Yo Yo Honey Singh ಹೊಸ ಹಾಡು ಕೇಳಿ ಹುಚ್ಚರಂತೆ ಕುಣಿದ ಅಭಿಮಾನಿಗಳು!

Suvarna News   | Asianet News
Published : Mar 15, 2022, 11:34 AM IST
Yo Yo Honey Singh ಹೊಸ ಹಾಡು ಕೇಳಿ ಹುಚ್ಚರಂತೆ ಕುಣಿದ ಅಭಿಮಾನಿಗಳು!

ಸಾರಾಂಶ

ಟ್ರೆಂಡ್ ಸೆಟರ್ ಹನಿ ಸಿಂಗ್ ಹೊಸ ಹಾಡು ವೈರಲ್. ಲುಂಗಿ ಡ್ಯಾನ್ಸ್‌, ಬ್ಲೂ ಐಸ್‌ ವೀಕ್ಷಣೆ ಮೀರಿಸಲಿದೆ ಈ ಹಾಡು...   

ಭಾರತದಲ್ಲಿ Rap ಹಾಡುಗಳ ದೇವರು ಎಂದರೆ ನಿಮಗೆ ಈಗಾಗಲೇ ಗೊತ್ತಿರುತ್ತದೆ ಅದು ಹನಿ ಸಿಂಗ್ (Honey Singh) ಎಂದು. ಹೌದು! ನೀವು ಹನಿ ಸಿಂಗ್‌ನ ಹೇಟ್ ಮಾಡಿ ಇಲ್ಲ ಲವ್ ಮಾಡಿ ಆದರೆ ಬಾಲಿವುಡ್‌ ಮ್ಯೂಸಿಕ್ (Bollywood Music) ಇಂಡಸ್ಟ್ರಿಯಲ್ಲಿ ಆತನನ್ನು ಮೀರಿಸುವವರು ಯಾರಿಲ್ಲ. ಬಿ-ಟೌನ್ ಎಂಟರ್ ಆಗುವ ಮುನ್ನ ಹನಿ ಬಾಯ್ ಪಂಜಾಬಿ ಮ್ಯೂಸಿಕ್‌ನಲ್ಲಿ (Punbaj Music) ಸಖತ್ ಫೇಮಸ್ ಆಗಿದ್ದರು. ಹನಿ ಸಿಂಗ್ ಹೆಚ್ಚಿಗೆ ಹಾಡುವುದು ಪಾಪ್ ರ್ಯಾಪ್ ಹಾಡುಗಳೇ ಆದರೂ ಇಂದು ಅವರ ಹುಟ್ಟು ಹಬ್ಬದ ದಿನ ಬಿಡುಗಡೆಯಾದ ಹಾಡು ವೈರಲ್ ಆಗುತ್ತಿದೆ. 

ಬಾಲಿವುಡ್‌ನಲ್ಲಿ ಹನಿ ಸಿಂಗ್‌ನ ಟ್ರೆಂಡ್‌ ಸೆಟರ್‌ ಎಂದು ಕರೆಯುತ್ತಾರೆ ಏಕೆಂದರೆ ರಿಲೀಸ್ ಆಗಿರುವ ಪ್ರತಿಯೊಂದು ಹಾಡು ತಪ್ಪದೆ ಟ್ರೆಂಡಿಂಗ್ ಲಿಸ್ಟ್‌ ಮುಟ್ಟುತ್ತದೆ. ಅದರಲ್ಲೂ ಲುಂಗಿ ಡ್ಯಾನ್ಸ್‌ (Lungi dance), ಬ್ಲೂ ಐಸ್ (Blue eyes) ಮ್ಯಾಸಿವ್ ಹಿಟ್ ಪಡೆದುಕೊಂಡಿದೆ. ದೊಡ್ಡ ಮಟ್ಟದಲ್ಲಿ ನೇಮ್ ಆಂಡ್ ಫೇಮ್ ಪಡೆದುಕೊಂಡ ನಂತರ ಹನಿ ಸಿಂಗ್ 2014ರಲ್ಲಿ ವೃತ್ತಿ ಜೀವನದಿಂದ ದೊಡ್ಡ ಬ್ರೇಕ್ ತೆಗೆದುಕೊಂಡರು ಕಾರಣ ಆತನಿಗಿದ್ದ ಬೈ ಪೋಲಾರ್ ಡಿಸಾರ್ಡರ್‌ (Bipolar disorder). 2018ರಲ್ಲಿ ಕಮ್ ಬ್ಯಾಕ್ ಮಾಡಿದಾಗ ಬ್ಯಾಕ್ ಟು ಬ್ಯಾಕ್ ಹಿಟ್ ಸಾಂಗ್ ಕೊಟ್ಟು ಯುಟ್ಯೂಬ್‌ನಲ್ಲಿ (Youtube) ರಿಲೀಸ್‌ ಆಗಿದ್ದ ಪ್ರತಿಯೊಂದು ಹಾಡನ್ನು ಹಿಂದಿಟ್ಟರು. 

ಇಂದು ಅದೇ ಟ್ಯಾಲೆಂಟೆಡ್‌ ಮ್ಯೂಸಿಕ್ ಕಂಪೋಸರ್‌ ಮತ್ತು ರ್ಯಾಪರ್  39ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಹನಿ ಬಾಯ್ ಈ ಹಾಡುಗಳನ್ನು ತಪ್ಪದೆ ನೀವು ಕೇಳಲೇಬೇಕು....

ಮಖ್ನಾ (2019)MAKHNA

ಈ ಹಾಡಿನಲ್ಲಿ ಹನಿ ಸಿಂಗ್, ನೇಹಾ ಕಕ್ಕರ್ ಮತ್ತು ಸಿಂಗ್ಸ್ಟಾ ಕಾಣಿಸಿಕೊಂಡಿದ್ದಾರೆ.

ಗಂಡನ ಅಫೇರ್ಸ್, ಎದೆ ಮುಟ್ಟುವ ಮಾವ; 20 ಕೋಟಿ ಪರಿಹಾರ ಕೇಳಿದ ಹನಿ ಸಿಂಗ್ ಪತ್ನಿ!

ಗುರ್ ನಾಲೋ ಇಷ್ಕ್ ಮಿತಾ (2019) GUR NALO ISHQ MITHA 

ಇದು ಪಕ್ಕಾ ಮಾಡ್ರನ್ ಎಲೆಕ್ಟ್ರಾನಿಕ್ ಮ್ಯೂಸಿಕ್ ಮತ್ತು ಪಂಜಾಬಿ ತಡಖ್ ಮಿಕ್ಸ್ ಇರುವ ಹಾಡಿದು. ಪ್ರತಿಯೊಂದು ಬಾಲಿವುಡ್ ಪಾರ್ಟಿಯಲ್ಲಿ ಈ ಹಾಡನ್ನು ಪ್ಲೇ ಮಾಡುತ್ತಾರೆ. 

LOCA (2020)

ಯುವಕರಲ್ಲಿ ಅತಿ ಹೆಚ್ಚು ಜನಪ್ರಿಯತೆ ಪಡೆದುಕೊಂಡಿರುವ ಈ ಹಾಡು ಪಕ್ಕಾ ಪಾರ್ಟಿ ಸಾಂಗ್. Yo Yo ಅಂದ್ರೆ ಈ ಹಾಡು ಇರಲೇ ಬೇಕು. 

ಮಾಸ್ಕೋ ಮಶುಕಾ (2020) MOSCOW MASHUKA 

ಇದೊಂದು ಬೆಸ್ಟ್‌ ಊಬರ್ ಕೂಲ್ ಸಾಂಗ್ ಆಗಿದ್ದು ಎರಡನೇ ಬಾರಿ ಹನಿ ಸಿಂಗ್ ಜೊತೆ ನೇಹಾ ಕಕ್ಕರ್ ಹಾಡಿದ್ದಾರೆ. ಇದೂ ಕೂಡ ಪಾರ್ಟಿ ಸಾಂಗ್ ಆಗಿದ್ದು ತುಂಬಾನೇ ವೈರಲ್ ಆಗಿತ್ತು. 

ಕಾಂತಾ ಲಗಾ (2021)KANTA LAGAMOSCOW MASHUKA

ಟೋನಿ ಕಕ್ಕರ್, ನೇಹಾ ಕಕ್ಕರ್ ಮತ್ತು ಹನಿ ಸಿಂಗ್ ಹಾಡಿರುವ ಪವರ್ ಪ್ಯಾಕ್ ಹಾಡು ಇದಾಗಿದ್ದು ದೊಡ್ಡ ಮಟ್ಟದಲ್ಲಿ ಸೆನ್ಸೇಷನ್ ಕ್ರಿಯೇಟ್ ಮಾಡಿತ್ತು. 

ಕುಡಿದು ಬಂದು ಎದೆ ಮುಟ್ಟಿದ ಮಾವ: ಹನಿ ಸಿಂಗ್ ಪತ್ನಿ ಆರೋಪ

    ಸಾಯಿಯಾನ್ ಜಿ  (2021) SAAIYAN JI

    ಕಾಂತಾ ಲಗಾ ಹಿಟ್ ಆಗುತ್ತಿದ್ದಂತೆ ಬಿಡುಗಡೆಯಾದ ಹಾಡು ನುಸ್ರತ್‌ ಬರುಚ್ಚಾ ಜೊತೆಗಿರುವ ಸಾಯಿಯಾನ್ ಜಿ ಹಾಡು. ಕಳೆದ ವರ್ಷದಿಂದ ಟ್ರೆಂಡಿಂಗ್‌ನಲ್ಲಿರುವ ಈ ಹಾಡು ಈಗಲ್ಲೂ ವೈರಲ್ ಆಗುತ್ತಿದೆ.

    PREV

    ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

    Read more Articles on
    click me!

    Recommended Stories

    ಅತ್ತ ಪಂಚೆ ಉದುರಿ ಹೋಗುತ್ತಿದೆ.. ಇತ್ತ ಕುಣಿದು ಕುಪ್ಪಳಿಸಿ ಇಳಯರಾಜಾ ಕಂಪೋಸ್ ಮಾಡಿದ ಮಜವಾದ ಹಾಡು ಯಾವುದು?
    ಅಖಂಡ 2 ರಿಲೀಸ್ ನಿಲ್ಲೋಕೆ ಅಸಲಿ ಕಾರಣ ಇದೇನಾ? ಅಷ್ಟಕ್ಕೂ ಬಾಲಯ್ಯ ಮುಂದೆ ಏನ್ಮಾಡ್ತಾರೆ?