ಪ್ರಿಯಾಂಕಾಳ ಸಿನಿಮಾ ನೋಡಿ ಸಿಟ್ಟಾದ್ರು ಅಮೆರಿಕನ್ ರ್ಯಾಪರ್

Published : Jan 29, 2021, 09:26 AM ISTUpdated : Jan 29, 2021, 09:53 AM IST
ಪ್ರಿಯಾಂಕಾಳ ಸಿನಿಮಾ ನೋಡಿ ಸಿಟ್ಟಾದ್ರು ಅಮೆರಿಕನ್ ರ್ಯಾಪರ್

ಸಾರಾಂಶ

ಮಾಜಿ ವಿಶ್ವಸುಂದರಿಯ ಸಿನಿಮಾ ನೋಡಿ ಸಿಟ್ಟಾದ್ರು ಅಮೆರಿಕನ್ ರ್ಯಾಪರ್ | ಪ್ರಿಯಾಂಕಾಳ ವೈಟ್‌ ಟೈಗರ್ ನೋಡಿ ಕಾರ್ಡಿಗೇನಾಯ್ತು..?

ಮಾಜಿ ವಿಶ್ವಸುಂದರಿ ಪ್ರಿಯಾಂಕ ಚೋಪ್ರಾ ಅಭಿನಯದ ದ ವೈಟ್‌ ಟೈಗರ್ ಸಿನಿಮಾ ಭಾರೀ ಸುದ್ದಿಯಲ್ಲಿದೆ. ಸಿನಿಮಾ ಬಗ್ಗೆ ಸಾಕಷ್ಟು ಪ್ರಶಂಸೆ ವ್ಯಕ್ತವಾಗುತ್ತಿರುವ ನಡುವೆಯೇ ಅಮೆರಿಕದ ಖ್ಯಾತ ರ್ಯಾಪರ್ ಪ್ರಿಯಾಂಕಳ ಸಿನಿಮಾ ನೋಡಿ ಸಿಟ್ಟಾಗಿದ್ದಾರೆ.

ವೈಟ್‌ ಟೈಗರ್ ಒಂದು ಗ್ರೇಟ್ ಸಿನಿಮಾ. ನಾನು ಸಿನಿಮಾ ನೋಡಿ ಅತ್ತಿದ್ದೇನೆ, ಸಿಟ್ಟಾಗಿದ್ದೇನೆ ಎಂದು ಟ್ವೀಟ್ ಮಾಡಿದ್ದಾರೆ ಕಾರ್ಡಿ. ಇದಕ್ಕೆ ಪ್ರತಿಕ್ರಿಯಿಸಿದ ಪ್ರಿಯಾಂಕ, ನನಗೂ ಹಾಗೆ ಆಯ್ತು, ಥಾಂಕ್ಯೂ. ನೀವು ಎಂಜಾಯ್ ಮಾಡಿದ್ದೀರಿ ಎನ್ನುವುದು ಖುಷಿಯಾಗುತ್ತಿದೆ ಎಂದಿದ್ದಾರೆ.

ವೀರ್ಯ ಬೇಕು ಎಂದು ಹಿಂದೆ ಹೋದ್ರೂ ಕ್ಯಾರೇ ಅನ್ನದ ಅಭಿನವ್‌ನ ಚಡ್ಡಿಯನ್ನೇ ಹರಿದ ರಾಖಿ

ಗ್ರಾಮಿ ವಿನ್ನರ್ ರ್ಯಾಪ್ ಸಿಂಗರ್ ಕಾರ್ಡಿ ಬಿ ದಿ ವೈಟ್‌ ಟೈಗರ್ ಸಿನಿಮಾ ನೋಡಿ ಮೆಚ್ಚಿಕೊಂಡಿದ್ದಾರೆ. ಟ್ವಿಟರ್ ಮೂಲಕ ಸಿನಿಮಾಗೆ ಪ್ರತಿಕ್ರಿಯೆಯನ್ನೂ ತಿಳಿಸಿದ್ದಾರೆ. ಸಿನಿಮಾದಲ್ಲಿ ಸಪೋರ್ಟಿಂಗ್ ಪಾತ್ರವಾಗಿ ಕಾಣಿಸ್ಕೊಂಡ ಮತ್ತು ಸಿನಿಮಾ ಮೇಲೆ ಇನ್ವೆಸ್ಟ್ ಮಾಡಿದ ಪ್ರಿಯಾಂಕ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಕಾರ್ಡಿ.

ಕಾರ್ಡಿ ಮಾತ್ರವಲ್ಲದೆ, ನಟ ಕೆರ್ರಿ ವಾಷಿಂಗ್ಟನ್ ಕೂಡಾ ಸಿನಿಮಾವನ್ನು ಹೊಗಳಿದ್ದಾರೆ. ವೈಟ್‌ ಟೈಗರ್, ವೈಟ್ ಟೈಗರ್, ವೈಟ್ ಟೈಗರ್, ಮಸ್ಟ್ ವಾಚ್, ಗಾಡ್ ಬ್ಲೆಸ್‌ ಯು ಎಂದಿದ್ದಾರೆ.

ಮುಸ್ಲಿಂ ಧರ್ಮಗುರುವನ್ನು ಮದ್ವೆಯಾಗಿ ಎರಡೇ ತಿಂಗಳು: ಹಾರ್ಟ್ ಬ್ರೋಕನ್ ಅಂತಿದ್ದಾರೆ ನಟಿ

ದಿ ವೈಟ್‌ ಟೈಗರ್ ಸಿನಿಮಾವನ್ನು ರಮಿನ್ ಬಹ್ರಾನಿ ನಿರ್ದೇಶಿಸಿದ್ದು, ಅರವಿಂದ್ ಅಡಿಗರ ಕಾದಂಬರಿ ಆಧಾರಿತ ಸಿನಿಮಾ ಇದಾಗಿದೆ. ಇದರಲ್ಲಿ ಆದರ್ಶ್‌ ಗೌರವ್ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಪ್ರಿಯಾಂಕ ಚೋಪ್ರಾ ಮತ್ತು ರಾಜ್‌ಕುಮಾರ್ ರಾವ್ ಸಪೋರ್ಟಿಂಗ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಜನವರಿ 22ರಂದು ನೆಟ್‌ಫ್ಲಿಕ್ಸ್‌ನಲ್ಲಿ ಸಿನಿಮಾ ರಿಲೀಸ್ ಆಗಿದೆ. ಗ್ರಾಮದ ಬಡ ವ್ಯಕ್ತಿಯಾದ ಬಲರಾಮ್ ಉದ್ಯಮಿಯಾಗುವ ಕಥೆ ಇದರಲ್ಲಿದೆ. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಯಶ್ ‘ಟಾಕ್ಸಿಕ್’ ಕಥೆಗೆ ‘ವಿಜಯ ವಿಕ್ರಮ’, ‘ಬಭ್ರುವಾಹನ’ ಲಿಂಕ್? ಮೂರು ರೂಪ, ಮೂರು ಛಾಯೆ
Toxic ಹವಾದ ಬೆನ್ನಲ್ಲೇ ಯಶ್​ ಕಾರಿನ ನಂಬರ್​ ಪ್ಲೇಟ್​ ಭಾರಿ ಸದ್ದು: ಏನಿದೆ ಅಂಥ ವಿಶೇಷತೆ- ಕುತೂಹಲ ಇಲ್ಲಿದೆ