
ನಟಿ ಕತ್ರಿನಾ ಕೈಫ್ ಯಾರನ್ನು ಪ್ರೀತಿಸುತ್ತಿದ್ದಾರೆ? ಎಂದು ಗೆಸ್ ಮಾಡುವುದರಲ್ಲಿಯೇ ಅಭಿಮಾನಿಗಳು ಸಮಯ ಕಳೆಯುತ್ತಿದ್ದಾರೆ. ಇನ್‌ಸ್ಟಾಗ್ರಾಂ ಖಾತೆಯಲ್ಲಿ ಕತ್ರೀನಾ ಒಂದೊಂದೇ ಸುಳಿವು ನೀಡುತ್ತಿದ್ದರೂ, ಈ ಬಗ್ಗೆ ಇನ್ನೂ ಕ್ಲಾರಿಟಿ ಸಿಕ್ಕಿಲ್ಲ...
ಕತ್ರೀನಾ ಕೈಫ್ ತಂಗಿ ಇಸಾಬೆಲ್ಲಾ ರೊಮ್ಯಾನ್ಸ್: ಫಸ್ಟ್ ಲುಕ್ ಹೀಗಿದೆ
ಇದ್ದಕ್ಕಿದ್ದಂತೆ ನಟಿ ಕತ್ರೀನಾ ಇನ್‌ಸ್ಟಾಗ್ರಾಂನಲ್ಲಿ ಯಾರನ್ನೋ ತಬ್ಬಿಕೊಂಡಿರುವ ಹಾಗೆ ಸೆಲ್ಫೀ ಶೇರ್ ಮಾಡಿಕೊಂಡಿದ್ದರು. ಮುಖದ ತುಂಬಾ ಚಿಟ್ಟೆ ತುಂಬಿರುವ ಈ ಸೆಲ್ಫಿಯಲ್ಲಿ ಹುಡುಗ ಯಾರೆಂದು ಕಂಡು ಹಿಡಿಯಲು ಅಸಾಧ್ಯ. ಆದರೆ ಅಭಿಮಾನಿಗಳು ಫೋಟೋದಲ್ಲಿರುವುರು ಯಾರೆಂದು ಗೆಸ್ ಮಾಡಿದ್ದಾರೆ.
ಹೌದು! ಕೆಲವು ತಿಂಗಳಿನಿಂದ ಕತ್ರಿನಾ ಹಾಗೂ ವಿಕ್ಕಿ ಕೌಶಲ್ ಡೇಟ್ ಮಾಡುತ್ತಿರುವ ವಿಚಾರ ಎಲ್ಲರಿಗೂ ಗೊತ್ತಿರುವುದೇ. ಏಕೆಂದರೆ ಪೋಸ್ಟ್ ಲಾವಕ್‌ಡೌನ್‌ನಲ್ಲಿ ಅವರು ಮಾಡಿರುವ ಜಾಲಿ ಟ್ರಿಪ್ ಫೋಟೋಗಳೇ ಸಾಕ್ಷಿ. ಕತ್ರಿನಾ ಹಾಗೂ ವಿಕ್ಕಿ ಈ ಬಗ್ಗೆ ಅಧಿಕೃತವಾಗಿ ಖಚಿತಪಡಿಸಿಲ್ಲವಾದರೂ ಅಭಿಮಾನಿಗಳೇ ಫಿಕ್ಸ್ ಆಗಿದ್ದಾರೆ.
ಕತ್ರೀನಾ ಕೈಫ್ ಜೊತೆ ಡೇಟಿಂಗ್: ಕೊನೆಗೂ ಬಾಯಿ ಬಿಟ್ಟ ವಿಕ್ಕಿ ಕೌಶಲ್!
ಈ ಹಿಂದೆ ವಿಕ್ಕಿ ಅದೇ ರೀತಿಯ ಟೀ-ಶರ್ಟ್ ಹಾಕಿರುವ ಫೋಟೋವೊಂದನ್ನು ಕತ್ರಿನಾ ಫೋಟೋ ಪಕ್ಕಕ್ಕಿಟ್ಟು ನೋಡು ಇದು ವಿಕ್ಕೀನೇ ಎಂದು ಫ್ಯಾನ್ಸ್ ಪ್ರೂವ್ ಮಾಡಿ ತೋರಿಸಿದ್ದಾರೆ. ಬಾಲಿವುಡ್‌ನ ಸ್ಟಾರ್ ನಟ, ನಟಿಯರು ಮದುವೆಯಾಗುತ್ತಿರುವುದನ್ನು ನೋಡಿದರೆ ಶೀಘ್ರದಲ್ಲಿಯೇ ಕತ್ರಿನಾ ಕೂಡ ಹಸೆಮಣೆ ಏರಲು ಬಯಸುತ್ತಿದ್ದಾರೆ ಎಂದೆನಿಸುತ್ತದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.