
ಎವರ್ಗ್ರೀನ್ ನಟ ಅನಿಲ್ ಕಪೂರ್ ಅವರಿಗೆ ಈಗ 68 ವರ್ಷ ವಯಸ್ಸು, ನಟಿ ಶೋಭಿತಾ ಧೂಳಿಪಾಲ್ 33 ವರ್ಷ ವಯಸ್ಸು. ಆದರೆ 2023ರಲ್ಲಿ ಈ ಜೋಡಿ ಸಕತ್ ಸದ್ದು ಮಾಡಿತ್ತು. ಅದು ನೈಟ್ ಮ್ಯಾನೇಜರ್ ಪಾರ್ಟ್ 2ನಲ್ಲಿ ವೆಬ್ಸೀರಿಸ್ನಲ್ಲಿ. ತಮ್ಮ ಮಗಳಿಗಿಂತಲೂ ಚಿಕ್ಕ ವಯಸ್ಸಿನ ನಟಿಯ ಜೊತೆ ಅನಿಲ್ ಕಪೂರ್ ಲಿಪ್ಲಾಕ್ ಮಾಡಿದ್ದರಿಂದ ಇದು ಸಾಕಷ್ಟು ಸದ್ದು ಮಾಡಿತ್ತು. ಅಷ್ಟಕ್ಕೂ, ಸಿನಿ ಇಂಡಸ್ಟ್ರಿಯಲ್ಲಿ ಚಿಕ್ಕ ವಯಸ್ಸಿನ ನಟಿಯರ ಜೊತೆ ಸ್ಟಾರ್ ನಟರು ಫ್ಲರ್ಟ್ (Flirt) ಮಾಡುವುದು ಮಾಮೂಲು. ಇಂಡಸ್ಟ್ರಿಯಲ್ಲಿ ಒಂದು ಮಟ್ಟದ ಖ್ಯಾತಿ ಪಡೆದ ಬಳಿಕ ಅವರ ಜೊತೆ ಕೆಲಸ ಮಾಡಲು ಹೊಸದಾಗಿ ಸಿನಿಮಾಕ್ಕೆ ಎಂಟ್ರಿ ಕೊಡುವ ನಟಿಯರೂ ಇಷ್ಟಪಡುವ ಕಾರಣ, ಇಲ್ಲಿ ವಯಸ್ಸಿನ ಅಂತರವೇ ಇರುವುದಿಲ್ಲ. ನಟಿಯರಿಗೆ ವಯಸ್ಸು 35 ದಾಟಿದರೆ ಅವರು ನಾಯಕಿಯಾಗಿ ಗುರುತಿಸಿಕೊಳ್ಳುವುದು ಕಷ್ಟವೇ. ಇನ್ನು ವಯಸ್ಸು 40 ಮೀರಿದರಂತೂ ಅವರಿಗೆ ಸಿಗುವುದು ಅಮ್ಮನ ರೋಲೋ ಇಲ್ಲವೇ ನಾಯಕಿಯ ತಂಗಿಯ ರೋಲ್ ಅಷ್ಟೇ. ಬೆರಳೆಣಿಕೆ ನಟಿಯರನ್ನು ಹೊರತುಪಡಿಸಿ ಉಳಿದವರಿಗೆ ಸಿಗುವುದು ಇಂಥ ಪಾತ್ರಗಳೇ.
ಇದು ಹಿರಿತೆರೆ ಮಾತ್ರವಲ್ಲದೇ ಕಿರಿತೆರೆಗೂ ಮೀಸಲು. ಆದರೆ ನಾಯಕ ನಟರಾದವರು ವಯಸ್ಸು 60 ದಾಟಿದರೂ ನಾಯಕರಾಗಿಯೇ ಮೆರೆಯುತ್ತಾರೆ. ಅವರು ಎಂದಿಗೂ ತಮ್ಮ ಇಮೇಜನ್ನು ಸಣ್ಣಪುಟ್ಟ ಪಾತ್ರ ಮಾಡಿ ಕಳೆದುಕೊಳ್ಳಲು ಇಷ್ಟಪಡುವುದಿಲ್ಲ. ಅದೇ ಇನ್ನೊಂದೆಡೆ ಸಿನಿ ಇಂಡಸ್ಟ್ರಿಯಲ್ಲಿ ನೆಲೆಯೂರಲು ಬಯಸುವ ಯುವ ನಟಿಯರೂ ಇಂಥ ಹಿರಿಯ ನಟರ ಜೊತೆ ರೊಮ್ಯಾನ್ಸ್ ಮಾಡಲು ಹಿಂಜರಿಯುವುದಿಲ್ಲ. ಇದು ಹಲವು ಬಾರಿ ಟ್ರೋಲ್ಗೆ ಒಳಗಾಗುವುದೂ ಇದೆ. ಅದರಲ್ಲಿ ಒಂದು ನೈಟ್ ಮ್ಯಾನೇಜರ್.
ಆದರೆ ಇದೀಗ ವಿಡಿಯೋ ಒಂದು ವೈರಲ್ ಆಗಿದೆ. ಅದರಲ್ಲಿ ನಟ, ಶೋಭಿತಾ ಅವರ ಸೊಂಟವನ್ನು ಒತ್ತಿ ಹಿಡಿದುಕೊಂಡಿದ್ದಾರೆ. ಬಳಿಕ ಶೋಭಿತಾ ಬಾತ್ ಟಬ್ ಅನ್ನು ಸರಿ ಮಾಡುವುದನ್ನು ನೋಡಬಹುದು. ಇದಿಷ್ಟೇ ವಿಡಿಯೋ ವೈರಲ್ ಆಗಿದ್ದು, ಇಬ್ಬರ ನಡುವೆ ಇದೇನು ಆಗ್ತಿದೆ ಎಂದು ಪ್ರಶ್ನೆ ಕೇಳಲಾಗುತ್ತಿದೆ. ಇದು ನೈಟ್ ಮ್ಯಾನೇಜರ್ ವೆಬ್ ಸೀರಿಸ್ ಭಾಗವೆಂದು ಕೆಲವರು ಹೇಳುತ್ತಿದ್ದರೆ, ಇದು ಅಸಭ್ಯದ ಪರಮಾವಧಿ ಎಂದು ಮತ್ತೆ ಕೆಲವರು ಹೇಳುತ್ತಿದ್ದಾರೆ. ಒಟ್ಟಿನಲ್ಲಿ ರೆಡ್ಡಿಟ್ನಲ್ಲಿ ಇದೀಗ ವೈರಲ್ ಆಗ್ತಿದೆ.
ಆಂಧ್ರ ನಾಡಲ್ಲಿ ಜನಿಸಿ ಹಿಂದಿ ಸೇರಿದಂತೆ ದಕ್ಷಿಣ ಭಾರತದಲ್ಲಿ ಮಿಂಚುತ್ತಿರುವ ಯುವ ನಟಿ ಶೋಭಿತಾ ಬಾಲಿವುಡ್ ನಟಿಯರನ್ನೂ ಮೀರಿಸುವಂತಹ ಹಾಟ್ ಪೋಸ್ ಗಳನ್ನು ಕೊಡುತ್ತಾ ಸೋಷಿಯಲ್ ಮಿಡಿಯಾದಲ್ಲಿ ಹಲ್ ಚಲ್ ಸೃಷ್ಟಿ ಮಾಡುತ್ತಿರುತ್ತಾರೆ. ಇತ್ತೀಚಿಗಷ್ಟೆ ಶೋಭಿತಾ ಹಾಗೂ ನಾಗಚೈತನ್ಯ ನಡುವೆ ಅಫೇರ್ಇದೆ ಎಂಬ ಗುಸುಗುಸು ಜೋರಾಗಿಯೇ ಕೇಳಿಬರುತ್ತಲೇ ಇದೆ. ಇದೀಗ ಮತ್ತೊಂದು ವಿಚಾರದಿಂದ ಶೋಭಿತಾ ಸಖತ್ ಸುದ್ದಿಯಾಗಿದ್ದಾರೆ. ಅದು 66 ವರ್ಷದ ಸೀನಿಯರ್ ನಟನೊಂದಿಗೆ ರೊಮ್ಯಾನ್ಸ್ (Romance) ಮಾಡುವ ಮೂಲಕ ಆಕೆ ಸಿಕ್ಕಾಪಟ್ಟೆ ಸುದ್ದಿಯಾಗಿದ್ದಾರೆ.
ದಿ ನೈಟ್ ಮ್ಯಾನೇಜರ್ ಪಾರ್ಟ್ 2ನಲ್ಲಿ ಅನಿಲ್ ಕಪೂರ್ ನಟಿ ಶೋಭಿತಾ (Shobhita Dhulipala) ಜೊತೆ ಲಿಪ್ಲಾಕ್ ಮಾಡಿ ರೊಮ್ಯಾನ್ಸ್ ಮಾಡಿರುವ ಫೋಟೋಗಳು ಸಕತ್ ವೈರಲ್ ಆಗಿದ್ದು, ಟ್ರೋಲ್ಗೂ ಒಳಗಾಗುತ್ತಿದೆ. ಅನಿಲ್ ಕಪೂರ್, ಆದಿತ್ಯ ರಾಯ್ ಕಪೂರ್ ಮತ್ತು ಶೋಭಿತಾ ಧೂಲಿಪಾಲ ನಟಿಸಿರುವ ದಿ ನೈಟ್ ಮ್ಯಾನೇಜರ್ ವೆಬ್ ಸೀರಿಸ್ನ ಎರಡನೇ ಭಾಗವು ಡಿಸ್ನಿ ಪ್ಲಸ್ ಹಾಟ್ ಸ್ಪಾರ್ಟ್ನಲ್ಲಿ ಜೂನ್ 30ರಂದು ಸ್ಟ್ರೀಮ್ ಆಗಿದೆ. ನೌಕಾಪಡೆಯ ಮಾಜಿ ಅಧಿಕಾರಿ ಶಾನ್ ಸೇನ್ ಗುಪ್ತಾ ಅವರ ಸುತ್ತ ಕಥೆ ಸುತ್ತುತ್ತದೆ. ಢಾಕಾದಲ್ಲಿ ಬಾಲಕಿಯ ದುರಂತ ಸಾವು ಸರಣಿಯ ವಿಷಯವಾಗಿದೆ. ಇದರಲ್ಲಿನ ಸೀನ್ಗಳು ಹಾಗೂ ವೆಬ್ ಸೀರೀಸ್ (Web series) ಹೊರತಾಗಿ ಹೊರಗಡೆಯಲ್ಲಿಯೂ ನಟ ಅನಿಲ್ ಕಪೂರ್, ನಟಿ ಶೋಭಿತಾ ಅವರನ್ನು ಕಿಸ್ ಮಾಡಿರುವುದನ್ನು ಹಲವರು ಸಹಿಸುತ್ತಿಲ್ಲ. ಇದೇನು ಬಾಲಿವುಡ್ ಇಂಡಸ್ಟ್ರಿಯೋ ಅಥವಾ ಚರಂಡಿವುಡ್ ಇಂಡಸ್ಟ್ರಿಯೋ ಎಂದು ಪ್ರಶ್ನಿಸುತ್ತಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.