ಆಮೀರ್​ ಖಾನ್​ ಪುತ್ರಿ ಇರಾ ರಿಸೆಪ್ಷನ್​ನಲ್ಲಿ ಜೈ ಶ್ರೀರಾಮ್​ ಎಂದು ಜಪಿಸಿದ ಕಂಗನಾ: ವಿಡಿಯೋ ವೈರಲ್

By Suvarna News  |  First Published Jan 14, 2024, 4:10 PM IST

ಆಮೀರ್​ ಖಾನ್​ ಪುತ್ರಿ ಇರಾ ಖಾನ್​ ಮದುವೆಯ ರಿಸೆಪ್ಷನ್​ನಲ್ಲಿ ನಟಿ ಕಂಗನಾ ರಣಾವತ್​ ಜೈಶ್ರೀರಾಮ್​ ಎಂದು ಹೇಳಿದ್ದು, ಅದರ ವಿಡಿಯೋ ವೈರಲ್​ ಆಗಿದೆ.
 


ಬಾಲಿವುಡ್​ ನಟ ಆಮೀರ್​ ಖಾನ್​ ಅವರ ಪುತ್ರಿ ಇರಾ ಖಾನ್​ ಮದ್ವೆಯಾಗಿ 10 ದಿನಗಳು ಕಳೆದರೂ ಮದುವೆಯ ಕುರಿತಾಗಿ ಒಂದೊಂದೇ ಅಪ್​ಡೇಟ್ಸ್​ ಹೊರಬೀಳುತ್ತಲೇ ಇದೆ. ಮದುವೆ ಹಾಗೂ ಅದಕ್ಕೂ ಮುನ್ನ ನಡೆದ ಹಲವಾರು ಸಂಪ್ರದಾಯಗಳ ವಿಡಿಯೋಗಳು ಇದೀಗ ವೈರಲ್​ ಆಗುತ್ತಿವೆ. ಇದೀಗ ಮದುವೆಯ ರಿಸೆಪ್ಷನ್​ ನಡೆದಿದ್ದು, ಅದರ ವಿಡಿಯೋಗಳು ಸೋಷಿಯಲ್​ ಮೀಡಿಯಾದಲ್ಲಿ ಸಕತ್​ ಸೌಂಡ್​ ಮಾಡುತ್ತಿದೆ. ಅಂದಹಾಗೆ,  ಆಮೀರ್​ ಖಾನ್​ ಮತ್ತು ಅವರ ಮೊದಲ ಪತ್ನಿ ರೀನಾ ಅವರ ಪುತ್ರಿ ಇರಾ ಖಾನ್​ ಮತ್ತು  ಬಹುಕಾಲದ ಗೆಳೆಯ ಫಿಟ್ನೆಸ್ ಫ್ರೀಕ್ ನೂಪುರ್ ಶಿಖರೆ ಅವರನ್ನು ಮೂರು ವರ್ಷಗಳ ಡೇಟಿಂಗ್​ ಬಳಿಕ  ಕಳೆದ 3ರಂದು ಮದುವೆಯಾದರು.  ಮುಂಬೈನಲ್ಲಿ ಜನವರಿ 3 ರಂದು ಖಾಸಗಿ ನೋಂದಣಿ ಸಮಾರಂಭದ ನಂತರ, ದಂಪತಿ ರಾಜಸ್ಥಾನದ ಉದಯಪುರದ ತಾಜ್ ಲೇಕ್ ಪ್ಯಾಲೇಸ್​ನಲ್ಲಿ ಅದ್ದೂರಿ ಆಚರಣೆಯನ್ನು ಆಯೋಜಿಸಿದರು.  

ಇದೀಗ ರಿಸೆಪ್ಷನ್​ ವಿಡಿಯೋಗಳು ವೈರಲ್​ ಆಗುತ್ತಿವೆ. ಈ ಪಾರ್ಟಿಯಲ್ಲಿ ಕೂಡ ಬಾಲಿವುಡ್​ ದಿಗ್ಗಜರ ದಂಡೇ ಹರಿದು ಬಂದಿದೆ. ಅಂಬಾನಿ ದಂಪತಿ ಸೇರಿದಂತೆ ಹಿರಿ-ಕಿರಿ ನಟ-ನಟಿಯರು, ಉದ್ಯಮಿಗಳು, ದೊಡ್ಡ ದೊಡ್ಡ ಸೆಲೆಬ್ರಿಟಿಗಳು ಬಂದು ಆಮೀರ್​ ಪುತ್ರಿ ಮತ್ತು ಅಳಿಯನಿಗೆ ವಿಷ್​ ಮಾಡಿದ್ದಾರೆ. ಇದರಲ್ಲಿ ಕುತೂಹಲ ಕೆರಳಿಸಿರುವುದು ನಟಿ ಕಂಗನಾ ರಣಾವತ್​ ಅವರ ಜೈ ಶ್ರೀರಾಮ್​ ಘೋಷಣೆ.

Tap to resize

Latest Videos

ಮಿಸ್ಟರಿ ಮ್ಯಾನ್ ಜೊತೆ ನಟಿ ಕಂಗನಾ ರಣಾವತ್!​ ಕೈಕೈಹಿಡಿದು ನಡೆದ ಈ ವಿದೇಶಿಗ ಯಾರು?

ನಟಿ ಕಂಗನಾ ಅವರು ರಿಸೆಪ್ಷನ್​ಗೆ ಬರುತ್ತಿದ್ದಂತೆಯೇ ಪಾಪರಾಜಿಗಳು ಮಾಮೂಲಿನಂತೆ ಫೋಟೋಗೆ ಪೋಸ್​ ನೀಡುವಂತೆ ಕೇಳಿದ್ದಾರೆ. ಆಗ ನಟಿ ಕಂಗನಾ ಜೈಶ್ರೀ ರಾಮ್ ಎನ್ನುತ್ತಲೇ ಪೋಸ್​ ಕೊಟ್ಟಿದ್ದಾರೆ. ಅಂದಹಾಗೆ ಇರಾ ಖಾನ್-ನೂಪುರ್ ಶಿಖರೆ ಆರತಕ್ಷತೆಯಲ್ಲಿ ನಟಿ ಕಂಗನಾ ರಣಾವತ್  ಬಹು-ಬಣ್ಣದ ಲೆಹೆಂಗಾ ಧರಿಸಿ ಆಕರ್ಷಕವಾಗಿ ಕಾಣಿಸುತ್ತಿದ್ದರು. ನಂತರ ಜೈ ಶ್ರೀ ರಾಮ್​ ಎನ್ನುವ ಮೂಲಕ ಎಲ್ಲರ ಹುಬ್ಬೇರಿಸಿದ್ದಾರೆ. ಕಳೆದ ವರ್ಷ ಕಂಗನಾ ಅಮೀರ್ ತನ್ನ ಆತ್ಮೀಯ ಸ್ನೇಹಿತ ಎಂದು ಹೇಳಿದ್ದರು. ಕೆಲವೊಮ್ಮೆ ನಾನು ಅಮೀರ್ ಸರ್ ನನ್ನ ಆತ್ಮೀಯ ಸ್ನೇಹಿತನಾಗಿದ್ದ ಸಮಯವನ್ನು ನೆನಪಿಸಿಕೊಳ್ಳುತ್ತೇನೆ. ಆ ದಿನಗಳು ಎಲ್ಲಿ ಹೋದವು ಎಂದು ನನಗೆ ತಿಳಿದಿಲ್ಲ ಎಂದು ಅವರು ತಮ್ಮ ಇನ್​ಸ್ಟಾಗ್ರಾಮ್​ ಸ್ಟೋರಿಯಲ್ಲಿ ಬರೆದುಕೊಂಡಿದ್ದು ಇಲ್ಲಿ ಉಲ್ಲೇಖಾರ್ಹ. 

ಕಂಗನಾ ರಣಾವತ್​ ಬಿಜೆಪಿಯಿಂದ ಸ್ಪರ್ಧಿಸುತ್ತಾರೆ ಎನ್ನುವುದು ಬಹುತೇಕ ಖಚಿತವಾಗಿದ್ದು, ಅಯೋಧ್ಯೆಯಲ್ಲಿ ನಡೆಯಲಿರುವ ಶ್ರೀರಾಮಲಲ್ಲಾ ಪ್ರಾಣಪ್ರತಿಷ್ಠೆ ಕಾರ್ಯಕ್ರಮದಲ್ಲಿಯೂ ಪಾಲ್ಗೊಳ್ಳಲಿದ್ದಾರೆ. ಅವರಿಗೆ ಇದಾಗಲೇ ಟ್ರಸ್ಟ್​ ವತಿಯಿಂದ ಆಮಂತ್ರಣ ಪತ್ರಿಕೆ ತಲುಪಿದೆ. ಇದರ ಮಧ್ಯೆಯೇ,  ಕಂಗನಾ ಅವರು ವಿದೇಶಿ ವ್ಯಕ್ತಿಯ ಜೊತೆ ಕಾಣಿಸಿಕೊಂಡಿರುವ ವಿಡಿಯೋ ಒಂದು ಸಕತ್​ ಸೌಂಡ್​ ಮಾಡುತ್ತಿದೆ.  ಇದರಿಂದಾಗಿ ಕಂಗನಾ ಅವರ ಡೇಟಿಂಗ್ ಲೈಫ್ ಕುರಿತು ಇದೀಗ ಸಾಕಷ್ಟು ಚರ್ಚೆಯಾಗುತ್ತಿದೆ. ಕಂಗನಾ ಜೊತೆ ಮಿಸ್ಟರಿ ಮ್ಯಾನ್ ಯಾರು ಎಂಬ ಬಗ್ಗೆ  ಸದ್ಯ ಅಭಿಮಾನಿಗಳು ತಲೆ ಬಿಸಿ ಮಾಡಿಕೊಂಡಿದ್ದಾರೆ.  ಜನವರಿ 13ರ ಶುಕ್ರವಾರ ಸಂಜೆ ಮುಂಬೈನ ಸಲೂನ್‌ನ ಹೊರಗೆ ಕಂಗನಾ ಈ ವಿದೇಶಿ ಪ್ರಜೆ ಜೊತೆ ಕಾಣಿಸಿಕೊಂಡಿದ್ದಾರೆ. ವೈರಲ್ ಆಗಿರುವ ಈ ವಿಡಿಯೋದಲ್ಲಿ   ಇಬ್ಬರೂ ಪರಸ್ಪರ ಕೈ ಹಿಡಿದುಕೊಂಡು ನಡೆದುಕೊಂಡು ಹೋಗುತ್ತಿರುವುದನ್ನು ನೋಡಬಹುದು.  ಇವರು ಯಾರು ಎಂಬ ಬಗ್ಗೆ ಚರ್ಚೆ  ಶುರುವಾಗಿದೆ. 

ನಟಿ ಕಂಗನಾ ರಣಾವತ್​ ಲೋಕಸಭೆಗೆ ಸ್ಪರ್ಧೆ ಕನ್​ಫರ್ಮ್​: ಯಾವ ಕ್ಷೇತ್ರ, ಯಾವ ಪಕ್ಷ? ಇಲ್ಲಿದೆ ಡಿಟೇಲ್ಸ್​..

click me!