ನಾಟು ನಾಟುಗೆ ಆಸ್ಕರ್​: ಶಾಕಿಂಗ್​ ಹೇಳಿಕೆ ಕೊಟ್ಟ ಜಾಕ್ವಲಿನ್​ Makeup Artist

Published : Mar 14, 2023, 03:57 PM IST
ನಾಟು ನಾಟುಗೆ ಆಸ್ಕರ್​: ಶಾಕಿಂಗ್​ ಹೇಳಿಕೆ ಕೊಟ್ಟ ಜಾಕ್ವಲಿನ್​ Makeup Artist

ಸಾರಾಂಶ

ಆರ್​ಆರ್​ಆರ್​ ಚಿತ್ರದ ನಾಟು ನಾಟು ಆಸ್ಕರ್​ ಪ್ರಶಸ್ತಿ ಪಡೆಯುತ್ತಲೇ ಜಾಕ್ವಲಿನ್​ ಫರ್ನಾಂಡೀಸ್​ ಅವರ ಮೇಕಪ್​ ಮ್ಯಾನ್​ ಶಾಕಿಂಗ್​ ಹೇಳಿಕೆ ಕೊಟ್ಟಿದ್ದಾರೆ. ಏನದು?  

ಭಾರತೀಯ ಚಲನಚಿತ್ರ RRR ನ ನಾಟು ನಾಟು... ಗೆ ಆಸ್ಕರ್ ಸಿಕ್ಕಿತು. ಈ ಹಾಡು ಪ್ರಪಂಚದಾದ್ಯಂತ ಚರ್ಚೆಯಾಗುತ್ತಿದ್ದು, ಎಲ್ಲರೂ ಅಭಿನಂದಿಸುತ್ತಿದ್ದಾರೆ. ಗಣ್ಯಾತಿಗಣ್ಯರು RRR ತಂಡಕ್ಕೆ ಅಭಿನಂದನೆ ಸಲ್ಲಿಸುತ್ತಿರುವ ನಡುವೆಯೇ ನಟಿ ಜಾಕ್ವೆಲಿನ್ ಫರ್ನಾಂಡೀಸ್ ಮೇಕಪ್ ಆರ್ಟಿಸ್ಟ್ ಈ ಪ್ರಶಸ್ತಿ ಬಗ್ಗೆ ಹೇಳಿಕೆಯೊಂದನ್ನು ನೀಡಿದ್ದು ಅದು ತಲ್ಲಣ ಮೂಡಿಸುತ್ತಿದೆ. ಈ ಹಿಂದೆ  ತೆಲುಗು ಹಿರಿಯ ನಿರ್ದೇಶಕ  ತಮ್ಮಾರೆಡ್ಡಿ ಭಾರದ್ವಾಜ್ (Tammareddy Bharadwaj) ಕೂಡ ನಾಟು ನಾಟುವಿನ ಕುರಿತಾಗಿ ಭಯಾನಕ ಹೇಳಿಕೆಯೊಂದನ್ನು ನೀಡಿದ್ದರು. ಆಸ್ಕರ್ ಪ್ರಶಸ್ತಿಯನ್ನು ಪಡೆಯಲೆಂದು ಆರ್.ಆರ್.ಆರ್ ಚಿತ್ರದ ನಿರ್ದೇಶಕ ರಾಜಮೌಳಿ (Rajamouli) 80 ಕೋಟಿ ಖರ್ಚು ಮಾಡಿದ್ದಾರೆ ಎಂದು ಆರೋಪಿಸಿದ್ದರು.  'RRR' ತಂಡ ಆಸ್ಕರ್ ಪ್ರಶಸ್ತಿ ಗೆಲ್ಲಲು ಭರ್ಜರಿಯಾಗಿ ಪ್ರಚಾರ ಮಾಡುತ್ತಿದೆ. ಅಮೆರಿಕದಲ್ಲಿ ಸಿಕ್ಕಾ ಹಣವನ್ನು ಸುರಿಯುತ್ತಿದೆ, ಈ ಮೊತ್ತದಲ್ಲಿ ನಾನು  8 10 ಸಿನಿಮಾಗಳನ್ನು ತಯಾರಿಸುತ್ತಿದ್ದೆ ಎಂದಿದ್ದರು. ‘ನಾನು ಆರೋಪ ಮಾಡುತ್ತಿಲ್ಲ. ನನಗೆ ಗೊತ್ತಿರುವವರೇ ಹೇಳಿರುವಂತೆ ಆಸ್ಕರ್ ಪ್ರಶಸ್ತಿಗಾಗಿ ರಾಜಮೌಳಿ ಮತ್ತು ತಂಡ ನೀರಿನಂತೆ ಹಣ ಖರ್ಚು ಮಾಡಿದ್ದಾರೆ. ಎಂಬತ್ತು ಕೋಟಿ ಖರ್ಚಾಗಿದೆ ಎಂದು ಹೇಳಲಾಗುತ್ತಿದೆ. ಅಲ್ಲಿ ಸಿನಿಮಾ ಬಿಡುಗಡೆ, ಪ್ರಚಾರ, ತಂಡದ ಖರ್ಚು ಮತ್ತು ಆಸ್ಕರ್ ಪ್ರಶಸ್ತಿಗಾಗಿ ಮಾಡಬೇಕಾದ ಖರ್ಚು ಹೀಗೆ ಕೋಟಿ ಕೋಟಿ ಸುರಿದಿದ್ದಾರೆ. ಇಷ್ಟು ಹಣ ಖರ್ಚು ಮಾಡಿ ಪ್ರಶಸ್ತಿ ಪಡೆಯಬೇಕಾ?’ ಎಂದು ಅವರು ತಮ್ಮಾರೆಡ್ಡಿ ಖಾಸಗಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದರು.

ಇದೀಗ ಆಸ್ಕರ್​ ಸಿಕ್ಕಿದೆ. ಈ ಬಳಿಕ ತಮ್ಮಾರೆಡ್ಡಿ ಅವರ ಧಾಟಿಯಲ್ಲಿಯೇ, ಜಾಕ್ವೆಲಿನ್ ಫರ್ನಾಂಡೀಸ್ (Jacqueline Fernandez) ಅವರ ಮೇಕಪ್ ಕಲಾವಿದ ಶಾನ್ ಮುತ್ತತ್ತಿಲ್ (Shan Muttattil) ಅವರು  ಟೀಕಿಸಿದ್ದಾರೆ. ಈ ಕುರಿತು ಅವರು  ತಮ್ಮ ಇನ್​ಸ್ಟಾಗ್ರಾಮ್​ನಲ್ಲಿ  ಪೋಸ್ಟ್ ಅನ್ನು ಹಂಚಿಕೊಂಡಿದ್ದಾರೆ, ಅದರಲ್ಲಿ ಅವರು ಪ್ರಶಸ್ತಿಯನ್ನು ಟೀಕಿಸಿದ್ದಾರೆ.  ಆರ್‌ಆರ್‌ಆರ್ ತಯಾರಕರನ್ನು ಗೇಲಿ ಮಾಡುತ್ತಾ ಕಮೆಂಟ್ ಮಾಡಿದ್ದಾರೆ. ಅವರ ಗಂಭೀರ ಆರೋಪ ಏನೆಂದರೆ ಹಾಡಿನ ಪ್ರಶಸ್ತಿಯನ್ನು ತಯಾರಕರು ಖರೀದಿಸಿದ್ದಾರೆ ಎನ್ನುವುದು. ಅವರು ತಮ್ಮ ಪೋಸ್ಟ್​ನಲ್ಲಿ,  ಹಹಹಹಾ, ಇದು ತುಂಬಾ ತಮಾಷೆಯಾಗಿದೆ. ಭಾರತದಲ್ಲಿ ಮಾತ್ರ ಪ್ರಶಸ್ತಿಗಳನ್ನು ಖರೀದಿಸಬಹುದು ಎಂದು ನಾನು ಭಾವಿಸಿದೆ. ಆದರೆ ಈಗ ಆಸ್ಕರ್‌ನಲ್ಲಿ ಕೂಡ. ನಮ್ಮಲ್ಲಿ ಹಣವಿದ್ದರೆ ಏನನ್ನಾದರೂ  ಖರೀದಿಬಹುದು ಎಂದಹಾಗಾಯ್ತು, ಕೊನೆಗೆ  ಸಾಧ್ಯವಿಲ್ಲ ಎಂದುಕೊಂಡಿದ್ದ ಆಸ್ಕರ್ ಕೂಡ' ಎಂದು ಬರೆದಿದ್ದಾರೆ. 

RRR: ಹೀಗೆಲ್ಲಾ ಮಾಡಿ ಇವ್ರಿಗೆ ಆಸ್ಕರ್​ ಬೇಕಾ ಎಂದ ಖ್ಯಾತ ನಿರ್ದೇಶಕ!

ಬರೀ ವಿಮಾನದ ಟಿಕೆಟ್‌ಗಳಿಗೆ ಕೋಟಿ ಕೋಟಿ ಖರ್ಚು ಮಾಡುತ್ತಿದ್ದಾರೆ. ಅದೆಲ್ಲ ಈಗ ಚರ್ಚೆ ಮಾಡೋ ಅವಶ್ಯಕತೆ ಇದೆಯಾ ಎಂದು ಪ್ರಶ್ನಿಸಿದ್ದ ತಮ್ಮಾರೆಡ್ಡಿ ಅವರು, ಕನ್ನಡದ ಕೆಜಿಎಫ್ 2 ಚಿತ್ರಕ್ಕೆ ನೂರು ಕೋಟಿ ರೂಪಾಯಿ ಖರ್ಚು ಮಾಡಲಾಗಿದೆ. ಆಸ್ಕರ್ ಪ್ರಶಸ್ತಿಗಾಗಿ RRR ತಂಡ 80 ಕೋಟಿ ಖರ್ಚು ಮಾಡಿದೆ. ಇಪ್ಪತ್ತು ಕೋಟಿ ಸೇರಿಸಿದ್ದರೆ ಮತ್ತೊಂದು ಕೆಜಿಎಫ್ ಮಾದರಿಯ ಚಿತ್ರ ಮಾಡಬಹುದಿತ್ತು ಎಂದು ಕಿಡಿ ಕಾರಿದ್ದರು. 'RRR' ಸಿನಿಮಾವನ್ನು 600 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿದೆ. ಹಾಗೆ ನೋಡಿದರೆ, ಕೆಜಿಎಫ್ 2 (KGF 2) ಸಿನಿಮಾದ ಬಜೆಟ್ 100 ಕೋಟಿ ರೂ. ಈ ಆಸ್ಕರ್ ಪ್ರಚಾರಕ್ಕೆ 'ಕೆಜಿಎಫ್ 2' ಬಜೆಟ್‌ಗಿಂತ ಕೇವಲ 20 ಕೋಟಿ ರೂ. ಕಡಿಮೆಯಷ್ಟೇ ಖರ್ಚು ಮಾಡಿದ್ದಾರೆ" ಎಂದು ತಿಮ್ಮಾರೆಡ್ಡಿ ಆರೋಪಿಸಿದ್ದರು. ಅವರ ಈ ಮಾತು ಚರ್ಚೆಯಲ್ಲಿ ಇರುವಾಗಲೇ ಈಗ  ಶಾನ್ ಮುತ್ತತ್ತಿಲ್ ಅವರ ಮಾತು ಭಾರಿ ವೈರಲ್​ ಆಗುತ್ತಿದೆ. 

ಆರ್‌ಆರ್‌ಆರ್ ಬಗ್ಗೆ ಹೇಳುವುದಾದರೆ,  ಎಸ್‌ಎಸ್ ರಾಜಮೌಳಿ ಅವರ ಈ ಚಿತ್ರ 2022 ರಲ್ಲಿ ಬಿಡುಗಡೆಯಾಯಿತು. 500 ಕೋಟಿ ಬಜೆಟ್‌ನಲ್ಲಿ ತಯಾರಾದ ಈ ಚಿತ್ರದಲ್ಲಿ ರಾಮ್ ಚರಣ್ ಮತ್ತು ಜೂನಿಯರ್ ಎನ್‌ಟಿಆರ್ ಮುಖ್ಯ ಭೂಮಿಕೆಯಲ್ಲಿದ್ದಾರೆ.  ಚಿತ್ರವು ಬಿಡುಗಡೆಯಾದ ಮೇಲೆ ಗಲ್ಲಾಪೆಟ್ಟಿಗೆಯಲ್ಲಿ ಭೀತಿಯನ್ನು ಸೃಷ್ಟಿಸಿತು. ಈ ಚಿತ್ರವು ವಿಶ್ವಾದ್ಯಂತ ಬಾಕ್ಸ್ ಆಫೀಸ್‌ನಲ್ಲಿ ಸುಮಾರು 1200 ಕೋಟಿ ಗಳಿಸಿದೆ. 

Oscar Award: ನಾಟು ನಾಟುಗಾಗಿ ನಡೆದಿತ್ತು ಕೋಟಿ ಕೋಟಿಗಟ್ಟಲೆ ಬೆಟ್ಟಿಂಗ್​?

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ವೃತ್ತಿಜೀವನದಲ್ಲಿ 2 ಬಾರಿ ದೊಡ್ಡ ತಪ್ಪು ಮಾಡಿದ ರಾಮ್ ಚರಣ್.. ಚಿರಂಜೀವಿಯೂ ಏನೂ ಮಾಡಲಾಗಲಿಲ್ಲವೇ?
10 ಭಾಷೆಗಳಲ್ಲಿ 90 ಸಿನಿಮಾಗಳು, ಗಂಗೂಲಿ ಜೊತೆ ಅಫೇರ್ ವದಂತಿ.. 50 ವರ್ಷವಾದರೂ ಮದುವೆಯಾಗದ ನಟಿ ಯಾರು?