ನಟ ಶಾರುಖ್ ಖಾನ್ ಒಮ್ಮೆ ತನ್ನ ಮನೆಯ ಸ್ತ್ರೀ ಸದಸ್ಯರು ಮತ್ತು ಸ್ನೇಹಿತರ ಮುಂದೆ ಶರ್ಟ್ ಇಲ್ಲದೆ ಇರಬಾರದು ಎಂಬುದರ ಬಗ್ಗೆ ಮಾತನಾಡಿದ್ದರು. ಈ ಮೂಲಕ ನಟ ಲಿಂಗ ಸಮಾನತೆಯ ಮಹತ್ವವನ್ನು ಎತ್ತಿ ತೋರಿಸಿದ್ದರು. ಹಾಗೆಯೇ ತನ್ನ ಪುತ್ರರಿಗೂ ಹುಡುಗಿಯರಿಗಿಂತ ಹೆಚ್ಚು ಯಾವುದೇ ಹೆಚ್ಚುವರಿ ಸವಲತ್ತುಗಳಿಲ್ಲ ಎಂದು ಹೇಳಿದ್ದಾರೆ.
ಶಾರುಖ್ ಅವರಿಗೆ ಮೂವರು ಮಕ್ಕಳಿದ್ದಾರೆ - ಪುತ್ರರಾದ ಆರ್ಯನ್ ಖಾನ್ ಮತ್ತು ಅಬ್ರಾಮ್ ಖಾನ್ ಮತ್ತು ಮಗಳು ಸುಹಾನಾ ಖಾನ್. ಅವರು ಆರು ವರ್ಷಗಳ ಪ್ರೀತಿಯ ನಂತರ 1991 ರಲ್ಲಿ ಡಿಸೈನರ್ ಗೌರಿ ಖಾನ್ ಅವರನ್ನು ವಿವಾಹವಾದರು.
ಶಾರುಖ್ ಖಾನ್ ಅಥವಾ ಗೌರಿ ಖಾನ್ ಯಾರು ಹೆಚ್ಚು ಶ್ರೀಮಂತರು?
2017 ರಲ್ಲಿ ಫೆಮಿನಾ ಜೊತೆ ಮಾತನಾಡಿದ ಶಾರುಖ್, "ತನ್ನ ಮನೆಯಲ್ಲಿ ಒಬ್ಬ ವ್ಯಕ್ತಿ ತನ್ನ ತಾಯಿ, ಸಹೋದರಿ ಅಥವಾ ಮಹಿಳಾ ಸ್ನೇಹಿತರ ಮುಂದೆ ಶರ್ಟ್ಲೆಸ್ ಆಗಿ ಹೋಗಲು ಹಕ್ಕಿಲ್ಲ ಎಂದು ನಾನು ನಂಬುತ್ತೇನೆ. ನಾನು ಆರ್ಯನ್‌ಗೆ ಸದಾಕಾಲ ಟಿ ಶರ್ಟ್ ಧರಿಸಲು ಹೇಳುತ್ತೇನೆ ಎಂದಿದ್ದಾರೆ.
ನಿಮ್ಮ ತಾಯಿ, ಮಗಳು, ಸಹೋದರಿ, ಮಹಿಳಾ ಸ್ನೇಹಿತರನ್ನು ಬಟ್ಟೆ ಇಲ್ಲದೆ ನೋಡುವುದರಿಂದ ನಿಮಗೆ ಅನಾನುಕೂಲವಾಗಿದ್ದರೆ, ಅವರು ನಿಮ್ಮನ್ನು ಅದೇ ರೀತಿ ಸ್ವೀಕರಿಸುತ್ತಾರೆಂದು ನೀವು ಏಕೆ ನಿರೀಕ್ಷಿಸುತ್ತೀರಿ? ಇದರಲ್ಲಿ ಸ್ತನಗಳಿರುವುದು ಇಲ್ಲದಿರುವುದು ವಿಷಯವಲ್ಲ. ಹುಡುಗಿಯೊಬ್ಬಳನ್ನು ಮಾಡಬೇಡಿ ಎಂದರೆ ಹುಡುಗನೂ ಮಾಡಲು ಸಾಧ್ಯವಿಲ್ಲ ಎಂದಿದ್ದಾರೆ.
ಶಾರುಖ್‌ನಷ್ಟೇ ಸಂಭಾವನೆ ಪಡೆಯುತ್ತಾರಾ ಬಾಹುಬಲಿ ನಟ ಪ್ರಭಾಸ್?
ಈ ವರ್ಷದ ಮಾರ್ಚ್ನಲ್ಲಿ, ಶಾರುಖ್ ಅವರು ಟ್ವಿಟರ್ ಆಸ್ಕ್ ಎಸ್ಆರ್ಕೆ ನಡೆಸಿದ್ದರು. ಅಲ್ಲಿ ನೆಟ್ಟಿಗರೊಬ್ಬರು ಹೆಣ್ಮಕ್ಕಳನ್ನು ಪಟಾಯಿಸೋಕೆ ಟಿಪ್ಸ್ ಕೇಳಿದ್ದರು. ಅದಕ್ಕೆ ಶಾರೂಖ್ 'ಪಟಾಯಿಸು' ಪದ ಬಳಸುವುದನ್ನು ತಪ್ಪಿಸಿ. ಹೆಚ್ಚು ಗೌರವ, ಸೌಮ್ಯತೆ ಮತ್ತು ಗೌರವದಿಂದ ಪ್ರಯತ್ನಿಸಿ ಎಂದು ಟ್ವೀಟ್ ಮಾಡಿದ್ದಾರೆ.