ವೈನ್‌ಗೆ ಯಾವ ರೀತಿ ವರ್ಷವಾದಂತೆ ರುಚಿ ಹೆಚ್ಚುತ್ತದೋ ಅದೇ ರೀತಿಯಾಗಿದೆ ಅಮಿತಾಭ್ ಬಚ್ಚನ್(Amitabh Bachchan) ಕಥೆ. ಅಮಿತಾಭ್ ಬಚ್ಚನ್ ಅವರು ವಯಸ್ಸಾದಂತೆ ಮತ್ತಷ್ಟು ಹ್ಯಾಂಡ್ಸಂ, ಗ್ರೇಸ್‌ಫುಲ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ತಮ್ಮ ಬರ್ತ್‌ಡೇ(Birthday) ದಿನ ಚಂದದ ಫೋಟೋ ಶೇರ್ ಮಾಡಿದ ನಟ ಮತ್ತೊಂದು ವರ್ಷವನ್ನು ಪ್ರೀತಿಯಿಂದ ಅಪ್ಪಿಕೊಳ್ಳಲು ಸಿದ್ಧರಾಗಿದ್ದಾರೆ. 80ರ ಕಡೆಗೆ ನಡಿಗೆ ಎಂದು ಅಮಿತಾಭ್ ಬಚ್ಚನ್ ಕ್ಯಾಪ್ಶನ್ ಕೊಟ್ಟು ಫೋಟೋ ಶೇರ್ ಮಾಡಿದ್ದಾರೆ.
ತಕ್ಷಣ ಪ್ರತಿಕ್ರಿಯಿಸಿದ ಶ್ವೇತಾ ಬಚ್ಚನ್ ನಂದಾ(Shweta Bachchan Nanda) ಕಮೆಂಟ್ ಮಾಡಿ 79 ಎಂದು ಕಮೆಂಟ್ ಮಾಡಿದ್ದಾರೆ. ತಮ್ಮ ವಯಸ್ಸು ತಪ್ಪಾಗಿ ಬರೆದಿದ್ದರು ಅಮಿತಾಭ್ ಬಚ್ಚನ್. ರಣವೀರ್ ಸಿಂಗ್, ಭೂಮಿ ಪಡ್ನೇಕರ್ ಕೂಡಾ ಬಿಗ್‌ಬಿಗೆ ಸ್ಪೆಷಲ್ ಡೇಗೆ ವಿಶ್ ಮಾಡಿದ್ದಾರೆ. ರಣವೀರ್ ಸಿಂಗ್ ಗ್ಯಾಂಗ್‌ಸ್ಟರ್ ಎಂದು ಕಮೆಂಟ್ ಮಾಡಿದ್ದು ಭೂಮಿ ಸ್ವಾಗ್, ಹ್ಯಾಪಿ ಬರ್ತ್‌ಡೇ ಸರ್ ಎಂದಿದ್ದಾರೆ.
undefined
ಒಂದಿನ ರಾತ್ರಿ ಪೂರ್ತಿ ನ್ಯೂಸ್ ಪೇಪರ್ ಆಫೀಸ್ ಹೊರಗಿದ್ದರಂತೆ ಅಮಿತಾಭ್!
ಬಿಗ್ ಬಿ ಹುಟ್ಟುಹಬ್ಬದ ಆಚರಣೆಗಳು ಒಂದು ದಿನ ಮುಂಚಿತವಾಗಿ ಆರಂಭವಾಗಿದ್ದು, ಅವರು 'ಚೆಹ್ರೆ' ನಿರ್ಮಾಪಕ ಆನಂದ್ ಪಂಡಿತ್ ಅವರ ಸಮ್ಮುಖದಲ್ಲಿ ಕೇಕ್ ಕತ್ತರಿಸಿದ್ದಾರೆ. ಅದೇ ಚಿತ್ರದ ನಿರ್ಮಾಪಕರು ಪ್ರತಿ ವರ್ಷವೂ ನಾನು ನಿಮ್ಮನ್ನು ಬಿಗ್ ಸ್ಕ್ರೀನ್‌ನಲ್ಲಿ ನೋಡುತ್ತಾ ಕಳೆದ ಪ್ರತಿ ವರ್ಷವೂ ನಾನು ನಿಮ್ಮನ್ನು ವೈಯಕ್ತಿಕವಾಗಿ ಭೇಟಿಯಾಗಿ ನಿಮ್ಮೊಂದಿಗೆ ಕೆಲಸ ಮಾಡುತ್ತಿದ್ದೇನೆ, ಪ್ರತಿ ಕ್ಷಣವೂ ನಿಮ್ಮೊಂದಿಗೆ ಸ್ಪೂರ್ತಿದಾಯಕವಾಗಿದೆ! ನಮ್ಮ ಪ್ರಾಜೆಕ್ಟ್‌ನಲ್ಲಿ ನೀವು ನಮ್ಮನ್ನು ಭೇಟಿ ಮಾಡಿದ್ದಕ್ಕೆ, ಒಂದು ದಿನ ಮುಂಚಿತವಾಗಿ ನಾವು ಸೆಲೆಬ್ರೇಟ್ ಮಾಡಲು ಆರಂಭಿಸಬಹುದೆಂದು ನನಗೆ ತುಂಬಾ ಸಂತೋಷವಾಗಿದೆ. ಅಮಿತ್ ಜೀ, ನೀವು ನಿಜವಾಗಿಯೂ ಸ್ಫೂರ್ತಿಯಾಗಿದ್ದೀರಿ. ಮತ್ತೊಮ್ಮೆ ನಿಮಗೆ ಜನ್ಮದಿನದ ಶುಭಾಶಯಗಳನ್ನು ಕೋರುತ್ತೇವೆ! ಎಂದು ಬರೆದಿದ್ದಾರೆ.
ಬಿಗ್ ಬಿ ಗೆ ಶುಭ ಹಾರೈಸಿದ ಶತ್ರುಘ್ನ ಸಿನ್ಹಾ, ಅತ್ಯಂತ ಪ್ರೀತಿಯ ಗೆಳೆಯ, ನ್ಯಾಷನಲ್ ಐಕಾನ್, ಒಬ್ಬನೇ ಒಬ್ಬ ಅಮಿತಾಭ್ ಬಚ್ಚನ್‌ಗೆ ಶ್ರೇಷ್ಠ, ಸಮೃದ್ಧ, ಆರೋಗ್ಯಕರ ಜನ್ಮದಿನದ ಶುಭಾಶಯಗಳು ಎಂದಿದ್ದಾರೆ.
'ಚೆಹ್ರೆ'ಯಲ್ಲಿ ಕೊನೆಯದಾಗಿ ಕಾಣಿಸಿಕೊಂಡ ಅಮಿತಾಬ್ ಬಚ್ಚನ್ ಮುಂದೆ ಬ್ಯುಸಿ ಶೆಡ್ಯೂಲ್ ಹೊಂದಿದ್ದಾರೆ. ಅವರ ಮುಂದಿನ ಪ್ರಾಜೆಕ್ಟ್ ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ ಅಭಿನಯದ 'ಬ್ರಹ್ಮಾಸ್ತ್ರ'. ಅಯಾನ್ ಮುಖರ್ಜಿ ನಿರ್ದೇಶಿಸಿದ ಈ ಸಿನಿಮಾದಲ್ಲಿ ಡಿಂಪಲ್ ಕಪಾಡಿಯಾ, ನಾಗಾರ್ಜುನ ಮತ್ತು ಮೌನಿ ರಾಯ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಇದರ ಹೊರತಾಗಿ, ಬಿಗ್ ಬಿ ಅಜಯ್ ದೇವಗನ್ ಅವರ 'ಮೇಡೇ' ಮತ್ತು ನಾಗರಾಜ ಮಂಜುಲೆ ಅವರ 'ಜುಂಡ್' ಅನ್ನು ಕೂಡ ಹೊಂದಿದೆ.