ನಾನು ಸ್ಟಾರ್ ಕಿಡ್ ಹೌದು, ಆದರೆ...: ನೆಪೋ ಕಿಡ್ ಎಂದು ಟೀಕಿಸಿದವರಿಗೆ ಅಲಿಯಾ ಖಡಕ್ ತಿರುಗೇಟು

Published : May 11, 2023, 09:37 AM IST
ನಾನು ಸ್ಟಾರ್ ಕಿಡ್ ಹೌದು, ಆದರೆ...: ನೆಪೋ ಕಿಡ್ ಎಂದು ಟೀಕಿಸಿದವರಿಗೆ ಅಲಿಯಾ ಖಡಕ್ ತಿರುಗೇಟು

ಸಾರಾಂಶ

ಸ್ಟಾರ್ ಕಿಡ್, ನೆಪೋ ಕಿಡ್ ಎಂದು ಟೀಕಿಸಿದವರಿಗೆ ನಟಿ ಅಲಿಯಾ ಭಟ್ ಸರಿಯಾಗಿ ತಿರುಗೇಟು ನೀಡಿದ್ದಾರೆ. 

ಕಳೆದ ಕೆಲವು ವರ್ಷಗಳಿಂದ ಸಿನಿಮಾರಂಗದಲ್ಲಿ ನೆಪೋಟಿಸಂ ವಿಚಾರವಾಗಿ ಚರ್ಚೆ ನಡೆಯುತ್ತಿದೆ. ಬಾಲಿವುಡ್‌ನ ಕೆಲವು ಸ್ಟಾರ್ ಕಿಡ್ ವಿರುದ್ಧ ಅನೇಕರು ಆಕ್ರೋಶ ಹೊರಹಾಕುಕ್ತಿದ್ದಾರೆ. ನಟಿ ಅಲಿಯಾ ಭಟ್ ವಿರುದ್ಧವೂ ಅನೇಕರು ಕಿಡಿ ಕಾರಿದ್ದರು. ನೆಪೋ ಕಿಡ್ ಎಂದು ಜರಿದಿದ್ದರು. ಇದೀಗ ಮತ್ತೆ ಅಲಿಯಾ ಭಟ್ ಸ್ಟಾರ್ ಕಿಡ್ ಚರ್ಚೆಯ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ನೆಪೋ ಕಿಡ್ ಎಂದವರಿಗೆ ಖಡಕ್ ತಿರುಗೇಟು ನೀಡಿದ್ದಾರೆ. ಸ್ಟಾರ್ ಕಿಡ್ ಎನ್ನುವ ಕಾರಣಕ್ಕೆ ಸಿನಿಮಾರಂಗದಲ್ಲಿ ಅವಕಾಶಗಳು ಸುಲಭವಾಗಿ ಸಿಕ್ಕಿತು, ಖ್ಯಾತ ನಿರ್ಮಾಪಕ ಹಾಗೂ ನಿರ್ದೇಶಕರ ಜೊತೆ ಕೆಲಸ ಮಾಡುವಂತಾಯಿತು ಎಂದು ಅಲಿಯಾ ಟೀಕೆಗಳನ್ನು ಎದುರಿಸಿದರು. 

ಈ ಬಗ್ಗೆ ಅಲಿಯಾ ಭಟ್ ಇದೀಗ ಪ್ರತಿಕ್ರಿಯೆ ನೀಡಿದ್ದಾರೆ. ಸ್ಟಾರ್ ಎನ್ನುವುದನ್ನು ಒಪ್ಪಿಕೊಳ್ಳುತ್ತೇನೆ ಆದರೆ ಹಾಗಂತ ತನ್ನ ಕೆಲಸವನ್ನು ಹಗುರವಾಗಿ ತೆಗೆದುಕೊಂಡಿಲ್ಲ ಎಂದು ಹೇಳಿದ್ದಾರೆ. ' ಕಳೆದ ಎರಡು ವರ್ಷಗಳಿಂದ ಈ ಮಾತು ಕೇಳುತ್ತಿದ್ದೇನೆ. ನಾನು ಸ್ಟಾರ್ ಕಿಡ್ ಆಗಿರುವುದರಿಂದ ನನಗೆ ಸುಲಭವಾಗಿ ಅವಕಾಶ ಸಿಕ್ಕಿತು ಎಂಬುದನ್ನು ನಾನು ಒಪ್ಪಿಕೊಳ್ಳುತ್ತೇನೆ. ನಾನು ನನ್ನ ಕನಸುಗಳನ್ನು ಮತ್ತೊಬ್ಬರ ಕನಸುಗಳಿಗೆ ಹೋಲಿಸುತ್ತೇನೆ. ಕನಸುಗಳಲ್ಲಿ ದೊಡ್ಡದು, ಚಿಕ್ಕದು ಎಂಬುದಿಲ್ಲ. ಎಲ್ಲರ ಕನಸುಗಳು ಒಂದೇ. ಎಲ್ಲರ ಆಸೆಯೂ ಒಂದೇ. ನನಗೆ ಸುಲಭವಾಗಿ ಎಂಟ್ರಿ ಕೊಟ್ಟೆ, ಸವಲತ್ತು ಸಿಕ್ಕಿದೆ ಎಂಬುದನ್ನು ಒಪ್ಪಿಕೊಳ್ಳುತ್ತೇನೆ. ಈ ಕಾರಣಕ್ಕೆ ನಾನು ನನ್ನ 100 ಪರ್ಸೆಂಟ್ ಶ್ರಮ ಹಾಕುತ್ತೇನೆ. ನನ್ನ ಕೆಲಸವನ್ನು ನಾನು ಎಂದಿಗೂ ಹಗುರವಾಗಿ ತೆಗೆದುಕೊಂಡಿಲ್ಲ' ಎಂದಿದ್ದಾರೆ ಆಲಿಯಾ.

Alia Bhatt: ತುಂಬಾ ತೊಂದ್ರೆ ಕೊಡ್ತಿದ್ದಾರೆ ನಿಮ್ ಮಗ ಎಂದ ಆಲಿಯಾ: ಇದ್ರೆ ಹೀಗಿರ್ಬೇಕೆಂದ ನೆಟ್ಟಿಗರು

ನಟಿ ಅಲಿಯಾ ಭಟ್ 2012ರಲ್ಲಿ ಸಿನಿಮಾರಂಗಕ್ಕೆ ಎಂಟ್ರಿ ಕೊಟ್ಟರು. ಕರಣ್ ಜೋಹರ್ ಅವರ ‘ಸ್ಟುಡೆಂಟ್ ಆಫ್ ದಿ ಇಯರ್’ ಸಿನಿಮಾ ಮೂಲಕ ಅಲಿಯಾ ಅದ್ದೂರಿಯಾಗಿ ಬಾಲಿವುಡ್‌ಗೆ ಪ್ರವೇಶ ಪಡೆದರು. ಮೊದಲ ಸಿನಿಮಾದಲ್ಲೇ ಎಲ್ಲರ ಗಮನ ಸೆಳೆದರು. ನಂತರದ ದಿನಗಳಲ್ಲಿ ಕೇವಲ ಗ್ಲಾಮರ್ ಪಾತ್ರಕ್ಕೆ ಮಾತ್ರ ಸೀಮಿತವಾಗಿರದೆ ವಿಭಿನ್ನ ಪಾತ್ರಗಳಲ್ಲಿ ಮಿಂಚಿದರು, ಅಭಿಮಾನಿಗಳನ್ನು ರಂಜಿಸಿದದರು. . ‘ಹೈವೇ’, ‘ಉಡ್ತಾ ಪಂಜಾಬ್​’, ‘ಡಿಯರ್ ಜಿಂದಗಿ’, ‘ರಾಜಿ’, ಗಂಗೂಬಾಯಿ ಕಾಠೀಯವಾಡಿ ಸೇರಿದಂತೆ ಅನೇಕ ವಿಭಿನ್ನ ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡರು. 

ಮೆಟ್ ಗಾಲಾ 2023: ಮುಂಬೈಗೆ ಮರಳಿದ ಆಲಿಯಾ ಭಟ್, ಹಾಡಿ ಹೊಗಳಿದ ಫ್ಯಾನ್ಸ್‌

ಅಲಿಯಾ ಭಟ್ ಸಿನಿಮಾರಂಗಕ್ಕೆ ಕಾಲಿಟ್ಟು 10 ವರ್ಷಗಳನ್ನು ಪೂರೈಸಿದ್ದಾರೆ. ಸಿನಿಮಾ ಜೀವನ ಉತ್ತುಂಗದಲ್ಲಿ ಇರುವಾಗಲೇ ಬಾಲಿವುಡ್ ಸ್ಟಾರ್ ರಣಬೀರ್ ಕಪೂರ್ ಜೊತೆ ದಾಂಪತ್ಯಕ್ಕೆ ಕಾಲಿಟ್ಟರು. ಮದುವೆಯಾಗಿ ವರ್ಷದೊಳಗೆ ಹೆಣ್ಣು ಮಗುವಿಗೆ ಜನ್ಮ ನೀಡಿದರು. ಸದ್ಯ ಮಗಳ ಆರೈಕೆ ಜೊತೆಗೆ ಅಲಿಯಾ ಸಿನಿಮಾದಲ್ಲೂ ಬ್ಯುಸಿಯಾಗಿದ್ದಾರೆ. ಬಾಲಿವುಡ್ ಜೊತೆಗೆ ಅಲಿಯಾ ಹಾಲಿವುಡ್‌ ಸಿನಿಮಾದಲ್ಲೂ ನಟಿಸಿದ್ದಾರೆ. ಹಾರ್ಟ್ ಆಫ್ ಸ್ಟೋನ್ ಸಿನಿಮಾ ಮೂಲಕ ಅಲಿಯಾ ಹಾಲಿವುಡ್‌ನಲ್ಲಿ ಮಿಂಚಲು ಸಜ್ಜಾಗಿದ್ದಾರೆ. ಅಲಿಯಾ ಸದ್ಯ ಕರಣ್ ಜೋಹರ್ ಅವರ ರಾಕಿ ಔರ್ ರಾಣಿ ಕು ಪ್ರೇಮ್ ಕಹಾನಿ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾಗೆ ಕರಣ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. ರಣ್ವೀರ್ ಸಿಂಗ್ ನಾಯಕನಾಗಿ ಕಾಣಿಸಿಕೊಂಡಿದ್ದಾರೆ. 
 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಬಾಲಿವುಡ್‌ ಈ ಸ್ಟಾರ್ ನಟಿಯರು ರಿಜೆಕ್ಟ್ ಮಾಡಿದ್ರು ಆ ಸಿನಿಮಾ; ಆದ್ರೆ ಮುಂದೆ ಅವರೆಲ್ಲರ ಲೈಫ್‌ನಲ್ಲಿ ಏನಾಯ್ತು?
ಅಪರಿಚಿತನಿಗೆ ಬಿಸ್ಕಿಟ್‌ ನೀಡಲು ಹೋಗಿ ಪೇಚಿಗೆ ಸಿಲುಕಿದ ಸಾರಾ ಅಲಿ ಖಾನ್