ನಿಮಗೆ ಗರ್ಲ್ಫ್ರೆಂಡ್ ಅಮೃತಾ ಸಿಂಗ್ ಬೇಕೋ, ಚಿತ್ರ ಬೇಕೋ ಎಂದು ನಿರ್ಮಾಪಕರು ಪ್ರಶ್ನಿಸಿದ್ರಂತೆ ಸೈಫ್ ಅಲಿಗೆ. ಚೊಚ್ಚಲ ಚಿತ್ರದಿಂದಲೇ ಔಟ್ ಆಗಿದ್ದರು ನಟ!
ಬಾಲಿವುಡ್ನ ಸದ್ಯದ ಯಶಸ್ವಿ ಜೋಡಿಗಳಲ್ಲಿ ಒಂದೆನಿಸಿದೆ ಸೈಫ್ ಅಲಿ ಖಾನ್ ಮತ್ತು ಕರೀನಾ ಕಪೂರ್ ಅವರ ಜೋಡಿ. ಎಲ್ಲರಿಗೂ ತಿಳಿದಿರುವಂತೆ ಇದು ಸೈಫ್ ಅಲಿ ಅವರಿಗೆ ಎರಡನೆಯ ಮದುವೆ. ಅವರ ಮೊದಲ ಮದುವೆಯಾದದ್ದು ನಟಿ ಅಮೃತಾ ಸಿಂಗ್ ಅವರ ಜೊತೆಗೆ. ತಮ್ಮ ಮೊದಲ ಮದುವೆಗೆ ಬಂದಿದ್ದ ಕರೀನಾ ಕಪೂರ್ ಅವರನ್ನು ಮಗಳೇ ಎಂದು ಕರೆದಿದ್ದ ಸೈಫ್ ಅಲಿ ನಂತರ ಆಕೆಯನ್ನೇ ಮದುವೆಯಾಗಿ ಟ್ರೋಲ್ಗೂ ಒಳಗಾಗಿದ್ದಿದೆ. ಅದೇನೇ ಇದ್ದರೂ ಸದ್ಯ ಈ ದಂಪತಿಗೆ ಇಬ್ಬರು ಪುತ್ರರಿದ್ದಾರೆ. ಕೆಲವು ಖ್ಯಾತನಾಮ ನಟರಂತೆಯೇ ಸೈಫ್ ಅಲಿ ಕೂಡ ಇಬ್ಬರೂ ಹಿಂದೂ ಯುವತಿಯರನ್ನು ಮದುವೆಯಾಗಿ ಸಕತ್ ಸುದ್ದಿ ಮಾಡಿದವರು. ಸೈಫ್ ಅಲಿ ಖಾನ್ ಕರೀನಾರಿಗಿಂತಲೂ 10 ವರ್ಷ ದೊಡ್ಡವರು. 5 ವರ್ಷಗಳ ಕಾಲ ಲಿವ್-ಇನ್ (Live in relation) ಸಂಬಂಧದಲ್ಲಿದ್ದ ಈ ಜೋಡಿ ಕೊನೆಗೆ ಮದುವೆಯಾಗಿದೆ. ಅದಾಗಲೇ ಲವ್ ಜಿಹಾದ್ ಎಂಬ ಬಗ್ಗೆಯೂ ದೊಡ್ಡ ಮಟ್ಟದಲ್ಲಿ ಸುದ್ದಿಯೇ ಆಗಿಬಿಟ್ಟಿತ್ತು.
ಇದೀಗ ಸೈಫ್ ತಮ್ಮ ಬಾಲಿವುಡ್ಗೆ ಎಂಟ್ರಿ ಕೊಡುವ ಮೊದಲ ದಿನಗಳನ್ನು ನೆನೆಪಿಸಿಕೊಂಡಿದ್ದಾರೆ. ಹಿರಿಯ ನಟಿ ಶರ್ಮಿಳಾ ಟ್ಯಾಗೋರ್ ಅವರ ಪುತ್ರರಾಗಿರುವ ಸೈಫ್, ಯಶ್ ಚೋಪ್ರಾ ಅವರ ಪರಂಪರಾ ಚಿತ್ರದ ಮೂಲಕ ಚಿತ್ರರಂಗದಲ್ಲಿ ದೊಡ್ಡ ಬ್ರೇಕ್ ಪಡೆದರು. ಯೇ ದಿಲ್ಲಗಿ, ಮೈನ್ ಖಿಲಾಡಿ ತೂ ಅನಾಡಿ, ಕಚ್ಚೆ ಧಾಗೆ, ದಿಲ್ ಚಾಹ್ತಾ ಹೈ ಮತ್ತು ಇನ್ನೂ ಹೆಚ್ಚಿನ ಚಿತ್ರಗಳೊಂದಿಗೆ ಅವರು ವ್ಯಾಪಕವಾದ ಸ್ಟಾರ್‌ಡಮ್ ಗಳಿಸಿದರು. ಅವರ ವೈಯಕ್ತಿಕ ಜೀವನದಲ್ಲಿ, ಅವರು 1991 ರಲ್ಲಿ ನಟಿ ಅಮೃತಾ ಸಿಂಗ್ ಅವರನ್ನು ಮೊದಲ ಬಾರಿಗೆ ವಿವಾಹವಾದರು, ಆದರೆ ಅವರ ಮದುವೆಯು 2004 ರಲ್ಲಿ ಕೊನೆಗೊಂಡಿತು. ನಂತರ ಅವರು 2012 ರಲ್ಲಿ ಕರೀನಾ ಕಪೂರ್ ಅವರನ್ನು ವಿವಾಹವಾದರು. ಅಮೃತಾ ಸಿಂಗ್ ಅವರನ್ನು ಮದುವೆಯಾಗುವ ಪೂರ್ವದಲ್ಲಿ ಅವರ ಜೊತೆ ಫ್ರೆಂಡ್ಷಿಪ್ನಲ್ಲಿದ್ದಾಗ ಏನಾಯಿತು ಎನ್ನುವುದನ್ನು ಸಂದರ್ಶನವೊಂದರಲ್ಲಿ ನಟ ಹೇಳಿಕೊಂಡಿದ್ದಾರೆ.
ಕರೀನಾ ಜೊತೆನೂ ಸೈಫ್‌ಗೆ ಬೋರ್ ಆಗೋಕೆ ಶುರುವಾಯ್ತಾ? ಸಂದರ್ಶನದಲ್ಲಿ ಗಂಡನ ಮಾತಿಗೆ ಕಸಿವಿಸಿಗೊಂಡ ನಟಿ
ಅದು 1992ರ ಸಮಯ. ಸೈಫ್ ಅಲಿ ಖಾನ್ ಅವರನ್ನು ಚಲನಚಿತ್ರ ನಿರ್ಮಾಪಕ ರಾಹುಲ್ ರಾವೈಲ್ ಅವರು ತಮ್ಮ ಚಿತ್ರ, ಬೇಖುದಿಗಾಗಿ ಆಯ್ಕೆ ಮಾಡಿದರು, ಇದರಲ್ಲಿ ಕಾಜೋಲ್ ನಾಯಕಿಯಾಗಿ ಕಾಣಿಸಿಕೊಂಡರು. ಇದು ಸೈಫ್‌ಗೆ ದೊಡ್ಡ ಅವಕಾಶವಾಗಿತ್ತು, ಏಕೆಂದರೆ ಇದು ಚಿತ್ರರಂಗಕ್ಕೆ ಅವರ ಚೊಚ್ಚಲ ಪ್ರವೇಶವಾಗಿತ್ತು. ಅವರ ತಾಯಿ ಶರ್ಮಿಳಾ ಟ್ಯಾಗೋರ್ ಕೂಡ ಸಂತೋಷ ಪಟ್ಟುಕೊಂಡಿದ್ದರು. ತಮ್ಮ ಮಗ ತನ್ನ ಒಳ್ಳೆಯ ಸ್ನೇಹಿತೆ ತನುಜಾಳ ಮಗಳು ಕಾಜೋಲ್ ಜೊತೆ ಕೆಲಸ ಮಾಡುತ್ತಾನೆ ಎಂದು ಖುಷಿ ಪಟ್ಟಿದ್ದರು. ಆದರೆ ಸೈಫ್ ಅವರನ್ನು ಚಿತ್ರದಿಂದ ಹೊರಹಾಕಲಾಗಿತ್ತು. ಅದಕ್ಕೆ ಕಾರಣ, ಸೈಫ್ ತಮ್ಮ ವೃತ್ತಿಪರವಲ್ಲದ ನಡವಳಿಕೆಯಿಂದ ಚಿತ್ರನಿರ್ಮಾಪಕ ರಾಹುಲ್ ರಾವೈಲ್ ಕೋಪಕ್ಕೆ ಗುರಿಯಾಗಿದ್ದರು.
ಅದಕ್ಕೆ ಕಾರಣ ಅವರು ಅಮೃತಾ ಸಿಂಗ್ ಅವರನ್ನು ಪ್ರೀತಿಸುತ್ತಿದ್ದರು. ಇದು ರಾಹುಲ್ ಅವರ ಕೋಪಕ್ಕೆ ಕಾರಣವಾಯಿತು. ನೀವು ನಿಮ್ಮ ಗರ್ಲ್ಫ್ರೆಂಡ್ ಬಿಡಬೇಕು, ಇಲ್ಲವೇ ಚಿತ್ರ ಬಿಡಬೇಕು ಎಂದಿದ್ದರಂತೆ. ಆಗ ಅಮೃತಾ ಅವರನ್ನು ಸಿಕ್ಕಾಪಟ್ಟೆ ಪ್ರೀತಿಸುತ್ತಿದ್ದ ಸೈಫ್, ಆಕೆಯನ್ನು ಬಿಡಲು ಆಗುವುದಿಲ್ಲ ಎಂದರಂತೆ. ಅದಕ್ಕಾಗಿಯೇ ಅವರನ್ನು ಹೊರಕ್ಕೆ ಹಾಕಲಾಯಿತು. ಕೊನೆಗೆ ಅಮೃತಾ ಸಿಂಗ್ ಅವರನ್ನು ಮದುವೆಯಾದರು. ಆ ಸಮಯದಲ್ಲಿ ಸೈಫ್ ಅವರಿಗೆ ವಯಸ್ಸು 21. ಆದರೆ ಅಮೃತಾ ಸಿಂಗ್ ಅವರಿಗೆ 32 ವರ್ಷ ವಯಸ್ಸಾಗಿತ್ತು! ಎಲ್ಲರನ್ನೂ ಎದುರು ಹಾಕಿಕೊಂಡು 12 ವರ್ಷ ಹಿರಿಯ ನಟಿಯನ್ನು ಮದುವೆಯಾಗಿದ್ದರು ಎಂದೇ ಸುದ್ದಿಯಾಗಿತ್ತು. ಇದು ದೊಡ್ಡ ಮಟ್ಟದಲ್ಲಿ ಹಲ್ಚಲ್ ಸೃಷ್ಟಿಸಿತ್ತು. ನಂತರ ಸೈಫ್ ಅಲಿ ಖಾನ್ ಮತ್ತು ಅಮೃತಾ ಸಿಂಗ್ 13 ವರ್ಷಗಳ ದಾಂಪತ್ಯದ ನಂತರ ವಿಚ್ಛೇದನ ಪಡೆದರು. 2004ರಲ್ಲಿ ಸೈಫ್ ಹಾಗೂ ಅಮೃತಾ ತಮ್ಮ ಮದುವೆಯನ್ನು ಕೊನೆಗೊಳಿಸಲು ನಿರ್ಧರಿಸಿದಾಗ ಸಾರಾ 10 ಮತ್ತು ಇಬ್ರಾಹಿಂ 4 ವರ್ಷ ವಯಸ್ಸಿನವರಾಗಿದ್ದರು. ಇದೀಗ 53 ವರ್ಷದ ಸೈಫ್ ಅಲಿ ಖಾನ್ ಅವರಿಗೆ ಅಮೃತಾ ಸಿಂಗ್ ಮತ್ತು ಕರೀನಾ ಕಪೂರ್ ಈ ಇಬ್ಬರು ಪತ್ನಿಯರಿಂದ ನಾಲ್ವರು ಮಕ್ಕಳಿದ್ದಾರೆ. ಅವರ ಹೆಸರು ಸಾರಾ ಅಲಿ ಖಾನ್ (Sara Ali Khan), ಇಬ್ರಾಹಿಂ ಅಲಿ ಖಾನ್, ತೈಮೂರು ಅಲಿ ಖಾನ್ ಹಾಗೂ ಜೆಹ್ ಅಲಿ ಖಾನ್.
ಪತ್ನಿಯ ಬಿಕಿನಿ ಆಸೆ ಈಡೇರಿಸಲು 418 ಕೋಟಿ ರೂ. ದ್ವೀಪ ಖರೀದಿಸಿದ ಪತಿ! ವಿಡಿಯೋ ನೋಡಿ ಸುಸ್ತಾದ ನೆಟ್ಟಿಗರು