ಸಮಂತಾ ಮಾಜಿ ಪತಿಗೆ ಪ್ರೇಮಿಗಳ ದಿನಕ್ಕೆ ಶುಭ ಹಾರೈಸಿದ ಸಾಯಿ ಪಲ್ಲವಿ... !

Published : Feb 14, 2024, 12:12 PM ISTUpdated : Feb 14, 2024, 12:15 PM IST
 ಸಮಂತಾ ಮಾಜಿ ಪತಿಗೆ ಪ್ರೇಮಿಗಳ ದಿನಕ್ಕೆ ಶುಭ ಹಾರೈಸಿದ ಸಾಯಿ ಪಲ್ಲವಿ... !

ಸಾರಾಂಶ

ಟಾಲಿವುಡ್ ತಾರೆಯರಾದ ಸಾಯಿ ಪಲ್ಲವಿ ಹಾಗೂ ನಾಗಚೈತನ್ಯ ಪ್ರೇಮಿಗಳ ದಿನದಂದು ಜೊತೆಯಾಗಿ ಕಾಣಿಸಿಕೊಂಡು ಅಭಿಮಾನಿಗಳಿಗೆ ಶಾಕಿಂಗ್ ಸರ್ಫ್ರೈಸ್ ನೀಡಿದ್ದು, ಇವರಿಬ್ಬರು ಜೊತೆಯಾಗಿರುವ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಟಾಲಿವುಡ್ ತಾರೆಯರಾದ ಸಾಯಿ ಪಲ್ಲವಿ ಹಾಗೂ ನಾಗಚೈತನ್ಯ ಪ್ರೇಮಿಗಳ ದಿನದಂದು ಜೊತೆಯಾಗಿ ಕಾಣಿಸಿಕೊಂಡು ಅಭಿಮಾನಿಗಳಿಗೆ ಶಾಕಿಂಗ್ ಸರ್ಫ್ರೈಸ್ ನೀಡಿದ್ದು, ಇವರಿಬ್ಬರು ಜೊತೆಯಾಗಿರುವ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಸ್ವತಃ ಸಾಯಿ ಪಲ್ಲವಿ ಅವರೇ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಈ ವೀಡಿಯೋವನ್ನು ಪೋಸ್ಟ್ ಮಾಡಿದ್ದು, ಸ್ವಲ್ಪ ಹೊತ್ತಿನಲ್ಲೇ ಈ ವೀಡಿಯೋವನ್ನು 80 ಸಾವಿರಕ್ಕೂ ಹೆಚ್ಚು ಜನ ವೀಕ್ಷಿಸಿ ವೈರಲ್ ಮಾಡಿದ್ದಾರೆ.

ಅಂದಹಾಗೆ ಸಾಯಿ ಪಲ್ಲವಿ ಹಾಗೂ ನಾಗಚೈತನ್ಯ ಜೊತೆಯಾಗಿ ನಟಿಸುತ್ತಿರುವ ತಮ್ಮ ಹೊಸ ಸಿನಿಮ ಥಾಂಡೆಲ್‌ಗಾಗಿ ಹೀಗೆ ಒಂದೇ ವೀಡಿಯೋದಲ್ಲಿ ಪ್ರೇಮಿಗಳಂತೆ ಪೋಸ್ ನೀಡಿದ್ದಾರೆ. ಇದರಲ್ಲಿ ನಾಗಚೈತನ್ಯ ವೀಡಿಯೋ ಕಾಲ್‌ನಲ್ಲಿ ಮಾತನಾಡುತ್ತಾ ಬುಜ್ಜಿ ತಲ್ಲಿ ಬಂದ್ಬಿಡುತ್ತೇನಲ್ವೆ? ನಾ ಓಯೇ ಅಂತ ಪ್ರೇಮಿಯನ್ನು ರಮಿಸುವಂತೆ ಕರೆಯುತ್ತಿದ್ದು, ನಾಗಚೈತನ್ಯ ಅವರ ಈ ಪ್ರೇಮ ತುಂಬಿದ ಮನವಿಗೆ ಸಾಯಿ ಪಲ್ಲವಿ ಮೊದಲಿಗೆ ಹುಸಿ ಮುನಿಸು ತೋರಿ ಕೊನೆಯಲ್ಲಿ ನಗುತ್ತಾ  ಅಲ್ಲಿಂದ ಓಡುತ್ತಾರೆ. ತಮ್ಮ ಮುಂಬರುವ ಥಾಂಡೆಲ್ ಸಿನಿಮಾದ ಪ್ರಚಾರಕ್ಕಾಗಿ, ಈ ವೀಡಿಯೋ ಪೋಸ್ಟ್ ಮಾಡಿ ಪ್ರೇಮಿಗಳ ದಿನದ ಶುಭ ಹಾರೈಸಿದ್ದಾರೆ ಸಾಯಿ ಪಲ್ಲವಿ. ಇದೇ ವೀಡಿಯೋವನ್ನು ಸ್ವತಃ ನಾಗ ಚೈತನ್ಯ ಕೂಡ ತಮ್ಮ ಇನ್ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. 
ಸಾಯಿ ಪಲ್ಲವಿ ಹಾಗೂ ನಾಗಚೈತನ್ಯ  ನಟನೆಯ ಈ ಸಿನಿಮಾವನ್ನು ಕಾರ್ತಿಕೇಯ ಸಿನಿಮಾ ಖ್ಯಾತಿಯ ಚಂದೂ ಮೊಂಡೆಟಿ ನಿರ್ದೇಶಿಸುತ್ತಿದ್ದಾರೆ. ಸಾಯಿ ಪಲ್ಲವಿಗೆ ಈ ಸಿನಿಮಾದಲ್ಲಿ ಮಹಿಳಾ ಪ್ರಧಾನ್ಯತೆಯ ಪಾತ್ರವಿದ್ದು, ಇದರ ಶೇಕಡಾ 40 ರಷ್ಟು ಶೂಟಿಂಗ್ ಮುಗಿದಿದೆ. ಶ್ರೀಕಾಕುಲಂನ ಹುಡುಗಿಯಾಗಿ ಹಳ್ಳಿಯ ಸುಂದರಿಯಾಗಿ ಕಾಣಿಸಿಕೊಳ್ಳಲಿದ್ದಾರೆ. 

ನ್ಯಾಚುರಲ್​ ಬ್ಯೂಟಿ ಸಾಯಿ ಪಲ್ಲವಿ ಜೊತೆ ಜಪಾನ್​ನಲ್ಲಿ ಆಮೀರ್​ ಪುತ್ರ ಜುನೈದ್​! ಏನಿದು ಹೊಸ ವಿಷ್ಯ?

ಇತ್ತೀಚಿನ ವರದಿ ಪ್ರಕಾರ, ಈ ಸಿನಿಮಾವೂ ದುರಂತ ಅಂತ್ಯದ ಕತೆಯನ್ನು ಹೊಂದಿದ್ದು, ಸಾಯಿ ಪಲ್ಲವಿ ಪಾತ್ರವೂ ಚಿತ್ರದಲ್ಲಿ ಹಾದು ಹೋಗುತ್ತದೆ. ಆಕಸ್ಮಿಕವಾಗಿ ಪಾಕಿಸ್ತಾನದ ಜಲಪ್ರದೇಶವನ್ನು ಪ್ರವೇಶಿಸಿ ಅಲ್ಲಿನ ಪೊಲೀಸರಿಂದ ಬಂಧನಕ್ಕೆ ಒಳಗಾಗುವ ಥಂಡೇಲ್ ಎಂಬ ಓರ್ವ ಮೀನುಗಾರನ ಕತೆಯನ್ನು ಸಿನಿಮಾ ಹೊಂದಿದೆ.

ಸಾಯಿ ಪಲ್ಲವಿ  ಈ ಸಿನಿಮಾದಲ್ಲಿ ಬಂಡಾಯ ಮನೋಭಾವದ ಸಾಮಾಜಿಕ ಆದರ್ಶ ಮೌಲ್ಯಗಳನ್ನು ಹೊಂದಿರುವ ಹುಡುಗಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಸುದ್ದಿಯ ಪ್ರಕಾರ ಈ ಸಿನಿಮಾಗಾಗಿ ಸಾಯಿ ಪಲ್ಲವಿ ಅವರು ಶ್ರೀಕಾಕುಲಂ ಆಡುಭಾಷೆಯನ್ನೂ ಕಲಿತಿದ್ದಾರೆ. ಸಾಯಿ ಪಲ್ಲವಿ ಅವರ ಪಾತ್ರವೂ ಈ ಸಿನಿಮಾದಲ್ಲಿ ಪ್ರಮುಖ ವಿಚಾರವಾಗಿದ್ದು, ಇದರ ಜೊತೆಗೆ ನಾಗಚೈತನ್ಯ ಹಾಗೂ ಸಾಯಿ ಪಲ್ಲವಿ ನಡುವಿನ ಈ ಪ್ರೇಮ ಕತೆ ವೀಕ್ಷಕರಿಗೆ ನೆನಪಿನಲ್ಲುಳಿಯುವ ಅನುಭವ ನೀಡಲಿದೆ ಎಂದು ಚಿತ್ರತಂಡದ ಮೂಲಗಳು ಹೇಳಿವೆ. 

ಇನ್ನು ಈ ಪಾತ್ರವನ್ನು ಒಪ್ಪಿಕೊಳ್ಳಲು ಸಾಯಿ ಪಲ್ಲವಿ ಬಹಳಷ್ಟು ಸಮಯ ತೆಗೆದುಕೊಂಡಿದ್ದರು ಆದರೆ ಬಹಳ ದಿನದ ನಂತರ ಸಾಯಿ ಪಲ್ಲವಿ ತೆಲುಗು ಸಿನಿಮಾವೊಂದಕ್ಕೆ ಸಹಿ ಹಾಕಿರುವುದು ಆಕೆಯ ತೆಲುಗು ಅಭಿಮಾನಿಗಳನ್ನು ಖುಷಿಗೊಳಿಸಿದೆ.  ಈ ಹಿಂದೆ ಚೈ ಹಾಗೂ ಸಾಯಿ ಪಲ್ಲವಿ ಲವ್‌ ಸ್ಟೋರಿ ಸಿನಿಮಾದಲ್ಲಿ ಜೊತೆಯಾಗಿ ನಟಿಸಿದ್ದರು. ಇದಾದ ಬಳಿಕ ಇವರಿಬ್ಬರೂ ಜೊತೆಯಾಗಿ ನಟಿಸುತ್ತಿರುವ 2ನೇ ಸಿನಿಮಾ ಇದಾಗಿದೆ. 

ಬಾಲ್ಯದಿಂದಲೂ ನಾನು ಬೇರೆಯದೇ ರೀತಿಯ ವ್ಯಕ್ತಿ; ಸಾಯಿ ಪಲ್ಲವಿ ಮಾತಿನ ಮರ್ಮ ಏನಿರಬಹುದು!

 

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ವೈದ್ಯರ ವರದಿ ಬಳಿಕ ಜೈಲಿನಲ್ಲಿ ನಟ ದರ್ಶನ್‌ಗೆ ಫಿಸಿಯೋಥೆರಪಿ ಚಿಕಿತ್ಸೆ ಸ್ಥಗಿತ
ನಾನೇನು ಸಾಧುವಲ್ಲ.. ಹೀಗೆ ಮಾತಾಡೋಕೆ ನನಗೂ ಬರುತ್ತೆ: ಪುಷ್ಪ ನಟಿ ಹೇಳಿದ್ದೇನು?