ಸಲ್ಮಾನ್​ ಕೈಯಲ್ಲಿ ಸದಾ ಇರೋ ಬ್ರೆಸ್​ಲೆಟ್​ ಹೀಗೆಲ್ಲಾ ಮಾಡತ್ತಾ? ಅಬ್ಬಬ್ಬಾ ಅಂತಿದ್ದಾರೆ ಫ್ಯಾನ್ಸ್​

By Suvarna News  |  First Published Jun 15, 2023, 6:41 PM IST

ಸಲ್ಮಾನ್​ ಕೈಯಲ್ಲಿ ಸದಾ ಇರೋ ಬ್ರೆಸ್​ಲೆಟ್​ ಹಿಂದೆ ದೊಡ್ಡ ಕಥೆಯೇ ಇದೆ. ಇದರ ಕುರಿತು ನಟ ಹೇಳಿದ್ದೇನು? 
 


ಬಾಲಿವುಡ್​ನ ಮೋಸ್ಟ್​ ಎಲಿಬಿಜಬ್​ ಬ್ಯಾಚುಲರ್​ ಎಂದು ಕರೆಸಿಕೊಳ್ಳುತ್ತಿರುವ ಸಲ್ಮಾನ್​ ಖಾನ್ (Salman Khan)  ಒಬ್ಬ ಸ್ಟೈಲಿಶ್ ನಟ. ಅವರು ಯಾವುದೇ ಉಡುಗೆ ತೊಟ್ಟರೂ ಅಭಿಮಾನಿಗಳಿಗೆ ಅವರ ಪ್ರತಿಯೊಂದು ಸ್ಟೈಲ್ ಇಷ್ಟವಾಗುತ್ತದೆ. ಅದು   ಅವರ ನೈಜ ನೋಟದ ಶೈಲಿಯಾಗಿರಲಿ ಅಥವಾ ಚಿತ್ರದಲ್ಲಿನ ಅವರ ಯಾವುದೇ ಪಾತ್ರವಾಗಿರಲಿ... ಅಭಿಮಾನಿಗಳು ಅವರ ಪ್ರತಿಯೊಂದು ಶೈಲಿಯನ್ನು ನಕಲು ಮಾಡುತ್ತಾರೆ. ತೇರೇ ನಾಮ್ ಚಿತ್ರದಲ್ಲಿ ಅವರ ಹೇರ್ ಕಟ್ ಕೂಡ ಜನರು ಫಾಲೋ ಮಾಡಿದ್ದರು. ಸಲ್ಮಾನ್ ಖಾನ್ ಅಂತಹ ವಿಭಿನ್ನ ಸ್ಟೈಲ್ ಹೊಂದಿರುವ ಸ್ಟಾರ್ ಅವರನ್ನು ಅಭಿಮಾನಿಗಳು ಹೆಚ್ಚಾಗಿ ಕಾಪಿ ಮಾಡುವುದನ್ನು ಕಾಣಬಹುದು. ಕೆಲವೊಮ್ಮೆ ಅವರಂತೆಯೇ ಜೀನ್ಸ್ ಧರಿಸಿ, ಕೆಲವೊಮ್ಮೆ ಅವರ ಹೇರ್ ಸ್ಟೈಲ್ (hair style) ಮತ್ತು ಕೆಲವೊಮ್ಮೆ ಅವರಂತೆಯೇ ಬ್ರೆಸ್​ಲೆಟ್​  ಧರಿಸುತ್ತಾರೆ. 

ಇಲ್ಲಿ ಹೇಳಹೊರಟಿರುವುದು ಅವರ ಬ್ರೆಸ್​ಲೆಟ್​  (bracelet) ಬಗ್ಗೆ.  ಸಲ್ಮಾನ್​ ಖಾನ್​, ಎಷ್ಟೇ ಸ್ಟೈಲ್​  ಮಾಡಲಿ, ಯಾವುದೇ  ಬಟ್ಟೆ ಧರಿಸಲಿ, ಬರಿ ಮೈಯಲ್ಲೇ ಇರಲಿ... ಸ್ಟೈಲ್​ ಏನೇ ಇದ್ದರೂ ಅವರ ಬಲಗೈನಲ್ಲಿ ಸದಾ ಒಂದು ಬ್ರೆಸ್​ಲೆಟ್​  ಇರುತ್ತದೆ ಎನ್ನೋದನ್ನು ಗಮನಿಸಿರುವಿರಾ? ನೀಲಿ ಹರಳು ಇರುವ ಬ್ರೆಸ್​ಲೆಟ್​  ಇದು. ಎಲ್ಲಿಯೇ ಹೋದರೂ, ಚಿತ್ರದಲ್ಲಿ ಯಾವುದೇ ರೋಲ್​ ಮಾಡಿದ್ರೂ ಸಲ್ಮಾನ್​ ಅವರ ಕೈಯಲ್ಲಿ ಈ ಬ್ರೆಸ್​ಲೆಟ್​  ಇದ್ದೇ ಇರುತ್ತದೆ. ಯಾಕಪ್ಪಾ ಇಷ್ಟು ಇವರಿಗೆ ಇದರ ಮೇಲೆ ವ್ಯಾಮೋಹ ಎಂದು ತಲೆಕೆಡಿಸಿಕೊಂಡವರೇ ಹೆಚ್ಚು. ಇದೀಗ ಯುವತಿಯೊಬ್ಬಳು ಈ ಪ್ರಶ್ನೆಯನ್ನು ಸಲ್ಮಾನ್​ ಅವರ ಮುಂದೆ ಇಟ್ಟೇ ಬಿಟ್ಟಿದ್ದಾಳೆ. ಈ ಹಿಂದೆ ಕೂಡ ಸಲ್ಲುಭಾಯಿ ತಮಗೂ ಈ ಬ್ರೆಸ್​ಲೆಟ್​ ಗೂ ಇರುವ ಸಂಬಂಧದ  ಬಗ್ಗೆ ಮಾತನಾಡಿದ್ದರು. ಇದೀಗ ಅವರು ಮತ್ತೊಮ್ಮೆ ಈ ವಿಷಯವನ್ನು ಹೇಳಿದ್ದು, ಅದರ ವಿಡಿಯೋ ಸಕತ್​ ವೈರಲ್​ ಆಗುತ್ತಿದೆ.  

Tap to resize

Latest Videos

ಸಲ್ಮಾನ್​- ಶಾರುಖ್ ಖಾನ್​​ 'ಟೈಗರ್ 3' ವಿಡಿಯೋ ಲೀಕ್​: ಫ್ಯಾನ್ಸ್​ ಫುಲ್​ ಖುಷ್​

ಅಷ್ಟಕ್ಕೂ ಈ ಬ್ರೆಸ್​ಲೆಟ್​ಗೂ ಸಲ್ಮಾನ್​ ಖಾನ್​ ಜೀವನಕ್ಕೂ ಭಾರಿ ನಂಟು ಉಂಟಂತೆ. ಇದನ್ನು ಅವರೇ ಹೇಳಿದ್ದಾರೆ.  ಇದೇ ರೀತಿಯ ಬ್ರೆಸ್​ಲೆಟ್​  ಅನ್ನು ಅವರ ತಂದೆ ಸಲೀಂ ಖಾನ್ ಧರಿಸುತ್ತಿದ್ದರು.  ಬಾಲ್ಯದಿಂದಲೂ ಸಲ್ಮಾನ್ ಈ ಬ್ರೆಸ್​ಲೆಟ್​ ಗಾಗಿ ಅಪ್ಪನನ್ನು  ಒತ್ತಾಯಿಸುತ್ತಿದ್ದರು. ಆದ್ದರಿಂದ  ತಂದೆ ಸಲೀಂ ಖಾನ್ (Saleem Khan) ಮಗನಿಗೆ  ಅದೇ ರೀತಿಯ ಬ್ರೆಸ್​ಲೆಟ್​  ಉಡುಗೊರೆಯಾಗಿ ನೀಡಿದ್ದು, ಅದನ್ನು ಸಲ್ಲುಭಾಯಿ ಧರಿಸುತ್ತಿದ್ದಾರೆ. ಇಷ್ಟೇ ಆಗಿದ್ದರೆ ಅದು ದೊಡ್ಡ ಸುದ್ದಿಯಾಗುತ್ತಿರಲಿಲ್ಲ. ಬದಲಿಗೆ ಈ ಬ್ರೆಸ್​ಲೆಟ್​ ನಲ್ಲಿ ಇರುವ ಶಕ್ತಿಯ ಬಗ್ಗೆಯೂ ಸಲ್ಮಾನ್​ ಮಾತನಾಡಿದ್ದಾರೆ. 'ಇದಕ್ಕೆ ನಾನು ಫಿರೋಜಾ ಎಂದು ಕರೆಯುತ್ತೇನೆ.  ದುಷ್ಟ ಕಣ್ಣಿನಿಂದ ನನ್ನನ್ನು ರಕ್ಷಿಸಲು ಇದು ಕಾರ್ಯನಿರ್ವಹಿಸುತ್ತಿದೆ.  ಈ ಕಲ್ಲಿನ ವಿಶೇಷವೆಂದರೆ ಯಾರದೇ ಕೆಟ್ಟ ದೃಷ್ಟಿ ಬೀಳದಂತೆ ಇದು ತಡೆಯುತ್ತಿದೆ. ಈ ಬ್ರೆಸ್​ಲೆಟ್​ ನಲ್ಲಿ ನೀಲಿ ಹರಳು ಇದ್ದು, ಇದುವರೆಗೆ 7 ರಿಂದ 8 ಬಾರಿ ಬಿರುಕು ಬಿಟ್ಟಿದೆ. ಇದರ ಅರ್ಥ ಅಷ್ಟು ದೃಷ್ಟಿ ನನ್ನ ಮೇಲೆ ಬಿದ್ದಿದೆ ಎಂದು. ಆದ್ದರಿಂದ  ಕೆಟ್ಟ ದೃಷ್ಟಿ ಅಥವಾ ನನಗೆ ಸಂಭವಿಸುವ ಯಾವುದೇ ಅಹಿತಕರ ಘಟನೆಯನ್ನು ಈ ಹರಳು ತಡೆಯುತ್ತದೆ ಎಂದಿದ್ದಾರೆ.
 
 ಇನ್ನು ಸಲ್ಮಾನ್​ ಖಾನ್​ ಅವರ ಕೆಲಸದ ಬಗ್ಗೆ ಹೇಳುವುದಾದರೆ, ಇವರು  ಬಿಗ್ ಬಾಸ್ OTT ಯ ಎರಡನೇ ಸೀಸನ್‌ಗೆ ಸಜ್ಜಾಗುತ್ತಿದ್ದಾರೆ. ಅವರು ಜೂನ್ 17 ರಿಂದ ಜಿಯೋ ಸಿನಿಮಾದಲ್ಲಿ ಪ್ರಸಾರವಾಗಲಿರುವ ಬಿಗ್ ಬಾಸ್ OTT 2 (Bigg Boss) ಅನ್ನು ಹೋಸ್ಟ್ ಮಾಡಲಿದ್ದಾರೆ. ಅವರು ಕೊನೆಯದಾಗಿ ಬಹುನಿರೀಕ್ಷಿತ ಕಿಸಿ ಕಾ ಭಾಯಿ ಕಿಸಿ ಕಿ ಜಾನ್‌ನಲ್ಲಿ ಕಾಣಿಸಿಕೊಂಡರು. ದುರದೃಷ್ಟವಶಾತ್, ಚಿತ್ರವು ಪ್ರೇಕ್ಷಕರನ್ನು ಮೆಚ್ಚಿಸಲಿಲ್ಲ ಮತ್ತು ಪರಿಣಾಮವಾಗಿ, ಇದು ಗಲ್ಲಾಪೆಟ್ಟಿಗೆಯಲ್ಲಿ ವಿಫಲವಾಯಿತು.  ಶಾರುಖ್ ಖಾನ್ ಅವರ ಪಠಾಣ್‌ನಲ್ಲಿ ಸಂಕ್ಷಿಪ್ತ ಅತಿಥಿ ಪಾತ್ರದ ನಂತರ ಇಬ್ಬರೂ ಸೂಪರ್‌ಸ್ಟಾರ್‌ಗಳು ವೈಆರ್‌ಎಫ್‌ನ ಚಲನಚಿತ್ರ ಟೈಗರ್ ವರ್ಸಸ್ ಪಠಾಣ್​ನಲ್ಲಿ ಮುಖಾಮುಖಿಯಾಗಲಿದ್ದಾರೆ.

ಖಾನ್​ ತ್ರಯರಿಗಿಂತ ಮುಂಚೆಯೇ 100 ಕೋಟಿ ಕಲೆಕ್ಷನ್​ ಮಾಡಿ ಇತಿಹಾಸ ಸೃಷ್ಟಿಸಿತ್ತು ಈ ಸಿನಿಮಾ
 

click me!