ಪ್ರೀಮಿಯರ್ ಶೋಗೆ ಅತಿಥಿಯಾಗಿ ಬಂದ ಶ್ವಾನ: ನಿಮಗಿಂತ ನಿಮ್ಮ ನಾಯಿ ಫೇಮಸ್‌ ಆದ್ರೆ ಹೀಗಿರುತ್ತೆ ನೋಡಿ

Published : Jul 18, 2022, 12:06 PM ISTUpdated : Jul 18, 2022, 12:57 PM IST
ಪ್ರೀಮಿಯರ್ ಶೋಗೆ ಅತಿಥಿಯಾಗಿ ಬಂದ ಶ್ವಾನ: ನಿಮಗಿಂತ ನಿಮ್ಮ ನಾಯಿ ಫೇಮಸ್‌ ಆದ್ರೆ ಹೀಗಿರುತ್ತೆ ನೋಡಿ

ಸಾರಾಂಶ

ನೀವು ಇದುವರೆಗೆ ಸಿನಿಮಾಗಳ ಪ್ರೀಮಿಯರ್ ಶೋಗೆ ಸೆಲೆಬ್ರಿಟಿಗಳು ರೆಡ್‌ ಕಾರ್ಪೆಟ್ ಮೂಲಕ ಸಾಗುವುದನ್ನು ನೋಡಿರುತ್ತೀರಿ. ಆದರೆ ಶ್ವಾನವೊಂದು ಯಾವುದೇ ಸೆಲೆಬ್ರಿಟಿಗೆ ಕಡಿಮೆ ಇಲ್ಲದಂತೆ ರೆಡ್‌ ಕಾರ್ಪೆಟ್ ಮೇಲೆ ನಡೆದಾಡುತ್ತಾ ಸಿನಿಮಾದ ಪ್ರೀಮಿಯರ್ ಶೋಗೆ ಹೋಗಿದ್ದನ್ನು ನೋಡಿದ್ದೀರಾ ಹಾಗಿದ್ದರೆ ಇಲ್ಲಿ ನೋಡಿ.

ನೀವು ಇದುವರೆಗೆ ಸಿನಿಮಾಗಳ ಪ್ರೀಮಿಯರ್ ಶೋಗೆ ಸೆಲೆಬ್ರಿಟಿಗಳು ರೆಡ್‌ ಕಾರ್ಪೆಟ್ ಮೂಲಕ ಸಾಗುವುದನ್ನು ನೋಡಿರುತ್ತೀರಿ. ಆದರೆ ಶ್ವಾನವೊಂದು ಯಾವುದೇ ಸೆಲೆಬ್ರಿಟಿಗೆ ಕಡಿಮೆ ಇಲ್ಲದಂತೆ ರೆಡ್‌ ಕಾರ್ಪೆಟ್ ಮೇಲೆ ನಡೆದಾಡುತ್ತಾ ಸಿನಿಮಾದ ಪ್ರೀಮಿಯರ್ ಶೋಗೆ ಹೋಗಿದ್ದನ್ನು ನೋಡಿದ್ದೀರಾ ಹಾಗಿದ್ದರೆ ಇಲ್ಲಿ ನೋಡಿ. ಶ್ವಾನವೊಂದನ್ನು ಪಾವ್ಸ್ ಆಫ್ ಫ್ಯೂರಿ: ದಿ ಲೆಜೆಂಡ್ ಆಫ್ ಹ್ಯಾಂಕ್‌(Paws of Fury The Legend Of Hank) ಎಂಬ ಆನಿಮೇಟೆಡ್ ಸಿನಿಮಾದ ಪ್ರೀಮಿಯರ್ ಶೋಗೆ ರಾಣಿಯಂತೆ ಬಂದಿದೆ. 

ಪಾವ್ಸ್ ಆಫ್ ಫ್ಯೂರಿ: ದಿ ಲೆಜೆಂಡ್ ಆಫ್ ಹ್ಯಾಂಕ್‌ ಸಿನಿಮಾ ತಂಡ ಶ್ವಾನಕ್ಕೆ ಈ ಅವಕಾಶ ನೀಡಿದ್ದಾರೆ. ಈ ಸಿನಿಮಾದ ನಿರ್ಮಾಪಕರು ನಾಯಿಗಳನ್ನು ಆಹ್ವಾನಿಸಲು ಮತ್ತು ರೆಡ್ ಕಾರ್ಪೆಟ್‌ನಲ್ಲಿ ನಡೆಯುವಂತೆ ಮಾಡಲು  ಹಲವು ಡಾಲರ್ ವೆಚ್ಚ ಮಾಡಿದ್ದಾರೆ. ದಿ ಲೆಜೆಂಡ್ ಆಫ್ ಹ್ಯಾಂಕ್‌ನ ಪ್ರಥಮ ಪ್ರದರ್ಶನಕ್ಕೆ ಶ್ವಾನವೂ ತೆರಳುತ್ತಿರುವ ದೃಶ್ಯದ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

 

ಶ್ವಾನವೂ ಯಾವುದೇ ಸೆಲೆಬ್ರಿಟಿಗೆ ಕಡಿಮೆ ಇಲ್ಲದಂತೆ ರೆಡ್‌ಕಾರ್ಪೆಟ್‌ ಮೇಲೆ ಬಂದಿದ್ದು, ಈ ವೇಳೆ ಪಪ್ಪಾರಾಜಿಗಳ (ಹವ್ಯಾಸಿ ಛಾಯಾಗ್ರಾಹಕರು) ಕ್ಯಾಮರಾಗಳು ಶ್ವಾನವನ್ನೇ ಹಿಂಬಾಲಿಸಿದವು. ಶ್ವಾನ ತನ್ನ ಮಾಲೀಕರೊಂದಿಗೆ ಹಾಜರಾಗಿ ರೆಡ್‌ ಕಾರ್ಪೆಟ್ ಅನ್ನು ಅಲಂಕರಿಸಿದೆ. ಈ ಅದ್ಭುತ ದೃಶ್ಯವನ್ನು 3 ಲಕ್ಷಕ್ಕೂ ಅಧಿಕ ಮಂದಿ ವೀಕ್ಷಿಸಿದ್ದಾರೆ. ಇದೀಗ ವೈರಲ್ ಆಗಿರುವ ವಿಡಿಯೋದಲ್ಲಿ ನಾಯಿ ಕಾರಿನಿಂದ ಜಿಗಿದು ರೆಡ್ ಕಾರ್ಪೆಟ್ ಮೇಲೆ ನಡೆದುಕೊಂಡು ಹೋಗುತ್ತಿರುವುದನ್ನು ಕಾಣಬಹುದು. ರೆಡ್ ಕಾರ್ಪೆಟ್ ಮೇಲೆ ಶ್ವಾನ ಪೋಸ್ ನೀಡುತ್ತಿದ್ದಂತೆ ಪಾಪರಾಜಿಗಳು ಆಕೆಯ ಚಿತ್ರಗಳನ್ನು ಕ್ಲಿಕ್ಕಿಸಿದರು.

ನಿಮ್ಮ ನಾಯಿ ನಿಮಗಿಂತ ಪ್ರಸಿದ್ಧವಾದಾಗ ಎಂದು ವಿಡಿಯೋಗೆ ಶೀರ್ಷಿಕೆ ನೀಡಲಾಗಿದೆ. ಈ ವಿಡಿಯೋ ನೋಡಿದ ಅನೇಕರು ಹೃದಯದ ಇಮೋಜಿಗಳನ್ನು ಕಾಮೆಂಟ್ ಮಾಡಿದ್ದಾರೆ. ಪಾವ್ಸ್ ಆಫ್ ಫ್ಯೂರಿ: ದಿ ಲೆಜೆಂಡ್ ಆಫ್ ಹ್ಯಾಂಕ್ , ಆನಿಮೇಟೆಡ್‌ ಸಿನಿಮಾವಾಗಿದೆ. ರಾಬ್ ಮಿಂಕಾಫ್ ಮತ್ತು ಮಾರ್ಕ್ ಕೊಟ್ಸಿಯರ್ ನಿರ್ದೇಶಿಸಿದ ಅನಿಮೇಟೆಡ್ ಮಾರ್ಷಲ್ ಆರ್ಟ್ಸ್ ಮಿಶ್ರಿತ ಹಾಸ್ಯ ಚಲನಚಿತ್ರವಾಗಿದೆ. ಇದು ಮೈಕೆಲ್ ಸೆರಾ, ರಿಕಿ ಗೆರ್ವೈಸ್, ಮೆಲ್ ಬ್ರೂಕ್ಸ್, ಜಾರ್ಜ್ ಟೇಕಿ, ಆಸಿಫ್ ಮಾಂಡ್ವಿ, ಗೇಬ್ರಿಯಲ್ ಇಗ್ಲೇಷಿಯಸ್, ಜಿಮನ್ ಹೌನ್ಸೌ, ಮಿಚೆಲ್ ಯೋಹ್ ಮತ್ತು ಸ್ಯಾಮ್ಯುಯೆಲ್ ಎಲ್ ಜಾಕ್ಸನ್ ಅವರು ಈ ಆನಿಮೇಟೆಡ್ ಪಾತ್ರಗಳಿಗೆ  ಧ್ವನಿ ನೀಡಿದ್ದಾರೆ. 

ಆಟೋದಲ್ಲಿ ಬೀದಿನಾಯಿಗಳ ಜಾಲಿ ರೈಡ್: ಶ್ವಾನಕ್ಕಾಗಿ ಆಟೋ ಖರೀದಿಸಿದ ಬೆಂಗಳೂರಿನ ದಂಪತಿ

ಪಾವ್ಸ್ ಆಫ್ ಫ್ಯೂರಿ: ದಿ ಲೆಜೆಂಡ್ ಆಫ್ ಹ್ಯಾಂಕ್ ಈ ಸಿನಿಮಾವನ್ನು ಮೂಲತಃ 2017 ರಲ್ಲಿ ಬಿಡುಗಡೆ ಮಾಡಲು ಯೋಜಿಸಲಾಗಿತ್ತು. ಆದರೆ ಮುಂದುವರಿದು ನಾಲ್ಕು ವರ್ಷಗಳ ನಂತರ ನಂತರ ಜುಲೈ 10, 2022 ರಂದು ಲಾಸ್ ಏಂಜಲೀಸ್‌ನಲ್ಲಿ ಪ್ರಥಮ ಪ್ರದರ್ಶನ ನೀಡಲಾಯಿತು.  ಜುಲೈ 15ರಂದು ಎಮೆರಿಕಾದಲ್ಲಿ  ಪ್ಯಾರಾಮೌಂಟ್ ಪಿಕ್ಚರ್ಸ್ ಮತ್ತು ನಿಕೆಲೋಡಿಯನ್ ಮೂವೀಸ್‌ನಿಂದ ಥಿಯೇಟರ್‌ಗಳಲ್ಲಿ ಬಿಡುಗಡೆಯಾಯಿತು. ಲಂಡನ್‌ನಲ್ಲಿ ಸ್ಕೈ ಸಿನಿಮಾ ಮೂಲಕ ಈ ಸಿನಿಮಾ ಬಿಡುಗಡೆಗೊಂಡಿದ್ದು, ವಿಶ್ವದಾದ್ಯಂತ ಈ ಚಲನಚಿತ್ರವು 6.3 ಮಿಲಿಯನ್ ಡಾಲರ್‌ ಗಳಿಸಿದೆ ಮತ್ತು ವಿಮರ್ಶಕರಿಂದ ಸಾಮಾನ್ಯ ಮಿಶ್ರ ವಿಮರ್ಶೆಗಳನ್ನು ಗಳಿಸಿದೆ. 

ನಮ್ಮ ಪ್ರೀತಿಗೆ ಯಾವ ಗೇಟ್ ಕೂಡ ಅಡ್ಡಿಯಾಗದು... ಶ್ವಾನಗಳ ಮುದ್ದಾದ ಫೋಟೋ ವೈರಲ್‌

ನಮ್ಮ ಕನ್ನಡದಲ್ಲಿ ನಾಯಿಯೇ ಪ್ರಮುಖ ಪಾತ್ರದಲ್ಲಿರುವ ರಕ್ಷಿತ್ ಶೆಟ್ಟಿ ಅಭಿನಯದ ಚಾರ್ಲಿ ಸಿನಿಮಾವೂ ದೇಶಾದ್ಯಂತ ವಿವಿಧ ಭಾಷೆಗಳಲ್ಲಿ ಬಿಡುಗಡೆಯಾಗಿ ಸೂಪರ್ ಹಿಟ್ ಆದ ಬಳಿಕ ನಾಯಿಗಳಿಗೆ ಭಾರಿ ಬೇಡಿಕೆ ಉಂಟಾಗಿದೆ. ಈ ಸಿನಿಮಾದ ಪ್ರೀಮಿಯರ್‌ ಹಾಗೂ ಪ್ರಚಾರದಲ್ಲಿ ಶ್ವಾನ ಚಾರ್ಲಿ ಭಾಗವಹಿಸಿತ್ತು.
 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಪ್ರೀತಿಸಿದ ಹುಡುಗಿ ಮೋಸ ಮಾಡಿದ್ರೆ ತಿರುಗಿ ನೋಡದ ಹುಡುಗರು; ದ್ರೋಹ ಮಾಡಿದೋಳ ಹಿಂದೆ ಹೋದ Bigg Boss ಸ್ಪರ್ಧಿ
ರಾಮ್ ಚರಣ್ ಮೇಲೆ ದೇಶದಾಚೆಗಿನ ಪ್ರೀತಿ.. ಮೆಗಾ ಪವರ್ ಸ್ಟಾರ್‌ಗಾಗಿ ಭಾರತಕ್ಕೆ ಬಂದ ಆ ವಿದೇಶಿ ಫ್ಯಾನ್ಸ್!