ಅಮೆರಿಕಾ ಹುಡುಗನ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಟಿ ಶಮಾ ಸಿಕಂದರ್!

Suvarna News   | Asianet News
Published : Mar 15, 2022, 12:42 PM IST
ಅಮೆರಿಕಾ ಹುಡುಗನ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಟಿ ಶಮಾ ಸಿಕಂದರ್!

ಸಾರಾಂಶ

ಗೋವಾದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಟಿ ಶಮಾ ಸಿಕಂದರ್ ಮತ್ತು ಜೇಮ್ಸ್ ಮಿಲಿರಾನ್. ಸಣ್ಣ ಲವ್ ಸ್ಟೋರಿ ಇಲ್ಲಿದೆ....

ಹೇ ಮೇರಿ ಲೈಫ್‌ ಹೇ ಧಾರಾವಾಹಿ ಮೂಲಕ ಬಣ್ಣದ ಜರ್ನಿ ಆರಂಭಿಸಿದ ನಟಿ ಶಮಾ ಸಿಕಂದರ್ (Shama Sikander) ಮಾರ್ಚ್‌ 14ರಂದು ಗೋವಾದಲ್ಲಿ (Goa) ಅಮೆರಿಕಾ ಹುಡುಗ ಜೇಮ್ಸ್ ಮಿಲಿರಾನ್ (James milliron) ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಮದುವೆಯ ಪ್ರತಿಯೊಂದು ಸಂಭ್ರಮಗಳನ್ನು ಅಪ್ಲೋಡ್ ಮಾಡುತ್ತಿದ್ದಾರೆ. ಕ್ರಿಶ್ಚಿಯನ್‌ ಸಂಪ್ರದಾಯದಂತೆ ಮದುವೆಯಾಗಿ ಉಂಗುರದ ಫೋಟೋ ಹಂಚಿಕೊಂಡು 'Whole' ಎಂದು ಬರೆದುಕೊಂಡಿದ್ದಾರೆ. 

ಮದುವೆಯಲ್ಲಿ ಶಮಾ ಸಿಕಂದರ್ ಬಿಳಿ ಬಣ್ಣದ ದೀಪ್ ಡಿಸೈನ್ ಗೌನ್ ಧರಿಸಿದ್ದಾರೆ. ಜೇಮ್ಸ್‌ ಮಿಲಿರಾನ್‌ ಕೂಡ ವೈಟ್ ಸೂಟ್ ಧರಿಸಿದ್ದಾರೆ. ಮಿಲ್ಲಾನೋವ ಮತ್ತು ನಿವೇದಿತಾ ಸಾಬೂ ಕೋರ್ಟ್ಯೂರ್‌ ಇವರಿಬ್ಬರಿಗೆ ವಸ್ತ್ರ ವಿನ್ಯಾಸ ಮಾಡಿದ್ದಾರೆ. ಮಿಲಿಮಲ್ ಮೇಕಪ್ ಹಾಕಿಕೊಂಡು ಮೆಸಿ ಬನ್ ಹೇರ್‌ಸ್ಟೈಲ್ ಮಾಡಿಕೊಂಡಿದ್ದಾರೆ. ಕತ್ತಿಗೆ ಯಾವುದೇ ರೀತಿಯ ಸರ ಹಾಕಿಲ್ಲ ಆದರೆ ಸಿಂಪಲ್ ಕಿವಿ ಒಲೆ ಧರಿಸಿ ಎಲ್ಲರ ಗಮನ ಸೆಳೆದಿದ್ದಾರೆ. 
 
ಮೊದಲು ಅಪ್ಲೋಡ್ ಮಾಡಿರುವ ಮದುವೆ ಫೋಟೋದಲ್ಲಿ ಶಮಾ ಮತ್ತು ಜೇಮ್ಸ್‌ ತಬ್ಬಿಕೊಂಡು ಕ್ಯಾಮೆರಾ ನೋಡುತ್ತಿದ್ದಾರೆ. ಎರಡನೇ ಫೋಟೋದಲ್ಲಿ ಹೂ ಗುಚ್ಚು ನೋಡುತ್ತಿದ್ದಾರೆ. ಪ್ರತಿಯೊಂದು ಫೋಟೋಗಳು ತುಂಬಾನೇ ಕ್ಯೂಟ್ ಆಗಿದ್ದು ಇಂಡಿಯಾ ಅಮೆರಿಕಾ ಎನ್ನುವ ಹ್ಯಾಷ್‌ಟ್ಯಾಗ್‌ ಬಳಸುತ್ತಿದ್ದಾರೆ ಅಭಿಮಾನಿಗಳು. ಬ್ಯಾಚುಲರ್ ಪಾರ್ಟಿ, ಮದುವೆ ಪಾರ್ಟಿ ಪ್ರತಿಯೊಂದರ ಫೋಟೋ ಅಪ್ಲೋಡ್ ಮಾಡಿದ್ದಾರೆ. 'ನನ್ನ ಜೀವನದಲ್ಲಿ ಎಂದೂ ಮರೆಯಲಾಗದ ಕ್ಷಣ' ಎಂದು ಶಮಾ ಬರೆದುಕೊಂಡಿದ್ದಾರೆ. 

'ನಾವು ವೈಟ್ ವೆಡ್ಡಿಂಗ್ (White wedding) ಆಗುತ್ತಿದ್ದೀವಿ ಇದು ಎರಡು ದಿನಗಳ ಈವೆಂಟ್ ಆಗಿರಲಿದೆ. ನಾವು ಮದುವೆಯನ್ನು ವಿದೇಶದಲ್ಲಿ ಆಗಬೇಕು ಎಂದು ಪ್ಲ್ಯಾನ್ ಮಾಡಿದ್ವಿ ಏಕೆಂದರೆ ನಮ್ಮ ಬಹುತೇಕ ಆಪ್ತರು ವಿದೇಶದಲ್ಲಿದ್ದಾರೆ. ಇದು ಇಂಡಿಯಾ ಮೀಟ್ಸ್‌ ಅಮೆರಿಕಾ ಎಂದು ಬಹುತೇಕರು ಹೇಳುತ್ತಿದ್ದಾರೆ. ಜನರನ್ನು ವೈಟ್ ಮದುವೆಯಲ್ಲಿ ನೋಡುವುದಕ್ಕೆ ಖುಷಿಯಾಗುತ್ತದೆ ಆದರೆ ನನ್ನ ಮದುವೆ ಹೇಗಿರಬೇಕು ಎಂದು ನಾನು ಪ್ಲ್ಯಾನ್ ಮಾಡಿಲ್' ಎಂದು ಟೈಮ್ಸ್ ಆಫ್‌ ಇಂಡಿಯಾ ಸಂದರ್ಶನದಲ್ಲಿ ಶಮಾ ಮಾತನಾಡಿದ್ದಾರೆ. 

ನನ್ನನ್ನು ಬಿಟ್ಟು ಹೆಂಡ್ತಿ ಹನಿಮೂನ್‌ಗೆ ಹೊರಟುಹೋದಳು: ಅನಿಲ್ ಕಪೂರ್ ಕ್ಯೂಟ್ ಲವ್ ಸ್ಟೋರಿ!

ಶಮಾ ಮತ್ತು ಜೇಮ್ಸ್‌ ಇಬ್ಬರು ಮೊದಲು ಭೇಟಿ ಮಾಡಿದ್ದು ಮುಂಬೈನಲ್ಲಿ (Mumbai) ಹೀಗಾಗಿ 2015ರಿಂದ ಡೇಟಿಂಗ್ ಮಾಡುತ್ತಿದ್ದಾರೆ.  'ನಾವಿಬ್ಬರು ತುಂಬಾನೇ ಕಾಮ್ ಆಂಡ್ ಸೇಫ್. ನಾವಿಬ್ಬರು ಜೀವನ ಪೂರ್ತಿ ಒಟ್ಟಿಗೆ ಇರಬೇಕು ಅಂದುಕೊಂಡಿರುವೆ' ಎಂದಿದ್ದರು ಶಮಾ. 'ನಾನು ಮುಸ್ಲಿಂ ಜೇಮ್ಸ್ ಕ್ರಿಶ್ಚಿಯನ್ ಹೀಗಾಗಿ ನಾವು ಯಾವ ಜಾತಿ ಪದತಿಗಳನ್ನು ಫಾಲೋ ಮಾಡುವುದಿಲ್ಲ. ಜೇಮ್ಸ್ ತುಂಬಾನೇ ಸ್ಪಿರಿಚುಯಲ್ ವ್ಯಕ್ತಿ  ನಮಗೆ ಪ್ರೀತಿಗೆ ಹೆಚ್ಚಿನ ಆಧ್ಯತೆ ನೀಡುತ್ತೇವೆ. ಶಾಸ್ತ್ರ ಸಂಪ್ರದಾಯದಿಂದ ಅನೇಕರಿಗೆ ಮದುವೆಯಲ್ಲಿ ಒತಡ ಹೆಚ್ಚಿರುತ್ತದೆ ಆದರೆ ನಾನು ಮಜಾ ಮಾಡಬೇಕು ಆಚರಣೆಯಲ್ಲಿ ಫನ್ ಇರಬೇಕು' ಎಂದು ಖಾಸಗಿ ಸಂದರ್ಶನಲ್ಲಿ ಮದುವೆ ಬಗ್ಗೆ ಶಮಾ ಹೇಳಿದ್ದರು. 

ಲವ್ ಮ್ಯಾರೇಜ್ ಆದ್ರೂ ದಾಪತ್ಯದಲ್ಲಿ ಕಲಹ ಮೂಡಲು ಕಾರಣ ಏನು?

'ಮದುವೆ ಆಗಲು ಗೋವಾ ಬೆಸ್ಟ್‌ ಡೆಸ್ಟಿನೇಷನ್ (Destination wedding) ಏಕೆಂದರೆ ಅಲ್ಲಿ ಬೀಜ್‌ ಇದೆ. ಬಾಲ್ಯದಿಂದಲೂ ನಾನು ಬೀಜ್‌ ಬಳಿ ಮದುವೆ ಆಗಬೇಕು ಎಂದು ಇಷ್ಟ ಪಟ್ಟವಳು. ಎರಡು ವರ್ಷಗಳ ಹಿಂದೆ ನಮ್ಮ ಮದುವೆಗೆಂದು ಟರ್ಕಿ ಆಯ್ಕೆ ಮಾಡಿಕೊಂಡಿದ್ದೆವು ಆದರೆ ಕೊರೋನಾ ಪ್ಯಾಂಡಮಿಕ್‌ನಿಂದ ನಾವು ಸ್ಥಳ ಬದಲಾಯಿಸಿದ್ದೆವು. ಆದರೂ ಕುಟುಂಬಸ್ಥರಿಗೆಂದು ಅಲ್ಲಿ ಸಣ್ಣದಾಗಿ ಆಚರಣೆ ಮಾಡುತ್ತೀವಿ. ಕ್ರಿಶ್ಚಿಯನ್ ಮದುವೆ ಆಗಿರಬೇಕು, ಮ್ಯೂಸಿಕ್ ಪಾರ್ಟಿ ಇರಬೇಕು. ನಾನು ಮದುವೆಗೂ ಕೆಲವು ದಿನಗಳ ಹಿಂದೆ ನಾಯಿ ಕೈಯಲ್ಲಿ ಕಚ್ಚಿಸಿಕೊಂಡಿರುವೆ. ನನ್ನ ಜೀವನದಲ್ಲಿ ತುಂಬಾನೇ ನಡೆಯುತ್ತಿದೆ' ಎಂದು ಶಮಾ ಹೇಳಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಅತ್ತ ಪಂಚೆ ಉದುರಿ ಹೋಗುತ್ತಿದೆ.. ಇತ್ತ ಕುಣಿದು ಕುಪ್ಪಳಿಸಿ ಇಳಯರಾಜಾ ಕಂಪೋಸ್ ಮಾಡಿದ ಮಜವಾದ ಹಾಡು ಯಾವುದು?
ಅಖಂಡ 2 ರಿಲೀಸ್ ನಿಲ್ಲೋಕೆ ಅಸಲಿ ಕಾರಣ ಇದೇನಾ? ಅಷ್ಟಕ್ಕೂ ಬಾಲಯ್ಯ ಮುಂದೆ ಏನ್ಮಾಡ್ತಾರೆ?