Rani Mukharjee: 2ನೇ ಮಗು ಬೇಕಿತ್ತು, ಆದರೆ... ನೋವು ತೋಡಿಕೊಂಡ ನಟಿ

By Suvarna News  |  First Published Mar 24, 2023, 4:01 PM IST

 ‘ಮಿಸಸ್​ ಚಟರ್ಜಿ ವರ್ಸಸ್​ ನಾರ್ವೇ’ ಚಿತ್ರದ ಮೂಲಕ ಭಾರಿ ಸುದ್ದಿಯಲ್ಲಿರುವ ನಟಿ ರಾಣಿ ಮುಖರ್ಜಿಯವರ ಅಸಲಿ ಜೀವನದಲ್ಲಿ ಇರುವುದು ಒಬ್ಬಳೇ ಮಗಳು. ಎರಡನೆಯ ಮಗುವಿನ ಕುರಿತು ನಟಿ ಹೇಳಿದ್ದೇನು? 
 


1996 ರ ಬಂಗಾಳಿ ಚಲನಚಿತ್ರ ಬಿಯಾರ್ ಫೂಲ್‌ ಮೂಲಕ ಬೆಳ್ಳಿಪರದೆಗೆ ಎಂಟ್ರಿ ಕೊಟ್ಟಿರೋ  ನಟಿ ರಾಣಿ ಮುಖರ್ಜಿ ಕೆಲ ದಶಕಗಳವರೆಗೆ ಬಾಲಿವುಡ್​ ಚಿತ್ರವನ್ನು ಆಳಿದವರು. 45 ವರ್ಷದ ರಾಣಿಯವರು 1997ರ ರಾಜಾ ಕಿ ಆಯೇಗಿ ಬಾರಾತ್ ಮೂಲಕ ಬಾಲಿವುಡ್​  ಪ್ರವೇಶ ಮಾಡಿದರು. ಕುಚ್ ಕುಚ್ ಹೋತಾ ಹೈ'  (1990) ಚಿತ್ರ ಇವರಿಗೆ ಬ್ರೇಕ್​ ನೀಡಿತು.  ಚಿತ್ರದ ಅಭಿನಯಕ್ಕಾಗಿ ಫಿಲ್ಮ್ ಫೇರ್​ನ (film fare) ಅತ್ಯಂತ ಶ್ರೇಷ್ಠ ಪೋಷಕ ನಟಿ ಪ್ರಶಸ್ತಿಯನ್ನು ಪಡೆದರು. ಅವರು ನಂತರ ಅನೇಕ ಚಲನಚಿತ್ರಗಳಲ್ಲಿ ನಟಿಸಿದರೂ ಹೆಚ್ಚು ನಿರೀಕ್ಷೆಯ ಮಟ್ಟವನ್ನು ಮುಟ್ಟಲಿಲ್ಲ. 2004 ರಲ್ಲಿ ತೆರೆ ಕಂಡ  ಹಮ್ ತುಮ್  ಹಾಗೂ ವಿಮರ್ಶಾತ್ಮಕವಾಗಿ ಯಶಸ್ಸು ಕಂಡ 'ಯುವ' ಇವರ ಚಿತ್ರರಂಗದ ದಿಕ್ಕನ್ನೇ ಬದಲಿಸಿದವು. ಫಿಲ್ಮ್ ಫೇರ್ ಉತ್ಸವದಲ್ಲಿ  ಶ್ರೇಷ್ಠ ನಟಿ ಹಾಗೂ  ಶ್ರೇಷ್ಠ ಪೋಷಕ ನಟಿ ಪ್ರಶಸ್ತಿ ಗಳಿಸಿದರು. ಇವರಿಗೆ ಇನ್ನಷ್ಟು ಶ್ರೇಯಸ್ಸು ತಂದುಕೊಟ್ಟ ಚಿತ್ರ ಬ್ಲ್ಯಾಕ್​. 2005ರಲ್ಲಿ ಬಿಡುಗಡೆಯಾದ ಈ ಚಿತ್ರದಲ್ಲಿ  ಕುರುಡಿ, ಕಿವುಡಿ ಮತ್ತು ಮೂಕ ಮಹಿಳೆಯಾಗಿ ನಟಿಸಿ  ಅನೇಕ ಪ್ರಮುಖ ಪ್ರಶಸ್ತಿಗಳನ್ನು ಗಳಿಸಿದರು. 

ಆದಿತ್ಯ ಚೋಪ್ರಾ (Aditya Chopra) ಅವರನ್ನು ಮದುವೆಯಾಗಿ ಒಂದು ಹೆಣ್ಣುಮಗುವಿನ  ತಾಯಿಯಾದಾಗಿನಿಂದ ಅವರು ಚಲನಚಿತ್ರಗಳಲ್ಲಿ ಕೆಲಸ ಮಾಡುವುದನ್ನು ನಿಲ್ಲಿಸಿದ್ದರು.  2021 ರ ಬಂಟಿ ಔರ್ ಬಬ್ಲಿ 2 ಚಿತ್ರದಲ್ಲಿ ಕಾಣಿಸಿಕೊಂಡಿದ್ದರೂ  ಬಾಕ್ಸ್ ಆಫೀಸ್‌ನಲ್ಲಿ ಚಿತ್ರ ಫ್ಲಾಪ್ ಆಯಿತು. ಆದರೆ ಇದೀಗ ‘ಮಿಸಸ್​ ಚಟರ್ಜಿ ವರ್ಸಸ್​ ನಾರ್ವೇ’ ಮೂಲಕ ರಾಣಿ ಅಬ್ಬರಿಸುತ್ತಿದ್ದಾರೆ.  ‘ಮಿಸಸ್​ ಚಟರ್ಜಿ ವರ್ಸಸ್​ ನಾರ್ವೇ’  ಭಾರತಕ್ಕಿಂತಲೂ ಹೆಚ್ಚಾಗಿ  ನಾರ್ವೆಯಲ್ಲಿ ಇದು ಭಾರಿ ಸದ್ದು ಮಾಡುತ್ತಿದೆ.  ಸಿನಿಮಾ ನಾರ್ವೇಯಲ್ಲಿ ತೆರೆಕಂಡು ಸೂಪರ್​ ಹಿಟ್​ ಆಗಿದೆ. ನಾರ್ವೇಯಲ್ಲಿ ಬಿಡುಗಡೆಯಾದ ಹಿಂದಿ ಸಿನಿಮಾಗಳ ಪೈಕಿ ವೀಕೆಂಡ್​ನಲ್ಲಿ ಅತಿ ಹೆಚ್ಚು ಕಲೆಕ್ಷನ್​ ಮಾಡಿದ ಖ್ಯಾತಿ ಈ ಸಿನಿಮಾಕ್ಕೆ ಸೇರಿದೆ. ಇಬ್ಬರು ಮಕ್ಕಳನ್ನು ಕಳೆದುಕೊಂಡ ತಾಯಿಯೊಬ್ಬಳು ಆ ಮಕ್ಕಳನ್ನು ವಾಪಸ್​ ಪಡೆಯಲು ಹೋರಾಟ ನಡೆಸುವ ಕಥೆ ಇದಾಗಿದೆ.

Tap to resize

Latest Videos

Mrs Chatterjee Vs Norway: ಮಕ್ಕಳಿಗಾಗಿ ದೇಶದ ವಿರುದ್ಧ ಹೋರಾಡ್ತಾರೆ ರಾಣಿ ಮುಖರ್ಜಿ!

ಅಸಲಿಗೆ ರಾಣಿ ಮುಖರ್ಜಿಯವರಿಗೆ ಒಬ್ಬಳೇ ಮಗಳು. ಆದರೆ ಚಿತ್ರದಲ್ಲಿ ಇಬ್ಬರು ಮಕ್ಕಳು. ಹಾಗೆಂದು ರಾಣಿಯವರಿಗೂ ಅಸಲಿ ಜೀವನದಲ್ಲಿಯೂ ಇಬ್ಬರು ಮಕ್ಕಳನ್ನು ಪಡೆಯುವ ಆಸೆ ಇತ್ತಂತೆ. ಈ ಕುರಿತು ಅವರು ಈಗ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.  ಸಂದರ್ಶನದಲ್ಲಿ ನಟಿ  ಎರಡನೇ ಗರ್ಭಧಾರಣೆಯ ಬಗ್ಗೆ   ಮುಕ್ತವಾಗಿ ಮಾತನಾಡಿದ್ದಾರೆ.  ನಿಜ ಜೀವನದಲ್ಲಿಯೂ ಇಬ್ಬರು ಮಕ್ಕಳ ತಾಯಿಯಾಗಬೇಕೆಂದು ಬಯಸಿದ್ದೆ ಎನ್ನುವುದನ್ನು ಹೇಳಿಕೊಂಡಿದ್ದಾರೆ.  ಆದರೆ ತಮ್ಮ  ಕನಸು ನನಸಾಗಿಯೇ ಉಳಿದಿದೆ ಎಂದು ನೋವು ತೋಡಿಕೊಂಡಿದ್ದಾರೆ. ಅಷ್ಟಕ್ಕೂ ರಾಣಿಯವರ ಈ ಕನಸು ನನಸಾಗದೇ ಇರುವುದಕ್ಕೂ ಕಾರಣವಿದೆ.
 
2014 ರಲ್ಲಿ, ರಾಣಿ ಮುಖರ್ಜಿ ಅವರು ಯಶ್ ರಾಜ್ ಫಿಲ್ಮ್ಸ್ ಅಧ್ಯಕ್ಷ ಆದಿತ್ಯ ಚೋಪ್ರಾ ಅವರನ್ನು ವಿವಾಹವಾದರು. ಆದಿತ್ಯ ಮತ್ತು ರಾಣಿಯ ಸಂಬಂಧವು ಮೊದಲ ನೋಟದಲ್ಲೇ ಪ್ರೀತಿಯಾಗಿರಲಿಲ್ಲ, ಆದರೆ ಇಬ್ಬರೂ ಒಬ್ಬರಿಗೊಬ್ಬರು ಆಳವಾದ ಗೌರವವನ್ನು ಹೊಂದಿದ್ದರು. ಡಿಸೆಂಬರ್ 2015 ರಲ್ಲಿ, ಅವರು ಹೆಣ್ಣು ಮಗುವಿಗೆ ಪೋಷಕರಾದರು, ಅವರಿಗೆ ಅವರು ಆದಿರಾ ಚೋಪ್ರಾ ಎಂದು ಹೆಸರಿಸಿದರು. ಅದಾಗಲೇ ರಾಣಿಯವರಿಗೆ 39 ವರ್ಷ ವಯಸ್ಸಾಗಿತ್ತು. ಅದಕ್ಕಾಗಿಯೇ ಎರಡನೆಯ ಮಗುವಿನ ಆಸೆಯನ್ನು ಕೈಬಿಟ್ಟಿರು. ಈ ಕುರಿತು ಮಾತನಾಡಿರುವ ರಾಣಿ ಮುಖರ್ಜಿ ಅವರು ಎರಡನೇ ಗರ್ಭಧಾರಣೆಯನ್ನು ಮೊದಲೇ ಪ್ಲ್ಯಾನ್ ಮಾಡಬೇಕಾಗಿತ್ತು. ಆದರೆ ಈಗ ತಡವಾಗಿದೆ. ವಯಸ್ಸು ಹೆಚ್ಚಾಗಿದೆ ಎಂದು ಹೇಳಿಕೊಂಡಿದ್ದಾರೆ.

ರಾಣಿ ಮುಖರ್ಜಿ ಅವರ ಮಗಳು ಆದಿರಾಗೆ ಈಗ ಒಂಬತ್ತರಿಂದ ಹತ್ತು ವರ್ಷ. ಎರಡನೇ ಮಗುವನ್ನು ಹೊಂದುವ ನಟಿಯ ಕನಸು ಅಪೂರ್ಣವಾಗಿದೆ. ಆದರೆ ಬಾಲಿವುಡ್​ನಲ್ಲಿ ಬಹಳಷ್ಟು ಮಂದಿ ಸರೋಗಸಿ ಮೂಲಕ ಎರಡನೇ ಮಗುವನ್ನು ಪಡೆದಿದ್ದಾರೆ.

Rani Mukherjee: ಸಲ್ವಾರ್​ ಕಮೀಜ್​ಗೆ ಬಾತ್​ರೂಂ ಚಪ್ಪಲ್ಲಾ? ಮೇಡಂ ಏನಿದು ಅಂತಿದ್ದಾರೆ ಟ್ರೋಲಿಗರು !

ಅಂದಹಾಗೆ, ‘ಮಿಸಸ್​ ಚಟರ್ಜಿ ವರ್ಸಸ್​ ನಾರ್ವೇ’  ಚಿತ್ರವು ಚಲನಚಿತ್ರವು ನೈಜ ಘಟನೆಗಳನ್ನು ಆಧರಿಸಿದೆ.  ಚಿತ್ರವು ಮಾರ್ಚ್ 7 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದೆ. ಅನುರೂಪ್ ಭಟ್ಟಾಚಾರ್ಯ (Anup Bhattacharya) ಮತ್ತು ಸಾಗರಿಕಾ ಭಟ್ಟಾಚಾರ್ಯ (Sagarika Bhattacharya) ಎಂಬ ದಂಪತಿಯ ನೈಜ ಜೀವನವನ್ನು ಇದು ಆಧರಿಸಿದೆ. 2007 ರಲ್ಲಿ, ಈ ದಂಪತಿ ಮದುವೆಯಾಗುತ್ತಾರೆ.  ತಮ್ಮ ಹೊಸ ವೈವಾಹಿಕ ಜೀವನವನ್ನು ಪ್ರಾರಂಭಿಸಲು ನಾರ್ವೆಗೆ ತೆರಳುತ್ತಾರೆ.  ದಂಪತಿಗೆ ಇಬ್ಬರು ಮಕ್ಕಳು ಹುಟ್ಟುತ್ತಾರೆ. ಒಂದು  ಸಂಜೆ, ತಾಯಿ ತನ್ನ ಮಗನಿಗೆ  ಹೀಗೆ ಮಾತನಾಡುತ್ತಾ ತಮಾಷೆಗಾಗಿ ಕೆನ್ನೆಗೆ ಹೊಡೆಯುತ್ತಾಳೆ.  ನಾರ್ವೇಜಿಯನ್ ಮಕ್ಕಳ ಕಲ್ಯಾಣ ಸೇವೆಗಳಿಗೆ (NCW) ಈ ಮಾಹಿತಿಯನ್ನು ಯಾರೋ ನೀಡುತ್ತಾರೆ. ಮಗನ ಕೆನ್ನೆಗೆ ಅಮ್ಮ ಹೊಡೆದಿರುವುದಾಗಿ ದೂರು ದಾಖಲಾಗುತ್ತದೆ. ಇದಾದ ಮೇಲೆ ಆಗುವುದೆಲ್ಲವೂ ಭಯಾನಕ ಚಿತ್ರಣ. ಈ ಚಿತ್ರದಲ್ಲಿನ ರಾಣಿಯವರ ಅಭಿಯನಕ್ಕೆ ಜನರು ಮನಸೋತಿದ್ದಾರೆ. 
 

click me!