ಅಪ್ಪ, ಅಮ್ಮ ಸಹಾಯ ಮಾಡಲ್ಲ, ನನ್ನ ಖರ್ಚು ನಾನೇ ನೋಡ್ತೀನಿ ಎಂದ ಶ್ರುತಿ ಹಾಸನ್

Published : May 11, 2021, 12:02 PM ISTUpdated : May 11, 2021, 02:32 PM IST
ಅಪ್ಪ, ಅಮ್ಮ ಸಹಾಯ ಮಾಡಲ್ಲ, ನನ್ನ ಖರ್ಚು ನಾನೇ ನೋಡ್ತೀನಿ ಎಂದ ಶ್ರುತಿ ಹಾಸನ್

ಸಾರಾಂಶ

ಅಪ್ಪ ಅಮ್ಮ ದುಡ್ಡು ಕೊಡಲ್ಲ ಎಂದ ಕಮಲ್ ಹಾಸನ್ ಪುತ್ರಿ ನನ್ನ ಖರ್ಚು ನಾನೇ ನೋಡ್ಕೊಳ್ತೀನಿ ಎಂದ ಕಾಲಿವುಡ್ ಚೆಲುವೆ

ನಾನು ಕೊರೋನಾ ಮುಗಿಯುವವರೆಗೆ ಕಾಯಲು ಸಾಧ್ಯವಿಲ್ಲ ಎಂದು ನಟಿ ಶ್ರುತಿ ಹಾಸನ್ ಹೇಳಿದ್ದಾರೆ. ಆರೋಗ್ಯದ ಭೀತಿಯ ಮಧ್ಯೆ ಚಿತ್ರೀಕರಣ ಮಾಡುವುದು ಕಷ್ಟವಾಗಿದೆ. ಆದರೆ ನಡೆಯುತ್ತಿರುವ ಲಾಕ್‌ಡೌನ್ ನಂತರ ಕೆಲಸ ಪುನರಾರಂಭಿಸುವುದು ಬಹಳ ಮುಖ್ಯ ಎಂದಿದ್ದಾರೆ.

ಮಾಸ್ಕ್ ಇಲ್ಲದೆ ಸೆಟ್‌ನಲ್ಲಿರುವುದು ತುಂಬಾ ಭಯಾನಕ. ನಾನು ಸುಳ್ಳು ಹೇಳೋದಿಲ್ಲ. ಆದರೆ ನಾವು ಕೆಲಸಕ್ಕೆ ಮರಳಬೇಕಾಗಿದೆ. ನಾನು ಎಲ್ಲರಂತೆ ಹಣಕಾಸಿನ ಮಿತಿಗಳನ್ನು ಹೊಂದಿದ್ದೇನೆ ಎಂದು ಹೇಳಿದ್ದಾರೆ ಕಮಲ್ ಹಾಸನ್ ಮಗಳು.

KGF ನಿರ್ದೇಶಕರ ನೆಕ್ಸ್ಟ್ ಸಿನಿಮಾ ಸಲಾರ್‌ನಲ್ಲಿ ಪ್ರಭಾಸ್ ಜೊತೆ ಶ್ರುತಿ ರೊಮ್ಯಾನ್ಸ್

ಅವರು ಚಿತ್ರೀಕರಣಕ್ಕೆ ಸಿದ್ಧರಾದಾಗ, ನಾನು ಹೋಗಲೇಬೇಕು. ಅಲ್ಲಿಗೆ ಹೋಗಿ ಶೂಟ್ ಮುಗಿಸಿ ಇತರ ವೃತ್ತಿಪರ ಬದ್ಧತೆಗಳನ್ನು ಮುಗಿಸಬೇಕು ಎಂದಿದ್ದಾರೆ. ನಾವು ಪಡೆಯುವ ಸಂಭಾವನೆ ನಮ್ಮ ಸಂಪಾದನೆ ಭಿನ್ನವಾಗಿರಬಹುದು. ಆದರೆ ನಾವೆಲ್ಲರೂ  ಬಿಲ್‌ಗಳನ್ನು ಪಾವತಿಸಲೇಬೇಕು. ಅದಕ್ಕಾಗಿಯೇ ನಾನು ಕೆಲಸಕ್ಕೆ ಮರಳಬೇಕಾಗಿದೆ ಎಂದು ಹೇಳಿದ್ದಾರೆ.

ನಟ-ರಾಜಕಾರಣಿ ಕಮಲ್ ಹಾಸನ್ ಅವರ ಮಗಳು ತನ್ನನ್ನು ಸ್ವಂತ ಬಿಲ್ ಪಾವತಿಸುವ ಸ್ವತಂತ್ರ ಮಹಿಳೆ ಎಂದು ಕರೆದುಕೊಂಡಿದ್ದಾರೆ. ನನಗೆ ನನ್ನ ಮಿತಿಗಳಿವೆ. ನನ್ನ ತಂದೆ ಅಥವಾ ಮಮ್ಮಿ ನನಗೆ ಸಹಾಯ ಮಾಡುತ್ತಿಲ್ಲ ಎಂದಿದ್ದಾರೆ. ಕಳೆದ 11 ವರ್ಷಗಳಲ್ಲಿ ನಟಿ ತನ್ನ ತಂದೆಯ ಸ್ಥಳದಿಂದ ಹೊರಬಂದು ತಾನೇ ಕಟ್ಟಿದ ತನ್ನ ಜೀವನದ ಬಗ್ಗೆ ಹೆಮ್ಮೆಪಡುತ್ತಾರೆ.

ನಾನು ಎಲ್ಲ ನಿರ್ಧಾರಗಳನ್ನು ತೆಗೆದುಕೊಂಡಿದ್ದೇನೆ - ಒಳ್ಳೆಯದು ಅಥವಾ ಕೆಟ್ಟದು. ಕೊರೋನಾ ಮೊದಲು ಕಾರು ಅಥವಾ ಮನೆಯಂತಹ ಯಾವುದೇ ದೊಡ್ಡ ವಸ್ತುಗಳನ್ನು ಖರೀದಿಸದೆ ಜನ ಸ್ಮಾರ್ಟ್‌ ಆಗಿದ್ದರು. ಆದರೆ ನಾನು ಆಗಲೇ ಮನೆ ಖರೀದಿಸಿದೆ. ಹಾಗಾಗಿ ನನಗೆ ಆರ್ಥಿಕ ನಿರ್ಬಂಧಗಳಿವೆ ಎಂದು ನಟಿ ಹೇಳಿದ್ದಾರೆ. ಲಾಕ್‌ಡೌನ್ ಮುನ್ನ ನಟಿ ಸೀರಿಸ್ ಮತ್ತು ಸಿನಿಮಾ ಸಲಾರ್‌ನಲ್ಲಿ ಕೆಲಸ ಮಾಡುತ್ತಿದ್ದರು. ಪ್ರಸ್ತುತ ಚಿತ್ರೀಕರಣ ಸ್ಥಗಿತಗೊಂಡಿದೆ. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ನಾನೇನು ಸಾಧುವಲ್ಲ.. ಹೀಗೆ ಮಾತಾಡೋಕೆ ನನಗೂ ಬರುತ್ತೆ: ಪುಷ್ಪ ನಟಿ ಹೇಳಿದ್ದೇನು?
ವೃತ್ತಿಜೀವನದಲ್ಲಿ 2 ಬಾರಿ ದೊಡ್ಡ ತಪ್ಪು ಮಾಡಿದ ರಾಮ್ ಚರಣ್.. ಚಿರಂಜೀವಿಯೂ ಏನೂ ಮಾಡಲಾಗಲಿಲ್ಲವೇ?