Met Gala 2023: ಪ್ರಿಯಾಂಕಾ ಧರಿಸಿರುವ ನೆಕ್ಲೆಸ್​ ರೇಟ್​ಗೆ ಹತ್ತಾರು ಬಂಗ್ಲೆ ಖರೀಸ್ಬೋದು!

By Suvarna News  |  First Published May 3, 2023, 4:07 PM IST

ಜಗತ್ತಿನ ಅತ್ಯಂತ ಪ್ರತಿಷ್ಠಿತ ಫ್ಯಾಷನ್‌ ಇವೆಂಟ್‌ ಆದ ‘ಮೆಟ್‌ ಗಾಲಾ‘ದಲ್ಲಿ ನಟಿ ಪ್ರಿಯಾಂಕಾ ಚೋಪ್ರಾ ಹಾಕಿಕೊಂಡಿರುವ ನೆಕ್ಲೆಸ್​ ಬೆಲೆ ಕೇಳಿ ಎಲ್ಲರೂ ಶಾಕ್​  ಆಗಿದ್ದಾರೆ!
 


ಸದ್ಯ ಸಾಮಾಜಿಕ ಜಾಲತಾಣದಲ್ಲಿ ಪ್ರಿಯಾಂಕಾ ಚೋಪ್ರಾ (Priyanka Chopra) ಅವರ ಈ ಫೋಟೋಗಳು ಹರಿದಾಡುತ್ತಿದ್ದು, ಜನರು ಹುಬ್ಬೇರಿಸುತ್ತಿದ್ದಾರೆ. ಈ ಫೋಟೋ ಕುರಿತು ಸಾಕಷ್ಟು ಚರ್ಚೆಯಾಗುತ್ತಿವೆ. ಹೌದು. ಕನ್ನಡದ ಕುವರಿ ಪ್ರಿಯಾಂಕಾ ಹಾಗೂ ನಟಿ  ಆಲಿಯಾ ಭಟ್  ಜಗತ್ತಿನ ಅತ್ಯಂತ ಪ್ರತಿಷ್ಠಿತ ಫ್ಯಾಷನ್‌ ಇವೆಂಟ್‌ ಆದ ‘ಮೆಟ್‌ ಗಾಲಾ‘ಕ್ಕೆ (MET GALA)  ಎಂಟ್ರಿ ಪಡೆದಿದ್ದಾರೆ. ಇದೇ ಮೊದಲ ಬಾರಿಗೆ ಆಲಿಯಾ ಭಟ್‌ ಮೆಟಾ ಗಾಲಾಗೆ ಎಂಟ್ರಿ ಪಡೆದಿದ್ದಾರೆ. ಪ್ರಿಯಾಂಕಾ ಮೆಟ್ ಗಾಲಾ ಈವೆಂಟ್‌ನಲ್ಲಿ ಈ ಹಿಂದೆ ಹಲವು ಬಾರಿ ಕಾಣಿಸಿಕೊಂಡಿದ್ದಾರೆ ಮತ್ತು ಅವರ ನೋಟವು ಇನ್ನೂ ಜನರ ಕಣ್ಣುಗಳಲ್ಲಿ ಸೆರೆಹಿಡಿಯಲ್ಪಟ್ಟಿದೆ, ಆದರೆ ಈ ಬಾರಿ ಅವರ ನೋಟವು ಅತ್ಯಂತ ಅಮೂಲ್ಯವಾಗಿದೆ. ನಿಕ್ ಜೊನಾಸ್ ಜೊತೆಗಿನ ಅವಳ ಗ್ರ್ಯಾಂಡ್ ಎಂಟ್ರಿ ಎಲ್ಲರ ಮನಗೆದ್ದಿದೆ. 

ಪ್ರಿಯಾಂಕಾ ಚೋಪ್ರಾ ಈಗಾಗಲೇ ಈ ಕಾರ್ಯಕ್ರಮದ ರೆಡ್ ಕಾರ್ಪೆಟ್‌ನಲ್ಲಿ ತಮ್ಮ ಉಡುಪಿನೊಂದಿಗೆ ಕಾಣಿಸಿಕೊಂಡಿದ್ದು, ಅವರ ಉಡುಪಿನ ಬದಲು ಈಗ ನೆಕ್ಲೆಸ್​ನಿಂದಾಗಿ ಭಾರಿ ಸುದ್ದಿಯಲ್ಲಿದ್ದಾರೆ.  ಪ್ರಿಯಾಂಕಾ ಚೋಪ್ರಾ ಕಾರ್ಯಕ್ರಮಕ್ಕೆ ಆಗಮಿಸಿದಾಗ, ಅವರು ಕಪ್ಪು ಉಡುಪಿನಲ್ಲಿ ಅದ್ಭುತವಾಗಿ ಕಾಣುತ್ತಿದ್ದರು. ವ್ಯಾಲೆಂಟಿನೋ ಅವರ ಡಿಸೈನರ್ ಉಡುಪನ್ನು ಧರಿಸಿ, ಪ್ರಿಯಾಂಕಾ ಪತಿ ನಿಕ್ ಜೋನಾಸ್ ಅವರೊಂದಿಗೆ ಸಮಾರಂಭದಲ್ಲಿ ಭಾಗವಹಿಸಿದ್ದರು. ಬಿಳಿ ಕೈಗವಸು, ಎತ್ತರದ ಬನ್, ಬಲೂನ್ ಜಾಕೆಟ್ (Baloon Jacket) ಧರಿಸಿದ್ದ ಪ್ರಿಯಾಂಕಾ ತುಂಬಾ ರಾಯಲ್ ಆಗಿ ಕಾಣುತ್ತಿದ್ದರೂ ಅಷ್ಟರಲ್ಲಿ ಅವರ ನೆಕ್ಲೆಸ್​ ಎಲ್ಲರ ಗಮನ ಸೆಳೆಯಿತು. ಪ್ರತಿ ವರ್ಷದಂತೆ ಈ ವರ್ಷವೂ ಮೆಟ್‌ ಗಾಲಾ ಇವೆಂಟ್‌ ಆಯೋಜನೆಯಾಗಿದ್ದು, ಇಂದು ನ್ಯೂಯಾರ್ಕ್‌ನಲ್ಲಿ ಚಾಲನೆಗೊಂಡಿದೆ. ಈ ಬಾರಿಯ ಫ್ಯಾಷನ್‌ ಇವೆಂಟ್‌ನ ಥೀಮ್‌ 'ಕಾರ್ಲ್ ಲಾಗರ್ಫೆಲ್ಡ್: ಎ ಲೈನ್ ಆಫ್ ಬ್ಯೂಟಿ' ಆಗಿದೆ. 2019ರಲ್ಲಿ ನಿಧನರಾದ ಪ್ರಸಿದ್ಧ ವಸ್ತ್ರ ವಿನ್ಯಾಸಗಾರ ಕಾರ್ಲ್‌ ಲಾಗರ್ಫೆಲ್ಡ್‌ ಅವರು ಫ್ಯಾಷನ್‌ ಲೋಕಕ್ಕೆ (Fashion) ನೀಡಿದ ಕೊಡುಗೆಯನ್ನು ಸ್ಮರಿಸುವ ಉದ್ದೇಶದಿಂದ ಈ ಥೀಮ್‌ ಇಡಲಾಗಿದೆ ಎಂದು ಫ್ಯಾಷನ್‌ ಇವೆಂಟ್‌ನ ಆಯೋಜಕಿ ಅನ್ನಾ ವಿಂಟರ್ ತಿಳಿಸಿದ್ದಾರೆ.

Tap to resize

Latest Videos

ಬಾತ್​ರೂಮಲ್ಲಿ ಕದ್ದುಮುಚ್ಚಿ ಊಟ ಮಾಡಿದ ದಿನ ನೆನಪಿಸಿಕೊಂಡ Priyanka Chopra

ಜಗತ್ತಿನ ಹಲವಾರು ತಾರೆಗಳು ತಮ್ಮ ನೆಚ್ಚಿನ ಡಿಸೈಸರ್‌ಗಳ (Designer) ಡ್ರೆಸ್‌ಗಳನ್ನು ತೊಟ್ಟು ಮಿಂಚಿದ್ದಾರೆ. ಭಾರತದಿಂದ ಅಲಿಯಾ ಭಟ್‌, ಪ್ರಿಯಾಂಕಾ ಚೋಪ್ರಾ, ಇಶಾ ಅಂಬಾನಿ ಮತ್ತು ನಟಾಶಾ ಪೂನ್‌ವಾಲಾ ಭಾಗವಹಿಸಿದ್ದಾರೆ. ಅಷ್ಟಕ್ಕೂ ಪ್ರಿಯಾಂಕಾ ಅವರ ನೆಕ್ಲೆಸ್​ ಗಮನ ಸೆಳೆಯಲು ಕಾರಣ ಏನೆಂದರೆ, ಪ್ರಿಯಾಂಕಾ ಅವರು ಧರಿಸಿರುವ ಈ ನೆಕ್ಲೆಸ್​,  11.6 ಕ್ಯಾರೆಟ್‌ನ ವಜ್ರದ  ನೆಕ್ಲೆಸ್‌ ಆಗಿದೆ. ಇದರ  ಬೆಲೆ ಸುಮಾರು 204 ಕೋಟಿ ರೂಪಾಯಿ! ಪ್ರಿಯಾಂಕಾ ಚೋಪ್ರಾ ಈ ಡ್ರೆಸ್‌ನೊಂದಿಗೆ ಭಾರವಾದ ನೆಕ್ಲೇಸ್ ಅನ್ನು ಧರಿಸಿದ್ದು, ಅದರ ವೆಚ್ಚವು ಸದ್ಯಕ್ಕೆ ಎಲ್ಲರ ಕಣ್ಣು ಕುಕ್ಕಿಸುತ್ತಿದೆ. ಇದು ಬಲ್ಗೇರಿಯ ವಜ್ರದ ನೆಕ್ಲೇಸ್ ಆಗಿದ್ದು, ಇದರ ಬೆಲೆ 25 ಮಿಲಿಯನ್ ಯುಎಸ್ ಡಾಲರ್ ಅಂದರೆ 204 ಕೋಟಿ ಎಂದು ಹೇಳಲಾಗಿದೆ. ಈ ನೆಕ್ಲೆಸ್‌ನಲ್ಲಿರುವ ವಜ್ರವು(ಬ್ಲೂ ಲಗುನಾ) ಕಂಪೆನಿ ತಯಾರಿಸಿದ ವಜ್ರದಲ್ಲಿಯೇ ಅತಿ ದೊಡ್ಡ ವಜ್ರವಾಗಿದೆ. ಇದುವರೆಗೆ ಕಂಪೆನಿಯಿಂದ ಮಾರಾಟವಾದ ಅತ್ಯಮೂಲ್ಯ ಆಭರಣ ಇದಾಗಿದೆ ಎಂದು ಇಂಟರ್‌ನ್ಯಾಷನಲ್ ಜೆಮಲಾಜಿಕಲ್ ಇನ್‌ಸ್ಟಿಟ್ಯೂಟ್ ವರದಿ ಮಾಡಿದೆ. 

ಈ ನೆಕ್ಲೆಸ್‌ ಧರಿಸಿ ಪೋಟೋ ಶೂಟ್‌ ಮಾಡಿರುವ ಪ್ರಿಯಾಂಕಾ ತಮ್ಮ ಸಂತೋಷದ ಕ್ಷಣಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಪ್ರಿಯಾಂಕಾ ಚೋಪ್ರಾ ನೆಕ್ಲೆಸ್ ಬೆಲೆ ಕೇಳಿ ನೆಟ್ಟಿಗರು ಸುಸ್ತಾಗಿದ್ದಾರೆ.  ಇನ್ನೊಂದು ವಿಶೇಷತೆ ಎಂದರೆ, ಮೇ 12ರಂದು  ಈ ಡೈಮಂಡ್‌ ನೆಕ್ಲೆಸ್‌ ಹರಾಜು (Auction) ಆಗಲಿದೆಯಂತೆ!  

Malti Marie: ಮಗಳನ್ನು ಕಳೆದುಕೊಳ್ಳೋ ಭಯದಲ್ಲಿದ್ರಂತೆ ಪ್ರಿಯಾಂಕಾ ಚೋಪ್ರಾ

 

 
 
 
 
 
 
 
 
 
 
 
 
 
 
 

A post shared by Priyanka (@priyankachopra)

click me!