'ನಿಮ್ಮ ಹೆಂಡ್ತಿಯನ್ನು ಮದ್ವೆಯಾಗ್ತೀನಿ': ಪ್ರೇಯಸಿಯ ಗಂಡನಲ್ಲಿಯೇ ಹೋಗಿ ಹೆಣ್ಣು ಕೇಳಿದ್ದರು ಈ ಖ್ಯಾತ ಗಾಯಕ

Published : Oct 11, 2021, 12:26 PM ISTUpdated : Oct 11, 2021, 12:36 PM IST
'ನಿಮ್ಮ ಹೆಂಡ್ತಿಯನ್ನು ಮದ್ವೆಯಾಗ್ತೀನಿ': ಪ್ರೇಯಸಿಯ ಗಂಡನಲ್ಲಿಯೇ ಹೋಗಿ ಹೆಣ್ಣು ಕೇಳಿದ್ದರು ಈ ಖ್ಯಾತ ಗಾಯಕ

ಸಾರಾಂಶ

ಕೆಲವೊಂದು ಪ್ರೇಮ ಕಥೆಗಳು ತುಂಬಾ ಸ್ಪೆಷಲ್ ಪ್ರೀತಿ ವಿಪರೀತ ಧೈರ್ಯ ಕೊಡುತ್ತೆ ಅಂತಾರೆ, ಅದು ನಿಜವಾ ? ಪ್ರೇಯಸಿಯ ಗಂಡನಲ್ಲಿಯೇ ಹೋಗಿ ಆಕೆಯನ್ನು ಮದುವೆಯಾಗ್ತೀನಿ ಎಂದಿದ್ದರು ಈ ಟಾಪ್ ಸಿಂಗರ್

ಗಝಲ್ ಮಾಸ್ಟರೋ ಜಗ್‌ಜಿತ್ ಸಿಂಗ್(Jagjit singh) ಅವರ ಚಂದದ ಸ್ವರ ಯಾರೂ ಮರೆಯಲಾರರು. ಆತ್ಮವೇ ತುಂಬಿ ಬಂದಂತಹ ಗಾಯನ, ಸುಮಧುರ ಕಂಠ ಅವರನ್ನು ಸಂಗೀತ ಲೋಕದಲ್ಲಿ ಅಪ್ರತಿಮ ಪ್ರತಿಭೆಯಾಗಿ ಮಿಂಚಿಸಿದೆ. ಅವರು ಚಿತ್ರಾ ಸಿಂಗ್(Chitra singh) ಅವರನ್ನು ಪ್ರೀತಿಸಿ ಮದುವೆಯಾದರು. ಹೀಗೆ ನಂತರದಲ್ಲಿ ಈ ಪ್ರತಿಭಾನ್ವಿತ ಹಾಡು ಹಕ್ಕಿಯ ಜೋಡಿ ಹಲವು ವೇದಿಕೆಯಲ್ಲಿ ಹಾಡಿ ಭಾರೀ ಮೆಚ್ಚುಗೆಯನ್ನು ಪಡೆದರು.

ಬಹಳಷ್ಟು ಅಡಿಟೋರಿಯಂಗಳಲ್ಲಿ ಸಹಸ್ರ ಅಭಿಮಾನಿಗಳ ಚಪ್ಪಾಳೆ ಗಿಟ್ಟಿಸಿದರು. ಆದರೂ ಹದಿಹರೆಯದ ಮಗನ ಸಾವಿನ ನಂತರ ವೈಯಕ್ತಿಕ ಹಿನ್ನಡೆಯಾಗಿ ಅವರ ಸಂಗೀತ ಪ್ರಯಾಣವನ್ನು ನಿಲ್ಲಿಸಿದರು. ಚಿತ್ರಾ ಹಾಡನ್ನು ಸಂಪೂರ್ಣವಾಗಿ ಬಿಟ್ಟರೆ, ಜಗಜಿತ್ ಸಿಂಗ್ ಸಾಕಷ್ಟು ಅಂತರದ ನಂತರ ಸಂಗೀತ ಕ್ಷೇತ್ರಕ್ಕೆ ಮರಳಿದರು. ಅವರು 2011 ರಲ್ಲಿ ನಿಧನರಾದರು.

ತಾಯಿ ಸಾವಿನ ಬೇಸರದಲ್ಲಿದ್ದ ಬಾಯ್‌ಫ್ರೆಂಡ್‌ ಕಷ್ಟ ನೋಡಲಾಗದೆ ಆತನ ತಂದೆ ಜೊತೆ ಮದುವೆ

ಕೆಲವು ವರ್ಷಗಳ ಹಿಂದೆ ಚಿತ್ರಾ ಸಿಂಗ್ ತಾವು ಹೇಗೆ ಜಗ್‌ಜಿತ್ ಅವರನ್ನು ಭೇಟಿಯಾದರು, ಹೇಗೆ ಪ್ರೀತಿಯಾಯಿತು ಎಂಬುದನ್ನು ಹಂಚಿಕೊಂಡಿದ್ದಾರೆ. ಫಿಲ್ಮ್‌ಫೇರ್‌ನಲ್ಲಿ ಭೇಟಿಯಾಗಿದ್ದರು ಜಗ್‌ಜಿತ್ ಹಾಗೂ ಚಿತ್ರಾ. 1967ರಲ್ಲಿ ಮೊದಲ ಬಾರಿಗೆ ಭೇಟಿಯಾದ ಸಂಗೀತ ತಾರೆಯರು ನಂತರ ಆತ್ಮೀಯರಾದರು. 

ನಾನು ಅವರನ್ನು ಒಬ್ಬ ಸಂಗೀತ ನಿರ್ದೇಶಕರ ರೆಕಾರ್ಡಿಂಗ್‌ನಲ್ಲಿ ಭೇಟಿಯಾದೆ. ಅವರು ವಿವಿಧ ಗಾಯಕರೊಂದಿಗೆ ಹೊಸ ಸಂಗ್ರಹವನ್ನು ಸಂಗ್ರಹಿಸಲು ಬಯಸಿದ್ದರು. ಜಗಜಿತ್‌ ಅವರ ಮೊದಲ ನೆನಪು ನಾನು ತೆರೆದಾಗ ಬಾಗಿಲಿನ ಮೇಲೆ ಕೈಯಿಟ್ಟದ್ದು. ಮೊದಲಿಗೆ, ಸಿಂಗ್ ಅವರ ಧ್ವನಿಯು 'ತುಂಬಾ ಭಾರ' ಎಂದು ಭಾವಿಸಿದ್ದರಿಂದ ಅವರೊಂದಿಗೆ ಹಾಡಲು ತನಗೆ ಆಸಕ್ತಿ ಇರಲಿಲ್ಲ ಎಂದು ಚಿತ್ರಾ ಹೇಳಿದ್ದಾರೆ.

ಅವರ ಸ್ವರ ತುಂಭಾ ಭಾರವಾಗಿದೆ. ಅವರೊಂದಿಗೆ ಡ್ಯುಯೆಟ್ ಹಾಡಲು ಸಾಧ್ಯವಿಲ್ಲ ಎಂದು ನಾನು ಸಂಗೀತ ನಿರ್ದೇಶಕರಲ್ಲಿ ಹೇಳಿದ್ದೆ ಎಂದಿದ್ದಾರೆ ಚಿತ್ರಾ.

ಹೃದಯ ಕದಿಯುವಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ 7 ಕ್ರಿಕೆಟ್ ಕಳ್ಳರು!

ಚಿತ್ರಾ ತನ್ನ ಆಗಿನ ಪತಿ ದೇಬೊ ಪ್ರಸಾದ್ ದತ್ತಾ ಅವರಿಂದ ದೂರವಾಗಿದ್ದ ಸಮಯದಲ್ಲಿ ಈ ಜೋಡಿ ಭೇಟಿಯಾದರು. ಚಿತ್ರಾ ಸಿಂಗ್ ದತ್ತಾ ಜೊತೆ ಮೋನಿಕಾ ಎಂಬ ಮಗಳನ್ನು ಹೊಂದಿದ್ದರು. ಆ ಸಮಯದಲ್ಲಿ ಪ್ರತ್ಯೇಕವಾಗಿ ವಾಸಿಸುತ್ತಿದ್ದರು. ಜಗ್‌ಜಿತ್ ಸಿಂಗ್ ಚಿತ್ರಾಳನ್ನು ಮದುವೆಯಾಗಲು ಪ್ರಸ್ತಾಪಿಸಿದಾಗ, ಅವರು ನಿರಾಕರಿಸಿದರು. ಅವರ ಪರಿಸ್ಥಿತಿಯನ್ನು ವಿವರಿಸಿದ್ದರು.

ಜಗಜಿತ್ ಸಿಂಗ್ ನಂತರ ತನ್ನ ಪ್ರೇಯಸಿ ಚಿತ್ರಾ ಸಿಂಗ್ ಅವರಿಂದ ಪ್ರತ್ಯೇಕವಾಗಿ ಬೇರೆ ವಾಸಿಸುತ್ತಿದ್ದ ಅವರ ಪತಿ ದತ್ತಾ ಅವರಲ್ಲಿ ಮದುವೆ ಪ್ರಸ್ತಾಪ ಮಾಡಲು ಒಪ್ಪಿಕೊಂಡರು. ಜಗಜಿತ್ ಸಿಂಗ್ ಅವರು ಚಿತ್ರಾರನ್ನು ಮದುವೆಯಾಗಲು ಸರಳವಾದ ಆದರೆ ಅಸಾಮಾನ್ಯ ರೀತಿಯಲ್ಲಿ ಒಪ್ಪಿಗೆ ಕೇಳಿದ್ದರು. ನಾನು ನಿಮ್ಮ ಹೆಂಡತಿಯನ್ನು ಮದುವೆಯಾಗಲು ಬಯಸುತ್ತೇನೆ ಎಂದು ಅವರ ಪತಿ ದತ್ತಾ ಅವರಿಗೆ ಕೇಳಿದ್ದರು. ನಂತರ ನಡೆದಿದ್ದು ಇತಿಹಾಸ.

ಚಕ್ ದೇ ಹುಡುಗಿಗೆ ಬೌಲ್ಡ್‌ ಆದ ಈ ಫೇಮಸ್‌ ಬೌಲರ್!

ಜಗಜಿತ್ ಹಾಗೂ ಚಿತ್ರಾ ಸಿಂಗ್ ಅವರದು ಗಾಢವಾದ ಸಂಬಂಧ. ಪ್ರೇಮ ಮತ್ತು ನಂಬಿಕೆ ತುಂಬಿದ್ದ ಸಂಬಂಧವಾಗಿತ್ತು. ಉಳಿದೆಲ್ಲ ಜೋಡಿಯಂತೆ ಅವರಿಗೂ ನಿಕ್ ನೇಮ್ ಇತ್ತು ಎಂದಿದ್ದಾರೆ ಚಿತ್ರಾ. ಅವರಿಬ್ಬರೂ ಪರಸ್ಪರ ಮಮ್ಮಿ, ಪಪ್ಪ ಎಂದು ಕರೆಯುತ್ತಿದ್ದರು. ನನ್ನ ಮಗ ಬಾಬೂ(ವಿವೇಕ) ಬದುಕಿದ್ದಾಗ ಹೋಗು ಪಪ್ಪಾ ನ ಕರಿ ಎನ್ನುತ್ತಿದ್ದೆ, ಹಾಗೆ ಅವರನ್ನು ನಾನು ಪಪ್ಪ ಎಂದೇ ಕರೆಯಲಾರಂಭಿಸಿದೆ ಎಂದಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ನಾನೇನು ಸಾಧುವಲ್ಲ.. ಹೀಗೆ ಮಾತಾಡೋಕೆ ನನಗೂ ಬರುತ್ತೆ: ಪುಷ್ಪ ನಟಿ ಹೇಳಿದ್ದೇನು?
ವೃತ್ತಿಜೀವನದಲ್ಲಿ 2 ಬಾರಿ ದೊಡ್ಡ ತಪ್ಪು ಮಾಡಿದ ರಾಮ್ ಚರಣ್.. ಚಿರಂಜೀವಿಯೂ ಏನೂ ಮಾಡಲಾಗಲಿಲ್ಲವೇ?