ಒಂದು ವಿಭಾಗವು ಚಿತ್ರವನ್ನು ತುಂಬಾ ಇಷ್ಟಪಡುತ್ತಿದ್ದರೆ, ಇನ್ನೊಂದೆಡೆ ಜನರು ಈ ಚಿತ್ರದ ಬಗ್ಗೆ ಪ್ರಶ್ನೆಗಳನ್ನು ಎತ್ತುತ್ತಿದ್ದಾರೆ. ಆದರೆ ಚಿತ್ರದ ಬಗೆಗಿನ ಅಭಿಮಾನಿಗಳ ಕ್ರೇಜ್ ಎಷ್ಟರಮಟ್ಟಿಗಿದೆಯೆಂದರೆ ಕೆಲವು ಅಭಿಮಾನಿಗಳು ಈ ಚಿತ್ರವನ್ನು ಹಲವಾರು ಬಾರಿ ವೀಕ್ಷಿಸಲು ಥಿಯೇಟರ್‌ಗಳತ್ತ ಮುಖ ಮಾಡುತ್ತಿದ್ದಾರೆ. ಚಿತ್ರದ ಈ ದೊಡ್ಡ ಯಶಸ್ಸಿನ ಬಗ್ಗೆ ಸ್ವತಃ ಚಿತ್ರದ ನಾಯಕಿ ನಟಿ ಅದಾ ಶರ್ಮಾ ತುಂಬಾ ಸಂತೋಷಪಟ್ಟಿದ್ದಾರೆ. ಇದಾಗಲೇ ಕೆಲವು ಚಿತ್ರಗಳಲ್ಲಿ ನಟಿಸಿದ್ದರೂ ಅದಾ ಶರ್ಮಾ ಅವರಿಗೆ ಹೆಸರು ತಂದುಕೊಟ್ಟ ಸಿನಿಮಾ ದಿ ಕೇರಳ ಸ್ಟೋರಿ. ಹಿಂದೂ ದೇವತೆಗಳನ್ನೇ ಮುಂದು ಮಾಡಿಕೊಂಡು ಮುಸ್ಲಿಮ್ ಯುವತಿಯೊಬ್ಬಳು ತಮ್ಮ ರೂಮ್ಮೇಟ್ಗಳ ಬ್ರೇನ್ವಾಷ್ ಹೇಗೆ ಮಾಡುತ್ತಾರೆ. ಆಮೇಲೆ ಆಕೆ ಹೇಗೆ ಯಶಸ್ವಿಯಾಗುತ್ತಾಳೆ ಎನ್ನುವ ಮತಾಂತರದ ಕುರಿತ ಚಿತ್ರ ಇದಾಗಿದೆ.
ಸಿನಿಮಾದಲ್ಲಿ ಮತಾಂತರದ ವಿರುದ್ಧ ಹೋರಾಡಿದ ಅದಾ ಶರ್ಮಾ ಖುದ್ದು ಕನ್ವರ್ಟ್ ಆಗಿಬಿಟ್ರಾ ಎನ್ನೋ ಪ್ರಶ್ನೆಯೊಂದು ಆಕೆಯ ಫ್ಯಾನ್ಸ್ಗೆ ಕಾಡುತ್ತಿದೆ. ಇದಕ್ಕೆ ಕಾರಣ ವೈರಲ್ ಆಗಿರೋ ಫೋಟೋಗಳು. ಫೋಟೋಗಳನ್ನು ನೋಡಿ ಫ್ಯಾನ್ಸ್ ಶಾಕ್ ಆಗಿದ್ದಾರೆ. ತಮ್ಮ ನೆಚ್ಚಿನ ಹೀರೋಯಿನ್ ಈ ಹಾದಿ ತುಳಿದುಬಿಟ್ಟರಾ ಎನ್ನುವ ಆತಂಕದಲ್ಲಿ ಇನ್ಸ್ಟಾಗ್ರಾಮ್ನಲ್ಲಿ ಥಹರೇವಾರಿ ಕಮೆಂಟ್ಸ್ ಹಾಕುತ್ತಿದ್ದಾರೆ. ಅಷ್ಟಕ್ಕೂ ತಮ್ಮ ಇನ್ಸ್ಟಾಗ್ರಾಮ್ (Instagram) ಖಾತೆಯಲ್ಲಿ ಅದಾ ಶರ್ಮಾ, ಬ್ರೈಡಲ್ ಲುಕ್ನಲ್ಲಿ ಮಿಂಚಿದ್ದಾರೆ. ತುಂಬಾ ಸುಂದರವಾಗಿ ಕಾಣಿಸುತ್ತಿದ್ದಾರೆ. ಸಮಸ್ಯೆ ಇದಲ್ಲ. ಈಕೆ ಮದುಮಗಳಂತೆ ಮಿಂಚಿರುವುದು ಹಿಂದೂ ಧರ್ಮದ ಮದುಮಗಳಂತೆ ಅಲ್ಲ, ಬದಲಿಗೆ ಕ್ರೈಸ್ತ ಧರ್ಮದ ಬ್ರೈಡ್ ಆಗಿದ್ದು ಅದರ ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ. ಇದನ್ನು ನೋಡಿ ಫ್ಯಾನ್ಸ್ ಶಾಕ್ ಆಗಿದ್ದಾರೆ. ಇದೇನಿದು ಕ್ರಿಶ್ಚಿಯನ್ ಅವತಾರ ಎಂದು ಹಲವರು ಪ್ರಶ್ನಿಸಿದ್ದರೆ, ನಿಜಕ್ಕೂ ನೀವು ಈ ಧರ್ಮವನ್ನು ಸ್ವೀಕರಿಸಿಬಿಟ್ರಾ ಎಂದು ಪ್ರಶ್ನಿಸುತ್ತಿದ್ದಾರೆ. ದಿ ಕೇರಳ ಸ್ಟೋರಿಯಲ್ಲಿ ಮತಾಂತರದ ವಿರುದ್ಧ ಪಾತ್ರ ಮಾಡಿ ಈಗ ಖುದ್ದು ಕ್ರೈಸ್ತ ಧರ್ಮಕ್ಕೆ ಮತಾಂತರ ಆದ್ರಾ ಎಂದು ಒಂದು ಸಮನೆ ಪ್ರಶ್ನೆಗಳ ಸುರಿಮಳೆಗೈಯುತ್ತಿದ್ದಾರೆ.
The Kerala Story: ಈಕೆ ಅದಾ ಶರ್ಮಾ ಅಲ್ಲ... ಚಾಮುಂಡೇಶ್ವರಿ ಅಯ್ಯರ್! ಅಸಲಿ ವಿಷ್ಯ ಬಯಲು
ಆದರೆ ಅಸಲಿಗೆ ಇದು ಸುಮ್ಮನೇ ಫೋಟೋಶೂಟ್ (Photoshoot). ನಿಜವಾದ ಮದುವೆಯದ್ದಲ್ಲ ಎನ್ನಲಾಗಿದೆ. ಈ ಬಗ್ಗೆ ಅದಾ ಶರ್ಮಾ ಯಾವುದೇ ಸ್ಪಷ್ಟನೆ ಹೇಳಲಿಲ್ಲ. ಇದು ಬ್ರೈಡಲ್ ಫೋಟೋಶೂಟ್ ಒಂದು ಭಾಗ ಅಷ್ಟೆ. ಅದಕ್ಕಾಗಿಯೇ ನಟಿ ಕ್ರಿಶ್ಚಿಯನ್ ವಧುವಿನಂತೆ ರೆಡಿಯಾಗಿದ್ದಾರೆ ಎನ್ನಲಾಗಿದೆ. ಬಿಳಿ ಬಣ್ಣದ ವೆಡ್ಡಿಂಗ್ ಡ್ರೆಸ್ನಲ್ಲಿ ಅದಾ ಶರ್ಮಾ ಅವರು ಸೂಪರ್ ಆಗಿ ಕಾಣಿಸುತ್ತಿದ್ದಾರೆ. ನಟಿಯ ಫೋಟೋಸ್ಗೆ 3 ಲಕ್ಷಕ್ಕೂ ಹೆಚ್ಚು ಜನರು ಕಮೆಂಟ್ ಮಾಡಿದ್ದಾರೆ. ಅದಾ ಶರ್ಮಾ ಕೈಯಲ್ಲಿ ಹೂವಿನ ಬೊಕ್ಕೆ ಹಿಡಿದುಕೊಂಡು ಕ್ಯಾಮೆರಾಗೆ ಪೋಸ್ ಕೊಟ್ಟಿದ್ದಾರೆ.
ಅಂದಹಾಗೆ, ಅದಾ ಶರ್ಮಾ (Adah Sharma) 1920 ಹಾರರ್ ಚಿತ್ರದ ಮೂಲಕ ಬಾಲಿವುಡ್‌ಗೆ ಪದಾರ್ಪಣೆ ಮಾಡಿದವರು. ವಿಕ್ರಮ್ ಭಟ್ ನಿರ್ದೇಶನದ ಹಾರರ್ ಮೂವಿ 1920. ಈ ಚಿತ್ರದಲ್ಲಿ ಅವರು ಲಿಸಾ ಎಂಬ ಹುಡುಗಿಯ ಪಾತ್ರವನ್ನು ನಿರ್ವಹಿಸಿದ್ದಾರೆ. ಚಿತ್ರದಲ್ಲಿ ಅದಾ ಅವರ ಕೆಲಸ ತುಂಬಾ ಇಷ್ಟವಾಯಿತು. ಅವರ ಚಿತ್ರ 13 ಕೋಟಿ ಕಲೆಕ್ಷನ್ ಮಾಡಿತ್ತು. ಚಿತ್ರದ ಹಾರರ್ ಕೂಡ ಜನರಿಗೆ ಇಷ್ಟವಾಗಿತ್ತು. ಆದರೆ ಈ ಚಿತ್ರದಲ್ಲಿ ಕೆಲಸ ಮಾಡಿದ ನಂತರವೂ ನಟಿಗೆ ಯಾವುದೇ ವಿಶೇಷ ಕೆಲಸ ಸಿಗಲಿಲ್ಲ. ಅದ್ಭುತ ಅಭಿನಯದ ನಂತರವೂ ಈಕೆಗೆ ಸಿಕ್ಕಿದ್ದು, ಸೈಡ್ ರೋಲ್ಗಳಷ್ಟೇ. ಆದರೆ 'ದಿ ಕೇರಳ ಸ್ಟೋರಿ' ಚಿತ್ರದಿಂದ ಅದಾ ಪಡೆದ ಪ್ರೀತಿ ಮತ್ತು ಮನ್ನಣೆ ಅವರಿಗೆ ಯಾವುದೇ ಚಿತ್ರದಿಂದ ಸಿಗಲಿಲ್ಲ. ಅವರ ವೃತ್ತಿಜೀವನದಲ್ಲಿ ಇಷ್ಟೊಂದು ಅಗಾಧ ಯಶಸ್ಸು ಕಂಡ ಮೊದಲ ಚಿತ್ರ ಇದಾಗಿದೆ. ಧಾರ್ಮಿಕ ಮತಾಂತರದ ವಿಷಯದ ಮೇಲೆ ಸಿನಿಮಾ ಮಾಡಲಾಗಿದೆ.
ಶೂಟಿಂಗ್ ಸ್ಪಾಟ್ಗೆ ಮೊದಲು ನಟಿ ಬಂದ್ರೆ ಏನಾಗತ್ತೆ? ಕೆಟ್ಟ ಅನುಭವ ಬಿಚ್ಚಿಟ್ಟ ಅದಾ ಶರ್ಮಾ