ಬ್ರಾ ಧರಿಸದೇ ವಿಡಿಯೋ ಶೇರ್ ಮಾಡಿ ರಸಿಕರಿಗೆ ರಸದೌತಣ ನೀಡಿದ ನಟಿ Esha Gupta
ಬೋಲ್ಡ್ ಡ್ರೆಸ್ ಹಾಕಿ ಫೋಟೋಶೂಟ್ ಮಾಡಿಸಿಕೊಳ್ತಿರೋ ನಟಿ ಇಶಾ ಗುಪ್ತಾ ಈಗ ಬ್ರಾ ಇಲ್ಲದೇ ವಿಡಿಯೋ ಶೇರ್ ಮಾಡಿದ್ದಾರೆ. ನೆಟ್ಟಿಗರು ಏನು ಹೇಳಿದ್ದಾರೆ ನೋಡಿ.
ಇತ್ತೀಚೆಗೆ ಕೆಲ ನಟಿಯರು ಪೈಪೋಟಿಯ ಮೇಲೆ ಅಂಗಪ್ರದರ್ಶನ ಮಾಡುತ್ತಿರುವುದು ಹೊಸ ವಿಷಯವೇನಲ್ಲ. ಮಾಡುವ ಚಿತ್ರಗಳೆಲ್ಲಾ ತೋಪೆದ್ದು ಹೋಗುವ ಸಮಯದಲ್ಲಿ, ಕೈಯಲ್ಲಿ ಕೆಲಸವಿಲ್ಲದೇ ಎಲ್ಲಿ ತಾವು ತೆರೆಮರೆಗೆ ಸರಿಯುತ್ತೆವೆಯೋ ಎನ್ನುವ ಭಯ ಶುರುವಾದಾಗ ಹೆಚ್ಚಿನ ಚಿತ್ರತಾರೆಯರು ಅದರಲ್ಲಿಯೂ ಹೆಚ್ಚಾಗಿ ನಟಿಯರು ಕಂಡುಕೊಂಡಿರುವ ಸುಲಭದ ಮಾರ್ಗ ಅಂಗ ಪ್ರದರ್ಶನ. ಅದು ಕೆಲವೊಮ್ಮೆ ಎಷ್ಟರಮಟ್ಟಿಗೆ ಅಶ್ಲೀಲತೆಯಿಂದ ಕೂಡಿರುತ್ತದೆ ಎಂದರೆ ನೋಡುಗರೇ ಕಣ್ಣುಮುಚ್ಚಬೇಕು. ಆದರೆ ಇಂಥ ಡ್ರೆಸ್ ನೋಡಿ ಜೊಲ್ಲು ಸುರಿಸುವವರೂ ಹಲವರು ಇದ್ದರೆ, ಟ್ರೋಲ್ (Troll) ಮಾಡಿ ಖುಷಿ ಪಡುವ ವರ್ಗವೂ ಇರುತ್ತದೆ ಎನ್ನುವುದು ಇಂಥ ನಟಿಯರಿಗೆ ಚೆನ್ನಾಗಿ ಗೊತ್ತು. ಈಗ ಟ್ರೋಲ್ ಎನ್ನುವುದು ಪ್ರಚಾರಕ್ಕೆ ಇನ್ನೊಂದು ಮುಖವಾಗಿರುವ ಕಾರಣಕ್ಕಾಗಿಯೇ, ಟ್ರೋಲ್ ಆಗಲಿ ಎನ್ನುವ ಕಾರಣಕ್ಕಾಗಿಯೇ ತಮ್ಮ ಅಂಗಾಂಗಗಳನ್ನು ಯಾವುದೇ ಮುಲಾಜು ಇಲ್ಲದೇ ಪ್ರದರ್ಶನಕ್ಕೆ ಇಡುತ್ತಿದ್ದಾರೆ ಹಲ ನಟಿಯರು. ಹೆಚ್ಚೆಚ್ಚು ಪ್ರದರ್ಶನ ಮಾಡಿದರೆ ಹೆಚ್ಚೆಚ್ಚು ಪ್ರಚಾರ ಸಿಗುತ್ತದೆ ಎನ್ನುವ ಕಾರಣಕ್ಕೆ ತಮ್ಮ ಪ್ರತಿಯೊಂದು ಅಂಗವನ್ನೂ ಅದರಲ್ಲಿಯೂ ಹೆಚ್ಚಾಗಿ ಸ್ತನದ ಗಾತ್ರವನ್ನು ಹೆಚ್ಚಿಸಿಕೊಳ್ಳಲು ಶಸ್ತ್ರಚಿಕಿತ್ಸೆ ಮಾಡಿಸಿಕೊಂಡು ಹಾಟ್, ಗ್ಲಾಮರಸ್ ಎನಿಸಿಕೊಳ್ಳುತ್ತಿದ್ದಾರೆ. ಅವರ ಆಸೆಯಂತೆ ಹಲವು ಫೋಟೋ, ವಿಡಿಯೋಗಳು ಟ್ರೋಲ್ಗೆ ಒಳಗಾಗಿ ಇಂಥ ಒಬ್ಬ ನಟಿ ಇದ್ದಾಳೆ ಎನ್ನುವುದು ಜನರಿಗೆ ತಿಳಿಯುತ್ತದೆ.
ಅಂಥದ್ದೇ ಒಂದು ನಟಿಯರಲ್ಲಿ ಒಬ್ಬರು ಇಶಾ ಗುಪ್ತಾ (Esha Gupta). 'ಜನ್ನತ್ 2' ಮತ್ತು 'ಟೋಟಲ್ ಧಮಾಲ್' ಚಿತ್ರಗಳಿಗೆ ಹೆಸರುವಾಸಿಯಾಗಿರೋ ಇಶಾ, ಇದಕ್ಕಿಂತಲೂ ಹೆಚ್ಚಾಗಿ ತಮ್ಮ ಬಟ್ಟೆಗಳಿಂದ ಟ್ರೋಲ್ ಆಗಿಯೇ ಹೆಚ್ಚು ಪ್ರಚಾರದಲ್ಲಿ ಇದ್ದಾರೆ. ಹಿಂದಿ ಸಿಮಾ ರಂಗದ ಬೋಲ್ಡ್ ಮತ್ತು ಹಾಟ್ ನಟಿಯರ ಪಟ್ಟಿಯಲ್ಲಿ ಇಶಾ ಗುಪ್ತಾ (Esha Gupta) ಅವರು ಒಬ್ಬರು. ತನ್ನ ಬೋಲ್ಡ್ ಲುಕ್‌ಗಾಗಿ ಇಶಾ ಆಗಾಗ ಸದ್ದು ಮಾಡುತ್ತಿರುತ್ತಾರೆ. ಹೆಚ್ಚಾಗಿ ತಮ್ಮ ಸಾಮಾಜಿಕ ಮಾಧ್ಯಮ ಖಾತೆಗಳಲ್ಲಿ ಹಾಟ್ ಫೋಟೋಗಳನ್ನು ಹಂಚಿಕೊಳ್ಳುವ ನಟಿ ತಮ್ಮ ಬಿಕಿನಿ ಫೋಟೋಗಳನ್ನು ಪೋಸ್ಟ್ ಮಾಡುತ್ತಾ ಸಖತ್ ವೈರಲ್ ಆಗುತ್ತಾರೆ.
Shreya Dhanwanthary Photoshoot: ಕೋಟ್‌ನ ಆ ಬಟನ್ ಬಿಚ್ಬಿಡಿ... ನೋಡಿ ಧನ್ಯರಾಗ್ತೇವೆ ಎಂದ ಫ್ಯಾನ್ಸ್!
ಅವರು ಈಚೆಗೆ ನ್ಯೂಡ್ ಟೋನ್ ಬಿಕಿನಿಯಲ್ಲಿರುವ ಫೋಟೋ ಶೇರ್ ಮಾಡಿದ್ದು 'Still summer somewhere' ಎಂದು ಶೀರ್ಷಿಕೆ ನೀಡಿದ್ದರು. ಆ ಫೋಟೋ ನೋಡಿದ ನೆಟ್ಟಿಗರು ಸಿಕ್ಕಾಪಟ್ಟೆ ಟ್ರೋಲ್ ಮಾಡಿದ್ದರು. ಹೀಗೆ ತಮಗೆ ಪ್ರಚಾರ ಸಿಗುತ್ತದೆ ಎಂದು ತಿಳಿಯುತ್ತಲೇ ನಗ್ನತೆಯನ್ನು ಪ್ರದರ್ಶಿಸುವ ಫೋಟೋಶೂಟ್ಗಳನ್ನು (Photoshoot) ಧಾರಾಳವಾಗಿ ಮಾಡಿಸಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟು ಖ್ಯಾತಿ ಪಡೆಯುತ್ತಲೇ ಬಂದಿದ್ದಾರೆ. ಇದೇ ರೀತಿ ಪೈಪೋಟಿಗೆ ಬಿದ್ದು ಕಡಿಮೆ ಬಟ್ಟೆ ಧರಿಸಿಕೊಳ್ಳುತ್ತಿರುವ ಇನ್ನೋರ್ವ ನಟಿ, 49 ವರ್ಷದ ಮಲೈಕಾ ಅರೋರಾ ಅವರಂತೆಯೇ ಕಾಣಿಸುವ ಸಲುವಾಗಿ ಇಶಾ ಗುಪ್ತಾ ಈಚೆಗೆ ಮುಂಬೈನಲ್ಲಿ ಡ್ರೆಸ್ ಮಾಡಿಕೊಂಡು ಫೇಮಸ್ ಆಗಿದ್ದರು.
ಇದೀಗ ಅದೇ ರೀತಿಯ ಇನ್ನೊಂದು ವಿಡಿಯೋ ಸಕತ್ ಟ್ರೋಲ್ ಆಗುತ್ತಿದೆ. ಇದರಲ್ಲಿ ನಟಿ ಟ್ರೋಲ್ ಆಗುವುದಕ್ಕೆ ಹೊಸ ಮಾರ್ಗ ಕಂಡುಕೊಂಡಂತಿದೆ. ಅಂಗಾಂಗಗಳನ್ನು ನೇರವಾಗಿ ಪ್ರದರ್ಶನಕ್ಕೆ ಇಟ್ಟ ಮೇಲೆ ಇನ್ನು ಡ್ರೆಸ್ ಹಾಕಿಕೊಂಡು ಅಂಗ ಪ್ರದರ್ಶನ ಮಾಡುವುದು ಹೇಗೆ ಎಂಬ ಬಗ್ಗೆ ತಲೆಕೆಡಿಸಿಕೊಂಡಂತಿದೆ ನಟಿ ಇಶಾ ಗುಪ್ತ. ಅದೇ ಕಾರಣಕ್ಕೆ ಒಳಗಡೆ ಬ್ರಾ ಧರಿಸದೇ ತೆಳುವಾದ ಬಟ್ಟೆಯಲ್ಲಿ ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ. ಅವರ ಇಚ್ಛೆಯಂತೆ ಅದೀಗ ವೈರಲ್ ಆಗಿದ್ದು, ನಟಿ ಫುಲ್ ಖುಷ್ನಲ್ಲಿ ಇದ್ದಂತಿದೆ. ಇತ್ತೀಚೆಗೆ ಆಕೆ ಮುಂಬೈನಲ್ಲಿ (Mumabi) ಈ ರೀತಿ ವೇಷದಲ್ಲಿ ಕಾಣಿಸಿಕೊಂಡಿದ್ದು, ಅವರ ವಿಡಿಯೋ ವೈರಲ್ ಆಗಿದೆ.
ತಮ್ಮ ಸ್ತನವನ್ನು ಹೀಗೆ ಪಾಪರಾಜಿಗಳಿಗೆ ನಗುಮೊಗದಿಂದ ತೋರಿಸುತ್ತಾ ಪೋಸ್ ಕೊಟ್ಟಿದ್ದಾರೆ. ತಮ್ಮ ಅಭಿಮಾನಿಗಳೊಂದಿಗೆ ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದಾರೆ. ಹಲವರು ನೆಟ್ಟಿಗರು ಇದು ಅಸಹ್ಯ ಎಂದು ಕಮೆಂಟ್ಮಾಡುತ್ತಿದ್ದರೆ, ಇದರ ಹಿಂದಿರುವ ರಹಸ್ಯ ಅರಿತಿರುವ ಇನ್ನು ಕೆಲ ನೆಟ್ಟಿಗರು, ಹೀಗೆಲ್ಲಾ ಫುಲ್ ಡ್ರೆಸ್ (Full Dress) ಧರಿಸಿ ತೋರಿಸುವ ಬದಲು ನೇರವಾಗಿಯೇ ಎಲ್ಲವನ್ನೂ ತೋರಿಸುವುದು ಒಳ್ಳೆಯದು ಎಂದಿದ್ದರೆ, ಅದು ಮುಂದಿನ ಫೋಟೋಶೂಟ್ ಥೀಮ್ ಎಂದಿದ್ದಾರೆ ಇನ್ನು ಕೆಲವರು.
Akshay Kumar: ಥೂ ನಿಮ್ಗೆ ನಾಚಿಕೆ ಆಗಲ್ವಾ ಎಂದು ನಟ ಅಕ್ಷಯ್ ಕುಮಾರ್ಗೆ ನೆಟ್ಟಿಗರಿಂದ ತರಾಟೆ!
ಇನ್ನು, ಇಶಾ ಗುಪ್ತಾ ಅವರ ಸಿನಿ ಪಯಣದ ಬಗ್ಗೆ ಹೇಳುವುದಾದರೆ, ಇವರು 2012 ರಲ್ಲಿ 'ಜನ್ನತ್ 2' ಚಿತ್ರದ ಮೂಲಕ ಬಾಲಿವುಡ್‌ಗೆ ಪದಾರ್ಪಣೆ ಮಾಡಿದರು. ಅವರು 'ರುಸ್ತಮ್', 'ಕಮಾಂಡೋ 2', 'ಪಲ್ಟನ್' ಮತ್ತು 'ಟೋಟಲ್ ಧಮಾಲ್' ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ. ಅವರು ಕೊನೆಯದಾಗಿ 'ಒನ್ ಡೇ: ಜಸ್ಟಿಸ್ ಡೆಲಿವರ್ಡ್' ನಲ್ಲಿ ಕಾಣಿಸಿಕೊಂಡರು. ಅವರ ಮುಂಬರುವ ಚಿತ್ರಗಳಲ್ಲಿ 'ದೇಸಿ ಮ್ಯಾಜಿಕ್' ಮತ್ತು 'ಹೇರಾ ಫೆರಿ 3' ಸೇರಿವೆ.