The Kashmir Files: ಕಾಶ್ಮೀರ ಫೈಲ್ಸ್ ಸಿನಿಮಾದ ಪುಷ್ಕರನಾಥ ಪಂಡಿತರು ಅನುಭವಿಸಿದ ಕಾಯಿಲೆ, ಯಾವುದದು?

Published : Mar 15, 2022, 04:16 PM IST
The Kashmir Files: ಕಾಶ್ಮೀರ ಫೈಲ್ಸ್ ಸಿನಿಮಾದ ಪುಷ್ಕರನಾಥ ಪಂಡಿತರು ಅನುಭವಿಸಿದ ಕಾಯಿಲೆ, ಯಾವುದದು?

ಸಾರಾಂಶ

ದಿ ಕಾಶ್ಮೀರ ಫೈಲ್ಸ್ ಸಿನಿಮಾದ ಅನುಪಮ್ ಖೇರ್ ಅವರ ಪಾತ್ರ ಪುಷ್ಕರನಾಥ ಪಂಡಿತ್, ಇಳಿವಯಸ್ಸಿನಲ್ಲಿ ಅನುಭವಿಸುವ ಆ ವಿಶಿಷ್ಟ ಕಾಯಿಲೆಯಾದರೂ ಯಾವುದು?  

ದಿ ಕಾಶ್ಮೀರ ಫೈಲ್ಸ್ ಸಿನಿಮಾ ತುಂಬಾ ಸದ್ದು ಮಾಡುತ್ತಿದೆ. ಇದರಲ್ಲಿ ಅನುಪಮ್ ಖೇರ್ ಅವರು ಅಭೀನಯಿಸಿ ಜೀವ ತುಂಬಿರುವ ಪುಷ್ಕರನಾಥ ಪಂಡಿತ್ ಎಂಬ ಪಾತ್ರ ಎಲ್ಲರ ಮನಸ್ಸನ್ನು ಗೆಲ್ಲುತ್ತದೆ. ಹೃದಯ ಆರ್ದ್ರಗೊಳಿಸುತ್ತದೆ. ಕಾಶ್ಮೀರದಲ್ಲಿ ನಡೆದ ಪಂಡಿತರ ಹತ್ಯಾಕಾಂಡದ ಪ್ರತ್ಯಕ್ಷ ಸಾಕ್ಷಿ ಮತ್ತು ಅದರ ಬಲಿಪಶು ಕೂಡ. ಸ್ವತಃ ಅನುಪಮ್ ಖೇರ್ ಅವರು ಕೂಡ ಪಂಡಿತ ಸಮುದಾಯದ ಹಿನ್ನೆಲೆಯವರು ಆದುದರಿಂದ ಈ ಪಾತ್ರಕ್ಕೆ ಜೀವ ತುಂಬಿ ನಟಿಸಿದ್ದಾರೆ. ಪುಷ್ಕರನಾಥರು ಕಾಶ್ಮೀರದಲಲ್ಇ ಹೇರಲಾಗಿದ್ದ ಸೆಕ್ಷನ್ ೩೭೦ನ್ನು ರದ್ದುಗೊಳಿಸಬೇಕು ಎಂದು ಪ್ರತಿಭಟನೆ ನಡೆಸುತ್ತಿರುತ್ತಾರೆ.

ಈ ವ್ಯಕ್ತಿ ಡಿಮೆನ್ಷಿಯಾ ಎಂಭ ಮರೆವಿನ ಕಾಯಿಲೆಯಿಂದ ನರಳುತ್ತಿರುತ್ತಾರೆ. ಏನಿದು ಡಿಮೆನ್ಷಿಯಾ?

ನಮ್ಮಲ್ಲಿ ಕೆಲವರು ಈ ಕಾಯಿಲೆಯಿಂದ ನರಳುವುದನ್ನು ನೀವು ನೋಡಿರಬಹುದು. ಅಗಾಧ ಮರೆವು ವ್ಯಕ್ತಿಯನ್ನು ಆವರಿಸುವುದರಿಂದ ದೈನಂದಿನ ಕಾರ್ಯಗಳೂ ಕಷ್ಟಕರವಾಗಿ, ಕಡೆಕಡೆಗೆ ತಾನು ಯಾರು ಎಂಬುದು ಕೂಡ ವ್ಯಕ್ತಿಗೆ ಮರೆತುಹೋಗುತ್ತದೆ. ಡಿಮೆನ್ಷಿಯಾ ಎಂಬುದು ಒಂದು ಮನೋರೋಗವಲ್ಲ. ಹಲವಾರು ಮಾನಸಿಕ ಸಮಸ್ಯೆಗಳ ಒಂದು ಸಮೂಹ. ಮರೆಗುಳಿತನ ಇದರಲ್ಲಿ ಪ್ರಧಾನ. ನಿಮ್ಮ ನೆನಪಿನ ಶಕ್ತಿ, ಆಲೋಚನೆ ಮತ್ತು ಸಾಮಾಜಿಕ ಸಾಮರ್ಥ್ಯಗಳ ಮೇಲೆ ಪರಿಣಾಮ ಬೀರುತ್ತದೆ. ವ್ಯಕ್ತಿಯ ದೈನಂದಿನ ಚಟುವಟಿಕೆಗಳನ್ನು ಸ್ವತಂತ್ರವಾಗಿ ಮತ್ತು ಸುರಕ್ಷಿತವಾಗಿ ನಿರ್ವಹಿಸುವ ಸಾಮರ್ಥ್ಯ ಕಳೆದುಹೋಗುತ್ತದೆ. ಡಿಮೆನ್ಶಿಯಾ ಸುಮಾರು ಶೇ.5ರಿಂದ 7ರಷ್ಟು ಹಿರಿಯ ನಾಗರಿಕರ ಮೇಲೆ ಪರಿಣಾಮ ಬೀರುತ್ತದೆ. ವಯಸ್ಸಾದಂತೆ ಡಿಮೆನ್ಶಿಯಾದ ಆಳ ಹೆಚ್ಚಾಗುತ್ತದೆ.

The Kashmir Files: ಕಾಶ್ಮೀರಿ ಪಂಡಿತರ ಹತ್ಯೆ ನಂತರ ಅನುಪಮ್‌ ಖೇರ್‌ ನನ್ನಲ್ಲಿ ಕಣ್ಣೀರುಗರೆದು ನೆರವು ಕೇಳಿದ್ರು: ಅನಂತನಾಗ್‌

ಬೇಗನೆ ಗುರುತಿಸಬೇಕು

ಡಿಮೆನ್ಶಿಯಾದ ಬಗ್ಗೆ ಅರ್ಥಮಾಡಿಕೊಳ್ಳಬೇಕೆಂದರೆ ಅದರ ಕಾರಣ ಮತ್ತು ರೋಗಲಕ್ಷಣಗಳ ಬಗ್ಗೆ ತಿಳಿದುಕೊಳ್ಳಬೇಕು. ಮರೆಗುಳಿತನ ಕಾಯಿಲೆಯು ಡಿಮೆನ್ಶಿಯಾದ ಸಾಮಾನ್ಯ ವಿಧಗಳಲ್ಲಿ ಒಂದಾಗಿದೆ. ಡಿಮೆನ್ಶಿಯಾವು ಸಾಮಾನ್ಯವಾಗಿ ಪಾರ್ಕಿನ್ಸನ್ ಕಾಯಿಲೆ, ಅಲ್ಝೀಮರ್ಸ್, ಪಾರ್ಶ್ವವಾಯು ಮುಂತಾದ ಕಾಯಿಲೆಗಳ ಜೊತೆಗೆ ಸಂಬಂಧಿಸಿದೆ. ಇದರಲ್ಲಿ ಪ್ರತಿಯೊಂದು ಕಾಯಿಲೆಯ ಜೊತೆಗೆ ನಂಟು ಕೂಡ ಡಿಮೆನ್ಷಿಯಾದ ಬೇರೆ ಬೇರೆ ಲಕ್ಷಣಗಳನ್ನು ಕೊಡುವುದುಂಟು. ಅಂದರೆ ಡಿಮೆನ್ಷಿಯಾದ ಜೊತೆಗೆ ಇನ್ಯಾವುದೋ ಒಂದು ಗಂಭೀರ ಸಮಸ್ಯೆ ವ್ಯಕ್ತಿಯನ್ನು ಕಾಡುತ್ತಿರುವುದು ಸಾಮಾನ್ಯ. ಕೆಲವು ಸಂದರ್ಭಗಳಲ್ಲಿ ಸೋಂಕುಗಳು ಅಥವಾ ವಿಟಮಿನ್‌ಗಳ ಕೊರತೆಯಿಂದ ಡಿಮೆನ್ಶಿಯಾ ರೋಗಲಕ್ಷಣಗಳು ಸಂಭವಿಸಬಹುದು. ಅದನ್ನು ನಿಯಂತ್ರಿಸಬಹುದು ಅಥವಾ ಸರಿಪಡಿಸಬಹುದು. ಇದೇ ಕಾರಣಕ್ಕಾಗಿ, ಡಿಮೆನ್ಶಿಯಾದ ಆರಂಭಿಕ ಹಂತದ ಗುರುತಿಸುವಿಕೆ ಬಹಳ ಆವಶ್ಯಕ.

ಡಿಮೆನ್ಶಿಯಾದ ಲಕ್ಷಣಗಳು

1. ನೆನಪಿನ ಶಕ್ತಿಯ ಕ್ಷೀಣತೆ. ಉದಾಹರಣೆಗೆ ಇತ್ತೀಚೆಗೆ ಕಲಿತ ಮಾಹಿತಿ, ಪ್ರಮುಖ ದಿನಾಂಕಗಳು ಅಥವಾ ಘಟನೆಗಳು ಮರೆತುಹೋಗುವುದು. ಒಂದೇ ರೀತಿಯ ಪ್ರಶ್ನೆಗಳನ್ನು ಪದೇ ಪದೆ ಕೇಳುವುದು. ತಮ್ಮ ಕೆಲಸಗಳಿಗೆ ಕುಟುಂಬದವರನ್ನು ಅವಲಂಬಿಸುವುದು.

2. ಗಮನ ಕೇಂದ್ರೀಕರಿಸುವಲ್ಲಿ ತೊಂದರೆ. ತಮ್ಮ ಕೆಲಸಗಳನ್ನು ಮಾಡಲು ಮೊದಲಿಗಿಂತ ಹೆಚ್ಚು ಸಮಯವನ್ನು ತೆಗೆದುಕೊಳ್ಳುವುದು.

3. ತಮಗೆ ತಿಳಿದಿರುವ ಕೆಲಸಗಳನ್ನು ಪೂರ್ಣಗೊಳಿಸುವಲ್ಲಿ ತೊಂದರೆ. ಪರಿಚಿತ ಸ್ಥಳದಲ್ಲಿ ತಮ್ಮ ದಾರಿಯನ್ನು ಕಂಡುಕೊಳ್ಳುವಲ್ಲಿ ತೊಂದರೆ, ದಿನಸಿ ಪಟ್ಟಿ ತಯಾರಿಸುವಲ್ಲಿ ಅಥವಾ ತಮ್ಮ ನೆಚ್ಚಿನ ಆಟದ ನಿಯಮಗಳನ್ನು ನೆನಪಿಟ್ಟುಕೊಳ್ಳುವಲ್ಲಿ, ತಮಗೆ ತಿಳಿದಿರುವ ಅಡುಗೆ ಮಾಡಲು ಅಥವಾ ತಿಂಗಳ ಬಿಲ್‌ಗಳನ್ನು ಜೋಡಿಸಲು ತೊಂದರೆ.

4. ಸಮಯ ಅಥವಾ ಸ್ಥಳಗಳಲ್ಲಿ ಗೊಂದಲ. ದಿನಾಂಕಗಳನ್ನು, ಕಾಲ ಮತ್ತು ಸಮಯವನ್ನು ಗಮನದಲ್ಲಿಟ್ಟುಕೊಳ್ಳುವಲ್ಲಿ ವಿಫಲರಾಗುವುದು. ಆಯಾ ದಿನದ ಸಮಯ, ತಾರೀಕು ಅಥವಾ ತಿಂಗಳು ಹೇಳಲು ಸಾಧ್ಯವಾಗದಿರುವುದು.

5. ಮಾತನಾಡಲು ಅಥವಾ ಬರೆಯಲು ತೊಂದರೆ. ತಿಳಿದಿರುವ ವಸ್ತುವಿಗೆ ಪದ ಹುಡುಕುವಲ್ಲಿ ತೊಂದರೆ. ಸಂಭಾಷಣೆಯನ್ನು ಅರ್ಥ ಮಾಡಿಕೊಳ್ಳುವಲ್ಲಿ ತೊಂದರೆಯಾಗುವುದು.

6. ಕೆಲವು ವಸ್ತುಗಳನ್ನು ತಪ್ಪಾದ ಜಾಗದಲ್ಲಿಡುವುದು. ಅದನ್ನು ಮತ್ತೆ ಮೊದಲಿನ ಹಂತಕ್ಕೆ ಜೋಡಿಸುವ ಸಾಮರ್ಥ್ಯ ಕಳೆದುಕೊಳ್ಳುವುದು. ವಸ್ತುವನ್ನು ಕಳೆದುಕೊಳ್ಳಬಹುದು ಮತ್ತು ಅವುಗಳನ್ನು ಹುಡುಕಲು

ಹೋದ ದಾರಿಯಲ್ಲಿ ಹಿಂದಿರುಗಿ ಬರಲು ಸಾಧ್ಯವಾಗದಿರುವುದು, ಅದನ್ನು ಇತರರು ಕದ್ದಿದ್ದಾರೆ ಎಂದು ಆರೋಪಿಸುವುದು.

7. ಯೋಜನೆಗಳನ್ನು ರೂಪಿಸುವಲ್ಲಿ ಅಥವಾ ಸಮಸ್ಯೆಗಳನ್ನು ಬಗೆಹರಿಸಲು ಮತ್ತು ತೀರ್ಪನ್ನು ನೀಡುವಲ್ಲಿ ತೊಂದರೆಗೀಡಾಗುವುದು. ಪರಿಣಾಮವಾಗಿ ಯಾವುದೇ ನಿರ್ಧಾರ ತೆಗೆದುಕೊಳ್ಳಲು ಹಿಂಜರಿಯುವುದು

ಅಥವಾ ಸರಿಯಾದ ನಿರ್ಧಾರ ತೆಗೆದುಕೊಳ್ಳದಿರುವುದು. ವಿಶೇಷವಾಗಿ ಹಣಕಾಸು ಅಥವಾ ಸುರಕ್ಷತೆಯ ಸಂದರ್ಭದಲ್ಲಿ.

8. ಮನಸ್ಥಿತಿ ಮತ್ತು ವ್ಯಕ್ತಿತ್ವದಲ್ಲಿನ ಬದಲಾವಣೆಗಳು. ಗೊಂದಲಕ್ಕೀಡಾಗುವುದು, ಅನುಮಾನಗಳು ಉಂಟಾಗುವುದು, ಖನ್ನತೆಗೆ ಒಳಗಾಗುವುದು , ಭಯಭೀತರಾಗುವುದು, ಆತಂಕಕ್ಕೊಳಗಾಗುವುದು, ಅತಿಯಾಗಿ ಪ್ರತಿಕ್ರಿಯಿಸುವುದು ಅಥವಾ ಸುಲಭವಾಗಿ ಅಸಮಾಧಾನಗೊಳ್ಳುವುದು.

The Kashmir Files: ಕಾಶ್ಮೀರ ಫೈಲ್ಸ್ ಸಿನಿಮಾ ಬಗ್ಗೆ ಬುದ್ಧಿಜೀವಿಗಳೇಕೆ ಉರಿದುಕೊಳ್ತಿದಾರೆ?

ತಪ್ಪು ಗ್ರಹಿಕೆಯೇ ಮುಳುವು

ಕೆಲವೊಮ್ಮೆ ಡಿಮೆನ್ಶಿಯಾದ ಆರಂಭಿಕ ರೋಗ ಲಕ್ಷಣಗಳು ವಯಸ್ಸಾದವರಲ್ಲಿ ಸಾಮಾನ್ಯವಾದುದು ಎಂದು ತಪ್ಪಾಗಿ ಗ್ರಹಿಸಲ್ಪಡುತ್ತದೆ, ಕಡೆಗಣಿಸಲಾಗುತ್ತದೆ ಅಥವಾ ನಿರ್ಲಕ್ಷಿಸಲ್ಪಡುತ್ತದೆ. ಇದರ ಪರಿಣಾಮವಾಗಿ ವೈದ್ಯರ ಬಳಿ ಬರುವ ಹೊತ್ತಿಗೆ ಈ ಡಿಮೆನ್ಶಿಯಾವು ಗಣನೀಯವಾಗಿ ಮುಂದುವರಿದಿರುತ್ತದೆ. ಆದ್ದರಿಂದ ಸಾಮಾನ್ಯ ವಯಸ್ಸಾದ ವ್ಯಕ್ತಿಯ ಮರೆವು ಮತ್ತು ಡಿಮೆನ್ಶಿಯಾದ ವ್ಯತ್ಯಾಸವನ್ನು ಅರ್ಥ ಮಾಡಿಕೊಳ್ಳುವುದು ಬಹಳ ಮುಖ್ಯ. ಈ ಬಗ್ಗೆ ವೈದ್ಯರು, ಮನೋವೈದ್ಯರ ಸಲಹೆ ಪಡೆಯಲೇಬೇಕು.

ಕಾರಣಗಳೇನು?

- ಕೆಲವು ಬಗೆಯ ಮೆದುಳಿನ ಸಮಸ್ಯೆಗಳು. ನರವ್ಯೂಹಗಳಲ್ಲಿ ಆಗುವ ಜೀವಕೋಶಗಳ ಬದಲಾವಣೆಗಳು. ಕೆಲವು ವೈರಲ್ ಕಾಯಿಲೆಗಳು, ಸೋಂಕುಗಳು ಕೂಡ ಕಾರಣವಾಗಬಹುದು.

- ಸತುವಿನಂತಹ ಕೆಲವು ವಿಷಗಳ ಸೇವನೆ.

- ಮೆದುಳಿನಲ್ಲಿ ಆಗುವ ಗಡ್ಡೆಗಳು, ಸೋಂಕುಗಳು.

- ಕೆಲವು ಔಷಧಗಳ ಸೈಡ್ ಎಫೆಕ್ಟ್‌ಗಳು.

- ಫ್ಯಾಮಿಲಿ ಹಿಸ್ಟರಿ, ನಿಮ್ಮ ಹಿರಿಯರಿಗೆ ಡಿಮೆನ್ಷಿಯಾ ಇರುವುದು.

- ಸಿಕ್ಕಾಪಟ್ಟೆ ಆಲ್ಕೋಹಾಲ್ ಸೇವನೆ.

- ವಿಟಮಿನ್‌ಗಳ ತೀವ್ರ ಕೊರತೆ.

ಇದಲ್ಲಿ ಆಲ್ಕೋಹಾಲ್ ಸೇವನೆ ಮತ್ತು ವಿಟಮಿನ್ ಸೇವನೆ ಹೊರತುಪಡಿಸಿ ಉಳಿಸದ ಅಂಶಗಳು ವ್ಯಕ್ತಿಯ ಕೈಯಲ್ಲಿಲ್ಲ. ಆದರೆ ಈ ರೋಗವನ್ನು ಬಹುಬೇಗನೆ ಗುರುತಿಸುವ ಮೂಲಕ, ವ್ಯಕ್ತಿ ಹೆಚ್ಚಿನ ಡಿಮೆನ್ಷಿಯಾಕ್ಕೆ ಗುರಿಯಾಗದಂತೆ ಜಾಗರೂಕತೆ ವಹಿಸಬಹುದು.

The Kashmir Files: ಬಾಲಿವುಡ್‌ನಲ್ಲಿ ದಾಖಲೆ ಬರೆಯುತ್ತಿರುವ ಕಾಶ್ಮೀರ್ ಫೈಲ್ಸ್

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಅಖಂಡ 2 ರಿಲೀಸ್ ನಿಲ್ಲೋಕೆ ಅಸಲಿ ಕಾರಣ ಇದೇನಾ? ಅಷ್ಟಕ್ಕೂ ಬಾಲಯ್ಯ ಮುಂದೆ ಏನ್ಮಾಡ್ತಾರೆ?
ಹೀರೋ ಆಗುವ ಮುನ್ನ ಶಾಕ್ ಕೊಟ್ಟ ಅಕೀರಾ ನಂದನ್: ರೇಣು ದೇಸಾಯಿ ಫೋನ್ ಮಾಡಿದಾಗ ಪವನ್ ನಕ್ಕಿದ್ದೇಕೆ?