ಪ್ರಿಯತಮನ ಕಳೆದುಕೊಂಡ ಮಗಳ ಹೆಸರು ಟ್ಯಾಟೂ ಹಾಕಿಸಿದ ತಂದೆ

Published : Sep 14, 2021, 09:39 AM ISTUpdated : Sep 14, 2021, 09:55 AM IST
ಪ್ರಿಯತಮನ ಕಳೆದುಕೊಂಡ ಮಗಳ ಹೆಸರು ಟ್ಯಾಟೂ ಹಾಕಿಸಿದ ತಂದೆ

ಸಾರಾಂಶ

ಬಾಯ್‌ಫ್ರೆಂಡನ್ನು ಕಳೆದುಕೊಂಡ ನೋವಲ್ಲಿ ಶೆಹನಾಝ್ ಗಿಲ್ ಮಗಳ ಜೊತೆ ನಾನಿದ್ದೇನೆ ಎಂದು ಪುತ್ರಿಯ ಹೆಸರು ಟ್ಯಾಟೂ ಹಾಕಿಸ್ಕೊಂಡ ತಂದೆ ಸಿದ್ಧಾರ್ರ್ಥ ಶುಕ್ಲಾ ಗೆಳತಿಗಿದು ನೋವಿನ ಸಮಯ

ಖ್ಯಾತ ಕಿರುತೆರೆ ನಟ, ಬಿಗ್‌ಬಾಸ್ ಸೀಸನ್ 13ರ ವಿಜೇತ ಸಿದ್ಧಾರ್ಥ್ ಶುಕ್ಲಾ ಅವರ ಸಾವು ಅವರ ಅಭಿಮಾನಿಗಳನ್ನು ಶೋಕದಲ್ಲಿ ಮುಳುಗಿಸಿದೆ. ಅವರ ಗೆಳತಿ ಶೆಹನಾಝ್ ಗಿಲ್‌ಗೆ ಬಾಯ್‌ಫ್ರೆಂಡ್‌ನ ಕಳೆದುಕೊಂಡ ನೋವು. ಸೆ.02ರಂದು ನಟ ಸಾವನ್ನಪ್ಪಿದ್ದು ಬಹುತೇಕ ಎಲ್ಲರಿಗೂ ಶಾಕಿಂಗ್. ನಟನ ಅಕಾಲಿಕ ಮರಣದಿಂದ ಗರ್ಲ್‌ಫ್ರೆಂಡ್ ಶೆಹನಾಝ್‌ಗೆ ಆಗಿರುವ ಆಘಾತ ಚಿಕ್ಕದಲ್ಲ. ಇದೀಗ ಶೆಹನಾಝ್ ತಂದೆ ಮಾಡಿರುವ ಕೆಲಸ ಸುದ್ದಿಯಾಗುತ್ತಿದೆ. ಮಗಳ ಮೇಲಿನ ತಂದೆಯ ಪ್ರೀತಿ ಎಲ್ಲೆಡೆ ವೈರಲ್ ಆಗಿದೆ.

ನಿರಂತರ ಕಣ್ಣೀರು ಸುರಿಸುತ್ತಲೇ ಕಾಣಿಸಿಕೊಂಡಿದ್ದರು ಶೆಹನಾಝ್. ಈ ದೃಶ್ಯ ಮನ ಕಲಕುವಂತಿತ್ತು. ಗೆಳೆಯನ ಸಾವಿನ ನಂತರ ಹಲವು ದಿನವಾದರೂ ನಟಿ ನೋವಿನಿಂದ ಹೊರಗೆ ಬಂದಿಲ್ಲ. ಶೆಹನಾಝ್ ತಂದೆ ಸಂತೋಖ್ ಗಿಲ್ ಮಗಳಿಗೆ ಬೆಂಬಲ ನೀಡುತ್ತಲೇ ಇದ್ದಾರೆ. ಆಕೆಯ ನೋವಲ್ಲಿ ಸಂಪೂರ್ಣ ಭಾಗಿಯಾಗಿದ್ದಾರೆ. ಇದೀಗ ಶೆಹನಾಝ್-ಸಿದ್ಧಾರ್ಥ್ ಅಭಿಮಾನಿಯೊಬ್ಬರು ಶೆಹನಾಝ್ ತಂದೆ ಟ್ಯಾಟೂ ಹಾಕಿಸಿಕೊಂಡಿರುವ ವಿಡಿಯೋ ಶೇರ್ ಮಾಡಿದ್ದಾರೆ.  ಕಷ್ಟದ ಸಮಯದಲ್ಲಿ ಮಗಳಿಗೆ ಸಪೋರ್ಟಿವ್ ಆಗಿ ನಿಂತ ಅವರು ಮಗಳ ಹೆಸರನ್ನು ಟ್ಯಾಟೂ ಹಾಕಿ ನಾನು ನಿನ್ನ ಜೊತೆಗಿದ್ದೇನೆ ಎಂಬ ಮೆಸೇಜ್ ಕೊಟ್ಟಿದ್ದಾರೆ.

ಸಿದ್ಧಾರ್ಥ್-ಸ್ವಾಮಿ ಓಂ: ದಿಢೀರ್ ಸಾವನ್ನಪ್ಪಿದ ಬಿಗ್‌ಬಾಸ್ ಸ್ಪರ್ಧಿಗಳು

ಕಳೆದ ವಾರ ಸಿದ್ಧಾರ್ಥ್ ಮನೆಗೆ ಭೇಟಿ ನೀಡಿವರು ಶೆಹನಾಝ್ ಉತ್ತಮ ಸ್ಥಿತಿಯಲ್ಲಿಲ್ಲ ಎಂದು ಬಹಿರಂಗಪಡಿಸಿದ್ದಾರೆ. ಅವಳು ಸಂಪೂರ್ಣ ಆಘಾತ ಸ್ಥಿತಿಯಲ್ಲಿದ್ದಾಳೆ ಎಂದು ಅವರು ಹೇಳಿದ್ದಾರೆ. ನಟಿ ನಿದ್ದೆ ಮಾಡುತ್ತಿಲ್ಲ, ಸಾಕಷ್ಟು ತಿನ್ನುವುದಿಲ್ಲ ಮತ್ತು ಯಾರೊಂದಿಗೂ ಮಾತನಾಡುತ್ತಿಲ್ಲ ಎಂದು ಹೇಳಲಾಗಿದೆ. ಈ ನೋವನ್ನು ಮರೆಯಲು ಸಾಧ್ಯವಿಲ್ಲ. ಶೆಹ್ನಾಜ್ ಶೋಕದಲ್ಲಿದ್ದಾರೆ. ಈ ಸ್ಥಿತಿಯಲ್ಲಿ ನಟಿಯನ್ನು ಒಬ್ಬಂಟಿಯಾಗಿ ಬಿಡುವುದಿಲ್ಲ. ಸಿದ್ಧಾರ್ಥ್ ಅವರ ತಾಯಿ ಶೆಹನಾಝ್ ಜೊತೆಗಿದ್ದಾರೆ ಎನ್ನಲಾಗಿದೆ.

ಸಿದ್ಧಾರ್ಥ್ ಶುಕ್ಲಾ ಸಾವಿನ ನಾಲ್ಕು ದಿನಗಳ ನಂತರ ಅವರ ಕುಟುಂಬವು ಹೇಳಿಕೆ ನೀಡಿದೆ. ಸಿದ್ಧಾರ್ಥ್ ಈಗ ನಮ್ಮ ಹೃದಯದಲ್ಲಿ ಶಾಶ್ವತವಾಗಿ ಇದ್ದಾನೆ. ಸಿದ್ಧಾರ್ಥ್ ಗೌಪ್ಯತೆಯನ್ನು ಗೌರವಿಸುತ್ತಿದ್ದರು. ಆದ್ದರಿಂದ ನಮ್ಮ ಕುಟುಂಬಕ್ಕೆ ದುಃಖದ ಸಮಯದಲ್ಲಿ ಖಾಸಗಿತನ ಅನುಮತಿಸುವಂತೆ ನಾವು ನಿಮ್ಮನ್ನು ವಿನಂತಿಸುತ್ತೇವೆ. ಸೂಕ್ಷ್ಮತೆ ಮತ್ತು ಸಹಾನುಭೂತಿಗಾಗಿ ಮುಂಬೈ ಪೊಲೀಸ್ ಪಡೆಗೆ ವಿಶೇಷ ಧನ್ಯವಾದಗಳು ಎಂದಿದ್ದರು.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ನಾನೇನು ಸಾಧುವಲ್ಲ.. ಹೀಗೆ ಮಾತಾಡೋಕೆ ನನಗೂ ಬರುತ್ತೆ: ಪುಷ್ಪ ನಟಿ ಹೇಳಿದ್ದೇನು?
ವೃತ್ತಿಜೀವನದಲ್ಲಿ 2 ಬಾರಿ ದೊಡ್ಡ ತಪ್ಪು ಮಾಡಿದ ರಾಮ್ ಚರಣ್.. ಚಿರಂಜೀವಿಯೂ ಏನೂ ಮಾಡಲಾಗಲಿಲ್ಲವೇ?