ಶಾರುಖ್ ಖಾನ್-ಪ್ರಿಯಾಂಕಾ ಚೋಪ್ರಾ ಮದ್ವೆ ಆಗಿದ್ರಾ? ಏನಿದು ಹೊಸ ಸುದ್ದಿ?
ಬಣ್ಣದ ಲೋಕದಲ್ಲಿ ಅಕ್ರಮ ಸಂಬಂಧ, ಲಿವ್ ಇನ್, ವಿವೇಹೇತರ ಸಂಬಂಧ, ಡೇಟಿಂಗ್ ಇಂಥವುಗಳೆಲ್ಲವೂ ಮಾಮೂಲು. ಕೆಲವೊಂದು ನಟ-ನಟಿಯರು ಆದರ್ಶ ಎನಿಸಿದರೂ, ಅವರ ಬಗ್ಗೆ ಬಹಳ ತಿಳಿದುಕೊಂಡರೆ ಅಲ್ಲಿ ಎಲ್ಲವೂ ಸರಿಯಾಗಿರುವುದಿಲ್ಲ ಎಂದು ಗೊತ್ತಾಗುತ್ತದೆ. ಅಂಥದ್ದೇ ಒಂದು ವಿಷಯ ಶಾರುಖ್ ಖಾನ್ ಅವರದ್ದು. ಶಾರುಖ್ ಮತ್ತು ಗೌರಿ ಅವರು ಮದುವೆಯಾಗಿ 32 ವರ್ಷಗಳು ಕಳೆದಿವೆ. ಅದೇ ವೇಳೆ, ಇನ್ನೊಂದೆಡೆ, ಪ್ರಿಯಾಂಕಾ ಚೋಪ್ರಾ ಅವರು ಮದುವೆಯಾಗಿ ಐದು ವರ್ಷಗಳು ಕಳೆದಿವೆ. ಈ ಎರಡೂ ಜೋಡಿ ತಂತಮ್ಮ ಸಂಸಾರವನ್ನು ಸುಖದಿಂದ ಕಳೆಯುತ್ತಿವೆ. ಆದರೆ ಅಸಲಿಗೆ ಶಾರುಖ್ ಖಾನ್ ಮತ್ತು ಪ್ರಿಯಾಂಕಾ ಚೋಪ್ರಾ ಅವರ ನಡುವಿನ ಕುತೂಹಲದ ವಿಷಯವೊಂದು ಇದೀಗ ಬೆಳಕಿಗೆ ಬಂದಿದೆ. ಇವರಿಬ್ಬರೂ ಮುಂಚೆಯೇ ಮದುವೆಯಾಗಿದ್ರಾ ಎನ್ನುವ ವಿಷಯವದು.
2011ರಲ್ಲಿ ಡಾನ್ 2 ಚಿತ್ರದ ಶೂಟಿಂಗ್ ಸಮಯದಲ್ಲಿ ಶಾರುಖ್ ಮತ್ತು ಪ್ರಿಯಾಂಕಾ ಚೋಪ್ರಾರ ರಿಲೇಷನ್‌ಶಿಪ್ ತುಂಬಾ ಚರ್ಚೆಯಾಗುತ್ತಿತ್ತು. ಇವರಿಬ್ಬರು ಮದುವೆಯಾಗಿದ್ದರು ಎಂಬ ಬಗ್ಗೆ ಕೂಡ ಸುದ್ದಿಯಾಗಿತ್ತು. ಇವರಿಬ್ಬರ ಸಂಬಂಧ ಅದೆಷ್ಟರ ಮಟ್ಟಿಗೆ ಚರ್ಚೆಯಾಗಿತ್ತೆಂದು, ಪ್ರಿಯಾಂಕಾ ಚೋಪ್ರಾ ಅವರಿಂದಾಗಿ, ಒಂದು ಘಟ್ಟದಲ್ಲಿ ಶಾರುಖ್ ಖಾನ್ ಹಾಗೂ ಗೌರಿ ಖಾನ್ ವಿಚ್ಛೇದನ ಪಡೆಯುವವರೆಗೂ ಹೋಗಿದ್ದರಂತೆ. 2000ರಲ್ಲಿ ನಡೆದ 'ಮಿಸ್ ಇಂಡಿಯಾ' ಸ್ಪರ್ಧೆಯಲ್ಲಿ, ಪ್ರಿಯಾಂಕಾ ಚೋಪ್ರಾ ಸ್ಪರ್ಧಿಯಾಗಿದ್ದರು. ಮಿಸ್ ಇಂಡಿಯಾ ಕಿರೀಟ ಕೂಡ ಪಡೆದುಕೊಂಡಿದ್ದರು. ಈ ಸಮಯದಲ್ಲಿ ಶಾರುಖ್ ಖಾನ್ ಅವರು, ಪ್ರಿಯಾಂಕಾ ಅವರನ್ನು ಮದುವೆಯಾಗಲು ಪ್ರಪೋಸ್ ಮಾಡಿದ್ದರಂತೆ! ಇದಾದ ಬಳಿಕ ಇಬ್ಬರದ್ದು ಮದುವೆಯಾಗಿತ್ತು ಎನ್ನುವ ಸುದ್ದಿಯಿದೆ.
ಹೆಣ್ಣಿನ ಗೌರವದ ಬಗ್ಗೆ ಭಾಷಣ ಮಾಡೋ ನೀವೂ ಹೀಗಾ ಥೂ...! ನಟಿ ತ್ರಿಷಾಗೆ ಶಾಕ್ ಕೊಟ್ಟ ನೆಟ್ಟಿಗರು
ಪ್ರಿಯಾಂಕಾ ಚೋಪ್ರಾ ಮಿಸ್ ಇಂಡಿಯಾ ಸ್ಪರ್ಧೆಯ ಫೈನಲ್ -10 ತಲುಪಿದ್ದಾಗ ತೀರ್ಪುಗಾರರಲ್ಲಿ ಒಬ್ಬರಾಗಿದ್ದರು ಶಾರುಖ್ ಖಾನ್. ಆಗ ಮಲೈಕಾ ಅರೋರಾ ಹೋಸ್ಟ್ ಆಗಿದ್ದರು. ಅದಾಗಲೇ ಅವರಿಬ್ಬರ ನಡುವೆ ಏನೋ ಶುರುವಾಗಿತ್ತು ಎನ್ನಲಾಗಿದೆ. ಈ ಸಂದರ್ಭದಲ್ಲಿ ತೀರ್ಪುಗಾರರಾಗಿದ್ದ ಶಾರುಖ್ ಖಾನ್ ಅವರು, ಆಗ 17 ವರ್ಷದವರಾಗಿದ್ದ ಪ್ರಿಯಾಂಕಾ ಚೋಪ್ರಾರಿಗೆ ಒಂದು ಪ್ರಶ್ನೆ ಕೇಳಿದ್ದರು. ಅದೇನೆಂದರೆ, ಅನೇಕ ದಾಖಲೆಗಳನ್ನು ಪಡೆದಿರುವ, ದೇಶದ ಹೆಮ್ಮೆ ಅಜರುದ್ದೀನ್ ಅವರಂತಹ ಶ್ರೇಷ್ಠ ಕ್ರಿಕೆಟಿಗನನ್ನು ಮದುವೆಯಾಗಬಯಸುವಿರೋ ಅಥವಾ ನನ್ನಂಥ ಹಿಂದಿ ಚಲನಚಿತ್ರ ತಾರೆಯನ್ನೋ ಎಂದು ಕೇಳಿದ್ದರು. ಅದಾಗಲೇ ಪ್ರಿಯಾಂಕಾ ಉತ್ತರಕ್ಕೆ ಬಿ-ಟೌನ್ ಕಾತರದಿಂದ ಕಾದಿತ್ತು.
ಆದರೆ ಬಹಳ ಜಾಣ್ಮೆಯ ಉತ್ತರ ಕೊಟ್ಟಿದ್ದ ಪ್ರಿಯಾಂಕಾ, ಭಾರತದ ಶ್ರೇಷ್ಠ ಆಟಗಾರನನ್ನು ನಾನು ಮದುವೆಯಾಗುತ್ತೇನೆ. ಏಕೆಂದರೆ ನಾನು ಮನೆಗೆ ಹಿಂದಿರುಗಿದಾಗ ಅಥವಾ ಅವನು ಮನೆಗೆ ಹಿಂದಿರುಗಿದಾಗ, ನಾವು ಪರಸ್ಪರ ಬೆಂಬಲಿಸುತ್ತೇವೆ. ನೀವು ನಿಮ್ಮ ಕೈಲಾದಷ್ಟು ಮಾಡಿದ್ದೀರಿ ಎಂದು ನಾನು ಅವನಿಗೆ ಹೇಳುತ್ತೇನೆ. ಗಂಡನ ಬಗ್ಗೆ ತುಂಬಾ ಹೆಮ್ಮೆಪಡುತ್ತೇನೆ, ಆಟಗಾರರು ಬಲವಾದ ಮತ್ತು ಶ್ರೇಷ್ಠ ವ್ಯಕ್ತಿತ್ವವನ್ನು ಹೊಂದಿರುತ್ತಾರೆ ಎಂದಿದ್ದರು. ಆದರೆ ಇದು ಸುಳ್ಳು ಎಂದೇ ಹೇಳಲಾಗಿತ್ತು. ಇದಾದ ಬಳಿಕ ಶಾರುಖ್ ಮತ್ತು ಪ್ರಿಯಅಂಕಾ, 'ಡಾನ್'ಚಿತ್ರದಲ್ಲಿ ಒಟ್ಟಿಗೆ ಕೆಲಸ ಮಾಡಿದ್ದರು. ಇದು ಬ್ಲಾಕ್ಬಸ್ಟರ್ ಎಂದು ಸಾಬೀತಾಗಿತ್ತು. ಚಿತ್ರ ಯಶಸ್ವಿಯಾದ ನಂತರ, ಇದೇ ಜೋಡಿಯ 'ಡಾನ್ -2' ಮತ್ತೆ ತೆರೆ ಮೇಲೆ ಬಂದಿತ್ತು. ಇದಾದ ಬಳಿಕ ಇವರಿಬ್ಬರೂ ಮದುವೆಯಾಗಿದ್ದಾರೆ ಎಂದೇ ಹೇಳಲಾಗುತ್ತಿದೆ. ಅಷ್ಟೇ ಅಲ್ಲದೇ, ಗೌರಿ ಅವರನ್ನು ಮದುವೆಯಾದ ಮೇಲೂ ಪ್ರಿಯಾಂಕಾ ಜೊತೆ, ಡೇಟಿಂಗ್ ಮುಂದುವರೆಸಿದ್ದರು. ಇದರಿಂದ ಶಾರುಖ್ ಮತ್ತು ಗೌರಿ ನಡುವಿನ ಸಂಬಂಧ ಹದಗೆಟ್ಟಿತ್ತು ಎಂದೂ ಹೇಳಲಾಗುತ್ತದೆ.
ಸರ್ ನೇಮ್ ಹಿಡಿದು ಪ್ರತಿಯೊಂದನ್ನು ಹೆಣ್ಣೇ ಯಾಕೆ ತ್ಯಾಗ ಮಾಡ್ಬೇಕು? ಗೌತಮ್ ಮಾತಿಗೆ ಚಪ್ಪಾಳೆಗಳ ಸುರಿಮಳೆ