
KGF 2 ಸಿನಿಮಾ ಇನ್ನೇನು ಎರಡು ದಿನ ಕಳೆದರೆ ಥಿಯೇಟರ್‌ನಲ್ಲಿ ರಾರಾಜಿಸುತ್ತೆ. ಪ್ರಶಾಂತ್ ನೀಲ್ ನಿರ್ದೇಶನ (Director Prashanth Neel), Rocking Star ಯಶ್ ನಟನೆ ಇರೋ ಈ ಸಿನಿಮಾ ವಿಶ್ವಾದ್ಯಂತ ಸಖತ್ ಹೈಪ್ ಕ್ರಿಯೇಟ್ ಮಾಡಿದೆ. ಈ ಚಿತ್ರದ ನಾಯಕಿ ಆಗಿರೋದು ಶ್ರೀನಿಧಿ ಶೆಟ್ಟಿ (Srinidhi Shetty). ಕಳೆದ ಕೆಲವು ದಿನಗಳಿಂದ ಹೀರೋ, ಡೈರೆಕ್ಟರ್ ಜೊತೆಗೆ ಬೆಳಗ್ಗೆ ದಿಲ್ಲಿ, ಸಂಜೆ ಹೈದರಾಬಾದ್ ಅಂತ ಸುತ್ತುತ್ತಿರುವ ಈ ಹುಡುಗಿ ತನ್ನ ಕೆಜಿಎಫ್ 2 ಜರ್ನಿ ಬಗ್ಗೆ ಹೇಳ್ಕೊಂಡಿದ್ದಾರೆ. ಈ ಸಿನಿಮಾಕ್ಕೆ ಬಂದಮೇಲೆ ಶ್ರೀನಿಧಿ ಶೆಟ್ಟಿ ಏನೇನೋ ಮಾತು ಕೇಳ್ಬೇಕಾಯಿತಂತೆ. ಬೇರೆ ಯಾವ ನಾಯಕಿಯಾದ್ರೂ ಇಂಥಾ ಮಾತಿಗೆ ಎದೆಗುಂದುತ್ತಿದ್ದರೇನೋ. ಆದರೆ ಶ್ರೀನಿಧಿ ಕಾನ್ಫಿಡೆನ್ಸ್ ನಲ್ಲೇ ಉತ್ತರಿಸಿದ್ದಾರೆ.
ಕೆಜಿಎಫ್ 2ನಲ್ಲಿ ಶ್ರೀನಿಧಿ ಶೆಟ್ಟಿ ನಿರ್ವಹಿಸುತ್ತಾ ಇರುವ ಪಾತ್ರದ ಹೆಸರು ರೀನಾ. ಕೆಜಿಎಫ್ ಮೊದಲ ಚಾಪ್ಟರ್‌ನಲ್ಲೂ ಈಕೆಯ ಪಾತ್ರ ಬಂದಿತ್ತು. ಶುರು ಶುರುವಲ್ಲಿ ರಾಕಿಗೆ ಚಮಕ್ ಕೊಡಲು ಪ್ರಯತ್ನಿಸೋ ಹುಡುಗಿಗೆ ಆಮೇಲಾಮೇಲೆ ಆತ ಇಂಟರೆಸ್ಟಿಂಗ್ ವ್ಯಕ್ತಿಯಾಗಿ ಕಾಣ್ತಾನೆ. ಈ ಸಿನಿಮಾದಲ್ಲಿ ಕಾಣಿಸಿಕೊಂಡ ರೀನಾ ಪಾತ್ರ ಎರಡನೇ ಚಾಪ್ಟರ್‌ನಲ್ಲೂ ಕಂಟಿನ್ಯೂ ಆಗುತ್ತೆ. ಅಲ್ಲಿಗೆ ಅವರು ಅರ್ಧ ಡಜನ್ ವರ್ಷಗಳಿಂದ ಈ ಟೀಮ್‌ನಲ್ಲಿದ್ದಾರೆ. ಈ ಟೈಮಲ್ಲಿ ತಮಿಳಿನ ಸ್ಟಾರ್ ನಟ ವಿಕ್ರಮ್ (Vikram) ಜೊತೆಗೆ ಒಂದು ಸಿನಿಮಾದಲ್ಲಿ ಈಕೆ ನಟಿಸ್ತಿದ್ದಾರೆ. ರೀನಾ ಪಾತ್ರ ತನ್ನ ವ್ಯಕ್ತಿತ್ವದ ಭಾಗದಂತೇ ಇವರಿಗೆ ಕಾಣಿಸುತ್ತಿದೆಯಂತೆ. ಆದರೆ ಪದೇ ಪದೇ ಕೆಲವು ಮಾತುಗಳು ಕೇಳಿ ಬರುತ್ತಿದ್ದು ಅದನ್ನು ನಿಭಾಯಿಸೋದು ಚಾಲೆಂಜಿಂಗ್ ಅನಿಸುತ್ತದೆಯಂತೆ. 2016ರಲ್ಲೇ ಶ್ರೀನಿಧಿ ಕೆಜಿಎಫ್ ಕತೆ ಕೇಳಿದ್ದಾರೆ. ಇದಾಗಿ ಎರಡು ವರ್ಷದಲ್ಲಿ ಸಿನಿಮಾ ಬಂದಿದೆ. ಆಮೇಲೆ ನಾಲ್ಕು ವರ್ಷ ಬಿಟ್ಟು ಇದರ ಎರಡನೇ ಭಾಗ ಬರುತ್ತಿದೆ. ಇದರಲ್ಲಿ ತನ್ನ ಪಾತ್ರ ಎಮೋಶನಲ್ ಆಗಿ ಜನರಿಗೆ ಕನೆಕ್ಟ್ ಆಗುತ್ತೆ ಅನ್ನೋ ಕಾನ್ಫಿಡೆನ್ಸ್ ಈಕೆಗಿದೆ. ತಾನು ಈ ಸಿನಿಮಾ ಜೊತೆಗೆ ಬೆಳೆಯುತ್ತಿದ್ದೇನೆ ಅನ್ನೋ ಹುರುಪೂ ಇದೆ.
ಮೊದಲ ದಿನವೇ ‘ಕೆಜಿಎಫ್-2’ 250 ಕೋಟಿ ಗಳಿಕೆ?
'ಈಗಾಗಲೇ ಇಂಡಸ್ಟ್ರಿಯಲ್ಲಿ ಎಸ್ಟಾಬ್ಲಿಶ್ ಆಗಿರುವ ನಟ ನಟಿಯರು ಎರಡು ಮೂರು ಅಥವಾ ಐದು ವರ್ಷಕ್ಕೊಂದು ಸಿನಿಮಾ ಮಾಡಿದರೂ ನಡೆಯುತ್ತದೆ. ಆದರೆ ನನ್ನಂಥಾ ಹೊಸಬರು ಹೀಗೆಲ್ಲ ಮಾಡೋಕ್ಕಾಗಲ್ಲ. ಒಂದಾದ ಮೇಲೊಂದರಂತೆ ಸಿನಿಮಾ ಮಾಡ್ತನೇ ಇರಬೇಕಾಗುತ್ತೆ. ಹಾಗಿದ್ದರೆ ಮಾತ್ರ ಬೆಳವಣಿಗೆ ಅಂತ ಅರ್ಥೈಸಿಕೊಳ್ಳಲಾಗುತ್ತೆ. ಆದರೆ ನಾನು ಕೆಜಿಎಫ್ ಬಿಟ್ಟರೆ ವಿಕ್ರಮ್ ಅವರ ಜೊತೆಗೆ ಕೋಬ್ರಾ ಅನ್ನೋ ಸಿನಿಮಾದಲ್ಲಿ ನಟಿಸುತ್ತಿದ್ದೇನೆ. ಈ ಚಿತ್ರ ಮೇ ತಿಂಗಳಲ್ಲಿ ರಿಲೀಸ್ ಆಗ್ತಿದೆ. ಈ ಎರಡು ಸಿನಿಮಾ ಬಿಟ್ಟರೆ ನಾನು ಮತ್ತೆಲ್ಲೂ ಕಾಣಿಸಿಕೊಂಡಿಲ್ಲ. ಈ ಕಾರಣಕ್ಕೆ ನಾನು ಏನೆಲ್ಲ ಮಾತುಗಳನ್ನು ಕೇಳಬೇಕಾಯ್ತು' ಎಂದು ನಟಿ ಹೇಳಿದ್ದಾರೆ.
ಇಲ್ಲಿ ಯಾವುದೂ ಶಾಶ್ವತವಲ್ಲ; ಶಾರುಖ್, ಸಲ್ಮಾನ್ ಗೆ ಹೋಲಿಸಿದ್ದಕ್ಕೆ ಯಶ್ ಪ್ರತಿಕ್ರಿಯೆ
'ನನ್ನ ಪೇರೆಂಟ್ಸ್ ಗೂ ಮಗಳು ಹೆಚ್ಚೆಚ್ಚು ಸಿನಿಮಾದಲ್ಲಿ ಕಾಣಿಸಿಕೊಳ್ಳಬೇಕು. ಅವಳ ಬೆಳವಣಿಗೆ ಆಗಬೇಕು ಅನ್ನೋ ಕನಸು ಇದ್ದೇ ಇರುತ್ತದೆ. ನನಗೆ ನಂತರ ಬಂದ ನಟಿಯರೂ ಒಂದಾದ ಮೇಲೊಂದರಂತೆ ಸಿನಿಮಾ ಒಪ್ಪಿಕೊಳ್ಳುತ್ತಿರುವಾಗ, ನಾನು ಬರೀ ಕೆಜಿಎಫ್ ನಲ್ಲಿ ಮಾತ್ರ ಕಾಣಿಸ್ತಿರೋದರ ಬಗ್ಗೆ ನನ್ನ ತಾಯಿ ತಂದೆಗೂ ಆತಂಕ ಇದೆ. ಅವರು ಆಗಾಗ ಬೇರೆ ನಟಿಯರ ಜೊತೆಗೆ ಹೋಲಿಕೆ ಮಾಡ್ತಾ ಈ ಬಗ್ಗೆ ಪ್ರಶ್ನೆ ಕೇಳುತ್ತಿರುತ್ತಾರೆ. ಅವರಿಗೆ ಹಾಗೂ ಈ ಬಗ್ಗೆ ಮಾತನಾಡೋರಿಗೆ ನಾನು ವಿವರಿಸೋದಿಷ್ಟೇ. ಕೆಜಿಎಫ್ ಯಾವುದೋ ಒಂದು ಸಾಮಾನ್ಯ ಸಿನಿಮಾ ಅಲ್ಲ. ಇಲ್ಲಿರುವ ಯಶ್ (Yash), ಸಂಜಯ್ ದತ್ತ್ (Sanjay Dutt), ರವೀನಾ ಟಂಡನ್ (Raveena Tandon), ಪ್ರಕಾಶ್ ರೈ (Prakash Rai).. ಹೀಗೆ ಪ್ರತಿಯೊಬ್ಬ ಆಕ್ಟರ್ ಜೊತೆಗೆ ಸ್ಕ್ರೀನ್ ಶೇರ್ ಮಾಡೋದು ಒಂದೊಂದು ಸಿನಿಮಾದ ಎಕ್ಸ್ ಪೀರಿಯನ್ಸ್ ಅನ್ನೇ ಕೊಡುತ್ತೆ. ಅದು ಹೆಚ್ಚಿನ ಯಾವ ನಟಿಗೂ ಸಿಗದ ಸುವರ್ಣಾವಕಾಶ. ಒಂಥರಾ ನನ್ನ ಕನಸುಗಳೆಲ್ಲ ನನಸಾದ ಹಾಗೆ. ಇದನ್ನು ಅವರಿಗೆ ವಿವರಿಸ್ತೀನಿ' ಅಂತಾರೆ.
ಸದ್ಯ ಈ ಎಲ್ಲ ಮಾತುಗಳಿಗೆ ಉತ್ತರಿಸೋದಕ್ಕಿಂತಲೂ ಕೆಜಿಎಫ್ ಚಾಪ್ಟರ್ 2 ಬಿಡುಗಡೆ ಆಗ್ತಿರೋದು ಶ್ರೀನಿಧಿ ಎದೆಬಡಿತ ಹೆಚ್ಚಿಸಿದೆ. ತನ್ನ ನಟನೆಯ ಸಿನಿಮಾ ಇಂಟರ್ ನ್ಯಾಶನಲ್ ಲೆವೆಲ್ ನಲ್ಲಿ ಯಾವ ಮಟ್ಟದ ಹೆಸರು ಮಾಡಬಹುದು ಅನ್ನೋದರ ಬಗ್ಗೆ ಅವರು ಮನಸ್ಸಲ್ಲೇ ಮಂಡಿಗೆ ತಿನ್ನುತ್ತಿದ್ದಾರೆ.
RRR ಮತ್ತು ಕಾಶ್ಮೀರ್ ಫೈಲ್ಸ್ ನೋಡಿದ್ರಾ ಯಶ್?, ರಾಕಿಂಗ್ ಸ್ಟಾರ್ ಉತ್ತರವೇನು?
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.