
ಬಾಲಿವುಡ್ ಖ್ಯಾತ ನಟಿ ಮಲೈಕಾ ಅರೋರಾ ಅವರ ತಂದೆ ಅನಿಲ್ ಅರೋರಾ ಅವರು ಟೆರೇಸ್ನಿಂದ ಬಿದ್ದು ಈಚೆಗೆ ಆತ್ಮಹತ್ಯೆ ಮಾಡಿಕೊಂಡಿದ್ದರು. ಅವರ ಸಾವಿನ ಕಾರಣ ಮಾತ್ರ ಇನ್ನೂ ನಿಗೂಢ. ಇದು ಆತ್ಮಹತ್ಯೆಯೋ, ಆಕಸ್ಮಿಕವೋ ಎನ್ನುವ ಬಗ್ಗೆ ಸಾಕಷ್ಟು ಊಹಾಪೋಹಗಳು ಇಂದಿಗೂ ನಡೆದಿವೆ. ಮಲೈಕಾ ಅಮ್ಮ ಜಾಯ್ಸ್ ಪಾಲಿಕಾರ್ಪ್ ಮತ್ತು ಅನಿಲ್ ಅವರು ಡಿವೋರ್ಸ್ ಪಡೆದು ಪ್ರತ್ಯೇಕವಾಗಿದ್ದರೂ ಕೆಲ ವರ್ಷಗಳಿಂದ ಒಟ್ಟಿಗೇ ನೆಲೆಸುತ್ತಿದ್ದಾರೆ. ಆದ್ದರಿಂದ ಇದು ಆತ್ಮಹತ್ಯೆ ಅಲ್ಲ ಎಂದೇ ಅಂದುಕೊಳ್ಳಲಾಗಿತ್ತು. ಜಾಯ್ಸ್ ಪಾಲಿಕಾರ್ಪ್ ಅವರು ಪೊಲೀಸರಿಗೆ ನೀಡಿದ್ದ ಹೇಳಿಕೆಯಲ್ಲಿ, ಅನಿಲ್ ಅವರ ಚಪ್ಪಲಿಗಳು ಲಿವಿಂಗ್ ರೂಮಿನಲ್ಲಿ ಕಂಡುಬಂದಿದ್ದವು. ಬಾಲ್ಕನಿಯಲ್ಲಿ ಅವರನ್ನು ಹುಡುಕಲು ಹೋದೆ. ಅಲ್ಲಿ ಕುಳಿತು ಪೇಪರ್ ಓದುವ ಅಭ್ಯಾಸವನ್ನು ಹೊಂದಿದ್ದರು. ಅವರು ಬಾಲ್ಕನಿಯನ್ನು ತಲುಪಿದಾಗ, ಅನಿಲ್ ಅಲ್ಲಿ ಇರಲಿಲ್ಲ. ನಂತರ ಅವರು ಕೆಳಗೆ ನೋಡಿದಾಗ, ಕಾವಲುಗಾರ ಜೋರಾಗಿ ಕಿರುಚುತ್ತಿದ್ದರು ಮತ್ತು ಅನಿಲ್ ಕೆಳಗೆ ಬಿದ್ದಿದ್ದರು ಎಂದು ತಿಳಿಸಿದ್ದರು. ಆಗಲೂ ಇದು ಆತ್ಮಹತ್ಯೆಯೋ ಹೌದೋ ಅಲ್ಲವೋ ಎನ್ನುವ ಸಂದೇಹವೇ ಇದೆ.
ತಂದೆಯ ಸಾವಿನ ಬೆನ್ನಲ್ಲೇ ನಟಿ ಮಲೈಕಾ ಅವರ ವಿಡಿಯೋ ಒಂದು ವೈರಲ್ ಆಗಿದೆ. ಇದರಲ್ಲಿ ನಟಿ ಅನಾರೋಗ್ಯದಿಂದ ಬಳಲುತ್ತಿರುವುದು ತಿಳಿದುಬರುತ್ತದೆ. ಹಾಗೆಂದು ಗಂಭೀರವಾಗಿದ್ದೇನೂ ಅಲ್ಲ. ಟಿಶ್ಯೂ ಪೇಪರ್ನಿಂದ ಮೂಗನ್ನು ಒರೆಸಿಕೊಂಡಿದ್ದಾರೆ. ನಂತರ ಸೆಕ್ಯುರಿಟಿ ಬಳಿಯಿದ್ದ ತಮ್ಮ ಬ್ಯಾಗನ್ನು ಪಡೆದುಕೊಂಡಿದ್ದಾರೆ. ಆದರೆ ಮುಖ ಬಾಡಿದೆ ಹಾಗೂ ಅನಾರೋಗ್ಯದಿಂದ ಬಳಲುತ್ತಿರುವುದನ್ನು ನೋಡಬಹುದು. ಇದರ ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ಥಹರೇವಾರಿ ಕಮೆಂಟ್ ಸುರಿಮಳೆಯಾಗುತ್ತಿದೆ. ಹೆಚ್ಚಿನವರು ತಂದೆಯ ಅಗಲಿಕೆಯಿಂದ ಈ ರೀತಿ ನೋವು ಆಗಿರಬಹುದು ಎಂದಿದ್ದರೆ, ಮತ್ತೆ ಕೆಲವರು, ಅಂತ್ಯಸಂಸ್ಕಾರದ ದಿನವೂ ಮೇಕಪ್ ಮಾಡಿಕೊಂಡು ಬಂದಿದ್ದರು, ಅದೆಂಥ ನೋವು ಎಂದು ಪ್ರಶ್ನಿಸಿದ್ದಾರೆ.
ಆತ್ಮಹತ್ಯೆಗೂ ಮುನ್ನ ಮಗಳು ಮಲೈಕಾ ಅರೋರಾಗೆ ಕರೆ ಮಾಡಿ ನೋವು ತೋಡಿಕೊಂಡಿದ್ದ ಅನಿಲ್ ಮೆಹ್ತಾ!
ಆದರೆ ಅಭಿಮಾನಿಗಳಿಗೆ ಮಾತ್ರ ಮಲೈಕಾ ಅರೋರಾರ ಈ ಸ್ಥಿತಿಯನ್ನು ನೋಡಲು ಆಗುತ್ತಿಲ್ಲ. ತುಂಬಾ ಬೇಸರ ಪಟ್ಟುಕೊಂಡಿದ್ದಾರೆ. ಬೇಗ ಹುಷಾರಾಗಿ ಎಂದು ಹಾರೈಸುತ್ತಿದ್ದಾರೆ. ಇನ್ನು ತಂದೆಯ ಸಾವಿನ ವಿಷಯದ ಕುರಿತು ಹೇಳುವುದಾದರೆ, ಇದು ಆತ್ಮಹತ್ಯೆ ಎಂದೇ ಇದುವರೆಗೂ ಹೇಳಲಾಗುತ್ತಿದೆ. ಇದಕ್ಕೆ ಕಾರಣ ಅನಿಲ್ ಅರೋರಾ ಅವರು ಸಾಯುವ ಮುನ್ನ ತಮ್ಮ ಇಬ್ಬರು ಪುತ್ರಿಯರಾದ ಮಲೈಕಾ ಅರೋರಾ ಮತ್ತು ಅಮೃತಾ ಅವರಿಗೆ ಕರೆ ಮಾಡಿ ನೋವು ತೋಡಿಕೊಂಡಿರುವ ವಿಷಯ ತಿಳಿದುಬಂದಿದೆ. ತೀವ್ರವಾದ ಹತಾಶೆಯಲ್ಲಿದ್ದ ಅವರು, ನಾನು ಅನಾರೋಗ್ಯದಿಂದ ತುಂಬಾ ನೊಂದಿದ್ದೇನೆ. ಹತಾಶೆಯಲ್ಲಿದ್ದೇನೆ ಎಂದು ಹೇಳಿರುವುದಾಗಿ ವರದಿಯಾಗಿದೆ. ಅದಾದ ಕೆಲವೇ ಗಂಟೆಗಳಲ್ಲಿ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆ ಸಮಯದಲ್ಲಿ ಮಲೈಕಾ ಪುಣೆಯಲ್ಲಿದ್ದರು. ಅನಿಲ್ ಅವರು ದೀರ್ಘಕಾಲದವರೆಗೆ ಅನಾರೋಗ್ಯದಿಂದ ಬಳಲುತ್ತಿದ್ದರು ಎಂದು ಹೇಳಲಾಗುತ್ತಿದ್ದರೂ, ಮಲೈಕಾ ತಾಯಿ ಜಾಯ್ಸ್, ಅವರಿಗೆ ಯಾವುದೇ ಅನಾರೋಗ್ಯವಿರಲಿಲ್ಲ. ಮೊಣಕಾಲು ನೋವಿನಿಂದ ಬಳಲುತ್ತಿದ್ದರು ಅಷ್ಟೇ ಎಂದಿದ್ದಾರೆ.
ತಮ್ಮ ತಂದೆಯ ನಿಧನ ಬಗ್ಗೆ ಮಲೈಕಾ ಸೋಷಿಯಲ್ ಮೀಡಿಯಾದಲ್ಲಿ ದುಃಖದಿಂದ ಪೋಸ್ಟ್ ಹಾಕಿದ್ದರು. ‘ನಮ್ಮ ತಂದೆಯ ಸಾವಿನಿಂದ ಎಲ್ಲರೂ ದುಃಖಿತರಾಗಿದ್ದೇವೆ. ಅವರು ತುಂಬಾ ಸೌಮ್ಯ ವ್ಯಕ್ತಿ, ಪ್ರೀತಿಯ ಅಜ್ಜ, ಪ್ರೀತಿಯ ಪತಿ ಮತ್ತು ನಮ್ಮ ಅತ್ಯುತ್ತಮ ಸ್ನೇಹಿತರಾಗಿದ್ದರು. ಅವರ ನಿಧನದಿಂದ ನಮ್ಮ ಕುಟುಂಬವು ತೀವ್ರ ಆಘಾತಕ್ಕೊಳಗಾಗಿದೆ. ಈ ಕಷ್ಟದ ಸಮಯದಲ್ಲಿ ನಾವು ಮಾಧ್ಯಮಗಳು ಮತ್ತು ಹಿತೈಷಿಗಳಿಂದ ಗೌಪ್ಯತೆಯನ್ನು ಕೋರುತ್ತೇವೆ. ನಿಮ್ಮ ಬೆಂಬಲ ಮತ್ತು ಪ್ರೀತಿಗಾಗಿ ನಾವು ಧನ್ಯವಾದಗಳು ಎಂದು ಬರೆದಿದ್ದರು.
ಆರೇಳು ದಶಕಗಳಲ್ಲಿ ಮದುವೆ ಎನ್ನುವುದೇ ಇರಲ್ಲ: ಅಧ್ಯಯನದಿಂದ ಬಯಲಾಗಿದೆ ಶಾಕಿಂಗ್ ವಿಷಯ!
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.