
ಕನ್ನಡ ಕಿರುತೆರೆಯಲ್ಲಿ ಪ್ರಸಾರವಾಗುತ್ತಿರುವ ಧಾರಾವಾಹಿಗಳಲ್ಲಿ ಲಕ್ಷ್ಮಣ(Lakshana) ಧಾರಾವಾಹಿ ಕೂಡ ಒಂದು. ಕಲರ್ಸ್ ವಾಹಿನಿಯಲ್ಲಿ(Colors kannada) ಪ್ರಸಾರವಾಗುತ್ತಿರುವ ಈ ಧಾರಾವಾಹಿ ಸಾಕಷ್ಟು ಕುತೂಹಲಗಳೊಂದಿಗೆ ಪ್ರೇಕ್ಷಕರನ್ನು ತನ್ನತ್ತ ಸಳೆಯುತ್ತಿದೆ. ಭೂಪತಿ, ನಕ್ಷತ್ರ, ಶ್ವೇತಾ, ಮಿಲಿ ಪಾತ್ರಗಳು ಕಿರುತೆರೆ ಪ್ರೇಕ್ಷಕರ ಹೃದಯ ಗೆದ್ದಿವೆ. ಈಗಾಗಲೇ ಈ ಎಲ್ಲಾ ಪಾತ್ರಗಳು ಜನಪ್ರಿಯವಾಗಿವೆ. ಇತ್ತೀಚಿಗೆ ಈ ಧಾರಾವಾಹಿಯಲ್ಲಿ ಪ್ರಸಾರವಾಗುತ್ತಿದ್ದ ನಿಗೂಢ ಪಾತ್ರ ನೋಡುಗರ ಕುತೂಹಲ ಹೆಚ್ಚಿಸಿತ್ತು. ಈ ಧಾರಾವಾಹಿಯ ವಿಲನ್ ಶ್ವೇತಾ ಅಸಿಸ್ಟೆಂಟ್ ಆಗಿ ಕೆಲಸ ಮಾಡುತ್ತಿರುವ ಮಿಲಿ ತಾಯಿ ಪಾತ್ರ ರಿವೀಲ್ ಮಾಡಿರಲಿಲ್ಲ. ಮಿಲಿ ತಾಯಿ ಶ್ವೇತಾ ವಿರುದ್ಧ ಸೇಡು ತೀರಿಸಿಕೊಳ್ಳಲು ಕಾದು ಕುಳಿದ್ದಾಳೆ. ಮಿಲಿ ತಾಯಿಯ ಮುಖ ರಿವೀಲ್ ಮಾಡಿಲ್ಲ ಧಾರಾವಾಹಿತಂಡ. ಆದರೀಗ ಮಿಲಿ ತಾಯಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ನಟಿ ಯಾರು ಎನ್ನುವ ಬಗ್ಗೆ ಈಗ ಸುಳಿವು ಸಿಕ್ಕಿದೆ.
ಮಿಲಿ ತಾಯಿಯ ರಹಸ್ಯ ಮತ್ತು ಚಂದ್ರಶೇಖರ್ ಮನೆಯವರಿಗೂ ಹಾಗೂ ಮಿಲಿ ತಾಯಿಗೂ ಏನು ಸಂಬಂಧ, ಮಿಲಿ ತಾಯಿ, ಸಿಎಸ್ ಮತ್ತು ಶ್ವೇತಾ ವಿರುದ್ಧ ಕೆಂಡ ಕಾರುತ್ತಿರುವುದು ಯಾಕೆ ಎಂದು ಇನ್ನು ಬಹಿರಂಗವಾಗಿಲ್ಲ. ಯಾಕೆ ಎನ್ನುವ ಕುತೂಹಲದಲ್ಲಿ ಪ್ರೇಕ್ಷಕರು ಧಾರಾವಾಹಿ ವೀಕ್ಷಿಸುತ್ತಿದ್ದಾರೆ. ಆದರೂ ಮಿಲಿ ತಾಯಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ನಟಿ ಯಾರು ಎನ್ನುವ ಕುತೂಹಲ ಅನೇಕ ದಿನಗಳಿಂದ ಇತ್ತು. ಸದ್ಯ ರಿವೀಲ್ ಆಗಿರುವ ಪ್ರಕಾರ ಮಿಲಿ ತಾಯಿ ಭಾರ್ಗವಿನೇ ಎನ್ನಲಾಗಿದೆ. ಶ್ವೇತಾ ಆಂಟಿಯ ಪಾತ್ರದಲ್ಲಿ ಕಾಣಿಸಿಕೊಂಡಿರುವ ಭಾರ್ಗವಿನೇ ಮಿಲಿ ತಾಯಿ ಎನ್ನುವ ಮಾತು ಕೇಳಿಬರುತ್ತಿದೆ. ಅನೇಕ ಪ್ರೇಕ್ಷಕರು ಸಹ ಮಿಲಿ ತಾಯಿ ಭಾರ್ಗವಿ ಎಂದು ಹೇಳುತ್ತಿದ್ದಾರೆ.
Colors Kannadaದಲ್ಲಿ ಹೊಸ ಸೀರಿಯಲ್ ಒಲವಿನ ನಿಲ್ದಾಣ, ಕನ್ನಡತಿ ಮುಗಿಯುತ್ತಾ?
ಯಾಕೆಂದರೆ ಭಾರ್ಗವಿ ಬಗ್ಗೆ ಇದುವರೆಗೂ ಯಾವುದೇ ಮಾಹಿತಿ ರಿವೀಲ್ ಮಾಡಿಲ್ಲ. ಭಾರ್ಗವಿ ಪಾತ್ರದ ಹಿನ್ನಲೆಯನ್ನು ರಹಸ್ಯವಾಗಿ ಇಡಲಾಗಿದೆ. ಹಾಗಾಗಿ ಮಿಲಿ ತಾಯಿ ಭಾರ್ಗವಿನೇ ಎಂದು ಹೇಳುತ್ತಿದ್ದಾರೆ. ಈ ಬಗ್ಗೆ ಸದ್ಯದಲ್ಲೇ ರಿವೀಲ್ ಆಗುವ ಸಾಧ್ಯತೆ ಇದೆ. ಇದೀಗ ಶ್ವೇತಾ ನಿಜವಾದ ಬಣ್ಣ ಬಯಲಾಗಿದೆ. ಶ್ವೇತಾಳನ್ನು ಮನೆಯಿಂದ ಹೊರಹಾಕಲಾಗಿದೆ. ಶ್ವೇತಾ ನಿಜವಾದ ತಂದೆ ತುಕಾರಮ್ ಮಗಳನ್ನು ಕರೆದುಕೊಂಡು ಹೋಗಲು ಸಿದ್ಧರಾಗಿದ್ದಾರೆ. ಅಲ್ಲದೇ ಶ್ವೇತಾ ಬಳಿ ಇದ್ದ ಎಲ್ಲಾ ಕ್ರೆಡಿಟ್, ಡೆಬಿಟ್ ಕಾರ್ಡ್‌ಗಳನ್ನು ತಾಯಿ ವಾಪಸ್ ಕಿತ್ತುಕೊಂಡು ಶ್ವೇತಾಳನ್ನು ಹೊರಹಾಕಿದ್ದಾರೆ.
ರಕ್ಷಿತ್ ಶೆಟ್ಟಿ ನಿರ್ಮಾಣದ ಹೊಸ ಸಿನೆಮಾದಲ್ಲಿ ಅಂಕಿತಾ ಅಮರ್ ನಾಯಕಿ!
ಈ ಪ್ರೋಮೋಗೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಅನೇಕರು ತರಹೇವಾರಿ ಕಾಮೆಂಟ್ ಮಾಡುತ್ತಿದ್ದಾರೆ. ಶ್ವೇತಾಳ ಮುಂದಿನ ನಡೆ ಏನು, ಶ್ವೇತಾ ಮುಂದಿನ ಪ್ಲಾನ್ ಏನಾಗಿರುತ್ತದೆ ಎನ್ನುವುದು ಪ್ರೇಕ್ಷಕರಲ್ಲಿ ಕುತೂಹಲ ಮೂಡಿಸಿದೆ. ಭೂಪತಿಯನ್ನು ಮದುವೆಯಾಗುವ ಕನಸು ಕಾಣುತ್ತಿದ್ದ ಶ್ವೇತಾ ಇದೀಗ ತುಕಾರಾಮ್ ಮನೆ ಸೇರುತ್ತಿದ್ದಾರೆ. ಧಾರಾವಾಹಿ ಮುಂದೆ ಯಾವೆಲ್ಲ ತಿರುವು ಪಡೆದುಕೊಳ್ಳಲಿದೆ ಪ್ರೇಕ್ಷಕರು ಕಾತರದಿಂದ ಕಾಯುತ್ತಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.