ಹಲವು ಚಿತ್ರಗಳಲ್ಲಿ ನಟಿಸಿರುವ ಬಾಲಿವುಡ್ ನಟಿ ದಿವ್ಯಾ ದತ್ತಾ ಹಿಂದೊಮ್ಮೆ ಗೊತ್ತಿಲ್ಲದೇ ರೆಡ್ಲೈಟ್ ಏರಿಯಾದಲ್ಲಿ ಸಿಕ್ಕಿಬಿದ್ದಿದ್ದರು. ಅಲ್ಲಿ ಆಗಿದ್ದೇನು?
ಹಿಂದಿ ಚಿತ್ರರಂಗದಲ್ಲಿ ತಮ್ಮದೇ ಆದ ಐಡೆಂಟಿಟಿ ಹೊಂದಿರುವ ಖ್ಯಾತ ನಟಿ ದಿವ್ಯಾ ದತ್ತಾ (Divya Datta). ಮಾಡೆಲಿಂಗ್ ಲೋಕದಿಂದ ನಟನೆಯ ಜಗತ್ತಿಗೆ ಬಂದ ಇವರು 1994 ರಲ್ಲಿ, ಅವರು ಇಷ್ಕ್ ಮೇ ಜೀನಾ ಇಷ್ಕ್ ಮೇ ಮರ್ನಾ ಚಿತ್ರದ ಮೂಲಕ ಪದಾರ್ಪಣೆ ಮಾಡಿದರು ಮತ್ತು ನಂತರ 1995 ರಲ್ಲಿ ಅವರು ಸುರಕ್ಷಾ ಚಿತ್ರದಲ್ಲಿ ಕಾಣಿಸಿಕೊಂಡರು. ಸುನಿಲ್ ಶೆಟ್ಟಿ, ಆದಿತ್ಯ ಪಾಂಚೋಲಿ ಮತ್ತು ಸೈಫ್ ಅಲಿ ಖಾನ್ (Saif Ali Khan) ನಟಿಸಿದ ಈ ಚಿತ್ರದಲ್ಲಿ ಅವರು ಬಿಂದಿಯಾ ಪಾತ್ರವನ್ನು ನಿರ್ವಹಿಸಿದ್ದಾರೆ. 46 ವರ್ಷ ವಯಸ್ಸಿನ ದಿವ್ಯಾ ದತ್ತಾ ಫನ್ನೆ ಖಾನ್, ಇದಾಸಾ, ಬ್ಲ್ಯಾಕ್‌ಮೇಲ್, ಬದ್ಲಾಪುರ್, ಭಾಗ್ ಮಿಲ್ಕಾ ಭಾಗ್, ಸ್ಪೆಷಲ್ 26, ಹೀರೋಯಿನ್, ದೆಹಲಿ 6, ಉಮ್ರಾವ್ ಜಾನ್‌ನಂತಹ ಅನೇಕ ಹಿಟ್ ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ. ಅಷ್ಟೇ ಅಲ್ಲ, ಶಾರುಖ್ ಖಾನ್ ಅವರ ವೀರ್ ಜರಾ, ರಣವೀರ್ ಸಿಂಗ್ ಅವರ ಲೂಟೆರಾ, ಇರ್ಫಾನ್ ಖಾನ್ ಅವರ ಬ್ಲಾಕ್ ಮೇಲ್ ಚಿತ್ರಗಳಲ್ಲಿಯೂ ಕಾಣಿಸಿಕೊಂಡಿದ್ದಾರೆ. ಅಷ್ಟೇ ಅಲ್ಲದೇ, ಸಲ್ಮಾನ್ ಖಾನ್, ಅಮಿತಾಭ್ ಬಚ್ಚನ್, ಇರ್ಫಾನ್ ಖಾನ್, ರಿಷಿ ಕಪೂರ್ ಮುಂತಾದ ಶ್ರೇಷ್ಠ ನಟರೊಂದಿಗೆ ತೆರೆ ಹಂಚಿಕೊಂಡಿದ್ದಾರೆ. ಇತ್ತೀಚೆಗೆ ಅವರು ಕಂಗನಾ ರಣಾವತ್ ಅವರ ಢಾಕಡ್ ಚಿತ್ರದಲ್ಲಿ ಕಾಣಿಸಿಕೊಂಡರು.
ದಿವ್ಯಾ ದತ್ತಾ ಅವರ ಅತ್ಯುತ್ತಮ ಅಭಿನಯಕ್ಕಾಗಿ ಹತ್ತಾರು ಪ್ರಶಸ್ತಿಗಳನ್ನು (Award) ಪಡೆದಿದ್ದಾರೆ. 2018 ರಲ್ಲಿ, ಇದಾಸಾ ಚಿತ್ರಕ್ಕಾಗಿ ಅವರು ಅತ್ಯುತ್ತಮ ಪೋಷಕ ನಟಿಗಾಗಿ ರಾಷ್ಟ್ರೀಯ ಪ್ರಶಸ್ತಿಯನ್ನು ಪಡೆದರು. ಇದಕ್ಕೂ ಮೊದಲು, ಅವರು ತಮ್ಮ ಹೆಸರನ್ನು ಜೀ ಸಿನಿ ಪ್ರಶಸ್ತಿಗೆ ಎರಡು ಬಾರಿ, IIFA ಪ್ರಶಸ್ತಿಗೆ ಎರಡು ಬಾರಿ ನೋಂದಾಯಿಸಿದ್ದಾರೆ. ಈ ಸುದೀರ್ಘ ವೃತ್ತಿ ಜೀವನದಲ್ಲಿ ದಿವ್ಯಾ ದತ್ತಾ ಕೂಡ ಹಲವು ಬಾರಿ ಕಷ್ಟಗಳನ್ನು ಎದುರಿಸಿದ್ದಾರೆ. ಆತನಿಗೆ ಸಂಬಂಧಿಸಿದ ಒಂದು ಘಟನೆ ಆಗಾಗ ಚರ್ಚೆಯಾಗುತ್ತಿರುತ್ತದೆ.
ಬ್ರಾ ಧರಿಸದೇ ವಿಡಿಯೋ ಶೇರ್ ಮಾಡಿ ರಸಿಕರಿಗೆ ರಸದೌತಣ ನೀಡಿದ ನಟಿ Esha Gupta
ಇದೀಗ ದಿವ್ಯಾ ಅವರು ತಮ್ಮ ವೃತ್ತಿ ಜೀವನದಲ್ಲಿ ಎದುರಿಸಿದ ತೊಂದರೆಗಳ ಬಗ್ಗೆ ಹೇಳಿದ್ದು, ಅದರಲ್ಲಿ ಒಂದಂತೂ ತುಂಬಾ ಆಘಾತಕಾರಿಯಾಗಿದೆ. ಆ ಘಟನೆಯನ್ನು ನೆನೆಸಿಕೊಂಡರೆ ದಿವ್ಯಾ ಅವರಿಗೆ ಇನ್ನೂ ಭಯವಾಗುತ್ತದೆಯಂತೆ. ಈ ನಡೆದ ಘಟನೆಯೂ ಆಗಾಗ ಚರ್ಚೆ ಮಾಡುತ್ತಲೇ ಇರುತ್ತಾರೆ.
ಅಷ್ಟಕ್ಕೂ ಈ ಘಟನೆ ನಡೆದದ್ದು 2005 ರಲ್ಲಿ. ಆಗ ನೆದರ್ಲೆಂಡ್ನಲ್ಲಿ ಇದ್ದ ದಿವ್ಯಾ, ಆಮ್ಸ್ಟರ್‌ಡ್ಯಾಮ್‌ನಲ್ಲಿ ನಡೆದ IIFA ಪ್ರಶಸ್ತಿ ಸಮಾರಂಭದಲ್ಲಿ ಭಾಗವಹಿಸಲು ತನ್ನ ತಾಯಿಯೊಂದಿಗೆ ಹೋದಾಗ ನಡೆದ ಘಟನೆ. ಕಾರ್ಯಕ್ರಮ ಮುಗಿದ ಮೇಲೆ ಅಮ್ಮನ ಜೊತೆ ಊರು ನೋಡಲು ಹೋಗಿದ್ದರಂತೆ. ಆಗ ಅರಿವಿಲ್ಲದೇ ಅವರು ರೆಡ್ ಲೈಟ್ ಏರಿಯಾಗೆ (Red Light Area)ಹೋಗಿಬಿಟ್ಟಿದ್ದಾರೆ. ಇದು ಇಂಥ ಏರಿಯಾ ಎಂದು ಅವರಿಗೂ ಗೊತ್ತಿರಲಿಲ್ಲ. ರಸ್ತೆ ಚೆನ್ನಾಗಿದ್ದ ಕಾರಣ, ರಸ್ತೆಯ ಮೇಲೆ ನಿಂತು ತಮ್ಮ ತಾಯಿಯೊಂದಿಗೆ ಫೋಟೋಗಳನ್ನು ಕ್ಲಿಕ್ಕಿಸಲು ಪ್ರಾರಂಭಿಸಿದ್ದಾರೆ. ಆದರೆ ಆ ಪ್ರದೇಶದಲ್ಲಿ ಫೋಟೋಗ್ರಫಿಯನ್ನು (Photography) ನಿಷೇಧಿಸಲಾಗಿತ್ತು. ರೆಡ್ಲೈಟ್ ಏರಿಯಾದಲ್ಲಿ ಫೋಟೋಗ್ರಫಿ ನಿಷೇಧ ಎಂದು ತಿಳಿದಿದ್ದರೂ ತಾವು ಇರುವುದು ಆ ಪ್ರದೇಶದಲ್ಲಿ ಎಂದು ಅರಿಯದೇ ಫೋಟೋ ಕ್ಲಿಕ್ಕಿಸಿಕೊಳ್ಳಲು ಪ್ರಾರಂಭಿಸಿದ್ದರು ದಿವ್ಯಾ!
ಅಷ್ಟೇ, ಕ್ಷಣ ಮಾತ್ರದಲ್ಲಿ ಅಲ್ಲಿದ್ದ ವೇಶ್ಯೆಯರಿಂದ (Prostitution) ಅವರನ್ನು ಸುತ್ತುವರೆದರಂತೆ. ಏನಾಗುತ್ತಿದೆ ಎಂದು ತಿಳಿಯದ ದಿವ್ಯಾ ಜನರನ್ನು ನೋಡಿ ಸುಸ್ತಾಗಿ ಓಡಲು ಪ್ರಾರಂಭಿಸಿದರು. ಆದರೆ ಅವರ ಹಿಂದೆ ವೇಶ್ಯೆಯರು ಓಡಲು ಪ್ರಾರಂಭಿಸಿದರು. ದಿವ್ಯಾ ಮತ್ತು ಆಕೆಯ ತಾಯಿ ಹೇಗೋ ಅಲ್ಲಿಂದ ತಪ್ಪಿಸಿಕೊಂಡು ಪ್ರಾಣ ಉಳಿಸಿಕೊಂಡರಂತೆ. ಇದನ್ನು ನೆನಪಿಸಿಕೊಂಡು ಈಗಲೂ ನಡುಗುತ್ತಾರೆ ದಿವ್ಯಾ.
ವಿರಾಟ್ ಕೊಹ್ಲಿಜೀ... ಪ್ಲೀಸ್ ಹೆಂಡ್ತಿಗೆ ಒಂದು ಚಡ್ಡಿ ಕೊಡಿಸಿ ಅಂತಿದ್ದಾರೆ ನೆಟ್ಟಿಗರು!