ಅಬ್ಬಾ! ನೀವು 10ದಿನದಲ್ಲಿ 13 ಹಾರರ್‌ ಸಿನಿಮಾ ನೋಡಿದ್ರೆ 95 ಸಾವಿರ ರೂ. ಕೊಡ್ತಾರಂತೆ!

Suvarna News   | Asianet News
Published : Sep 14, 2021, 10:25 AM IST
ಅಬ್ಬಾ! ನೀವು 10ದಿನದಲ್ಲಿ 13 ಹಾರರ್‌ ಸಿನಿಮಾ ನೋಡಿದ್ರೆ 95 ಸಾವಿರ ರೂ. ಕೊಡ್ತಾರಂತೆ!

ಸಾರಾಂಶ

 ವಾಷಿಂಗ್ಟನ್‌ನ ಖಾಸಗಿ ಕಂಪನಿಯೊಂದು ಹಾರರ್ ಸಿನಿಮಾ ವೀಕ್ಷಿಸಿದರೆ ಭಾರೀ ಮೊತ್ತ ನೀಡುವುದಾಗಿ ಆಫರ್ ಪ್ರಕಟಿಸಿದೆ. 

ಇದ್ಯಾವ ಮಹಾ ಹಾರರ್ ಸಿನಿಮಾ? ನಾನು ನೋಡ್ತೀನಿ, ನನಗೆ ಭಯವಿಲ್ಲ ಎಂದು ಹೇಳುವವರು ಈ ಚಾಲೆಂಜ್‌ನ ಸ್ವೀಕರಿಸಬೇಕು. ಒಂದೆರಡು ಸಿನಿಮಾ ಅಲ್ಲ 10 ದಿನದಲ್ಲಿ  13 ದೆವ್ವದ ಸಿನಿಮಾಗಳನ್ನು ನೋಡಬೇಕು. 

ವಾಷಿಂಗ್ಟನ್‌ನ ಫೈನಾನ್ಸ್ ಬುಝ್ ಹೆಸರಿನ ಕಂಪನಿ ಭಾರೀ ಮೊತ್ತದ ಆಫರ್ ಪ್ರಕಟಿಸಿದೆ. ಅಕ್ಟೋಬರ್‌ ತಿಂಗಳಲ್ಲಿ ನಡೆಯುವ ಈ 10 ದಿನದ ಚಾಲೆಂಜ್‌ನಲ್ಲಿ ಒಟ್ಟು 13 ದೆವ್ವದ ಸಿನಿಮಾಗಳನ್ನು ನೋಡಬೇಕು, ನೋಡಿದವರಿಗೆ 1,300 ಡಾಲರ್ ಅಂದರೆ ಅಂದಾಜು 95 ಸಾವಿರ ರೂ. ನೀಡುವುದಾಗಿ ಹೇಳಿದೆ.  

ಹಾರರ್ ಚಿತ್ರದ ಮೂಲಕ ಹಾಲಿವುಡ್‌ ಚಿತ್ರರಂಗಕ್ಕೆ ಹಾರಿದ ನಟ ಪ್ರಭಾಸ್?

ಕಂಪನಿ ಹೀಗೆ ಚಾಲೆಂಜ್ ನೀಡಲು ಕಾರಣವೇನು?
ಕೆಲವೊಂದು ಹಾರರ್ ಸಿನಿಮಾಗಳು ನಿಜಕ್ಕೂ ಭಯ ಹುಟ್ಟಿಸುವಂತಿರುತ್ತದೆ. ಆದರೆ ಇನ್ನೂ ಕೆಲವು ಹಾರರ್ ಹೆಸರಿನಲ್ಲಿ ಹಣ ಸಂಪಾದಿಸಿ ಮೋಸ ಮಾಡುತ್ತಾರೆ. ದುಬಾರಿ ಬಜೆಟ್ ಹಾಗೂ ಕಡಿಮೆ ಬಜೆಟ್ ಸಿನಿಮಾಗಳ ಪೈಕಿ ಯಾವುದು ಜಾಸ್ತಿ ಭಯ ಮೂಡಿಸುತ್ತದೆ ಎಂಬುದನ್ನು ಅಧ್ಯಯನ ಮಾಡಲು ಇಂಥದ್ದೊಂದು ಆಫರ್ ನೀಡಲಾಗಿದೆ. ಹೀಗಾಗಿ ಹಾರರ್ ಸಿನಿಮಾಗಳು ಒಬ್ಬ ವ್ಯಕ್ತಿಯ ಮೇಲೆ ಯಾವ ರೀತಿ ಭಯ ಮೂಡಿಸುತ್ತದೆ ಎಂದು ತಿಳಿದುಕೊಳ್ಳುವುದು ಕಂಪನಿಯ ಉದ್ದೇಶ. 

ಒಟ್ಟು 13 ಹಾರರ್‌ ಸಿನಿಮಾ ನೋಡಿದ ನಂತರ ಆ ವ್ಯಕ್ತಿಯ ಹೃದಯ ಬಡಿತವನ್ನು ಚೆಕ್ ಮಾಡಲಾಗುತ್ತದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ರಾಜ್ ನಿಧಿಮೋರುಗಾಗಿ ಧರ್ಮ ಬದಲಾಯಿದ್ರಾ ಸಮಂತಾ? ಮದುವೆಯ ರಹಸ್ಯ ರಿವೀಲ್!
ಧುರಂಧಾರ್ ಚಿತ್ರೀಕರಣ ಪಾಕಿಸ್ತಾನದಲ್ಲಿ ಆಗಿತ್ತಾ? ಸಿನಿಮಾದಲ್ಲಿನ ದೃಶ್ಯಗಳ ರಹಸ್ಯ ಬಯಲು ಮಾಡಿದ ನಟ!