ಮಲಯಾಳಂ ನಟಿಯೊಬ್ಬರು ನಟರಾದ ಸಿದ್ದಿಕಿ ಮತ್ತು ರಿಯಾಜ್ ಖಾನ್ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪ ಮಾಡಿದ್ದು, ಇದೀಗ ಭಾರಿ ಕೋಲಾಹಲಕ್ಕೆ ಕಾರಣವಾಗಿದೆ. ನಟಿ ಹೇಳಿದ್ದೇನು?
ಮಲಯಾಳಂ ಚಿತ್ರರಂಗದಲ್ಲಿ ಈಗ ಭಾರಿ ಅಲ್ಲೋಲ ಕಲ್ಲೋಲ ಸೃಷ್ಟಿಯಾಗಿದೆ. ಮಲಯಾಳಂ ಚಿತ್ರೋದ್ಯಮದಲ್ಲಿ ನಟಿಯರು ಎದುರಿಸುತ್ತಿರುವ ದೌರ್ಜನ್ಯ ಪ್ರಕರಣಗಳಿಗೆ ಸಂಬಂಧಿಸಿದಂತೆ ವಿಚಾರಣೆ ನಡೆಸಲು ನೇಮಕಗೊಂಡಿರುವ ಹೇಮಾ ಸಮಿತಿ ವರದಿಯಲ್ಲಿ ಭಯಾನಕ ಘಟನೆಗಳು ಉಲ್ಲೇಖವಾಗಿದೆ. ಘಟನೆಗೆ ಸಂಬಂಧಿಸಿದಂತೆ, ರಾಷ್ಟ್ರಪ್ರಶಸ್ತಿ ಪುರಸ್ಕೃತ ನಿರ್ದೇಶಕ ರಂಜಿತ್, ಕೇರಳ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಮತ್ತೊಂದೆಡೆ ಅಸೋಸಿಯೇಷನ್ ಆಫ್ ಮಲಯಾಳಂ ಮೂವಿ ಅರ್ಟಿಸ್ಟ್ (ಅಮ್ಮಾ) ಸಂಘಟನೆಯ ಕಾರ್ಯದರ್ಶಿ ಸ್ಥಾನಕ್ಕೆ ನಟ ಸಿದ್ಧಿಕಿ ರಾಜೀನಾಮೆ ನೀಡಿದ್ದಾರೆ. ಆದರೆ ಸಮಿತಿಯ ಮುಂದೆ ನಟಿಯರು ಹೇಳಿಕೊಂಡಿರುವ ಆಘಾತಕಾರಿ ಘಟನೆಗಳು ಒಂದೊಂದಾಗಿ ಬಯಲಿಗೆ ಬರುತ್ತಿವೆ. ಇದಾಗಲೇ ಬಾಲಿವುಡ್ ಸೇರಿದಂತೆ ಹಲವು ಭಾಷೆಗಳ ನಟಿಯರು ಕಾಸ್ಟಿಂಗ್ ಕೌಚ್ ಅನುಭವ ಬಿಚ್ಚಿಟ್ಟಿದ್ದಾರೆ. ನಟಿಯರು ಮಾತ್ರವಲ್ಲದೇ ನಟರೂ ತಮಗಾಗಿರುವ ಕಹಿ ಅನುಭವ ಹೇಳಿಕೊಂಡಿದ್ದಾರೆ. ಆದರೆ ಅವರಲ್ಲಿ ಹಲವರು ಯಾರ ಹೆಸರನ್ನೂ ಉಲ್ಲೇಖಿಸಿರಲಿಲ್ಲ. ಆದರೆ ಈಗ ಮಲಯಾಳಂ ಚಿತ್ರರಂಗದಲ್ಲಿ ನಟಿಯರು ನೇರವಾಗಿ ಲೈಂಗಿಕ ದೌರ್ಜನ್ಯ ಎಸಗಿರುವವರ ಹೆಸರನ್ನು ಉಲ್ಲೇಖಿಸಿದ್ದಾರೆ.
ನಿನ್ನೆಯಷ್ಟೇ ನಟಿ ಶ್ರೀಲೇಖ ಮಿತ್ರ ಕಾಸ್ಟಿಂಗ್ ಕೌಚ್ ಆರೋಪ ಮಾಡಿದ್ದರು. 2009 ರ ‘ಪಾಲೇರಿ ಮಾಣಿಕ್ಯಂ: ಒರು ಪತಿರ್ಕೋಲಪತ್ಕತಿಂತೆ ಕಥಾ’ ಚಿತ್ರದ ಆಡಿಷನ್ ಸಂದರ್ಭದಲ್ಲಿ ನಡೆದ ದೌರ್ಜನ್ಯವನ್ನು ನಟಿ ವಿವರಿಸಿದ್ದರು. ರಂಜಿತ್ ತಮಗೆ ಲೈಂಗಿಕ ಕಿರುಕುಳ ನೀಡಿರುವುದಾಗಿ ಹೇಳಿದ್ದರು. ನಾನು ರಂಜಿತ್ ಅವರ ಬೆಡ್ ರೂಮ್ ಬಾಲ್ಕನಿಯಲ್ಲಿ ನಿಂತುಕೊಂಡು ಫೋನ್‌ನಲ್ಲಿ ಸಿನಿಮಾಟೋಗ್ರಾಫರ್‌ನೊಂದಿಗೆ ಮಾತಾಡುತ್ತಿದ್ದೆ. ನಾನು ಅಲ್ಲಿ ನಿಂತಿದ್ದ ವೇಳೆ ಅವರು ನನ್ನ ಬಳೆಗಳನ್ನು ಮುಟ್ಟಿದರು, ಬಳಿಕ ಏನು ಮಾಡಿದರು ಎಂಬ ಬಗ್ಗೆ ತಮಗಾಗಿರುವ ದೌರ್ಜನ್ಯದ ಕುರಿತು ಮಾತನಾಡಿದ್ದರು. ಇದೀಗ ಇನ್ನೋರ್ವ ನಟಿ ರೇಪ್ ಮಾಡಿರುವ ಕುರಿತು ಮಾತನಾಡಿದ್ದಾರೆ.
ರೂಮಿಗೆ ಬಂದು ಮೊದಲು ಬಳೆ ಮುಟ್ಟಿದ, ಆಮೇಲೆ... ನಟನ ಹೆಸರು ಬಹಿರಂಗಗೊಳಿಸಿದ ನಟಿ ಶ್ರೀಲೇಖಾ ಮಿತ್ರಾ
2019ರಲ್ಲಿ ನಡೆದ ಘಟನೆಯನ್ನು ನಟಿ ಹೇಳಿದ್ದಾರೆ. ಅಂದು ತಾವು ಈ ವಿಷಯವನ್ನು ಹೇಳಿದರೂ ಯಾರೂ ಅದನ್ನು ಗಂಭೀರವಾಗಿ ತೆಗೆದುಕೊಂಡಿರಲಿಲ್ಲ ಎಂದಿರುವ ನಟಿ, ಹೇಮಾ ವರದಿಯಲ್ಲಿ ಸಂಪೂರ್ಣ ವಿವರಣೆ ನೀಡಿದ್ದು, ಅದೀಗ ಬಹಿರಂಗಗೊಂಡಿದೆ. ಖ್ಯಾತ ನಟರಾದ ಸಿದ್ದಿಕಿ ಮತ್ತು ರಿಯಾಜ್ ಖಾನ್ ವಿರುದ್ಧ ನಟಿ ಗಂಭೀರ ಆರೋಪ ಮಾಡಿದ್ದಾರೆ. ಅದು 2016ರಲ್ಲಿ ನಡೆದ ಘಟನೆ. ಸಾಮಾಜಿಕ ಜಾಲತಾಣದಲ ಮೂಲಕ ನಟ ಸಿದ್ಧಿಕಿ ಪರಿಚಯ ನನಗೆ ಆಗಿತ್ತು. ನಟನೆಯಲ್ಲಿ ನನಗೆ ಇಂಟರೆಸ್ಟ್ ಇದ್ದುದನ್ನು ತಿಳಿದ ಅವರು, ಸಿನಿಮಾಗಳಲ್ಲಿ ಅವಕಾಶ ನೀಡುವುದಾಗಿ ಹೇಳಿದ್ದರು. ಬಳಿಕ ಅವರ ಅಭಿನಯದ ಸುಖಮೈರಿಕಟ್ಟೆ ಚಿತ್ರದ ಪ್ರೀಮಿಯರ್ ಷೋಗೆ ಆಹ್ವಾನ ಕೊಟ್ಟಿದ್ದರು. ನನ್ನನ್ನು ಮಗಳೇ ಎಂದು ಕರೆಯುತ್ತಿದ್ದರು. ನನಗೂ ಖುಷಿ ಆಗಿತ್ತು. ನಾನು ಹೋಗಿದ್ದೆ. ಫಂಕ್ಷನ್ ಬಳಿಕ ತಿರುವನಂತಪುರದ ಹೋಟೆಲ್ ಮಸ್ಕಟ್‌ಗೆ ಕರೆದುಕೊಂಡು ಹೋಗಿ, ಹೋಟೆಲ್ ಕೋಣೆಯಲ್ಲಿ ನನ್ನ ಮೇಲೆ ಅತ್ಯಾಚಾರ ಎಸಗಿದ್ದಾರೆ. ನಾನು ಭಾರಿ ಆಘಾತಕ್ಕೊಳಗಾದೆ ಎಂದಿದ್ದಾರೆ ನಟಿ. ಮಗಳೇ ಎಂದು ಕರೆದಿದ್ದರಿಂದ ನನಗೆ ಯಾವುದೇ ಡೌಟ್ ಬರಲಿಲ್ಲ. ಆದರೆ ರೇಪ್ ಮಾಡಿದ. ಅಂದಿನ ಆ ಭೀಕರ ಘಟನೆಯಿಂದ ನಾನು ಇನ್ನೂ ಚೇತರಿಸಿಕೊಂಡಿಲ್ಲ. ಅವರು ನನ್ನ ಮೇಲೆ ಮಾತ್ರವಲ್ಲದೇ ಈ ನೀಚ ವ್ಯಕ್ತಿ ನನ್ನ ಕೆಲವು ಸ್ನೇಹಿತೆಯರಿಗೂ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ನಟಿ.
ಇನ್ನೋರ್ವ ನಟ ರಿಯಾಜ್ ಖಾನ್ ಫೋನ್ ಕಾಲ್ ಮಾಡಿ ಯಾವ ಭಂಗಿ ಇಷ್ಟ, ನಿನಗೆ ಸೆಕ್ಸ್ ಇಷ್ಟನಾ ಅಂತೆಲ್ಲಾ ಕೇಳಿ ದೌರ್ಜನ್ಯ ಎಸಗಿರುವುದಾಗಿ ಇದೇ ನಟಿ ಹೇಳಿದ್ದಾರೆ. ವೀರ ಕನ್ನಡಿಗ, ಮೋಹಿನಿ, ನಮ್ಮ ಬಸವ, ಬೊಂಬಾಟ್ ಕಾರ್, ಶೀಲಾ ಸೇರಿ ಹಲವು ಕನ್ನಡ ಸಿನಿಮಾಗಳಲ್ಲಿ ನಟಿಸಿರೋ ನಟ ರಿಯಾಜ್ ಖಾನ್ ಛಾಯಾಚಿತ್ರಕಾರರೊಬ್ಬರಿಂದ ನನ್ನ ನಂಬರ್ ಪಡೆದು ಹೀಗೆಲ್ಲಾ ಮಾತನಾಡಿದ್ದಾರೆ. ತನ್ನೊಂದಿಗೆ ಮಂಚಕ್ಕೆ ಬರಲು ಕರೆದಿದ್ದಾನೆ. ಅಶ್ಲೀಲ ಭಾಷೆಗಳಲ್ಲಿ ಸಂಭಾಷಣೆ ಮಾಡಿದ್ದಾರೆ ಎಂದು ನಟಿ ಹೇಳಿದ್ದಾರೆ. ಇಬ್ಬರಿಂಗಲೂ ನನಗೆ ಜೀವ ಬೆದರಿಕೆ ಕರೆಗಳು ಬರುತ್ತಲೇ ಇವೆ. ಆದರೂ ನಾನು ಅವರ ವಿಷಯ ಬಹಿರಂಗಗೊಳಿಸಿದ್ದೇನೆ. ಇವರಿಬ್ಬರು ನನ್ನನ್ನು ಸಾಯಿಸಿದರೂ ನಾನು ನನ್ನ ಮಾತಿಗೆ ಬದ್ಧವಾಗಿದ್ದೇನೆ ಎಂದಿದ್ದಾರೆ ನಟಿ.
ಮಲಯಾಳಂ ಚಿತ್ರೋದ್ಯಮ ಸೆಕ್ಸ್ ಹಗರಣಕ್ಕೆ 2 ತಲೆದಂಡ!