ಕನ್ಯಾ ರಾಶಿಯಲ್ಲಿ ಹುಟ್ಟಿರೋ ದೀಪಿಕಾ-ರಣವೀರ್‌ ಪುತ್ರಿ ಭವಿಷ್ಯ ಹೀಗಿರಲಿದೆಯಂತೆ!

Published : Sep 09, 2024, 04:08 PM ISTUpdated : Sep 09, 2024, 04:09 PM IST
ಕನ್ಯಾ ರಾಶಿಯಲ್ಲಿ ಹುಟ್ಟಿರೋ ದೀಪಿಕಾ-ರಣವೀರ್‌ ಪುತ್ರಿ ಭವಿಷ್ಯ ಹೀಗಿರಲಿದೆಯಂತೆ!

ಸಾರಾಂಶ

ಕನ್ಯಾ ರಾಶಿಯಲ್ಲಿ ಹುಟ್ಟಿರೋ ದೀಪಿಕಾ ಪಡುಕೋಣೆ ಮತ್ತು  ರಣವೀರ್‌ ಸಿಂಗ್‌ ಪುತ್ರಿ ಭವಿಷ್ಯ ಹೇಗಿರಲಿದೆ? ಸ್ವಭಾವ ಹೇಗಿದೆ? ಹೀಗಿದೆ ನೋಡಿ ಭವಿಷ್ಯ...  

ದೀಪಿಕಾ ಪಡುಕೋಣೆ ನಿನ್ನೆ ಅಂದ್ರೆ ಸೆಪ್ಟೆಂಬರ್‌ 8ರಂದು ಹೆಣ್ಣುಮಗುವನ್ನು ಬರಮಾಡಿಕೊಂಡಿದ್ದಾರೆ. ಈಕೆಗೆ ಗಂಡುಮಗು ಹುಟ್ಟಲಿದೆ ಎಂಬ ಸೆಲೆಬ್ರಿಟಿ ಜ್ಯೋತಿಷಿಯ ಮಾತು ಸುಳ್ಳಾಗಿದೆ. ಸೆಪ್ಟೆಂಬರ್‌ 28 ರಂದು ದೀಪಿಕಾ ಎಕ್ಸ್‌ ಬಾಯ್‌ಫ್ರೆಂಡ್‌ ರಣಬೀರ್‌ ಕಪೂರ್‌ ಹುಟ್ಟಿದ ದಿನವೇ ದೀಪಿಕಾ ಮಗುನೂ ಹುಟ್ಟಲಿದೆ ಎಂಬ ಸುದ್ದಿಯೂ ಸುಳ್ಳಾಗಿದ್ದು, 20 ದಿನ ಮುಂಚೆಯೇ ಮಗು ಜನಿಸಿದೆ. ದೀಪಿಕಾರದ್ದು ಫೇಕ್‌ ಹೊಟ್ಟೆ ಎಂದು ತುಂಬು ಗರ್ಭಿಣಿಯವರೆಗೂ ಹೇಳಿಕೊಂಡು ಬಂದಿರೋ ದೊಡ್ಡ ವರ್ಗವೇ ಇದೆ. ಅದರ ನಡುವೆಯೂ ಇದೀಗ ಎಲ್ಲರ ಬಾಯಿ ಮುಚ್ಚಿಸಿದ್ದಾರೆ ನಟಿ. 

ಇವೆಲ್ಲವುಗಳ ನಡುವೆ, ದೀಪಿಕಾ ಪುತ್ರಿಗೆ ಏನು ಹೆಸರು ಇಡಬಹುದು ಎಂಬ ಬಗ್ಗೆ ಸೋಷಿಯಲ್‌ ಮೀಡಿಯಾದಲ್ಲಿ ಭಾರಿ ಚರ್ಚೆ ಶುರುವಾಗಿದೆ.  ಹೆಸರಿನ ನಂತರ ಇದೀಗ ದೀಪ್‌ವೀರ್‌ ದಂಪತಿಯ  ಮಗಳ ಜಾತಕ ಸಾಮಾಜಿಕ ಜಾಲತಾಣಗಳಲ್ಲಿ ಟ್ರೆಂಡಿಂಗ್ ಆಗಿದೆ. 8 ಸೆಪ್ಟೆಂಬರ್ 2024 ರಂದು ಮಗುವಿನ ಜನನವಾಗಿದೆ.  ಈ ಸಂದರ್ಭದಲ್ಲಿ ಆಕೆಯ ರಾಶಿಯು ಕನ್ಯಾ ರಾಶಿಯಾಗಿರುತ್ತದೆ. ರಾಶಿಚಕ್ರ ಚಿಹ್ನೆಯ ಪ್ರಕಾರ, ಅವಳು ತುಂಬಾ ತಾರ್ಕಿಕವಾಗಿ ಯೋಚಿಸುತ್ತಾಳೆ, ಜೀವನದಲ್ಲಿ ಪ್ರಾಯೋಗಿಕ ರೀತಿಯಲ್ಲಿ ಮುನ್ನಡೆಯುತ್ತಾಳೆ ಮತ್ತು ತನ್ನ ನಿರ್ಧಾರಗಳಲ್ಲಿ ತುಂಬಾ ವ್ಯವಸ್ಥಿತವಾಗಿ ಇರುತ್ತಾಳೆ ಎನ್ನಲಾಗಿದೆ.

ದೀಪಿಕಾ ವಿಷ್ಯದಲ್ಲಿ ಸುಳ್ಳಾಯ್ತು ಸೆಲೆಬ್ರಿಟಿ ಜ್ಯೋತಿಷಿ ಭವಿಷ್ಯ! ರಾಜಯೋಗದ ಕಥೆಯೇನು ಕೇಳ್ತಿರೋ ಫ್ಯಾನ್ಸ್​...

ಇಷ್ಟೇ ಅಲ್ಲದೇ, ಮಗು  ತಾಯಿ ದೀಪಿಕಾರಂತೆ ತನ್ನ ಕೆಲಸದ ಬಗ್ಗೆ ಪರಿಪೂರ್ಣತಾವಾದಿಯಾಗಿರುತ್ತಾಳೆ. ಅನೇಕ ವಿಷಯಗಳಲ್ಲಿ ಅವಳು ತನ್ನ ಹೃದಯದಿಂದ ಯೋಚಿಸುತ್ತಾಳೆಯೇ ವಿನಾ ತಲೆಯಿಂದ ಅಲ್ಲ.  ಅವಳು ತನ್ನ ಕೆಲಸದ ಆಧಾರದ ಮೇಲೆ ಜಗತ್ತಿನಲ್ಲಿ   ಹೆಸರನ್ನು ಗಳಿಸುತ್ತಾಳೆ ಎಂದು ಭವಿಷ್ಯ ನುಡಿಯಲಾಗಿದೆ.  ಕನ್ಯಾ ರಾಶಿಯವರು ಅತ್ಯುತ್ತಮ ಶಿಕ್ಷಕರು, ವೈದ್ಯರು, ಸಂಪಾದಕರು ಅಥವಾ ಫೇಮಸ್‌  ಸಂಗೀತಗಾರರು ಆಗಿರುತ್ತಾರೆ.  ಇದೀಗ, ಸೋಷಿಯಲ್ ಮೀಡಿಯಾದಲ್ಲಿ ಬಳಕೆದಾರರು ದೀಪಿಕಾ-ರಣವೀರ್ ಮಗಳ ಮೊದಲ ನೋಟಕ್ಕಾಗಿ ಕಾಯುತ್ತಿದ್ದಾರೆ. ಪ್ರತಿಯೊಬ್ಬರೂ ಅವಳ ಮೊದಲ ಚಿತ್ರವನ್ನು ನೋಡಲು ಬಯಸುತ್ತಾರೆ. ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ಮದುವೆಯಾದ 6 ವರ್ಷಗಳ ನಂತರ ಮಗು ಹುಟ್ಟಿದೆ.  ಸದ್ಯ ದೀಪಿಕಾ ಆಸ್ಪತ್ರೆಯಲ್ಲಿದ್ದು, ಶೀಘ್ರದಲ್ಲೇ ಡಿಸ್ಚಾರ್ಜ್ ಆಗುವ ಸಾಧ್ಯತೆ ಇದೆ.
 
 ದೀಪಿಕಾ ಪಡುಕೋಣೆ ಜೊತೆ ಮದುವೆಯಾದ ನಂತರ, ರಣವೀರ್ ಸಿಂಗ್ ಹೆಣ್ಣು ಮಗುವಿನ ತಂದೆಯಾಗಲು ಬಯಸಿದ್ದರು. ಬಾಲಿವುಡ್ ಬಬಲ್‌ನೊಂದಿಗಿನ ಅವರ ಸಂದರ್ಶನವೊಂದರಲ್ಲಿ, ರಣವೀರ್ ಅವರು ಮಿನಿ ದೀಪಿಕಾಳನ್ನು ಬಯಸುತ್ತೇನೆ ಎಂದಿದ್ದರು.  ಮತ್ತೊಂದು ಸಂದರ್ಶನದಲ್ಲಿ, ರಣವೀರ್ ಅವರು ಹೆಣ್ಣು ಮಗುವಾಗಿದ್ದಾಗ ದೀಪಿಕಾ ಹೇಗೆ ತುಂಬಾ ಮುದ್ದಾಗಿ ಕಾಣುತ್ತಿದ್ದರು ಮತ್ತು ಅವರಂತಹ ಮಗಳನ್ನು ಹೊಂದಲು ಅವರು ಯಾವಾಗಲೂ ಬಯಸುತ್ತಾರೆ ಎಂದು ಬಹಿರಂಗಪಡಿಸಿದ್ದರು.

13 ದಿನದ ಶಮಿಕಾಳ ಉಸಿರು ನಿಂತಾಗ ನಡೆದಿತ್ತು ಪವಾಡ: ವಿಚಿತ್ರ ಘಟನೆ ನೆನಪಿಸಿದ ರಾಧಿಕಾ ಕುಮಾರಸ್ವಾಮಿ
 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ವೃತ್ತಿಜೀವನದಲ್ಲಿ 2 ಬಾರಿ ದೊಡ್ಡ ತಪ್ಪು ಮಾಡಿದ ರಾಮ್ ಚರಣ್.. ಚಿರಂಜೀವಿಯೂ ಏನೂ ಮಾಡಲಾಗಲಿಲ್ಲವೇ?
10 ಭಾಷೆಗಳಲ್ಲಿ 90 ಸಿನಿಮಾಗಳು, ಗಂಗೂಲಿ ಜೊತೆ ಅಫೇರ್ ವದಂತಿ.. 50 ವರ್ಷವಾದರೂ ಮದುವೆಯಾಗದ ನಟಿ ಯಾರು?