ಮಲ್ಲಿಕಾ ಶೆರಾವತ್‌ಗೂ ಬರಾಕ್‌ ಒಬಾಮಾಗೂ ಏನ್‌ ಸಂಬಂಧ?

Suvarna News   | Asianet News
Published : Oct 03, 2020, 04:35 PM IST
ಮಲ್ಲಿಕಾ ಶೆರಾವತ್‌ಗೂ ಬರಾಕ್‌ ಒಬಾಮಾಗೂ ಏನ್‌ ಸಂಬಂಧ?

ಸಾರಾಂಶ

ಮಲ್ಲಿಕಾ ಶೆರಾವತ್ ಎಂಬ ಒಂದು ಕಾಲದ ಬಾಂಬ್‌ಶೆಲ್, ಈಗ ಏನು ಮಾಡುತ್ತಿದ್ದಾಳೆ ಎಂದು ಕೇಳ್ತೀರಾ? ಬರಾಕ್ ಒಬಾಮ ಜತೆ ಮರಳಿ ಬಂದಿದ್ದಾಳೆ.  

ಮಲ್ಲಿಕಾ ಶೆರಾವತ್ ಅಂದರೆ ಮರ್ಡರ್ ನೆನಪಾಗುತ್ತದೆ, ರಿಯಲ್ ಮರ್ಡರ್ ಅಲ್ಲ ಕಣ್ರೀ, ಆಕೆಯ ಪಾಪ್ಯುಲರ್ ಮರ್ಡರ್ ಫಿಲಂ. ಅದರಲ್ಲಿ ಆಕೆ ಹಾಗೂ ಇಮ್ರಾನ್ ಹಶ್ಮಿಯ ಹಸಿಬಿಸಿ ದೃಶ್ಯಗಳು, ಡೀಪ್ ಸ್ಮೂಚಿಂಗ್ ದೃಶ್ಯಗಳನ್ನು ನೋಡಿ ನೀವು ಕೈಕೈ ಹಿಸುಕಿಕೊಂಡಿರಬಹುದು. ಇದು ೨೦೦೪ನೇ ಇಸವಿಯಲ್ಲಿ ಬಂತು. ಆಗ ಆಕೆ ಪಡ್ಡೆ ಹುಡುಗರ ಎದೆಯ ಲಯ ಕೆಡಿಸುವ ಬಾಂಬ್‌ಶೆಲ್‌ ಆಗಿದ್ದಳು. ಅಂಥ ಮಲ್ಲಿಕಾ ಶೆರಾವತ್ ಈಗ ಏನ್ ಮಾಡ್ತಿದಾಳೆ?

ಇತ್ತೀಚೆಗೆ ಬಂದಿರುವ ಸುದ್ದಿಯ ಪ್ರಕಾರ, ಈಕೆ ಹೊಸ ಹಾಲಿವುಡ್ ಚಿತ್ರದಲ್ಲಿ ನಟಿಸುತ್ತಿದ್ದಾಳೆ. ಅದರ ಹೆಸರು ಪಾಲಿಟಿಕ್ಸ್ ಆಫ್‌ ಲವ್. ಇದರಲ್ಲಿ ಆಕೆಯ ಹೆಸರು ಅರೇತಾ ಗುಪ್ತಾ. ಈ ಫಿಲಂನ ಬಗ್ಗೆ ಮಲ್ಲಿಕಾ ಇನ್‌ಸ್ಟಗ್ರಾಮ್‌ನಲ್ಲಿ ಹಾಕಿಕೊಂಡಿರುವ ಪೋಟೊದಲ್ಲಿ, ಅಮೆರಿಕದ ಮಾಜಿ ಪ್ರೆಸಿಡೆಂಟ್ ಬರಾಕ್‌ ಒಬಾಮ ಅವರ ದೊಡ್ಡ ಕಟೌಟ್‌ ಒಂದನ್ನು ಹಿಡಿದುಕೊಂಡಿದ್ದಾಳೆ. ಈ ಮೂವಿಯಲ್ಲಿ ಮಲ್ಲಿಕಾ ಮಾಡುವ ಪಾತ್ರಕ್ಕೆ ಬರಾಕ್ ಒಬಾಮ ಎಂದರೆ ಸಿಕ್ಕಾಪಟ್ಟೆ ಕ್ರಶ್ಶು. ಅವಳು ಹಿಡಿದುಕೊಂಡಿರುವ ಕಟೌಟ್‌ನಲ್ಲಿ ಒಬಾಮ ಕೆನ್ನೆಯ ಮೇಲೆ ಈಕೆಯ ತುಟಿಯ ಲಿಪ್‌ಸ್ಟಿಕ್ ಗುರುತುಗಳನ್ನೂ ನೀವು ನೋಡಬಹುದು. ಅಮೆರಿಕದ ಮೊದಲ ಬ್ಲ್ಯಾಕ್ ಪ್ರೆಸಿಡೆಂಟ್ ಅಂದರೆ ಆಕೆಗೆ ಜೀವವಂತೆ. 



ಇಷ್ಟು ವರ್ಷ ಮಲ್ಲಿಕಾ ಏನ್ ಮಾಡ್ತಿದ್ದಳು? ಈಕೆಗೆ ಸೂಕ್ತವಾದ ಫಿಲಂಗಳು ಬಾಲಿವುಡ್‌ನಲ್ಲಿ ದೊರೆಯಲೇ ಇಲ್ಲವಂತೆ. ಸಿಕ್ಕಿದ್ದೂ ಈಕೆಗೆ ಹೊಂದಿಕೆಯಾಗಿರಲಿಲ್ಲ. ಬಾಲಿವುಡ್‌ನ ಹೀರೋಗಳು ತಮ್ಮ ಫಿಲಂಗಳಿಗೆ ತಮ್ಮ ಪ್ರೇಯಸಿಯರನ್ನೇ ಹಾಕಿಕೊಳ್ಳಲು ಆರಂಭಿಸಿದ್ದಾರೆ. ಹೀಗಾಗಿ ನನಗೆ ಯಾವ ರೋಲೂ ಸಿಗ್ತಿಲ್ಲ ಎಂಬ ದೂರನ್ನೂ ಆಕೆ ಹೇಳಿದ್ದಾಳೆ. ಬಾಲಿವುಡ್‌ನಲ್ಲಿ ಹೆಚ್ಚಾಗಿ ಕೇಳಿಸುತ್ತಿರುವ ನೆಪೊಟಿಸಂ ಹಿನ್ನೆಲೆಯಲ್ಲಿ ಆಕೆಯ ಈ ಮಾತನ್ನು ಗಮನಿಸಬಹುದು.

ಅನುಶ್ರೀ ಅರೆಸ್ಟ್ ತಡೆಯುತ್ತಿರುವ ಆ 'ಶುಗರ್ ಡ್ಯಾಡಿ' ಯಾರು? ...

ಮರ್ಡರ್ ನಂತರವೂ ಕೆಲವು ಫಿಲಂಗಳಲ್ಲಿ ಮಲ್ಲಿಕಾ ಕಾಣಿಸಿಕೊಂಡಿದ್ದುಂಟು, ಪ್ಯಾರ್ ಕೆ ಸೈಡ್ ಎಫೆಕ್ಟ್ಸ್, ಡರ್ಟಿ ಪಾಲಿಟಿಕ್ಸ್, ಖ್ವಾಹಿಶ್ ಮುಂತಾದವುಗಳಲ್ಲಿ ಕೂಡ ಈ ಕಾಣಿಸಿಕೊಂಡಿದ್ದಳು. ಎಲ್ಲದರಲ್ಲೂ ಬೋಲ್ಡ್ ಲುಕ್ಕಿನೊಂದಿಗೆ ತನ್ನ ಅಭಿಮಾನಿಗಳಿಗೆ ಚಮಕ್ ಕೊಟ್ಟಿದ್ದಳು. ನಂತರ ಜಾಕಿ ಚಾನ್‌ನ ದಿ ಮಿಥ್ ಎನ್ನುವ ಕಾಮಿಡಿ ಕಂ ಥ್ರಿಲ್ಲರ್ ಚಿತ್ರದಲ್ಲೂ ಕಾಣಿಸಿಕೊಂಡಳು. ಅದರಲ್ಲಿ ಈಕೆಯ ಬಟ್ಟೆ ಕಳಚಿಹೋಗಿ ಜಾಕಿಗೆ ತನ್ನ ಎದೆಯನ್ನು ಮಲ್ಲಿಕಾ ಕಾಣಿಸುವ ಒಂದು ಸೀನು ಇತ್ತು. ಆ ಸೀನ್‌ನಲ್ಲಿ ಇಂಗ್ಲಿಷ್ ಚಿತ್ರರಸಿಕರನ್ನೂ ಮಲ್ಲಿಕಾ ರೋಮಾಂಚಿತಗೊಳಿಸಿದ್ದಳು. ಕಳೆದ ಬಾರಿ ಈಕೆ ನಟಿಸಿದ್ದು ಏಕ್ತಾ ಕಪೂರ್ ನಿರ್ಮಾಣದ ಬೂ ಸಬ್‌ಕೀ ಫಟೇಗಿ ಸಿನಿಮಾದಲ್ಲಿ. ಅದರಲ್ಲಿ ಈಕೆ ನಡೆದಾಡುವ ಭೂತವಾಗಿದ್ದಳು. 

ಮಲೈಕಾ ಅರೋರಾ ಥರವೇ ಮಲ್ಲಿಕಾ ಶೆರಾವತ್ ಕೂಡ ಇನ್‌ಸ್ಟಗ್ರಾಮ್‌ನಲ್ಲಿ ಸಕತ್ ಆಕ್ಟಿವ್.  ಮಲೈಕಾ ಥರವೇ ಯೋಗಾಸನಗಳನ್ನು ಮಾಡಿ, ಅವುಗಳನ್ನು ಕ್ಲಿಕ್ಕಿಸಿ ಅಪ್‌ಲೋಡ್ ಮಾಡಿ, ಆಸಕ್ತರಿಗೆ ಅವುಗಳ ಬಗ್ಗೆ ಪಾಠ ಮಾಡುತ್ತಾಳೆ. ಆರೋಗ್ಯಕ್ಕೆ ಇದು ಎಷ್ಟು ಮುಖ್ಯ, ಎಷ್ಟು ಆರೋಗ್ಯಕಾರಿ ಎಂಬುದನ್ನೆಲ್ಲ ಮಲ್ಲಿಕಾಳ ಆರೋಗ್ಯಕರ ಫಳಪಳ ಹೊಳೆಯುವ ಶರೀರವನ್ನು ನೋಡುತ್ತಲೇ ಕಲಿಯಬಹುದು. 

ಪ್ರಿಯಾಂಕ ಚೋಪ್ರಾ ಬರೆದ Unfinished ಫಸ್ಟ್ ಲುಕ್..! 

ಮಲ್ಲಿಕಾಳ ತಲೆಮಾರಿನ ಅನೇಕ ನಟಿಯರು ಈಗ ತೆರೆಮರೆಯಲ್ಲಿ ಇದ್ದಾರೆ. ರಾಣಿ ಮುಖರ್ಜಿ, ಪ್ರೀತಿ ಜಿಂಟಾ, ಊರ್ಮಿಳಾ ಮಾತೋಂಡ್ಕರ್, ಮನೀಷಾ ಕೊಯಿರಾಲ ಮುಂತಾದವರು ಹೆಸರಿಸಬಹುದಾದ ಕೆಲವರು. ಆದರೆ ಮಲ್ಲಿಕ ಇವರಂತೆ ಸುಮ್ಮನಿಲ್ಲ. ಏನಾದರೂ ಒಂದು ಮಾಡುತ್ತಲೇ ಇರುತ್ತಾಳೆ. ಮುಖ್ಯವಾಗಿ ಹಾಲಿವುಡ್ ಸರ್ಕಲ್‌ನಲ್ಲಿ ಅಡ್ಡಾಡುವುದು, ಇಂಗ್ಲಿಷ್ ಚಿತ್ರಗಳಲ್ಲಿ ನಟಿಸುವ ಅವಕಾಶ ಪಡೆಯುವುದು ಈಕೆಯ ಹಾಬಿಗಳಲ್ಲಿ ಒಂದು. 

ಕಳ್ಳತನದ ಆರೋಪ ಎದುರಿಸಿದ ಕಿರುತೆರೆ ನಟಿ ಇಂದು ಬಾಲಿವುಡ್ ಸ್ಟಾರ್‌! 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಮಾಧುರಿಗೆ 'ನಿನ್ನನ್ನು ತಾಯಿಯಾಗಿ ನೋಡುತ್ತೇನೆ' ಎಂದಿದ್ದ ಎಂಎಫ್ ಹುಸೇನ್; ಆದ್ರೆ ಮುಂದೆ ಆಗಿದ್ದೇನು?
ಮದುವೆ ಮುರಿದುಬಿದ್ದ ಬಳಿಕ ಸ್ಮೃತಿ ಮಂಧಾನ-ಪಲಾಶ್ ಲೈಫ್‌ ಸ್ಟೈಲ್‌ನಲ್ಲಿ ಏನೆಲ್ಲಾ ಆಗೋಯ್ತು ನೋಡಿ...!