ಆದರ್ಶ ದಾಂಪತ್ಯದ ಬಗ್ಗೆ ಕೇಳಿದಾಗ, ನಟ ಸೈಫ್ ಅಲಿ ಖಾನ್ ಕೊಟ್ಟ ಉತ್ತರಕ್ಕೆ ಕಸಿವಿಸಿಗೊಂಡ ನಟಿ ಕರೀನಾ ಕಪೂರ್. ಆಗಿದ್ದೇನು ನೋಡಿ...
ಬಾಲಿವುಡ್ನ ಸದ್ಯದ ಯಶಸ್ವಿ ಜೋಡಿಗಳಲ್ಲಿ ಒಂದೆನಿಸಿದೆ ಸೈಫ್ ಅಲಿ ಖಾನ್ ಮತ್ತು ಕರೀನಾ ಕಪೂರ್ ಅವರ ಜೋಡಿ. ಎಲ್ಲರಿಗೂ ತಿಳಿದಿರುವಂತೆ ಇದು ಸೈಫ್ ಅಲಿ ಅವರಿಗೆ ಎರಡನೆಯ ಮದುವೆ. ಅವರ ಮೊದಲ ಮದುವೆಯಾದದ್ದು ನಟಿ ಅಮೃತಾ ಸಿಂಗ್ ಅವರ ಜೊತೆಗೆ. ತಮ್ಮ ಮೊದಲ ಮದುವೆಗೆ ಬಂದಿದ್ದ ಕರೀನಾ ಕಪೂರ್ ಅವರನ್ನು ಮಗಳೇ ಎಂದು ಕರೆದಿದ್ದ ಸೈಫ್ ಅಲಿ ನಂತರ ಆಕೆಯನ್ನೇ ಮದುವೆಯಾಗಿ ಟ್ರೋಲ್ಗೂ ಒಳಗಾಗಿದ್ದಿದೆ. ಅದೇನೇ ಇದ್ದರೂ ಸದ್ಯ ಈ ದಂಪತಿಗೆ ಇಬ್ಬರು ಪುತ್ರರಿದ್ದಾರೆ. ಕೆಲವು ಖ್ಯಾತನಾಮ ನಟರಂತೆಯೇ ಸೈಫ್ ಅಲಿ ಕೂಡ ಇಬ್ಬರೂ ಹಿಂದೂ ಯುವತಿಯರನ್ನು ಮದುವೆಯಾಗಿ ಸಕತ್ ಸುದ್ದಿ ಮಾಡಿದವರು. ಸೈಫ್ ಅಲಿ ಖಾನ್ ಕರೀನಾರಿಗಿಂತಲೂ 10 ವರ್ಷ ದೊಡ್ಡವರು. 5 ವರ್ಷಗಳ ಕಾಲ ಲಿವ್-ಇನ್ (Live in relation) ಸಂಬಂಧದಲ್ಲಿದ್ದ ಈ ಜೋಡಿ ಕೊನೆಗೆ ಮದುವೆಯಾಗಿತ್ತು. ಅದಾಗಲೇ ಲವ್ ಜಿಹಾದ್ ಎಂಬ ಬಗ್ಗೆಯೂ ದೊಡ್ಡ ಮಟ್ಟದಲ್ಲಿ ಸುದ್ದಿಯೇ ಆಗಿಬಿಟ್ಟಿತ್ತು.
ಸೈಫ್ ಅಲಿ ಮತ್ತು ಕರೀನಾ ಕಪೂರ್ ದಾಂಪತ್ಯ ಚೆನ್ನಾಗಿಯೇ ನಡೆಯುತ್ತಿದೆ. ಹೊರ ಪ್ರಪಂಚಕ್ಕೆ ಇದು ಚೆನ್ನಾಗಿರುವಂತೆಯೇ ಕಾಣುತ್ತಿದೆ. ಆದರೆ ಇದನ್ನು ಸೈಫ್ ಅಲಿ ಖಾನ್ ಒಳಮನಸ್ಸು ಒಪ್ಪುತ್ತಿಲ್ವಾ ಎನ್ನುವಂಥ ವಿಡಿಯೋ ಒಂದು ಈಗ ವೈರಲ್ ಆಗಿದೆ. ಗಂಡ ಸೈಫ್ ಅಲಿ ಮಾತು ಕೇಳಿ ಖುದ್ದು, ಕರೀನಾ ಅವರೇ ಕಸಿವಿಸಿಗೊಂಡು ಬಿಟ್ಟಿದ್ದಾರೆ. ಅಷ್ಟಕ್ಕೂ ಈ ವಿಡಿಯೋದಲ್ಲಿ, ಕರೀನಾ ಖುದ್ದು ಗಂಡ ಸೈಫ್ ಅಲಿಯ ಸಂದರ್ಶನ ಮಾಡುತ್ತಿದ್ದಾರೆ. ಆದರ್ಶ ದಾಂಪತ್ಯ ಎಂದರೆ ಯಾರನ್ನು ಹೆಸರಿಸುವಿರಿ ಎಂದು ಕೇಳಿದ್ದಾರೆ ಕರೀನಾ. ಸೈಫ್ ಅಲಿ ತಮ್ಮದೇ ಹೆಸರು ಉಲ್ಲೇಖ ಮಾಡುತ್ತಾರೆ ಎನ್ನುವುದು ಅವರ ಅನಿಸಿಕೆಯಾಗಿತ್ತು. ಆದರೆ ಸೈಫ್ ಅಲಿ ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಹೆಸರು ಹೇಳಿದರು. ಅವರು ಆದರ್ಶ ದಾಂಪತ್ಯ ಎಂದು ಅವರ ಬಗ್ಗ ವರ್ಣನೆ ಮಾಡಿದರು.
ಆಗ ಕೂಡಲೇ ಕರೀನಾ ಕಸಿವಿಸಿಗೊಂಡಂತೆ ಕಾಣಿಸಿತು. ನೀವು ನಮ್ಮದೇ ಹೆಸರು ಹೇಳಬಹುದಿತ್ತಲ್ಲಾ ಎಂದರು. ಆಗ ಸೈಫ್ಗೆ ತಾನು ಮಾಡಿದ್ದು ತಪ್ಪು ಎನಿಸಿದ್ದರೂ ಅದನ್ನು ಸಮರ್ಥಿಸಿಕೊಂಡು, ನಮ್ಮನ್ನು ನಾವೇ ಹೊಗಳಿಕೊಳ್ಳಬಾರದಲ್ವಾ ಎಂದು ಅಲ್ಲಿಗೆ ತೇಪೆ ಹಾಕಲು ನೋಡಿದರು. ಆದರೆ ಅವರ ಮನದಾಳದ ಮಾತು ಅಲ್ಲಿ ಬಂದೇ ಬಿಟ್ಟಿತ್ತು. ಮಾತು ಆಡಿದ ಮೇಲೆ ಮುಗಿಯಿತು ಎನ್ನುತ್ತಾರಲ್ಲ ಹಾಗೆ. ಈ ಮಾತನ್ನು ಕೇಳಿ ನೆಟ್ಟಿಗರು ಥಹರೇವಾರಿ ಕಮೆಂಟ್ಸ್ ಹಾಕುತ್ತಿದ್ದಾರೆ. ಮನಸ್ಸಿನ ಮಾತು ಹೇಗೆ ಹೊರಗೆ ಬಂತು ನೋಡಿ ಎನ್ನುತ್ತಿದ್ದಾರೆ. ಎರಡನೆಯ ಮದ್ವೆಯಾಗಿ ತುಂಬಾ ವರ್ಷವಾಯ್ತಲ್ಲ, ಬಹುಶಃ ಬೋರ್ ಆಗಿರಬೇಕು ಎಂದೂ ಹೇಳ್ತಿದ್ದಾರೆ.
ಅಂದಹಾಗೆ, ನಟ ಸೈಫ್ ಅಲಿ ಇದೀಗ ತಮಗಿಂತ 10 ವರ್ಷ ಚಿಕ್ಕವರಾಗಿರುವ ನಟಿ ಕರೀನಾರನ್ನು (Kareena Kapoor) ಮದುವೆಯಾಗಿದ್ದರೆ, ಅಮೃತಾ ಸಿಂಗ್ ಅವರನ್ನು ಮದುವೆಯಾದಾಗ ಸೈಫ್ ಅವರಿಗೆ ವಯಸ್ಸು 21. ಆದರೆ ಅಮೃತಾ ಸಿಂಗ್ ಅವರಿಗೆ 32 ವರ್ಷ ವಯಸ್ಸಾಗಿತ್ತು! ಎಲ್ಲರನ್ನೂ ಎದುರು ಹಾಕಿಕೊಂಡು 12 ವರ್ಷ ಹಿರಿಯ ನಟಿಯನ್ನು ಮದುವೆಯಾಗಿದ್ದರು ಎಂದೇ ಸುದ್ದಿಯಾಗಿತ್ತು. ಇದು ದೊಡ್ಡ ಮಟ್ಟದಲ್ಲಿ ಹಲ್ಚಲ್ ಸೃಷ್ಟಿಸಿತ್ತು. ನಂತರ ಸೈಫ್ ಅಲಿ ಖಾನ್ ಮತ್ತು ಅಮೃತಾ ಸಿಂಗ್ 13 ವರ್ಷಗಳ ದಾಂಪತ್ಯದ ನಂತರ ವಿಚ್ಛೇದನ ಪಡೆದರು. 2004ರಲ್ಲಿ ಸೈಫ್ ಹಾಗೂ ಅಮೃತಾ ತಮ್ಮ ಮದುವೆಯನ್ನು ಕೊನೆಗೊಳಿಸಲು ನಿರ್ಧರಿಸಿದಾಗ ಸಾರಾ 10 ಮತ್ತು ಇಬ್ರಾಹಿಂ 4 ವರ್ಷ ವಯಸ್ಸಿನವರಾಗಿದ್ದರು. ಇದೀಗ 53 ವರ್ಷದ ಸೈಫ್ ಅಲಿ ಖಾನ್ ಅವರಿಗೆ ಅಮೃತಾ ಸಿಂಗ್ ಮತ್ತು ಕರೀನಾ ಕಪೂರ್ ಈ ಇಬ್ಬರು ಪತ್ನಿಯರಿಂದ ನಾಲ್ವರು ಮಕ್ಕಳಿದ್ದಾರೆ. ಅವರ ಹೆಸರು ಸಾರಾ ಅಲಿ ಖಾನ್ (Sara Ali Khan), ಇಬ್ರಾಹಿಂ ಅಲಿ ಖಾನ್, ತೈಮೂರು ಅಲಿ ಖಾನ್ ಹಾಗೂ ಜೆಹ್ ಅಲಿ ಖಾನ್.
ನಟ ಸಿದ್ದಿಕಿ ಮಗಳೇ ಎಂದು ರೇಪ್ ಮಾಡ್ದ, 'ವೀರ ಕನ್ನಡಿಗ' ನಟ ರಿಯಾಜ್ ಖಾನ್ ಫೋನ್ನಲ್ಲೇ... ನಟಿಯ ಕರಾಳ ಅನುಭವ...