Vijay Raghavendra: ನನ್ನ ಬೆಳಕಾಗು ಎನ್ನುತ್ತಲೇ ಪ್ರೀತಿಯ ಮಡದಿಗೆ ವೆಡ್ಡಿಂಗ್ ಆನಿವರ್ಸರಿ ವಿಶ್ ಮಾಡಿದ ವಿಜಯ್ ರಾಘವೇಂದ್ರ

By Roopa Hegde  |  First Published Aug 26, 2024, 12:04 PM IST

ವಿಜಯ್ ರಾಘವೇಂದ್ರ ಹಾಗೂ ಸ್ಪಂದನಾ ಮದುವೆಯಾಗಿ 17 ವರ್ಷ ಕಳೆದಿದೆ. ಪತ್ನಿಯಿಲ್ಲದೆ ವಿಜಯ್ ಒಂದು ವರ್ಷ ದೂಡಿದ್ದಾರೆ. ಪ್ರೀತಿಯ ಮಡದಿಗೆ ಸಾಮಾಜಿಕ ಜಾಲತಾಣದಲ್ಲಿ ಮದುವೆ ವಾರ್ಷಿಕೋತ್ಸವದ ಶುಭಕೋರಿದ್ದಾರೆ.
 


ಸ್ಯಾಂಡಲ್ವುಡ್ ಚಿನ್ನಾರಿ ಮುತ್ತ (Sandalwood Chinnarimutta) ಎಂದೇ ಪ್ರಸಿದ್ಧಿ ಪಡೆದಿರುವ ವಿಜಯ್ ರಾಘವೇಂದ್ರ (Vijaya Raghavendra), ಸ್ಪಂದನಾ ವಿಜಯ್ ರಾಘವೇಂದ್ರ (Spandana Vijay Raghavendra) ಕೈ ಹಿಡಿದು ಇಂದಿಗೆ ಹದಿನೇಳು ವರ್ಷವಾಗಿದೆ. ವೆಡ್ಡಿಂಗ್ ಆನಿವರ್ಸರಿಯನ್ನು ಸಂಭ್ರಮದಿಂದ ಆಚರಿಸುವ ಭಾಗ್ಯ ವಿಜಯ್ ರಾಘವೇಂದ್ರ ಅವರಿಗಿಲ್ಲ. ಆಗಸ್ಟ್ 6, 2023ರಂದು ಸ್ಪಂದನಾ ವಿಜಯ್ ರಾಘವೇಂದ್ರ ಚಿರನಿದ್ರೆಗೆ ಜಾರಿದ್ದರು. ಒಂದೇ ಆತ್ಮ, ಎರಡು ದೇಹ ಎನ್ನುವಂತಿದ್ದ ಸ್ಪಂದನಾ – ವಿಜಯ್ ರಾಘವೇಂದ್ರ, ಅಭಿಮಾನಿಗಳವರೆಗೆ ಮೆಚ್ಚಿನ ಜೋಡಿಯಾಗಿತ್ತು. ಆದ್ರೆ ಸ್ಪಂದನಾರನ್ನು ಕಳೆದುಕೊಂಡಿರುವ ವಿಜಯ್ ಮನಸ್ಸು, ಮನೆ ಎರಡೂ ಬರಿದಾಗಿದೆ. 

ಸ್ಪಂದನ ಇಲ್ಲದ ಮನೆಯಲ್ಲಿ ಎಲ್ಲ ನೋವು, ದುಃಖಗಳನ್ನು ನುಂಗಿಕೊಂಡು ಜೀವನ ನಡೆಸುತ್ತಿರುವ ವಿಜಯ್ ರಾಘವೇಂದ್ರ ಮಡದಿಗೆ ಮದುವೆ ವಾರ್ಷಿಕೋತ್ಸವದ ಶುಭಕೋರಿದ್ದಾರೆ. ಇನ್ಸ್ಟಾಗ್ರಾಮ್ ನಲ್ಲಿ ಸ್ಪಂದನಾ ಹಣೆಗೆ ಕುಂಕುಮ ಇಡ್ತಿರುವ ಸುಂದರ, ಬ್ಲಾಕ್ ಆಂಡ್ ವೈಟ್ ಫೋಟೋ ಹಂಚಿಕೊಂಡಿರುವ ವಿಜಯ್ ರಾಘವೇಂದ್ರ, ಇಂದಿಗೆ ಹದಿನೇಳು ವರ್ಷಗಳು, ನಮಗೆ ವಿವಾಹ ವಾರ್ಷಿಕೋತ್ಸವದ ಶುಭಾಶಯಗಳು ಚಿನ್ನ ಎಂದು ಶೀರ್ಷಿಕೆ ಹಾಕಿದ್ದಾರೆ. ಬಿ ಮೈ ಲೈಟ್ ಎಂದು ಫೋಟೋ ಮೇಲೆ ಬರೆದಿದ್ದಾರೆ. ಸದಾ ನೀನು ನನ್ನ ಜೀವನದಲ್ಲಿ ಬೆಳಕಾಗಿರುವ ಎಂದಿರುವ ವಿಜಯ್ ರಾಘವೇಂದ್ರ, ಸ್ಪಂದನ ಇಹಲೋಕತ್ಯಜಿಸಿ ವರ್ಷವಾದ್ರೂ ಅವರನ್ನು ಒಂದು ದಿನವೂ ನೆನಪಿಸಿಕೊಳ್ಳದ ದಿನವಿಲ್ಲ.

 
 
 
 
 
 
 
 
 
 
 
 
 
 
 

Tap to resize

Latest Videos

A post shared by Vijay Raghavendra (@raagu.vijay)

lakshmi baramma : ಲಕ್ಷ್ಮಿ ದೇಹದಲ್ಲಿ ಕೀರ್ತಿ ಆತ್ಮ..? ಲಕ್ಷ್ಮಿ ಬಾರಮ್ಮ ಸೀರಿಯಲ್ ಗೆ ಹೊಸ ಟ್ವಿಸ್ಟ್

ವಿಜಯ್ ರಾಘವೇಂದ್ರ ಈ ಪೋಸ್ಟ್ ಗೆ ಅಭಿಮಾನಿಗಳು ರಿಯಾಕ್ಟ್ ಮಾಡಿದ್ದಾರೆ. ಬಹುತೇಕ ಅಭಿಮಾನಿಗಳು, ವಿಜಯ್ ರಾಘವೇಂದ್ರ ಅವರಿಗೆ ಮದುವೆ ವಾರ್ಷಿಕೋತ್ಸವದ ಶುಭಕೋರಿದ್ದಾರೆ. ಮತ್ತೆ ಕೆಲ ಅಭಿಮಾನಿಗಳು ಸ್ಪಂದನಾ ಮಿಸ್ ಮಾಡಿಕೊಳ್ತಿರೋದಾಗಿ ಹೇಳಿದ್ದಾರೆ. ಅತ್ತಿಗೆ ರೂಪದಲ್ಲಿ ನಿಮ್ಮ ಈ ನಗು ಸದಾ ಹೀಗೆ ಇರಲಿ, ಜೊತೆಗಿರುವ ಜೀವ ಎಂದೂ ಜೀವಂತ, ವಾರ್ಷಿಕೋತ್ಸವದ ಶುಭಾಶಯ ಎಂದು ಅಭಿಮಾನಿಗಳು ಹೇಳಿದ್ದಾರೆ. 

ಆಗಸ್ಟ್ 26, 2007ರಲ್ಲಿ ವಿಜಯ್ ರಾಘವೇಂದ್ರ, ಸ್ಪಂದನಾ ಅವರನ್ನು ಮದುವೆ ಆಗಿದ್ದರು. ಲವ್ ಮ್ಯಾರೇಜ್ ಆಗಿದ್ದ ವಿಜಯ್ ರಾಘವೇಂದ್ರ ಪತ್ನಿಯನ್ನು ಅಪಾರವಾಗಿ ಪ್ರೀತಿಸುತ್ತಿದ್ದರು. ಸ್ಯಾಂಡಲ್ವುಡ್ ನಲ್ಲಿ ವಿಜಯ್ ಹಾಗೂ ಸ್ಪಂದನಾ ಮಾದರಿ ಜೋಡಿಯಾಗಿದ್ದರು. ಶೌರ್ಯ ಹೆಸರಿನ ಮಗನ ಜೊತೆ ಈ ಜೋಡಿಯ ಫೋಟೋಗಳು ಅಭಿಮಾನಿಗಳ ಮನತಣಿಸುತ್ತಿತ್ತು. ಮಾತು ಮಾತಿಗೂ ಸ್ಪಂದನಾ ನೆನೆಯುತ್ತಿದ್ದ ವಿಜಯ್ ರಾಘವೇಂದ್ರ ಅವರಿಗೆ ಆಗಸ್ಟ್ ಆರು, ಜೀವನದಲ್ಲಿ ಮರೆಯಲಾಗದ ದಿನವಾಯ್ತು. ಸ್ನೇಹಿತರ ಜೊತೆ ಬ್ಯಾಂಕಾಂಗ್ ಗೆ ತೆರಳಿದ್ದ ಸ್ಪಂದನಾ, ಆಗಸ್ಟ್ 6ರಂದು ಹೃದಯಾಘಾತದಿಂದ ಸಾವನ್ನಪ್ಪಿದ್ದರು. ಇದು ವಿಜಯ್ ರಾಘವೇಂದ್ರ ಅವರಿಗೆ ಮಾತ್ರವಲ್ಲ ಇಡೀ ರಾಜ್ಯಕ್ಕೆ ಶಾಕ್ ನೀಡಿತ್ತು. ಚಿಕ್ಕ ವಯಸ್ಸಿನಲ್ಲಿಯೇ ವಿಜಯ್ ರಾಘವೇಂದ್ರ ತಮ್ಮ ಮುದ್ದಿನ ಪತ್ನಿಯನ್ನು ಕೇಳೆದುಕೊಂಡಿದ್ದರು. 

ವಿಜಯ್ ರಾಘವೇಂದ್ರ, ಸ್ಪಂದನಾ ಇಲ್ಲದೆ ಎರಡನೇ ಬಾರಿ ಮದುವೆ ವಾರ್ಷಿಕೋತ್ಸವವನ್ನು ಒಂಟಿಯಾಗಿ ಆಚರಿಸಿಕೊಳ್ತಿದ್ದಾರೆ. ಹಿಂದಿನ ವರ್ಷ, ಸ್ಪಂದನಾ ಕಳೆದುಕೊಂಡು 20 ದಿನಗಳ ನಂತ್ರ ಮದುವೆ ವಾರ್ಷಿಕೋತ್ಸವವಿತ್ತು. ಆಗ ಭಾವುಕರಾಗಿದ್ದ ವಿಜಯ್ ರಾಘವೇಂದ್ರ ಪತ್ನಿಗಾಗಿ ನಾಲ್ಕು ಸಾಲು ಬರೆದು ಕಂಬನಿ ಮಿಡಿದಿದ್ದರು. ಆಗಸ್ಟ್ ಆರರಂದು ಸ್ಪಂದನಾ ನಗ್ತಿರುವ ಫೋಟೋ ಹಂಚಿಕೊಂಡಿದ್ದ ವಿಜಯ್ ರಾಘವೇಂದ್ರ ಚಿನ್ನ,ಮೌನದಲ್ಲಿ ಅರಳಿದ ನಗು ನಿನ್ನದು,  ನೀ ನಡೆದ ಹಾದಿಯ ನೆನಪಿನ ಬೆಳಕು ನನ್ನದು ಎಂದಿದ್ದರು. ಆಗಸ್ಟ್ 9ರಂದು ಐ ಲವ್ ಯು ಚಿನ್ನು ಎನ್ನುತ್ತಲೇ ಸ್ಪಂದನಾರನ್ನು ನೆನೆದಿದ್ದರು ವಿಜಯ್ ರಾಘವೇಂದ್ರ. 

ನಟ ಸಿದ್ದಿಕಿ ಮಗಳೇ ಎಂದು ರೇಪ್​ ಮಾಡ್ದ, 'ವೀರ ಕನ್ನಡಿಗ' ನಟ ರಿಯಾಜ್‌ ಖಾನ್‌ ಫೋನ್​ನಲ್ಲೇ... ನಟಿಯ ಕರಾಳ ಅನುಭವ...

ಸ್ಪಂದನ ಇಲ್ಲದ ವಿಜಯ್ ರಾಘವೇಂದ್ರ ಮಗನಲ್ಲಿ ಪತ್ನಿಯ ಪ್ರೀತಿಯನ್ನು ಕಾಣ್ತಿದ್ದಾರೆ. ಸ್ಪಂದನಾ ಬಳಸಿದ ಯಾವುದೇ ವಸ್ತುವನ್ನು ಬೇರೆಯವರಿಗೆ ನೀಡದೆ ಜೋಪಾನ ಮಾಡಿರುವ ವಿಜಯ್ ರಾಘವೇಂದ್ರ, ಸ್ಪಂದನಾ ಓಡಾಡಿಕೊಂಡಿದ್ದ ಮನೆಯಲ್ಲಿಯೇ ಮಗನ ಜೊತೆ ವಾಸವಾಗಿದ್ದಾರೆ. 
 

click me!