ಶ್ರೀದೇವಿಯ ಸಾವಿಗೆ ಉಪವಾಸವೇ ಕಾರಣವಾಯ್ತಾ? ಬೋನಿ ಕಪೂರ್‌ ಮಾತಿನಲ್ಲಿದೆ ಗುಟ್ಟು

Published : Feb 24, 2025, 07:44 PM ISTUpdated : Feb 25, 2025, 10:19 AM IST
ಶ್ರೀದೇವಿಯ ಸಾವಿಗೆ ಉಪವಾಸವೇ ಕಾರಣವಾಯ್ತಾ? ಬೋನಿ ಕಪೂರ್‌ ಮಾತಿನಲ್ಲಿದೆ ಗುಟ್ಟು

ಸಾರಾಂಶ

ನಟಿ ಶ್ರೀದೇವಿ ಸಾವಿನ ಬಗ್ಗೆ ಪತಿ ಬೋನಿ ಕಪೂರ್ ಕೆಲವು ಆಘಾತಕಾರಿ ಸಂಗತಿಗಳನ್ನು ಬಹಿರಂಗಪಡಿಸಿದ್ದಾರೆ. ಶ್ರೀದೇವಿ ಸೌಂದರ್ಯ ಕಾಪಾಡಿಕೊಳ್ಳಲು ಉಪವಾಸ ಮಾಡುತ್ತಿದ್ದರು ಮತ್ತು ಆಕೆಯ ಸಾವಿಗೆ ಇದೇ ಕಾರಣವಿರಬಹುದು ಎಂದು ಹೇಳಿದ್ದಾರೆ. ಏಳು ವರ್ಷಗಳ ಬಳಿಕ ಇದು ಬಯಲಾಗಿದೆ. 

ಈ ನಟಿ ತನ್ನ ಸೌಂದರ್ಯವನ್ನು ಕಾಪಾಡಿಕೊಳ್ಳಲು 'ಉಪವಾಸ'ವನ್ನು ರೂಢಿಯಾಗಿಸಿಕೊಂಡಿದ್ದಳು. ಬಾಡಿ ಶೇಪ್‌ ಆಕಾರದಲ್ಲಿ ಉಳಿಯಲು ಗಂಟೆಗಟ್ಟಲೆ ಹಸಿದುಕೊಂಡು ಇರುತ್ತಿದ್ದಳು. ಚಲನಚಿತ್ರ ಸೆಟ್‌ಗಳಲ್ಲಿ ಹಲವಾರು ಬಾರಿ ತಲೆ ತಿರುಗಿ ಬಿದ್ದಿದ್ದಳು. ಹಲವು ಬಾರಿ ವೈದ್ಯರು ಹೀಗೆ ಉಪವಾಸ ಮಾಡಬೇಡ ಅಂತ ಹೇಳಿದರೂ ನಿರ್ಲಕ್ಷಿಸಿದಳು. ಚಿಕ್ಕ ವಯಸ್ಸಿನಲ್ಲೇ ಮರಣ ಹೊಂದಿದಳು. ನಾವು ಮಾತಾಡ್ತಿರೋದು ಕನಸಿನ ಕನ್ಯೆ ಶ್ರೀದೇವಿ ಬಗ್ಗೆ. 

ದೇಶಾದ್ಯಂತ ಜನಪ್ರಿಯಳಾಗಿದ್ದ ಶ್ರೀದೇವಿಯ ವೈಯಕ್ತಿಕ ಜೀವನದ ಬಗ್ಗೆ ಗಾಢವಾದ ಸಂಶಯಾಸ್ಪದ ಮೌನ ಇದೆ. 24 ಫೆಬ್ರವರಿ 2018ರಂದು ಆಕೆಯ ಹಠಾತ್ ಸಾವಿನ ಸುದ್ದಿ ಕೋಟ್ಯಂತರ ಭಾರತೀಯರಿಗೆ ಶಾಕ್‌ ತಂದಿತು. ಆಕೆ ಇಂದು ಬದುಕಿದ್ದರೆ ಆಕೆಗೆ 60 ವರ್ಷ ವಯಸ್ಸಾಗುತ್ತಿತ್ತು. ಕುಟುಂಬದ ಮದುವೆಯಲ್ಲಿ ಪಾಲ್ಗೊಳ್ಳಲು ದುಬೈಗೆ ತೆರಳಿದ್ದ ಆಕೆ ಕೊನೆಯದಾಗಿ ತನ್ನ ಹೋಟೆಲ್ ರೂಮಿನ ಬಾತ್ ರೂಂನಲ್ಲಿ ಶವವಾಗಿ ಪತ್ತೆಯಾಗಿದ್ದಳು.

ಶ್ರೀದೇವಿಯಂಥ ಸೌಂದರ್ಯ ಬಾಲಿವುಡ್‌ನಲ್ಲಿ ಇನ್ಯಾರಿಗೂ ಇರಲಿಲ್ಲ. ತನ್ನ ನಟನೆ ಮತ್ತು ಸೌಂದರ್ಯಗಳೆರಡಕ್ಕೂ ಆಕೆ ಮೆಚ್ಚುಗೆ ಪಡೆದಿದ್ದಳು. ಆದರೆ ವೃದ್ಧಾಪ್ಯದಲ್ಲಿಯೂ ಸುಂದರವಾಗಿ ಕಾಣುವ ಬಯಕೆಯೇ ಅವಳನ್ನು ನಾಶಪಡಿಸಿತು ಎನ್ನಲಾಗುತ್ತದೆ. ನಟಿ ಸಾವನ್ನಪ್ಪಿ ಸುಮಾರು 7 ವರ್ಷಗಳ ನಂತರ ಆಕೆಯ ಸಾವಿಗೆ ಕಾರಣವನ್ನು ಆಕೆಯ ಪತಿ ಬೋನಿ ಕಪೂರ್‌ ಬಹಿರಂಗಪಡಿಸಿದ್ದಾರೆ. ಆಕೆಯ ಸಾವಿನ ಹಿಂದೆ ಭೂಗತ ಜಗತ್ತಿನ ಕೈವಾಡವಿದೆ ಎಂಬ ವದಂತಿಗಳಿದ್ದವು. ಆದರೆ ಸಂಪೂರ್ಣ ಸತ್ಯ ಎಂದೂ ಹೊರಬಂದಿಲ್ಲ. ಈಗ ಅವರ ಪತಿ ಕೆಲವು ಆಘಾತಕಾರಿ ಸಂಗತಿ ಬಹಿರಂಗಪಡಿಸಿದ್ದಾರೆ. 

ಘಟನೆಗೆ ಸಂಬಂಧಿಸಿ ಬೋನಿ ಕಪೂರ್ ಅವರನ್ನು ದುಬೈ ಪೊಲೀಸರು ಸುಮಾರು 48 ಗಂಟೆಗಳ ಕಾಲ ವಿಚಾರಣೆ ನಡೆಸಿದ್ದಾರೆ. ಮಾಧ್ಯಮಗಳ ಒತ್ತಡವನ್ನೂ ಎದುರಿಸಬೇಕಾಯಿತು. “ನಾನು ಹೇಳಿದ್ದನ್ನು ಹೊರತುಪಡಿಸಿ ನನ್ನಲ್ಲಿ ಏನೂ ಉಳಿದಿರಲಿಲ್ಲ. ನನ್ನಲ್ಲಿ ಯಾವುದೇ ತಪ್ಪಿಲ್ಲ ಎಂದು ಅವರು ಕಂಡುಕೊಂಡರು. ನಾನು ಎಲ್ಲಾ ರೀತಿಯ ಪರೀಕ್ಷೆಗಳಿಗೆ ಒಳಗಾಗಿದ್ದೆ. ನಾನು ಸುಳ್ಳು ಪತ್ತೆ ಪರೀಕ್ಷೆಗೂ ಒಳಗಾಗಿದ್ದೆ. ನಂತರ, ಶ್ರೀದೇವಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ ಎಂದು ವರದಿ ಬಹಿರಂಗಪಡಿಸಿತು" ಎಂದಿದ್ದಾರೆ ಬೋನಿ.

ಬೋನಿ ಕಪೂರ್ ಶ್ರೀದೇವಿಯ ಕೆಲವು ಕೆಟ್ಟ ಅಭ್ಯಾಸಗಳ ಬಗ್ಗೆ ಮಾತನಾಡಿದ್ದಾರೆ. ಮೊದಲನೇದಾಗಿ, ಶ್ರೀದೇವಿ ಸುಂದರವಾಗಿ ಕಾಣಲು ‘ಕ್ರ್ಯಾಶ್ ಡಯಟ್’ ಮಾಡುತ್ತಿದ್ದಳಂತೆ. ಅವಳು ಯಾವಾಗಲೂ ಹಸಿದಿರುತ್ತಿದ್ದಳು. ಅವಳು ಸದಾ ಚೆನ್ನಾಗಿ ಕಾಣಬೇಕೆಂದು ಬಯಸಿದ್ದಳು. ಅವಳು ಬಾಡಿ ಶೇಪ್‌ ಉಳಿಸಿಕೊಂಡಳು. ಅದಕ್ಕಾಗಿ ಅವಳು ತೆರೆಯ ಮೇಲೆ ಚೆನ್ನಾಗಿ ಕಾಣುತ್ತಿದ್ದಳು. ನನ್ನನ್ನು ಮದುವೆಯಾದ ನಂತರ ಆಕೆಯ ಆರೋಗ್ಯ ಹಲವು ಬಾರಿ ಹದಗೆಟ್ಟಿತ್ತು. ಆಕೆಗೆ ಕಡಿಮೆ ರಕ್ತದೊತ್ತಡ ಇದೆ ಎಂದು ವೈದ್ಯರು ಹೇಳುತ್ತಲೇ ಇದ್ದರು.

ಮಲಯಾಳಂ ಸೂಪರ್‌ಸ್ಟಾರ್‌ ಜೊತೆ ಪ್ಯಾನ್‌ ಇಂಡಿಯಾ ಸಿನಿಮಾ ಮಾಡ್ತಾರೆ ಇಂದ್ರಜಿತ್ ಪುತ್ರ: ವೃಷಭದಲ್ಲಿ ಸಮರ್ಜಿತ್?

ನಟ ನಾಗಾರ್ಜುನ ಮೊದಲಾದವರು ಕೂಡ ಶ್ರೀದೇವಿಯೊಂದಿಗೆ ಅಂತಹ ಅನುಭವವನ್ನು ಹೊಂದಿದ್ದರಂತೆ. ಶೂಟಿಂಗ್ ವೇಳೆ ಶ್ರೀದೇವಿ ಪದೇ ಪದೇ ಮೂರ್ಛೆ ಹೋಗುತ್ತಿದ್ದರು ಎಂದು ನಾಗಾರ್ಜುನ ಹೇಳಿದ್ದರು. ಅವಳು ತೀರಿಹೋದ ನಂತರ ನಾಗಾರ್ಜುನ ಅವರು ಸಾಂತ್ವನ ಹೇಳಲು ಮನೆಗೆ ಬಂದಿದ್ದರು. ಶ್ರೀದೇವಿ ತಮ್ಮ ಚಲನಚಿತ್ರವೊಂದರಲ್ಲಿ ಕೆಲಸ ಮಾಡುವಾಗ 'ಕ್ರ್ಯಾಶ್ ಡಯಟ್'ನಲ್ಲಿದ್ದೇನೆ ಎಂದರಂತೆ. 

ಶ್ರೀದೇವಿ ಸುಂದರವಾಗಿ ಕಾಣಲು ಹಸಿವಿನಿಂದ ಬಳಲುತ್ತಿದ್ದಳು. ಅವಳು ಕಠಿಣವಾದ ಆಹಾರಕ್ರಮವನ್ನು ಅನುಸರಿಸುತ್ತಿದ್ದಳು. ಆಹಾರದಲ್ಲಿ ಉಪ್ಪನ್ನು ಸೇರಿಸುವಂತೆ ವೈದ್ಯರು ಸಲಹೆ ನೀಡಿದ್ದರು. ಆದರೆ ಅವಳು ವೈದ್ಯರ ಸಲಹೆಯನ್ನು ಗಂಭೀರವಾಗಿ ಪರಿಗಣಿಸಲಿಲ್ಲ. ಬಹುಶಃ ನಾನೂ ಅದನ್ನು ಗಂಭೀರವಾಗಿ ಪರಿಗಣಿಸಲಿಲ್ಲ ಎಂದು ಬೋನಿ ಹೇಳಿದ್ದಾರೆ. ಶ್ರೀದೇವಿ 40-45 ವರ್ಷ ವಯಸ್ಸಿನವಳಂತೆ ಕಾಣಲು ಬಯಸಿದ್ದಳು. ಬಹುಶಃ ಈ ಆಹಾರದ ಕೊರತೆಯೇ ಆಕೆಗೆ ಲೋ ಬಿಪಿ ಆಗಲು ಕಾರಣವಾಗಿ, ಅದರಿಂದ ತಲೆತಿರುಗಿ ಬಾತ್‌ಟಬ್‌ನಲ್ಲಿ ಮುಳುಗಿ ಸಾಯಲು ಕಾರಣವಾಗಿರಬಹುದು ಎಂದು ಬೋನಿ ಅಂದಾಜಿಸುತ್ತಾರೆ.  

ಕಮಲ್ ಹಾಸನ್ ಮಗಳು ಅಂತ ಜನರಿಗೆ ಗೊತ್ತಾಗಬಾರದು ಎಂದು ಸುಳ್ಳು ಹೆಸರು ಹೇಳಿಕೊಂಡು ಓಡಾಡುತ್ತಿದ್ದೆ: ಶ್ರುತಿ
 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Salman Khan Birthday: ಬ್ರೇಸ್ಲೆಟ್‌ನಿಂದ ಸಲ್ಮಾನ್ ಖಾನ್ ಅದೃಷ್ಟ ಬದಲಾಗಿದ್ದು ಹೇಗೆ, ಏನಿದರ ರಹಸ್ಯ?
ರಣಚಂಡಿ ರಶ್ಮಿಕಾ ಮಂದಣ್ಣ: ರಗಡ್‌ ಲುಕ್‌ನಲ್ಲಿ ಎಂಟ್ರಿಕೊಟ್ಟ ನ್ಯಾಷನಲ್‌ ಕ್ರಶ್‌!