
ಚೆನ್ನೈ(ಸೆ. 13) ಕಂಗನಾ ರಣಾವತ್ ಥಲೈವಿ ಚಿತ್ರಕ್ಕೆ ಅಪಾರ ಮೆಚ್ಚುಗೆ ಸಿಗುತ್ತಿದೆ. ಜಯಲಲಿತಾ ಜೀವನ ಆಧಾರಿತ ಚಿತ್ರಕ್ಕೆ ಸೂಪರ್ ಸ್ಟಾರ್ ರಜನೀಕಾಂತ್ ಮೆಚ್ಚುಗೆ ಸೂಚಿಸಿದ್ದಾರೆ.
ಒಂದರ್ಥದಲ್ಲಿ ಥಲೈವಿಗೆ ಥಲೈವರ್ ಮೆಚ್ಚುಗೆ ಸೂಚಿಸಿದ್ದಾರೆ. ಒಂದು ಕಾಲದಲ್ಲಿ ತಮಿಳು ಸಿನಿಮಾ ಜಗತ್ತನ್ನು ಆಳಿದ ಜಯಲಲಿತಾ ನಂತರ ತಮಿಳುನಾಡಿನ ಸಿಎಂ ಆಗಿ ಇತಿಹಾಸ ಸೃಷ್ಟಿ ಮಾಡಿದವರು.
ವಿಶೇಷ ಶೋ ನಲ್ಲಿ ರಜನಿಕಾಂತ್ ಸಿನಿಮಾ ವೀಕ್ಷಣೆ ಮಾಡಿದ್ದಾರೆ. ಸಿನಿಮಾ ವೀಕ್ಷಣೆ ಮಾಡಿ ಮೆಚ್ಚುಗೆ ಸೂಚಿಸಿದ್ದಾರೆ. ಸಿನಿಮಾದಲ್ಲಿ ಪಾತ್ರ ಪೋಷಣೆ ಮಾಡಿರುವುದನ್ನು ಕಂಡು ರಜನೀಕಾಂತ್ ಶಹಭಾಷ್ ನೀಡಿದ್ದಾರೆ. ನಿರ್ದೇಶಕರ ಚಾಕಚಕ್ಯತೆಯನ್ನು ಕೊಂಡಾಡಿದ್ದಾರೆ.
ಟ್ವಿಟರ್ ನಲ್ಲಿದ್ದಾಗ ಕಂಗನಾ ವಿರುದ್ಧ ಪ್ರತಿ ದಿನ ದೂರು
ಇಷ್ಟು ಕಷ್ಟದ ಸಿನಿಮಾವನ್ನು ಬಹಳ ಸುಂದರವಾಗಿ ನಿರೂಪಿದ್ದೀರಿ ಎಂದು ಮತ್ತೊಂದು ಮೆಚ್ಚುಗೆ ನೀಡಿದದ್ದಾರೆ. ಒಂದು ಆರ್ಡರ್ ನಲ್ಲಿ ಸಿನಿಮಾ ನಿರ್ಮಾಣ ಮಾಡಿರುವುದನ್ನು ಕೊಂಡಾಡಿದ್ದಾರೆ. ಎಂಜಿಆರ್ ಮತ್ತು ಜಯಲಲಿತಾ ನಡುವಣ ಚಿತ್ರ ಜೀವನದ ಕತೆ ಕಟ್ಟಿಕೊಟ್ಟಿರುವುದಕ್ಕೂ ನಿರ್ದೇಶಕರಿಗೆ ಭೇಷ್ ಎಂದಿದ್ದಾರೆ. ಇದಾದ ಮೇಲೆ ಇಬ್ಬರೂ ಸಾರ್ವಜನಿಕ ಜೀವನದಲ್ಲಿ ಬೆಳೆದು ಬಂದ ಕತೆಯೂ ರೋಚಕವಾಗಿ ಕಟ್ಟಿಕೊಡಲಾಗಿದೆ ಎಂದು ತಿಳಿಸಿದ್ದಾರೆ.
ಥೈಲವಿ ಚಿತ್ರದ ಪೋಸ್ಟರ್ ಮತ್ತು ಟೀಸರ್ ಹವಾ ಸೃಷ್ಟಿ ಮಾಡಿತ್ತು. ಪ್ರತಿಯೊಬ್ಬರು ತಲೈವಿ ಚಿತ್ರದಲ್ಲಿ ಯಾರು ಯಾವ ಪಾತ್ರ ನಿರ್ವಹಿಸಿದ್ದಾರೆ ಎಂಬ ಕೂತುಹಲಕ್ಕೆ ಜಾರಿದ್ದರು. ಈಗ ಸಿನ
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.