ನಟಿ ತನುಶ್ರೀ ದತ್ತಾ ಅವರು ತಮ್ಮ ಮೇಲೆ ಪದೇ ಪದೇ ಅತ್ಯಾಚಾರ ಎಸಗಿದ್ದರು ಎಂದು ರಾಖಿ ಸಾವಂತ್ ಆರೋಪಿಸಿದ್ದು, ಅದರ ವಿಡಿಯೋ ಈಗ ಪುನಃ ವೈರಲ್ ಆಗುತ್ತಿದೆ.
ಕಳೆದ ಹಲವು ದಿನಗಳಿಂದ ಡ್ರಾಮಾ ಕ್ವೀನ್ ನಟಿ ರಾಖಿ ಸಾವಂತ್ (Rakhi Sawant) ಬಹಳ ಸುದ್ದಿಯಲ್ಲಿರುವ ನಟಿ. ಆದಿಲ್ ಖಾನ್ ದುರ್ರಾನಿ ಅವರ ಜೊತೆಗಿನ ಮದುವೆಯ ಕಥೆ ಸಿನಿಮಾಕ್ಕಿಂತಲೂ ಕುತೂಹಲವಾಗಿದೆ. ಮೈಸೂರಿನ ಯುವಕ ಆದಿಲ್ ಖಾನ್ ಮದುವೆಯನ್ನು ನಿರಾಕರಿಸಿದ್ದು, ರಾಖಿ ರಂಪಾಟ ಮಾಡಿದ್ದು, ಕೊನೆಗೂ ಆದಿಲ್ ಮದುವೆಯನ್ನು ಒಪ್ಪಿಕೊಂಡಿದ್ದು ಎಲ್ಲವೂ ಯಾವ ಸಿನಿಮಾ ಕಥೆಗಿಂತಲೂ ಭಿನ್ನವಾಗಿರಲಿಲ್ಲ. ಎಲ್ಲವೂ ಸುಖಾಂತ್ಯಗೊಂಡಿತು ಎನ್ನುವಾಗಲೇ ಆದಿಲ್ ತಮಗೆ ಮೋಸ ಮಾಡುತ್ತಿದ್ದಾರೆ, ಹಲ್ಲೆ ಮಾಡಿದ್ದಾರೆ, ಇನ್ನೊಬ್ಬಳ ಜೊತೆ ಅಕ್ರಮ ಸಂಬಂಧ ಹೊಂದಿದ್ದಾರೆ, ಆದಿಲ್‌ಗಾಗಿ ಇಸ್ಲಾಂಗೆ ಮತಾಂತರ ಮಾಡಿಕೊಂಡಿರುವೆ. ನಾನು ಇಸ್ಲಾಂ ಧರ್ಮವನ್ನು ಒಪ್ಪಿಕೊಂಡು ಆದಿಲ್‌ನ ಮದುವೆ ಆಗಿದ್ದೇನೆ ಎಂದೆಲ್ಲಾ ಆರೋಪಿಸಿದ್ದ ರಾಖಿ ಕೊನೆಗೆ ದೂರು ಕೊಟ್ಟರು. ಇದರಿಂದ ಆದಿಲ್ (Adil Khan Durrani) ವಿರುದ್ಧ ಎಫ್ಐಆರ್ ದಾಖಲಾಗಿದ್ದು ಸದ್ಯ ಅವರು ಜೈಲಿಗೆ ಹೋದದ್ದು, ನಂತರ ಅವರು ಬಿಡುಗಡೆಗೊಂಡ ಬಳಿಕ ಪರಸ್ಪರ ದೋಷಾರೋಪ ಮಾಡುತ್ತಾ ಪತ್ರಿಕಾಗೋಷ್ಠಿ ಮಾಡಿರುವುದು ಎಲ್ಲವೂ ತೀರಾ ವಿಚಿತ್ರ ಎನಿಸುವಂಥ ಸತ್ಯವೇ.
ಇದೀಗ ರಾಖಿ ಮೆಕ್ಕಾ-ಮದೀನಾಕ್ಕೆ ಹೋಗಿ ಉಮ್ರಾ ನೆರವೇರಿಸಿ ವಾಪಸಾಗಿದ್ದಾರೆ. ತಾವು ಪವಿತ್ರರಾಗಿದ್ದು, ಯಾರೂ ಪುರುಷರು ತಮ್ಮನ್ನು ಮುಟ್ಟಬಾರದು ಎಂದು ಹೇಳಿದ್ದಾರೆ. ಇವರು ಹೀಗೆ ಸುದ್ದಿಯಲ್ಲಿ ಇರುವಾಗಲೇ ಇವರ ಹಳೆಯ ವಿಡಿಯೋ ಒಂದು ಈಗ ಮತ್ತೆ ಮುನ್ನೆಲೆಗೆ ಬಂದಿದ್ದು, ಸಕತ್ ಸದ್ದು ಮಾಡುತ್ತಿದೆ. ಅಷ್ಟಕ್ಕೂ ಅವರು ನಟಿಯೊಬ್ಬರ ಮೇಲೆ ಗಂಭೀರ ಆರೋಪ ಮಾಡಿದ್ದರು. ಹೌದು. ನಟಿ ತನುಶ್ರೀ ದತ್ತಾ ತಮ್ಮ ಮೇಲೆ ಪದೇ ಪದೇ ಅತ್ಯಾಚಾರ ಮಾಡಿರುವುದಾಗಿ ಹೇಳಿರುವ ವಿಡಿಯೋ ಇದಾಗಿದೆ. ಅಷ್ಟಕ್ಕೂ ತನುಶ್ರೀ ದತ್ತಾ ಅವರ ಕುರಿತು ಹೇಳುವುದಾದರೆ, ಇವರು 2003 ರಲ್ಲಿ ಮುಂಬೈನಲ್ಲಿ ನಡೆದ ಫೆಮಿನಾ ಮಿಸ್ ಇಂಡಿಯಾ ಸ್ಪರ್ಧೆಯಲ್ಲಿ ದತ್ತಾ ಗೆದ್ದವರು. ಈಕ್ವೆಡಾರ್‌ನ ಕ್ವಿಟೊದಲ್ಲಿ ನಡೆದ ಮಿಸ್ ಯೂನಿವರ್ಸ್ 2004 ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಿದ್ದರು. ಅಲ್ಲಿ ಅವರು ಆರನೇ ರನ್ನರ್-ಅಪ್ ಆಗಿ ಸ್ಥಾನ ಪಡೆದಿದ್ದಾರೆ. ಇನ್ನು ಇವರ ಸಿನಿಮಾದ ವಿಷಯದ ಕುರಿತು ಹೇಳುವುದಾದರೆ, ಅವರು ತೀರತ ವಿಲಯಾಟ್ಟು ಪಿಳ್ಳೈ ಚಿತ್ರದಲ್ಲಿ ತಮಿಳು ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದರು ಮತ್ತು 2005 ರಲ್ಲಿ ಬಾಲಿವುಡ್‌ಗೆ ಹೆಜ್ಜೆ ಇಟ್ಟು, ಚಾಕೊಲೇಟ್ ಮತ್ತು ಆಶಿಕ್ ಬನಾಯಾ ಆಪ್ನೆಯಲ್ಲಿ ಕಾಣಿಸಿಕೊಂಡಿದ್ದಾರೆ.
ಬುರ್ಖಾಧಾರಿ ರಾಖಿ ಎದುರು ಶೆರ್ಲಿನ್ ತುಂಡುಡುಗೆ ಡ್ಯಾನ್ಸ್! ನಿನ್ನೆ ವೈರಿ, ಇಂದು ಕಿಸ್ಸಿಂಗ್?
ಈ ನಟಿಯ ವಿರುದ್ಧ ಸಲಿಂಗಕಾಮದ ಆರೋಪವನ್ನು ರಾಖಿ ಸಾವಂತ್ ಹೊರಿಸಿದ್ದಾರೆ. ತನುಶ್ರೀ ದತ್ತಾ (Tanushree Dutta) ಓರ್ವ ಸಲಿಂಗಕಾಮಿ. ನಾನು ಆಕೆಯ ಸ್ನೇಹಿತೆಯಾಗಿದ್ದೆ. ಆದರೆ ಆಕೆ ನನ್ನ ಮೇಲೆ ಪದೇ ಪದೇ ಅತ್ಯಾಚಾರ ನಡೆಸಿದ್ದಾರೆ ಎಂದು ರಾಖಿ ಆರೋಪಿಸಿದ್ದಾರೆ. ಅಷ್ಟಕ್ಕೂ ಇದು ದಶಕದ ಹಿಂದಿನ ಮಾತು ಎಂದಿದ್ದಾರೆ. ಒಮ್ಮೆ ತಾವು ತನುಶ್ರೀ ಮನೆಗೆ ಹೋಗಿದ್ದಾಗ ನನ್ನ ಮೇಲೆ ಅತ್ಯಾಚಾರ ನಡೆಸಿದರು. ಈ ಬಗ್ಗೆ ನನ್ನ ಬಗ್ಗೆ ಸಾಕ್ಷಿಗಳು ಇವೆ ಎಂದು ರಾಖಿ ಹೇಳಿಕೊಂಡಿದ್ದಾರೆ. ದೇಶದಲ್ಲಿ #MeToo ಅಭಿಯಾನ ಭಾರಿ ಪ್ರಚಾರ ಪಡೆಯುತ್ತಿರುವ ಹೊತ್ತಿನಲ್ಲಿ ರಾಖಿ ಈ ಹೇಳಿಕೆ ನೀಡಿದ್ದರು. ಇದು ಮೀ ಟೂ ಅಲ್ಲ, she to she ಎಂದು ಹೇಳಿರುವ ವಿಡಿಯೋ ಪುನಃ ವೈರಲ್ ಆಗುತ್ತಿದೆ.
#MeTooಗೆ ಸಿಗುತ್ತಿರುವ ಭರ್ಜರಿ ಪ್ರಚಾರದ ಲಾಭ ಪಡೆಯಲು ರಾಖಿ ಸಾವಂತ್ ಇಂತಹ ಲಜ್ಜೆಗೇಡಿ ಆರೋಪ ಮಾಡುತ್ತಿದ್ದಾರೆ ಎಂದು ನೆಟ್ಟಿಗರು ಕಿಡಿ ಕಾರುತ್ತಿದ್ದಾರೆ. ಅಷ್ಟಕ್ಕೂ MeToo ಅಭಿಯಾನದ ಮೂಲಕ ನಟಿ ತುನುಶ್ರೀ ದತ್ತಾ, ಬಾಲಿವುಡ್ ಹಿರಿಯ ನಟ ನಾನಾ ಪಾಟೇಕರ್ ಅವರ ಮೇಲೆ ಲೈಂಗಿಕ ಕಿರುಕುಳದ ಆರೋಪ ಹೊರಿಸಿದ್ದರು. 10 ವರ್ಷಗಳ ಹಿಂದೆ ಸಿನಿಮಾ ಚಿತ್ರೀಕರಣದ ವೇಳೆ ಲೈಂಗಿಕ ಕಿರುಕುಳ ನೀಡಿದ್ದರು ಎಂದು ಆರೋಪಿಸಿದ್ದರು. ಅದಾದ ಬಳಿಕ ಅವರ ವಿರುದ್ಧವೇ ರಾಖಿ ಸಾವಂತ್ ಆರೋಪ ಹೊರಿಸಿದ್ದಾರೆ. ರಾಖಿ ವಿರುದ್ಧ ತನುಶ್ರೀ ಕೋರ್ಟ್ ಸಮರವನ್ನೂ ಸಾರಿದಿದ್ದರು. ಇದಾದ ಬಳಿಕ ರಾಖಿ ಅವರಲ್ಲಿ ಕ್ಷಮಾಪಣೆ ಕೂಡ ಕೋರಿದ್ದಾರೆ ಎನ್ನಲಾಗಿದೆ.
ನಿಜವಾದ ಮುಸಲ್ಮಾನರು ಸುಳ್ಳು ಹೇಳಲ್ಲ, ಡ್ರಾಮಾ ಮಾಡಲ್ಲ: ನಟಿ ಶೆರ್ಲಿನ್ ಚೋಪ್ರಾ ಹೇಳಿದ್ದೇನು?