ನನ್ನ ಮದುವೆ ಪ್ರಸ್ತಾಪ ರಿಜೆಕ್ಟ್ ಮಾಡಿದ್ರು ಜೂಹಿ ಚಾವ್ಲಾ ತಂದೆ; ಶಾಕಿಂಗ್ ವಿಚಾರ ಬಿಚ್ಚಿಟ್ಟ ಸಲ್ಮಾನ್ ಖಾನ್

By Shruthi Krishna  |  First Published Mar 14, 2023, 5:05 PM IST

ಬಾಲಿವುಡ್ ಸ್ಟಾರ್ ಸಲ್ಮಾನ್ ಖಾನ್ ಜೂಹಿ ಚಾವ್ಲಾ ಅವರನ್ನು ಮದುವೆಯಾಗಲು ಬಯಸಿದ್ದ ವಿಚಾರವನ್ನು ರಿವೀಲ್ ಮಾಡಿದ ವಿಡಿಯೋ ವೈರಲ್ ಆಗಿದೆ. 


ಬಾಲಿವುಡ್‌ನ ಮೋಸ್ಟ್ ಎಲಿಜಬಲ್ ಬ್ಯಾಚುಲರ್ ಅಂದರೆ ಸಲ್ಮಾನ್ ಖಾನ್. ಬ್ಯಾಡ್ ಬಾಯ್ 57 ವರ್ಷವಾಗಿದ್ದರೂ ಇನ್ನೂ ಮದುವೆಯಾಗದೇ ಹಾಗೆ ಸಿಂಗಲ್ ಆಗಿ ಇದ್ದಾರೆ. ಹಾಗಂತ ಸಲ್ಮಾನ್ ಹೆಸರು ಯಾರ ಜೊತೆ ಥಳಕು ಹಾಕಿಕೊಂಡಲ್ಲ ಅಂತ ಮಾತ್ರ ಅಂದ್ಕೋಬೇಡಿ. ಬಾಲಿವುಡ್‌ನ ಅನೇಕ ನಟಿಯರ ಜೊತೆ ಸಲ್ಮಾನ್ ಹೆಸರು ಕೇಳಿಬಂದಿದೆ. ಐಶ್ವರ್ಯಾ ರೈ ಯಿಂದ ಈಗಿನ ನಾಯಕಿ ಪೂಜಾ ಹೆಗ್ಡೆ ವರೆಗೂ ಸಲ್ಮಾನ್ ಡೇಟಿಂಗ್ ರೂಮರ್ ವೈರಲ್ ಆಗಿದೆ. ಸಿನಿಮಾದಷ್ಟೆ ಸಲ್ಮಾನ್ ಖಾನ್ ಡೇಟಿಂಗ್ ವದಂತಿ ಕೂಡ ಸದ್ದು ಮಾಡಿದೆ. ಸಲ್ಮಾನ್ ಖಾನ್ ಮನದರಸಿಯರ ಲಿಸ್ಟ್ ನಲ್ಲಿ ಬಾಲಿವುಡ್ ಸ್ಟಾರ್ ಜೂಹಿ ಚಾವ್ಲಾ ಹೆಸರು ಕೂಡ ಇದೆ. 

ಜೂಹಿ ಚಾವ್ಲಾ ಮೇಲೆ ಲವ್ ಆಗಿ, ಮದುವೆಯಾಗಲೂ ನಿರ್ಧರಿಸಿದ್ದರಂತೆ ಸಲ್ಮಾನ್ ಖಾನ್. ಈ ಬಗ್ಗೆ ಸ್ವತಃ ಸಲ್ಮಾನ್ ಖಾನ್ ಅವರೇ ಹೇಳಿಕೊಂಡಿದ್ದಾರೆ. ಜೂಹಿ ಅವರನ್ನು ಮದುವೆಯಾಗುವುದಾಗಿ ಹೇಳಿ ಅವರ ತಂದೆ ಬಳಿ ಪ್ರಸ್ತಾಪಿಸಿದ್ದಂತೆ ಸಲ್ಮಾನ್. ಈ ವಿಚಾರವನ್ನು ಸಲ್ಮಾನ್ ಖಾನ್ ಈ ಹಿಂದೆ ಸಂದರ್ಶನವೊಂದರಲ್ಲಿ ಬಹಿರಂಗ ಪಡಿಸಿದ್ದರು. ಸಲ್ಮಾನ್ ಖಾನ್ ಹಳೆಯ ವಿಡಿಯೋ ಇದೀಗ ಮತ್ತೆ ವೈರಲ್ ಆಗಿದೆ. ಸಲ್ಮಾನ್ ಖಾನ್, ಶಾರುಖ್ ಖಾನ್ ಮತ್ತು ಜೂಹಿ ಚಾವ್ಲಾ ಉತ್ತಮ ಸ್ನೇಹಿತರು. ಇವರೆಲ್ಲರೂ ಒಂದೇ ಸಮಕಾಲಿನವರು. ಒಟ್ಟಿಗೆ ಬಾಲಿವುಡ್‌ನಲ್ಲಿ ಮಿಂಚಿದವರು. 

Tap to resize

Latest Videos

ಸಲ್ಮಾನ್ ಖಾನ್ ಮತ್ತು ಜೂಹಿ ಚಾವ್ಲಾ ಇಬ್ಬರೂ ಪ್ರಮುಖ ಪಾತ್ರದಲ್ಲಿ ಎಂದಿಗೂ ಒಟ್ಟಿಗೆ ಸಿನಿಮಾ ಮಾಡಿಲ್ಲ.  ಒಂದು ಸಿನಿಮಾದಲ್ಲಿ ಇಬ್ಬರೂ ಚಿಕ್ಕ ದೃಶ್ಯದಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದರು. ಅದು ಬಿಟ್ಟರೇ ಇಬ್ಬರೂ ಸಿನಿಮಾ ಮಾಡಿಲ್ಲ. ಆದರೆ ಇಬ್ಬರೂ ಉತ್ತಮ ಸ್ನೇಹಿತರು. ಸಂದರ್ಶನಗಳಲ್ಲಿ ಸಲ್ಮಾನ್ ಖಾನ್ ಅವರಿಗೆ ಕೇಳಲಾಗುವ ಪ್ರಮುಖ ಪ್ರಶ್ನೆ ಎಂದರೆ ಮದುವೆ. ಅನೇಕ ಸಂದರ್ಶನಗಲ್ಲಿ ಸಲ್ಮಾನ್ ಅವರಿಗೆ ಮದುವೆ ಯಾವಾಗಾ, ಯಾಕೆ ಆಗಿಲ್ಲ ಎನ್ನುವ ಪ್ರಶ್ನೆ ಎದುರಾಗುತ್ತಲೇ ಇರುತ್ತದೆ. ಹೀಗೆ ಮದುವೆ ಬಗ್ಗೆ ಮಾತನಾಡುವಾಗ ಸಲ್ಮಾನ್ ಜೂಹ್ಲಿ ಚಾವ್ಲಾ ಬಗ್ಗೆ ಮಾತನಾಡಿದರು. 

ಜೂಹಿ ಚಾವ್ಲಾ ತುಂಬಾ ಸ್ಟೀಟ್ ವ್ಯಕ್ತಿ ಎಂದ ಸಲ್ಮಾನ್, 'ಜೂಹಿ ತಂದೆ ನನ್ನ ಮದುವೆ ಪ್ರಸ್ತಾಪವನ್ನು ತಿರಸ್ಕರಿಸಿದರು' ಎಂದು ಸಲ್ಮಾನ್ ಖಾನ್ ಬಹಿರಂಗ ಪಡಿಸಿದರು. ತಾನು ಸರಿಯಾದ ವ್ಯಕ್ತಿ ಅಲ್ಲ ಎನ್ನುವ ಕಾರಣಕ್ಕೆ ಇರಬಹುದು ಎಂದು ಸಲ್ಮಾನ್ ಖಾನ್ ಬಹಿರಂಗ ಪಡಿಸಿದರು. ಹಳೆಯ ವಿಡಿಯೋ ಈಗ ವೈರಲ್ ಆಗಿದೆ.

This salman khan ❤❤ pic.twitter.com/GQP4fffpRu

— Arshi Siddiqui (@Arshi_E_Sid)

ಪ್ರೀತಿಯೂ ಸಿಗಲಿಲ್ಲ, ಮದುವೆಯೂ ಉಳಿಯಲಿಲ್ಲ 63 ವರ್ಷವಾದರೂ ಒಂಟಿಯಾಗಿದ್ದಾರೆ ಸಲ್ಮಾನ್‌ ಮಾಜಿ ಗೆಳತಿ

ಜೂಹಿ ಚಾವ್ಲಾ ಉದ್ಯಮಿ ಜೈ ಮೆಹ್ತಾ ಜೊತೆ ದಾಂಪತ್ಯಕ್ಕೆ ಕಾಲಿಟ್ಟರು. 1995ರಲ್ಲಿ ಜೂಹಿ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಈ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಸದ್ಯ ಜೂಹಿ ನಟನೆಯಿಂದ ದೂರ ಇದ್ದಾರೆ. ಹಾಗಂತ ಸಿನಿಮಾರಂಗದ ನಂಟು ಕಡಿದುಕೊಂಡಿಲ್ಲ. ಆಗಾಗ ಸಿನಿಮಾರಂಗದ ಕಾರ್ಯಕ್ರಮ, ಸಮಾರಂಭಗಳಲ್ಲಿ ಕಾಣಿಸಿಕೊಳ್ಳುತ್ತಿರುತ್ತಾರೆ. 

Bollywood Wedding Bell: ಸಲ್ಮಾನ್‌ ಸಂಬಂಧಿ ಮದುವೆಯಾಗುತ್ತಾರೆ ಸೋನಾಕ್ಷಿ ಸಿನ್ಹಾ?

ಸಲ್ಮಾನ್ ಖಾನ್ ಸದ್ಯ ಅನೇಕ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಈಗಾಗಲೇ ಟೈಗರ್ 3 ಮುಗಿಸಿರುವ ಸಲ್ಮಾನ್ ಖಾನ್ ರಿಲೀಸ್‌ಗೆ ಎದುರು ನೋಡುತ್ತಿದ್ದಾರೆ. ಸದ್ಯ ಕಿಸಿ ಕಾ ಬಾಯ್ ಕಿಸಿ ಕಾ ಜಾನ್ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾದಲ್ಲಿ ನಾಯಕಿಯಾಗಿ ಪೂಜಾ ಹೆಗ್ಡೆ ಕಾಣಿಸಿಕೊಂಡಿದ್ದಾರೆ. ಪೂಜಾ ಹೆಗ್ಡೆ ಜೊತೆಯೂ ಸಲ್ಮಾನ್ ಖಾನ್ ಡೇಟಿಂಗ್ ವದಂತಿ ವೈರಲ್ ಆಗಿತ್ತು. ಆದರೆ ಈ ಬಗ್ಗೆ ಸಲ್ಮಾನ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.  

click me!