ಕೊಹ್ಲಿ ಕುಳ್ಳಗೆ ಅಂತ, ಹೀಲ್ಸ್ ಧರಿಸದೆ ಬಂದಿದ್ರು ಅನುಷ್ಕಾ: ಹೀಗಿತ್ತು ವಿರುಷ್ಕಾ ಮೊದಲ ಭೇಟಿ

By Suvarna News  |  First Published Jan 28, 2021, 2:54 PM IST

ವಿರುಷ್ಕಾ ಇತ್ತೀಚೆಗಷ್ಟೇ ತಮ್ಮ ಮೊದಲ ಮಗುವನ್ನು ಸ್ವಾಗತಿಸಿದ್ದಾರೆ. ಪ್ರೀತಿಸಿ ಮುದವೆಯಾದ ಅನುಷ್ಕಾ ಶರ್ಮಾ ಮತ್ತು ವಿರಾಟ್ ಕೊಹ್ಲಿ ಮೊದಲು ಭೇಟಿಯಾಗಿದ್ದೆಲ್ಲಿ..? ಹೇಗಿತ್ತು ಅವರ ಮೊದಲ ಭೇಟಿ..?


ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಅವರು ತಮ್ಮ ಕ್ಷೇತ್ರಗಳಲ್ಲಿ ಕೇವಲ ಜನಪ್ರಿಯರಾಗಿಲ್ಲ, ಅವರು ಭಾರತದಲ್ಲಿ ಹೆಚ್ಚು ogra ಾಯಾಚಿತ್ರ ತೆಗೆದ ಮತ್ತು ಅನುಸರಿಸಿದ ಇಬ್ಬರು ಪ್ರಸಿದ್ಧ ವ್ಯಕ್ತಿಗಳಾಗಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ, ಜನರು ತಾವು ಮಾಡುವ ಸಣ್ಣಪುಟ್ಟ ಕೆಲಸಗಳ ಬಗ್ಗೆಯೂ ಟ್ಯಾಬ್‌ಗಳನ್ನು ಇಟ್ಟುಕೊಳ್ಳುವುದರೊಂದಿಗೆ ಅವರಿಗೆ ಅಪಾರ ಅಭಿಮಾನಿಗಳಿದ್ದಾರೆ. ಇಬ್ಬರೂ ಪಾಪ್ಯುಲರ್ ಆಗಿರುವುದರೊಂದಿಗೆ ಸೋಷಿಯಲ್ ಮೀಡಿಯಾದಲ್ಲಿಯೂ ಆಕ್ಟಿವ್ ಆಗಿದ್ದಾರೆ.

Tap to resize

Latest Videos

ಫೆಬ್ರವರಿಯಲ್ಲಿ ಎರಡನೇ ಮಗುವಿನ ತಾಯಿಯಾಗ್ತಾರೆ ಬೇಬೋ

ಜನವರಿ 11ರಂದು ಈ ಜೋಡಿ ತಮ್ಮ ಮೊದಲ ಹೆಣ್ಣುಮಗುವನ್ನು ಸ್ವಾಗತಿಸಿದ್ದಾರೆ. ಇದೀಗ ಇಬ್ಬರೂ ಜೊತೆಯಾಗಿ ಮುದ್ದು ಕಂದನ ಜೊತೆ ಮನೆಯಲ್ಲಿಯೇ ದಿನ ಕಳೆಯುತ್ತಿದ್ದಾರೆ. ಇನ್ನು ಮೊದಲೇ ಪ್ಯಾಟರ್ನಿಟಿ ಲೀವ್ ತಗೊಂಡ ಕೊಹ್ಲಿ ಟ್ವಿಟರ್‌ನಲ್ಲಿ ಪ್ರೌಡ್ ಹಸ್ಬೆಂಡ್ & ಫಾದರ್ ಎಂದು ತಮ್ಮ ಬಯೋವನ್ನೂ ಬದಲಾಯಿಸಿಕೊಂಡಿದ್ದಾರೆ.

ಕೊಹ್ಲಿ ಅನುಷ್ಕಾರನ್ನು ಮೊದಲು ಭೇಟಿಯಾಗಿದ್ದು, ಒಂದು ಜಾಹಿರಾತು ಶೂಟಿಂಗ್ ಸಂದರ್ಭ. ಅದೂ 2013ರಲ್ಲಿ. ಮ್ಯಾನೇಜರ್ ಬಂದು ಈ ಜಾಹೀರಾತು ಅನುಷ್ಕಾ ಜೊತೆ ಎಂದು ಮ್ಯಾನೇಜರ್ ಬಂದು ಹೇಳಿದಾಗ ಕೊಹ್ಲಿ ನಂಬಿರಲಿಲ್ಲ. ಪ್ರೆಫೆಷನಲ್ ಆಕ್ಟರ್ ಜೊತೆ ನಾನು ನಟಿಸ್ಬೇಕಾ ಎಂದು ಅಚ್ಚರಿಪಟ್ಟಿದ್ದರಂತೆ.

ಮೊದಲ ಬಾರಿ ಭೇಟಿಯಾಗಿದ್ದಾಗ ಜೋಕ್ ಮಾಡಿದ್ದರಂತೆ ವಿರಾಟ್. ನರ್ವಸ್ ಆಗಿದ್ದೆ, ಮತ್ತೆ ಬೇರೇನು ಮಾಡಬೇಕೆಂದು ಗೊತ್ತಾಗಲಿಲ್ಲ ಎಂದಿದ್ದಾರೆ ಕೊಹ್ಲಿ. ವಿರಾಟ್ ಅಷ್ಟು ಹೈಟ್ ಇಲ್ಲ ಎಂದು ಹೇಳಿದ್ದರಿಂದ ಅನುಷ್ಕಾ ಹೈಹೀಲ್ಸ್ ಧರಿಸಿರಲಿಲ್ಲ.

ಸ್ವಲ್ಪ ಕಮ್ಮಿ ಹೀಲ್ಸ್ ಧರಿಸಿದ್ದರು. ಆದರೂ ಕೊಹ್ಲಿಗಿಂತ ಉದ್ದ ಕಾಣಿಸಿದ್ದರು ಅನುಷ್ಕಾ. ಅನುಷ್ಕಾರ ಹೀಲ್ಸ್ ನೋಡಿ ಹೈಹೀಲ್ಸ್ ಇರ್ಲಿಲ್ವಾ ಅಂತ ಪ್ರಶ್ನಿಸಿ ತಮಾಷೆ ಮಾಡಿದ್ದರು ಕೊಹ್ಲಿ. ಎಕ್ಸ್‌ಕ್ಯೂಸ್ ಮಿ ಎಂದು ನಕ್ಕಿದ್ದರು ಅನುಷ್ಕಾ.

ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ್ರಾ ಅನುಷ್ಕಾ..? ಪುಟ್ಟ ಕಂದಮ್ಮನೆಲ್ಲಿ..?

ಮೂರುದಿನಗಳ ಶೂಟಿಂಗ್‌ನಲ್ಲಿ ತಮ್ಮಿಬ್ಬರಲ್ಲಿ ಬಹಳಷ್ಟು ವಿಚಾರಗಳು ಸೇಮ್ ಇವೆ ಎಂದು ತಿಳ್ಕೊಂಡಿದ್ದರು ಇಬ್ಬರು. ನಂತರ ಸ್ನೇಹಿತರಾಗಿ, ಪ್ರೀತಿಯಾಗಿ ಮದುವೆಯಾದರು.

click me!