
ಆರ್‌ಜಿವಿ ಎಂದೇ ಫೇಮಸ್ ಆಗಿರುವ ರಾಮ್ ಗೋಪಾಲ್ ವರ್ಮಾ ಇತ್ತೀಚೆಗೆ ತನ್ನ ಅಶ್ಲೀಲ ಮಾತುಗಳಿಂದ ಸುದ್ದಿ ಆಗುತ್ತಿದ್ದಾರೆ. ಇತ್ತೀಚಿನ ಸಿನಿಮಾಗಳಲ್ಲಿ ನಟಿಯರನ್ನು ಬಿಂದಾಸ್ ಆಗಿ ತೋರಿಸುತ್ತಿರುವುದೂ ಸುದ್ದಿಯಾಗುತ್ತಿದೆ. ಹಾಗೆ ನೋಡಿದರೆ ಕಳೆದ ಕೆಲವು ವರ್ಷಗಳಿಂದ ರಾಮ್‌ಗೋಪಾಲ್ ವರ್ಮಾ ಅವರು ಸಿನಿಮಾಗಳಿಂದ ಸುದ್ದಿಯಾಗಿದ್ದೇ ಇಲ್ಲ. ಅವರು ಹೆಣ್ಣುಮಕ್ಕಳ ಬಗ್ಗೆ ಕೆಟ್ಟದಾಗಿ ಮಾತನಾಡುವ ಮೂಲಕವೇ ಸುದ್ದಿಯಾಗುತ್ತಿದ್ದಾರೆ. ಅವರು ಸಿನಿಮಾ ಬಿಡುಗಡೆ ಮಾಡಿಯೂ ಕೆಲವು ಸಮಯವಾಗಿದೆ. ಒಂದು ಕಾಲದ ಲೆಜೆಂಡ್ ಡೈರೆಕ್ಟರ್ ಅನಿಸಿಕೊಂಡ ವ್ಯಕ್ತಿಗೆ ನಿಜಕ್ಕೂ ಏನಾಗಿದೆ ಅಂತ ಪ್ರಜ್ಞಾವಂತರು ತಲೆಕೆಡಿಸಿಕೊಳ್ಳುವ ಹಾಗಾಗಿದೆ.
ಇರಲಿ, ಈ ಆರ್‌ಜಿವಿ ಹಿಂದೆಯೂ ತನ್ನ ತಿಕ್ಕಲುತನದಿಂದ ಫೇಮಸ್ ಆಗಿದ್ದರು. ಅನೇಕರು ಅವರ ವಿಚಿತ್ರ ಸ್ವಭಾವದ ಬಗ್ಗೆ ಮಾತನಾಡುತ್ತಲೇ ಇದ್ದಾರೆ. ಇದೀಗ ಅಂಥಾ ಮತ್ತೊಂದು ಪ್ರಕರಣ ಸುದ್ದಿಯಲ್ಲಿದೆ. ಇತ್ತೀಚೆಗೆ ಸಂದರ್ಶನವೊಂದರಲ್ಲಿ ಮಾತನಾಡಿದ 'ಚಾಲ್‌ಬಾಸ್' ಸಿನಿಮಾ ನಿರ್ದೇಶಕ ಪಂಕಜ್ ಪರಾಶರ್ ಸಿನಿಮಾ ಶೂಟಿಂಗ್ ವೇಳೆ ರಾಮ್‌ಗೋಪಾಲ್ ವರ್ಮಾ ನಟಿಯರನ್ನು ಹೇಗೆಲ್ಲ ಹಿಂಸಿಸುತ್ತಿದ್ದರು ಅನ್ನೋದನ್ನು ವಿವರಿಸಿದ್ದಾರೆ. ಆರ್‌ಜಿವಿ ಬಗ್ಗೆ ರಾಮ್‌ಗೋಪಾಲ್ ವರ್ಮಾ ಆಡಿರುವ ಮಾತೀಗ ವೈರಲ್ ಆಗಿದೆ. ಅದು ಕ್ಷಣ ಕ್ಷಣಂ ಅನ್ನೋ ಸಿನಿಮಾದ ಮೇಕಿಂಗ್ ಆಗುತ್ತಿದ್ದ ಸಂದರ್ಭ. ಆರ್‌ಜಿವಿಗೆ ಅದೇನು ತಲೆ ಕೆಟ್ತೋ ಗೊತ್ತಿಲ್ಲ, ಶ್ರೀದೇವಿಗೆ ತೂಕ ಇಳಿಸಲೇ ಬೇಕು ಅಂತ ಸಿಕ್ಕಾಪಟ್ಟೆ ಒತ್ತಡ ಹೇರಲಾರಂಭಿಸಿದ್ದರು ಆರ್‌ಜಿವಿ. ಹಾಗೆ ನೋಡಿದರೆ ಶ್ರೀದೇವಿ ಸಿಕ್ಕಾಪಟ್ಟೆ ದಪ್ಪ ಏನೂ ಆಗಿರಲಿಲ್ಲ. ಡಯೆಟಿನಲ್ಲೇ ಇದ್ದರು. ಆದರೆ ಇನ್ನೂ ಸಣ್ಣ ಆಗಬೇಕು ಅನ್ನುವ ಆರ್‌ಜಿವಿ ಮಾತು ಆಕೆಯನ್ನು ಮತ್ತಷ್ಟು ಇಕ್ಕಟ್ಟಿಗೆ ದೂಡಿತು.
ಆಕೆ ಮತ್ತಷ್ಟು ಆಹಾರ ಸಿಕ್ಕಾಪಟ್ಟೆ ಕಡಿಮೆ ಮಾಡಿದರು. ಸಡನ್ನಾಗಿ ತೂಕ ಇಳಿಕೆಗೆ ಕ್ರ್ಯಾಶ್ ಡಯೆಟ್‌ನ ಮೊರೆ ಹೊಕ್ಕರು. ಉಪ್ಪನ್ನು ಸಂಪೂರ್ಣವಾಗಿ ತ್ಯಜಿಸಿದರು. ಇದರಿಂದ ಆಕೆಯ ಆರೋಗ್ಯ ಹದಗೆಡತೊಡಗಿತು. 'ಮೇರಿ ಬೀವಿ ಕಾ ಜವಾಬ್ ನಹೀಂ' ಅನ್ನುವ ಸಿನಿಮಾವನ್ನು ಆಗ ಈ ಸಂದರ್ಶನದಲ್ಲಿ ಮಾತನಾಡಿದ ಪಂಕಜ್ ಪರಾಶರ್ ನಿರ್ದೇಶನ ಮಾಡುತ್ತಿದ್ದರು. ಅವರ ಆ ಸಿನಿಮಾದಲ್ಲೂ ಶ್ರೀದೇವಿ ನಾಯಕಿ. ಆಕೆ ಆರ್‌ಜಿವಿ ಚಿತ್ರಕ್ಕಾಗಿ ಅನ್ನ, ಆಹಾರ ಕಡಿಮೆ ಮಾಡಿ ಶೂಟಿಂಗ್ ವೇಳೆಗೆ ಪ್ರಜ್ಞೆತಪ್ಪಿ ಬಿದ್ದೇ ಬಿಟ್ಟರಂತೆ. ಇಪ್ಪತ್ತು ನಿಮಿಷಗಳ ಕಾಲ ಏನು ಮಾಡಿದರೂ ಶ್ರೀದೇವಿಗೆ ಮತ್ತೆ ಪ್ರಜ್ಞೆ ಬರಲಿಲ್ಲ. ಅಲ್ಲಿದ್ದವರಿಗೆ ಆತಂಕವಾಗಿ ಬಿಟ್ಟಿದೆ. ಈ ಸಿನಿಮಾದ ಹೀರೋ ಅಕ್ಷಯ್ ಕುಮಾರ್ ಸಹ ಈ ಘಟನೆಗೆ ಸಾಕ್ಷಿಯಾಗಿದ್ದರಂತೆ. ಇನ್ನೊಂದು ಶಾಕಿಂಗ್ ವಿಚಾರ ಅಂದರೆ ಶ್ರೀದೇವಿ ಬಿದ್ದ ರಭಸಕ್ಕೆ ಅವರ ಹಲ್ಲೇ ಮುರಿದುಹೋಗಿದೆ.
ನಾಯಕ ನಟಿಗೆ ಮುರಿದುಹೋದ ಹಲ್ಲಿದ್ದರೆ ಹೋಗಿರಬಹುದು. ಆಕೆ ಮುಂದೆ ಇದನ್ನೆಲ್ಲ ಸರಿಪಡಿಸಿಕೊಂಡರಂತೆ. ಆದರೆ ರಾಜ್ ಗೋಪಾಲ ವರ್ಮಾ ಅವರ ಅತಿರೇಕದಿಂದ ಶ್ರೀದೇವಿಯ ಹಲ್ಲೇ ಮುರಿದುಹೋಯ್ತು ಅಂತ ಮಾತಾಡಿಕೊಳ್ಳುವ ಹಾಗಾಯ್ತು. ಅಂದ ಹಾಗೆ ಶ್ರೀದೇವಿ ನಟಿಸಿದ ಬಾಲಿವುಡ್ ಸಿನಿಮಾ ಒಳ್ಳೆ ಸಕ್ಸಸ್ ಅನ್ನೇ ಕಂಡಿತು. ರಾಮ್ ಗೋಪಾಲ್ ವರ್ಮಾ ನಿರ್ದೇಶನದ ಸಿನಿಮಾ ಹಾಲಿವುಡ್ ಟೆಕ್ನಿಕ್ ಮೂಲಕ ಗಮನಸೆಳೆಯಿತು.
ಅಂದಿನಿಂದ ಇಂದಿನವರೆಗೂ ಆರ್‌ಜಿವಿ ಬಗ್ಗೆ ಒಂದಲ್ಲ ಒಂದು ಮಾತು ಕೇಳಿ ಬರುತ್ತಲೇ ಇದೆ. ಇಷ್ಟಾದರೂ ಆರ್‌ಜಿವಿ ಕೊಟ್ಟಿರುವ ಅದ್ಭುತ ಸಿನಿಮಾಗಳ ಬಗ್ಗೆ ದೂಸ್ರಾ ಮಾತೇ ಇಲ್ಲ. ಆದರೆ ಎಲ್ಲರೂ ಬಯಸುವ ಆ ಪ್ರತಿಭಾವಂತ ನಿರ್ದೇಶಕ ಈಗೆಲ್ಲಿ ಹೋಗಿದ್ದಾರೆ, ಅವರ ಈಗಿನ ತಿಕ್ಕಲು ಸ್ವಭಾವ ಹೋಗಿ ಅವರು ಮತ್ತೆ ಹಿಂದಿನಂತೆ ಅದ್ಭುತ ಸಿನಿಮಾ ಕೊಡ್ತಾರ ಅಂತ ಅವರ ರಿಯಲ್ ಅಭಿಮಾನಿಗಳು ಕೇಳ್ತಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.