ಜೂ.ಎನ್‌ಟಿಆರ್- ಸೈಫ್ ಅಲಿ ಖಾನ್ ಸಿನಿಮಾದಲ್ಲಿ ಕನ್ನಡ ಕಿರುತೆರೆ ಖ್ಯಾತ ನಟಿ ಚೈತ್ರಾ ರೈ

By Shruthi KrishnaFirst Published May 3, 2023, 3:51 PM IST
Highlights

ಜೂ.ಎನ್‌ಟಿಆರ್ ಮತ್ತು ಸೈಫ್ ಅಲಿ ಖಾನ್ ನಟನೆಯ ಜೂ.ಎನ್‌ಟಿಆರ್ ಸಿನಿಮಾಗೆ ಕನ್ನಡ ಕಿರುತೆರೆಯ ಖ್ಯಾತ ನಟಿ ಚೈತ್ರಾ ರೈ ಎಂಟ್ರಿ ಕೊಟ್ಟಿದ್ದಾರೆ. 

ಆರ್ ಆರ್ ಆರ್ ಸ್ಟಾರ್ ಜೂ. ಎನ್ ಟಿ ಆರ್ ನಟನೆಯ ಬಹುನಿರೀಕ್ಷೆಯ  NTR30 ಸಿನಿಮಾದ ಚಿತ್ರೀಕರಣ ಪ್ರಾರಂಭವಾಗಿದೆ. ಈಗಾಗಲೇ ಅನೇಕ ಕಾರಣಕ್ಕೆ NTR30 ಸಿನಿಮಾ ಸದ್ದು ಮಾಡುತ್ತಿದೆ. ಜೂ.ಎನ್ ಟಿ ಆರ್ ಜೊತೆ ನಟಿಸಲು ನಟಿ ಜಾನ್ವಿ ಕಪೂರ್ ಬಾಲಿವುಡ್‌ನಿಂದ ಬಂದಿದ್ದಾರೆ. ಮೊದಲ ಬಾರಿಗೆ ಜಾನ್ವಿ ಕಪೂರ್ ಸೌತ್ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈಗಾಗಲೇ ಜಾನ್ವಿ ಕಪೂರ್ ಲುಕ್ ರಿಲೀಸ್ ಆಗಿದ್ದು ಹಳ್ಳಿ ಗೆಟಪ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಬಾಲಿವುಡ್‌ನಿಂದ ಜಾನ್ವಿ ಕಪೂರ್ ಎಂಟ್ರಿ ಕೊಟ್ಟ ಬೆನ್ನಲ್ಲೇ ಮತ್ತೋರ್ವ ಸ್ಟಾರ್ ನಟ  NTR30 ಸಿನಿಮಾಗೆ ಪದಾರ್ಪಣೆ ಮಾಡಿದ್ದಾರೆ. ಅದು ಮತ್ಯಾರು ಅಲ್ಲ ಸೈಫ್ ಅಲಿ ಖಾನ್. ಪ್ರಭಾಸ್ ಜೊತೆ ಆದಿಪುರುಷ್ ಸಿನಿಮಾದಲ್ಲಿ ನಟಿಸಿದ್ದ ಸೈಫ್ ಇದೀಗ ಜೂ. ಎನ್ ಟಿ ಆರ್ ಜೊತೆ ನಟಿಸುತ್ತಿದ್ದಾರೆ. 

ಇದೀಗ NTR30 ಸಿನಿಮಾಗೆ ಕನ್ನಡ ನಟಿಯೊಬ್ಬರು ಎಂಟ್ರಿ ಕೊಟ್ಟಿದ್ದಾರೆ. ಕನ್ನಡ ಕಿರುತೆರೆ ನಟಿ ಚೈತ್ರಾ ರೈ ಜೂಎನ್ ಟಿ ಆರ್ ಸಿನಿಮಾದಲ್ಲಿ ನಟಿಸುತ್ತಿದ್ದಾರೆ ಎನ್ನುವ ಸುದ್ದಿ ವೈರಲ್ ಆಗಿದೆ. ಸದ್ಯ ತೆಲುಗು ಕಿರುತೆರೆಯಲ್ಲಿ ಖ್ಯಾತಿಗಳಿಸಿರುವ ಕನ್ನಡದ ನಟಿ ಚೈತ್ರಾ ರೈ NTR30 ಸಿನಿಮಾದಲ್ಲಿ ನಟಿಸುತ್ತಿದ್ದಾರೆ ಎನ್ನುವ ಸುದ್ದು ವೈರಲ್ ಆಗಿದೆ. ಸಿನಿಮಾದಲ್ಲಿ ಸೈಫ್ ಅಲಿ ಖಾನ್ ಪತ್ನಿ ಪಾತ್ರದಲ್ಲಿ ಚೈತ್ರಾ ರೈ ನಟಿಸುತ್ತಿದ್ದಾರಂತೆ. ಚೈತ್ರಾ ಸದ್ಯ ತೆಲುಗಿನಲ್ಲಿ ರಾಧಕು ನೀವೆರೆ ಪ್ರಣಾಮ್ ಧಾರಾವಾಹಿಯ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ.  ಈ ಮೊದಲು ಅಷ್ಟ ಚೆಮ್ಮಾದಲ್ಲಿ ನಟಿಸುತ್ತಿದ್ದರು. 

ಹಾಲಿವುಡ್‌ನಿಂದ Jr.NTRಗೆ ಬಂತು ದೊಡ್ಡ ಆಫರ್: RRR ಸ್ಟಾರ್ ಜೊತೆ ಕೆಲಸ ಮಾಡಬೇಕೆಂದ ಖ್ಯಾತ ನಿರ್ದೇಶಕ

Latest Videos

ಅಂದಹಾಗೆ NTR 30 ಚಿತ್ರಕ್ಕೆ ಕೊರಟಾಲ ಶಿವ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಇತ್ತೀಚಿಗಷ್ಟೆ ಸಿನಿಮಾದ ಅದ್ದೂರಿ ಮಹೂರ್ತ ನೆರವೇದಿದ್ದು ಎಸ್ ಎಸ್ ರಾಜಮೌಳಿ ಸಿನಿಮಾಗೆ ಕ್ಯಾಪ್ ಮಾಡಿ ಶುಭಹಾರೈಸಿದ್ದರು. ಮುಹೂರ್ತದಲ್ಲಿ ಕೆಜಿಎಫ್ ನಿರ್ದೇಶಕ ಪ್ರಶಾಂತ್ ನೀಲ್ ಕೂಡ ಭಾಗಿಯಾಗಿದ್ದರು. 

NTR 30; ಜಾನ್ವಿ ಕಪೂರ್ ಬಳಿಕ ಜೂ.ಎನ್‌ಟಿಆರ್ ಚಿತ್ರಕ್ಕೆ ಮತ್ತೋರ್ವ ಬಾಲಿವುಡ್ ಸ್ಟಾರ್ ಎಂಟ್ರಿ

ದ್ವಿಪಾತ್ರದಲ್ಲಿ ಜೂ.ಎನ್ ಟಿ ಆರ್ 

ಪ್ಯಾನ್ ಇಂಡಿಯಾ ಮಾತ್ರಲ್ಲದೇ ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿಗಳಿಸಿರುವ ಜೂ.ಎನ್ ಟಿ ಆರ್ ಮುಂದಿನ ಸಿನಿಮಾಗಳ ಮೇಲೆ ನಿರೀಕ್ಷೆ ಹೆಚ್ಚಾಗಿದೆ. ಈ ಸಿನಿಮಾದಲ್ಲಿ ಜೂ.ಎನ್ ಟಿ ಆರ್  ದ್ವಿಪಾತ್ರದಲ್ಲಿ ಮಿಂಚುತ್ತಿದ್ದಾರೆ ಎನ್ನಲಾಗಿದೆ. ತಂದೆ ಮತ್ತು ಮಗನಾಗಿ ಜೂ.ಎನ್ ಟಿ ಆರ್ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ. ಮೀನುಗಾರ ಸಮುದಾಯದ ಕಥೆ ಇದಾಗಿದ್ದು ಅವರನ್ನು ಮಾಫಿಯಾದಿಂದ ರಕ್ಷಣೆ ಮಾಡುವ ಪಾತ್ರದಲ್ಲಿ ಜೂ.ಎನ್ ಟಿ ಆರ್ ಕಾಣಿಸಿಕೊಳ್ಳುತ್ತಿದ್ದಾರೆ ಎನ್ನಲಾಗಿದೆ.  
 

click me!