Karan v/s Priyanka: ಹಾಗ್ಯಾಕೆ ಕಾಲು ತಿಕ್ಕುತ್ತಾ ನುಲಿತೀರಿ... ನೀವೇನು ಅವ್ರಾ? ಎಂದಿದ್ದ ವಿಡಿಯೋ ವೈರಲ್!

By Suvarna News  |  First Published Apr 13, 2023, 6:26 PM IST

ಕಾಫಿ ವಿತ್​ ಕರಣ್​ ಷೋನಲ್ಲಿ ನಟಿ ಪ್ರಿಯಾಂಕಾ ಚೋಪ್ರಾ ನಿರ್ದೇಶಕ ಕರಣ್​ ಜೋಹರ್​ ಅವರನ್ನು ಯಾವ ರೀತಿ ಎಟ್ಯಾಕ್​ ಮಾಡಿದ್ದರು ಎಂಬ ಬಗ್ಗೆ ವಿಡಿಯೋ ವೈರಲ್​ ಆಗಿದೆ.
 


ಬಾಲಿವುಡ್ (Bollywood) ನಿರ್ಮಾಪಕ ಕರಣ್ ಜೋಹರ್ (Karan Johar)  ಈಗ ಬಹಳ ವಿವಾದಗಳಿಂದಲೇ ಸುತ್ತುವರೆದಿದ್ದಾರೆ. ಇವರ ಮತ್ತು ನಟಿ  ಪ್ರಿಯಾಂಕಾ ಚೋಪ್ರಾ ನಡುವಿನ ಮುಸುಕಿನ ಗುದ್ದಾಟ ಎಲ್ಲರಿಗೂ ತಿಳಿದದ್ದೇ. ಬಾಲಿವುಡ್​ನ ಕೆಲವೊಂದು ಹುಳುಕುಗಳ ಬಗ್ಗೆ ಮಾತನಾಡಿ ಹಾಲಿವುಡ್​ಗೆ ತಾವು ಹೋಗುತ್ತಿರುವುದಾಗಿ ಹೇಳಿದ್ದರು ಪ್ರಿಯಾಂಕಾ. ಇದಕ್ಕೆ ಕಾರಣ, ಕರಣ್​ ಜೋಹರ್​ ಎನ್ನುವುದು ಸ್ಪಷ್ಟವಾಗಿತ್ತು. ಇಷ್ಟೇ ಅಲ್ಲದೇ ಕರಣ್ ಜೋಹರ್  ಅವರು ಈಗಾಗಲೇ ಸಾಕಷ್ಟು ಟೀಕೆಗಳನ್ನು ಎದುರಿಸುತ್ತಿದ್ದಾರೆ. ನೆಪೋಟಿಸಂ ವಿಷ್ಯ ಸೇರಿ ಹಲವು ವಿಚಾರಗಳಿಗೆ ಕರಣ್ ಅನೇಕರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ನಟಿ ಅನುಷ್ಕಾ ಶರ್ಮಾ ಅವರ  ಸಿನಿ ಪಯಣವನ್ನು ಹಾಳು ಮಾಡಲು ಕರಣ್​ ಜೋಹರ್​ ಹೊರಟಿದ್ದರು ಎನ್ನುವ ಶಾಕಿಂಗ್​ ಸಮಾಚಾರವನ್ನು ಖುದ್ದು ಅವರೇ ಹೇಳಿಕೊಂಡಿದ್ದರು. ಕರಣ್​ ವಿರುದ್ಧ ಆಪಾದನೆಗಳು ಹೆಚ್ಚುತ್ತಲೇ ಅವರ ಹಳೆಯ ವಿಡಿಯೋಗಳು ಒಂದೊಂದೇ ಬೆಳಕಿಗೆ ಬರುತ್ತಿವೆ.  ಪ್ರಿಯಾಂಕಾ ಚೋಪ್ರಾ ವಿಷಯದಲ್ಲಿ ಕರಣ್​ ಜೋಹರ್​ ವಿರುದ್ಧ ಗಂಭೀರ ಆರೋಪ ಬಂದಿರುವ ಹಿನ್ನೆಲೆಯಲ್ಲಿ 2016ರ ಈ ವಿಡಿಯೋವನ್ನು ಕೆಲ ದಿನಗಳ ಹಿಂದೆ ಕಂಗನಾ ಶೇರ್​  ಮಾಡಿಕೊಂಡಿದ್ದರು. ಈ ಚಾಚಾ ಚೌಧರಿಗೆ ಇದೊಂದೇ ಕೆಲಸ ಎಂದು ತಮ್ಮ  ಇನ್ಸ್ಟಾಗ್ರಾಮ್ ಸ್ಟೇಟಸ್​ನಲ್ಲಿ ಕಂಗನಾ ಕಿಡಿ ಕಾರಿದ್ದರು. ಈ ಹಿಂದೆ  ಪ್ರಿಯಾಂಕಾ ಚೋಪ್ರಾಳನ್ನು ಬಾಲಿವುಡ್​ನಿಂದ ಹೊರಗಿಡಲು ಕರಣ್ ಜೋಹರ್ ಬಹಳ ಪ್ರಯತ್ನ ಪಟ್ಟಿದ್ದರು, ಈಗ ಇನ್ನೊಬ್ಬರ ಸರದಿ ಎಂದು ಕಂಗನಾ ಟೀಕಿಸಿದ್ದರು.

ಇದರ ಬೆನ್ನಲ್ಲೇ  ಇದೀಗ ಕರಣ್​ ಜೋಹರ್​ ಮತ್ತು ಪ್ರಿಯಾಂಕಾ ಚೋಪ್ರಾ (Priyanka Chopra) ಅವರ ಇನ್ನೊಂದು ಹಳೆಯ ವಿಡಿಯೋ ವೈರಲ್​ ಆಗಿದೆ.  ಕಾಫಿ ವಿತ್ ಕರಣ್ ಎಪಿಸೋಡ್​ನಲ್ಲಿ ನಡೆದ ಘಟನೆ ಇದಾಗಿದೆ. ಆ ಸಮಯದಲ್ಲಿ ಇದು ತಮಾಷೆಯಾಗಿ ಕಂಡಿದ್ದರೂ, ಇದೀಗ ಕರಣ್​ ಮತ್ತು ಪ್ರಿಯಾಂಕಾ ನಡುವಿನ ಗುದ್ದಾಟದ ನಡುವೆ ಹಾಗೂ ಕರಣ್​ ಸುತ್ತಲೂ ವಿವಾದದ ಸುಳಿ ಸುತ್ತುತ್ತಿರುವ ಹಿನ್ನೆಲೆಯಲ್ಲಿ ಈ ವಿಡಿಯೋ ಮತ್ತೆ ಮುನ್ನೆಲೆಗೆ ಬಂದಿದೆ. ಇದರಲ್ಲಿ ನಟಿ ದೀಪಿಕಾ ಪಡುಕೋಣೆ ಹಾಗೂ ಪ್ರಿಯಾಂಕಾ ಚೋಪ್ರಾ ಇಬ್ಬರೂ ಸೇರಿಕೊಂಡು ಕರಣ್ ಜೋಹರ್ ಅವರನ್ನು ತಮಾಷೆ ಮಾಡಿದ್ದಾರೆ.

Tap to resize

Latest Videos

ಅನುಷ್ಕಾ ಕರಿಯರ್​ ಹಾಳು ಮಾಡಲು ಹೊರಟಿದ್ದ ಕರಣ್​ ಜೋಹರ್! ಶಾಕಿಂಗ್​ ವಿಡಿಯೋ ವೈರಲ್​
 
ಸಾಮಾನ್ಯವಾಗಿ ಕರಣ್​ ಜೋಹರ್​ ಮಾತನಾಡುವಾಗ ನುಲಿಯುತ್ತಾರೆ. ಅದರಲ್ಲಿಯೂ ಹೆಣ್ಣುಮಕ್ಕಳ ಜೊತೆ ಮಾತನಾಡುವ ಸಂದರ್ಭದಲ್ಲಿ ಅವರ ನುಲಿತ ಹೆಚ್ಚುವುದು ಇದೆ. ಇದು ಅವರ ಸ್ಟೈಲ್​ ಕೂಡ ಹೌದು ಹಾಗೂ ಅವರು ಮಾತನಾಡುವ ಸಮಯದಲ್ಲಿ ಬಾಯಿಯ ವಿಚಿತ್ರ ಚಲನೆ ಮಾಡುತ್ತಾರೆ. ಅದೇ ರೀತಿ ಕಾಫಿ ವಿತ್​ ಕರಣ್​ ಎಪಿಸೋಡ್​ನಲ್ಲಿ ಅತಿಥಿಗಳಾಗಿ ಬಂದಿದ್ದ ಪ್ರಿಯಾಂಕಾ ಮತ್ತು ದೀಪಿಕಾರ ಬಳಿ ಮಾತನಾಡುವಾಗಲೂ ಇದೇ ರೀತಿ ಮಾಡಿದ್ದಾರೆ. ಆಗ  ಪ್ರಿಯಾಂಕಾ ಚೋಪ್ರಾ ನೇರವಾಗಿ  ನಾನು ಲೆಸ್ಬಿಯನ್​ನನ್ನು (Lesbian) ಭೇಟಿಯಾದೆ ಎಂದಿದ್ದಾರೆ. ಈ ಸಮಯದಲ್ಲಿ ಕರಣ್​ ಅರೆಕ್ಷಣ ದಂಗಾಗಿದ್ದಾರೆ. ಕೊನೆಗೆ ಪ್ರಿಯಾಂಕಾ ಕರಣ್​ ಅವರನ್ನು ಉದ್ದೇಶಿಸಿ ಅದ್ಯಾಕೆ ಆ ರೀತಿ ನುಲಿಯುತ್ತಾ  ಮೊಣಕಾಲನ್ನು ತಿಕ್ಕುತ್ತಿದ್ದೀರಿ ಎಂದಿದ್ದಾರೆ. ಕರಣ್ ಜೋಹರ್ ಮಾತನಾಡುವ ಸಮಯದಲ್ಲಿ ಮೊಣಕಾಲನ್ನು ತಿಕ್ಕುತ್ತಾ ಮಾತನಾಡಿದ್ದರಿಂದ  ಮೊದಲು ಪ್ರಿಯಾಂಕಾ ನಂತರ ದೀಪಿಕಾ ಪಡುಕೋಣೆ ಈ ಪ್ರಶ್ನೆ ಕೇಳಿದ್ದಾರೆ.  ಲೆಸ್ಬಿಯನ್ ಆಗಿರುವುದು ತಪ್ಪಲ್ಲ ಎಂದು ಕರಣ್​ ಕಾಲೆಳೆದಿದ್ದಾರೆ. ಆ ಸಮಯದಲ್ಲಿ ಎಲ್ಲರೂ ನಕ್ಕಿದ್ದಾರೆ.
 
ಪ್ರಿಯಾಂಕಾ ಚೋಪ್ರಾ ಹಾಗೂ ದೀಪಿಕಾ ಪಡುಕೋಣೆ ಜೊತೆಯಾಗಿ ಬಾಜಿರಾವ್ ಮಸ್ತಾನಿ ಸಿನಿಮಾ ಮಾಡಿದಾಗ 2014ರಲ್ಲಿ ಒಟ್ಟಿಗೆ ಕಾಫಿ ವಿತ್ ಕರಣ್ ಶೋನಲ್ಲಿ ಭಾಗವಹಿಸಿದ್ದರು. ನಂತರ ಇಬ್ಬರ ನಡುವೆ ತಿಕ್ಕಾಟ ಶುರುವಾಗಿತ್ತು. ಆದರೆ ಏನೂ ಆಗಿಯೇ ಇಲ್ಲ ಎನ್ನುವಂತೆ ಇತ್ತೀಚೆಗೆ ಕರಣ್ ಜೋಹರ್ ಹಾಗೂ ಪ್ರಿಯಾಂಕಾ ಚೋಪ್ರಾ  ನೀತಾ ಮುಕೇಶ್ ಅಂಬಾನಿ (Neeta Mukesh Ambani) ಕಲ್ಚರಲ್ ಸೆಂಟರ್ ಉದ್ಘಾಟನೆ ಕಾರ್ಯಕ್ರಮದಲ್ಲಿ  ಮುಖಾಮುಖಿಯಾದಾಗ ತಬ್ಬಿಕೊಂಡಿದ್ದ ವಿಡಿಯೋ ವೈರಲ್​ ಆಗಿತ್ತು.  

ಸೌಂದರ್ಯದ ಘನಿ ಸಿಲ್ಕ್​ ಸ್ಮಿತಾರನ್ನು ಮೋಹಿಸಿದ್ರಂತೆ ಸೂಪರ್​ಸ್ಟಾರ್​ ರಜನೀಕಾಂತ್!​

 

click me!